Contents
ನಾಮಪದ ಎಂದರೆೇನು(Namapada definition in Kannada)
Here you will learn about ನಾಮಪದ ಎಂದರೇನು ಅದರ ವಿಧಗಳು(Types of Namapada in Kannada with examples).
ಪದಗಳ ಮೂಲ ರೂಪಗಳನ್ನು ಪ್ರಕೃತಿ ಎನ್ನುತ್ತೇವೆ. ಪ್ರಕೃತಿಗಳ ಮುಂದೆ ವಿಭಕ್ತಿ ಪ್ರತ್ಯಯಗಳು ಸೇರಿದರೆ ಪದಗಳಾಗುವವು. ನಾವು ಆಡುವ ಮಾತುಗಳು,
1) ವಸಂತನು ಶಾಲೆಗೆ ಹೋದನು.
2) ಮನೆಯಲ್ಲಿ ಬಸವನು ಇದ್ದಿಲ್ಲ.
3) ಒಕ್ಕಲಿಗರು ಹೊಲವನ್ನು ಕಷ್ಟದಿಂದ ಊಳುವರು.
4) ಉಪ್ಪಾರನು ಗೋಡೆಯನ್ನು ಚೆನ್ನಾಗಿ ಕಟ್ಟುತ್ತಾನೆ. ಮೇಲಿನ ನಾಲ್ಕು ವಾಕ್ಯಗಳಲ್ಲಿ (1) ನಾಮಪದ (2) ಕ್ರಿಯಾಪದ (3) ಅವ್ಯಯ ಹೀಗೆ ಮೂರು ಗುಂಪುಗಳಿವೆ.
1) ನಾಮಪದಗಳು – ಬಸವನು, ವಸಂತನು, ಹೊಲ, ಕಲ್ಲು,
2) ಕ್ರಿಯಾಪದಗಳು – ಕಟ್ಟುತ್ತಾನೆ, ಇದ್ದಿಲ್ಲ ಹೋದನು, ಊಳುವರು.
3) ಅವ್ಯಯ -ನೆಟ್ಟಗೆ, ಚೆನ್ನಾಗಿ, ಬೇಗನೆ, ಮೆಲ್ಲಗೆ
ನಾಮ ನಾಮವಿಭಕ್ತಿ ಪ್ರತ್ಯಯ ನಾಮಪದ
ವಸಂತ + ಉ = ವಸಂತನು
ಮನೆ + ಅನ್ನು = ಮನೆಯನ್ನು
ಉಪ್ಪಾರ + ಇಂದ = ಉಪ್ಪಾರನಿಂದ
ಒಕ್ಕಲಿಗ + ಅಲ್ಲಿ = ಒಕ್ಕಲಿಗನಲ್ಲಿ
ಅ) ಇಟ್ಟ ಹೆಸರಿಗೆ – ನಾಮಪದಗಳೆನ್ನುವರು.
ಬ) ಪದವೆಂದರೆ – ಪ್ರಕೃತಿಗಳಿಗೆ ಪ್ರತ್ಯಯಗಳು ಸೇರುವಿಕೆ,
ಕ) ನಾಮಪದ = ನಾಮ ಪ್ರಕೃತಿಗಳಿಗೆ ನಾಮ ವಿಭಕ್ತಿ ಪ್ರತ್ಯಯ ಸೇರಲಾಗಿ ನಾಮಪದಗಳೆನಿಸುವವು.
ಡ) ವಿಭಕ್ತಿ ಪ್ರತ್ಯಯ- ಸ್ವತಂತ್ರವಾಗಿ ಅರ್ಥವಿಲ್ಲದೆ ನಾಮಗಳ ಮುಂದೆ ಹತ್ತುವ ಹಾಗೂ ಅರ್ಥವನ್ನು ಮಾಡುವ ಉ, ಅನ್ನು ಇಂದ, ಗೆ ಆ, ಅಲ್ಲಿ, ಏ, ಇರಾ, ಈ, ಅ ಮುಂತಾದವುಗಳಿಗೆ ವಿಭಕ್ತಿ ಪ್ರತ್ಯಯಗಳೆಂದು ಕರೆಯಲಾಗುವದು.
ಸಹಜನಾಮ – ಮರ, ಕಲ್ಕು ಹೊಲ, ಮನೆ, ಪೂರ್ವ, ಪಶ್ಚಿಮ, ಎರಡು, ಕರಿದು, ಬಿಳಿಯ, ದೊಡ್ಡ ಸಣ್ಣ ಮುಂತಾದವುಗಳು. ಸಮಾಸಗಳು – ಮಾಮರ, ಬೆಂಗಾವಲು, ಮುಕ್ಕಣ್ಣ ಚಕ್ರಪಾಣಿ, ಹೆಚ್ಚೇನು
ಹೆದ್ದೂರೆ, ಇಕ್ಕಲ, ಮುಂತಾದವುಗಳು.
ಕೃದಂತಗಳು – ಓಟ, ಓದಿದ, ಓದುವ, ಬರೆಯುವ, ತಿಳುವಳಿಕೆ ಮುಂತಾದವುಗಳು.
ತದ್ಧಿತಾಂತಗಳು – ಒಕ್ಕಲಿಗ, ಗಾಣಿಗ, ಅಕ್ಕಸಾಲಿಗ, ಹಾವಾಡಿಗ, ಮೋಸಗಾರ, ದೊಡ್ಡತನ, ಮಾಲಾಕಾರ ಮುಂತಾದವುಗಳು
ನಾಮವಾಚಕಗಳು – (1) ವಸ್ತುವಾಚಕಗಳು (2) ಗುಣವಾಚಕಗಳು (3) ಸಂಖ್ಯಾವಾಚಕಗಳು (4) ಸಂಖ್ಯೆಯ ವಾಚಕಗಳು (5) ಭಾವನಾಮಗಳು (6) ಪರಿಣಾಮ ವಾಚಕಗಳು (1) ಪ್ರಕಾರವಾಚಕಗಳು (8) ದಿಗ್ವಾಚಕಗಳು (9) ಸರ್ವನಾಮಗಳು ಎಂಬುದಾಗಿ ಅನೇಕ ಭೇದಗಳಿವೆ.
ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳಿಗೆ ವಸ್ತುವಾಚಕಗಳೆನ್ನುವರು ಎಮ್ಮೆ ನರಿ, ಹೆಂಗಸರು, ಮನುಷ್ಯ, ಪಶು, ನಾಯಿ, ಬೆಟ್ಟ, ಅಡವಿ, ಮನೆ, ಮಠ, ಶಾಲೆ, ಎಲೆ, ಹೂವು, ಕಾಯಿ ಮುಂತಾದವುಗಳು. ರೂಢನಾಮ – ರೂಢಿಯಿಂದ ಕರೆದ ವಸ್ತುಗಳಿಗೆ ರೂಢನಾಮವೆನ್ನುವರು. erocia : – ಮನುಷ್ಯ, ಪರ್ವತ, ನದಿ, ಗುಡ್ಡ ಗೋಡೆ ಕಲ್ಲು ಮಣ್ಣು
ಮನೆ, ಶಾಲೆ ಇತ್ಯಾದಿ ಅಂಕಿತನಾಮ – ವ್ಯವಹಾರ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳಿಗೆ ಅಂಕಿತನಾಮವೆನ್ನುವರು.
ಉದಾ :- ಗಂಗಾ, ನರ್ಮದಾ, ಚಂದ್ರಶೇಖರ, ವಿರುಪಾಕ್ಷ, ಕಮಲೆ, ಶಂಕರ, ರಂಗ, ಕೇಶವ, ಮಾಧವ, ಭಾರತ, ಕರ್ನಾಟಕ ಮುಂತಾದವುಗಳು.
ಅನ್ವರ್ಥಕನಾಮ – ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು ಅನ್ವರ್ಥಕನಾಮಗಳು.
ಉದಾ :- ಗಾಣಿಗ, ಉಪ್ಪಾರ, ಶಿಕ್ಷಕ, ವಿದ್ವಾಂಸ, ವ್ಯಾಪಾರಿ, ರೋಗಿ, ಕುಂಟ, ಹೆಳವಿ, ಒಕ್ಕಲಿಗ ಇತ್ಯಾದಿ.
2) ಗುಣವಾಚಕಗಳು
ಉದಾ :- ಚಿಕ್ಕ, ಕೆಂಪು, ದೊಡ್ಡ ಸಣ್ಣ ಬಿಳಿಯ, ಕರಿಯ, ಹೊಸದು, ಹಳೆಯ, ಪಿರಿದು, ಎಳೆಯ, ಮೊದಲಾದವು.
ಚಿಕ್ಕ ಹಣ್ಣು ಕರಿಯ ನಾಯಿ, ಬಿಳಿಯ ಎತ್ತು ಕೆಂಪು ಬಟ್ಟೆ, ಹೊಸ ಅಂಗಡಿ, ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು ಹಳೆಯ ಅಂಗಿ, ಇತ್ಯಾದಿ ಗುಣವಾಚಕಗಳೆನಿಸಿವೆ.
ವಸ್ತುಗಳು ವಿಶೇಷ್ಯವಾಗಿಯೂ, ಗುಣ, ಮೊದಲಾದವುಗಳೆಲ್ಲ ವಿಶೇಷಣವಾಗುತ್ತವೆ.
3) ಸಂಖ್ಯಾ ವಾಚಕಗಳು
ಒಂದು, ಎರಡು, ಮೂರು, ಹತ್ತು ಐವತ್ತು ನೂರು, ಸಾವಿರ, ಲಕ್ಷ, ಕೋಟಿ ಇತ್ಯಾದಿಗಳು.
ಒಂದು ಶಾಲೆ, ಹತ್ತು ರೂಪಾಯಿ, ಸಾವಿರ ಕುದುರೆಗಳು, ಕೋಟಿ ಜನರು ಹೀಗೆ ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು.
4) ಸಂಖ್ಯೆಯ ವಾಚಕಗಳು
ಐದನೆಯ, ಇಬ್ಬರು, ಮೂವರು, ನಾಲ್ವರು, ಐವರು, ಎರಡನೆಯ ಒಂದನೆಯ ಇತ್ಯಾದಿ.
ಸಂಖ್ಯೆ ಸಂಖ್ಯೆಯ
ಎರಡು ಎರಡನೆಯ, ಇಬ್ಬರು
ಮೂರು ಮೂರನೆಯ, ಮೂವರು
ನಾಲ್ಕು ನಾಲ್ಕನೆಯ, ನಾಲ್ವರು
5) ಛಾವನಾಮಗಳು
ಉದಾ :- ಹಿರಿಯತನ, ಸಣ್ಣತನ, ಕಪ್ಪು ಬಿಳುಪು, ಪೆರೈ, ನೋಟ, ಓಟಿ, ಮಾಟ, ಇತ್ಯಾದಿ.
ವಸ್ತುಗಳು ಮತ್ತು ಕ್ರಿಯೆಯ ಭಾವ (ಧರ್ಮ) ತಿಳಿಸುವ ಶಬ್ದಗಳು ಭಾವನಾಮಗಳೆನಿಸುವವು.
ಹಿರಿಯದರ ಭಾವ — ಹಿರಿಮ
ಕರಿಯದರ ಭಾವ — ಕಪ್ಪು
ಬಿಳಿಯದರ ಭಾವ — ಬಿಳುಪು
ಮಾಡುವದರ ಭಾವ — ಮಾಟ
ನೋಡುವದರ ಭಾವ — ನೋಟ
ಕೂಡುವದರ ಭಾವ — ಕೂಟ
6) ಪರಿಮಾಣ ವಾಚಕಗಳು
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳು,
ಉದಾ :- ಹಲವು, ಕೆಲವು, ಅನಿತು, ಇನಿತು, ಎನಿತು, ಅಷ್ಟು, ಇಷ್ಟು, ಹಲವು, ಇತ್ಯಾದಿಗಳು.
ಪರಿಮಾಣಕ್ಕೆ ಉದಾ :- ಹಲವು ಜನರು, ಕೆಲವು ಗ್ರಾಮಗಳು ಇತ್ಯಾದಿ ಗಾತ್ರಕ್ಕೆ ಉದಾ :- ಬೆಟ್ಟದಷ್ಟು ಅನ್ನದ ರಾಶಿ, ಆನೆಯಷ್ಟು ದೊಡ್ಡ ಇತ್ಯಾದಿ.
ಅಳತೆಗೆ ಉದಾ :- ಇಷ್ಟು ದೂರ, ಅಷ್ಟು ಸಕ್ಕರೆ, ಇಷ್ಟು ಹಾಲು, ಇಷ್ಟು ಪುಸ್ತಕಗಳು ಇತ್ಯಾದಿ.
7) ಪ್ರಕಾರ ವಾಚಕಗಳು
ಉದಾ :~ ಅಂತಹ, ಇಂತಹ, ಎಂತಹ, ಇಂಥ, ಅಂತಹದು, ಎಂಥ, ಅಂಥ, ಇತ್ಯಾದಿ.
ಇಂತಹ ದುಷ್ಟರು ಉಂಟೆ ? ಅಂತ ಸಜ್ಜನರು ವಿರಳ! ಅವನು ಎಂತಹನು ? ಇವನು ಇಂತಹನು ಇತ್ಯಾದಿ.
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರ ವಾಚಕಗಳೆನಿಸುವವು.
8) ದಿಗ್ವಾಚಕಗಳು
ದಿಕ್ಕುಗಳ ಹೆಸರುಗಳನ್ನು ಸೂಚಿಸುವ ಶಬ್ದಗಳು ದಿಗ್ವಾಚಕಗಳಾಗಿವೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗೇಯ, ನೈಋತ್ಯ, ವಾಯವ್ಯ, ಈಶಾನ್ಯ, ಆಚೆ, ಈಚೆ, ತೆಂಕಣ, ಪಡುವಣ, ಬಡವಣ.
9) ಸರ್ವನಾಮಗಳು
1. ಗುರುಗಳು ಪಾಠಶಾಲೆಗೆ ಹೊರಟರು. ಅವರ ಸಂಗಡ ವಿದ್ಯಾರ್ಥಿಗಳೂ ಹೋದರು. ಅಲ್ಲಿ ಅವರು ಪಾಠಗಳನ್ನು ಕಲಿತರು.
2. ಅಡವಿಗೆ ಶ್ರೀರಾಮನು ಹೊರಟನು. ಅವನ ಸಂಗಡ ಸೀತೆಯೂ ಲಕ್ಷ್ಮಣನೂ ಹೋದರು. ಅಲ್ಲಿ ಅವರು ಪರ್ಣಶಾಲೆಯಲ್ಲಿ ವಾಸಿಸಿದರು.
ಮೇಲಿನ ಎರಡೂ ವಾಕ್ಯಗಳಲ್ಲಿಯ ಅಲ್ಲಿ ಪಾಠಶಾಲೆಯಲ್ಲಿ ಅಡವಿಯಲ್ಲಿ ಅವರ ಸಂಗಡ ಗುರುಗಳ, ಅವನ ಸಂಗಡ ಶ್ರೀರಾಮನು ಇತ್ಯಾದಿ ಶಬ್ದಗಳು
ಪದಗಳು ನಾಮಪದಗಳ ಬದಲು ಬಳಸುವ ಬೇರೊಂದು ಪದಗಳಾಗಿವೆ. ಅಲ್ಲಿ ದಪ್ಪಕ್ಷರ ಪದಗಳು ನಾಮಪದಗಳು ಅವುಗಳ ಬದಲಾಗಿ ಅವರ, ಅವನ, ಅಲ್ಲಿ ಬೇರೊಂದು ಶಬ್ದಗಳನ್ನು ಉಪಯೋಗಿಸಲಾಗಿದೆ.
ನಾಮಪದಗಳ ಸ್ಥಾನದಲ್ಲಿ ಇದ್ದು ಅವುಗಳನ್ನು ಸೂಚಿಸುವ ಶಬ್ದಗಳು ಸರ್ವನಾಮಗಳೆನಿಸುವವು.
ಉದಾ :- ಇದು, ಅದು, ಯಾವುದು, ಎಲ್ಲಿ ಏನು, ಅವನು, ಇವನು, ಅವಳು, ಇವಳು, ಯಾವಳು, ತಾನು, ನೀನು, ನೀವು, ನಾವು, ಅವರು, ಇವನು, ನಾಂ, (ನಾನ್) ಅಂ (ಆನ್) ನೀಂ (ನೀನ್) ತಾವು ಯಾರೂ, ಏನ್, ಏನು, ಇತ್ಯಾದಿ.
Also Read: Kannada letter writing format
ಅಂಗಗಳು (ಅಪ್ಪ)
1) ಚಂದ್ರಶೇಖರನು ಚಕ್ರವನ್ನು ಬರೆದರು.
2 ರಂಗ ಜಾಣಳು,
3) ಬೆಕ್ಕು ಹಾಲನ್ನು ಹಿಡಿಯಿತು.
ಮೇಲಿನ ಮೊದಲನೆಯ ವಾಕ್ಯದಲ್ಲಿ ಪತ್ರವನ್ನು ಬರೆದವರು ಯ ಚಂದ್ರಶೇಖರನು. ಇವನು, ಗಂಡಳು, ಎಂಬುದಾಗಿ ಆಥಳ ಹೊಳೆಯುವರು. ಆದ್ದರಿಂದ ಚಂದ್ರಶೇಖರ ಪುಲ್ಲಿಂಗ
ಇದರಂತೆ ಸುರೇಶ, ಶಂಭು, ಕವಳ, ಬಸಳು, ರಾಮ ಭೀಮ, ಪ್ರತ್ಯ ಹುಡುಗ, ಕಳ್ಳ, ಮುದು, ದೊಡ್ಡರ ತ್ಯಾದಿ.
2) ಎರಡನೆಯ ವಾಕ್ಯದಲ್ಲಿ ರಂಗವಲ್ಲಿಯಲ್ಲಿಯಾರು ಜಾಣೆ ಜಾಣ
ಎಂಬುದಾಗಿ ಹೆಣ್ಣಾಮಗಳು ಅರ್ಥ ವ್ಯಕ್ತವಾಗುವದು, ಆದ್ದರಿಂದ ಹೆಣ್ಣು ಸ್ತ್ರೀಲಿಂಗ ಸ್ತ್ರೀ ಗುರುತು,
ಚಿಕ್ಕಮಗಳು, ಸಚಿವೆ, ಅಧ್ಯಕ್ಷ ಬಾಲಕಿ, ರಾಣಿ, ಸಹೋದರಿ, ಪತ್ನಿ, ತಂಗಿ, ಅರ ಗಾಣಗಿ ಹೂವಾಡಗಿ ಸೂಲಗಿತ್ತಿ ಮುಂತಾದವುಗಳು
3) ಮೂರನೆಯ ವಾಕ್ಯದಲ್ಲಿ ಗಂಡು ಹೆಂಗಳ, ನೆಗಳು ಎರಡರ ಆರ ಹೊಳೆಯದೆ ಬೇರೊಂದರ ಅರ್ಥ ಹೊಳೆಯಿತು ಯವ ಹಾಲು ಬಡಿಯಿ
ಬೆಕ್ಕು ಪುಂಸಕ ಲಿಂಗ, ಪುರುಷ ಸ್ತ್ರೀಯರಲ್ಲದ ಗುರುತು.
ಉದಾ :- ಹೊಲ, ಮನೆ, ಕಲ್ಲು ಗೂಟ, ಗುಡ್ಡ, ದಿನ್ನೆ, ಕತ್ರ ನಾಯಿ, ಕುದುರೆ, ಕರಡಿ, ಪುಸ್ತಕ, ಮೇಜು, ಸ್ಕೂಲ್, ಕಟ್ಟಿಗೆ, ಗಿಡ, ಹೂವು, ಭೂಮಿನೆಲ, ನದಿ, ಕಾಯಿ, ಕಂಬ ಮೊದಲಾದವುಗಳು.
Note :
1) ಪುರುಷರ (ಗಂಡಸರ) ಹೆಸರುಗಳನ್ನು ಹೇಳುವ ಶಬ್ದಗಳು ಪುಲ್ಲಿಂಗವಾಚಕಗಳು.
2) ಸ್ತ್ರೀಯರ (ಹೆಣ್ಣುಮಕ್ಕಳ) ಹೆಸರುಗಳನ್ನು ಹೇಳುವ ಶಬ್ದಗಳು ಸ್ತ್ರೀಲಿಂಗವಾಚಕಗಳು.
3) ಪುರುಷ ಹಾಗೂ ಸ್ತ್ರೀಯರ ಹೆಸರುಗಳನ್ನು ಬಿಟ್ಟು ಬೇರೊಂದು ವಸ್ತುಗಳ ಹೆಸರನ್ನು ಹೇಳುವ ಶಬ್ದಗಳು ನಪುಂಸಕವಾಚಕಗಳು
4) ಕೆಲವೊಂದು ವಸ್ತುಗಳು ನಪುಂಸಕ ಲಿಂಗಗಳಾಗಿವೆ.
ಉದಾ :- ಶನಿ, ಮಂಗಳ, ಸೂರ, ಚಂದ್ರ, ಇತ್ಯಾದಿ ಗ್ರಹಗಳು ಪುಲ್ಲಿಂಗವಾಗಿಯೂ, ನಪುಂಸಕಲಿಂಗವಾಗಿಯೂ ಕರೆಯಿಸಿಕೊಳ್ಳುವವು.
ಉದಾ :- ಚಂದ್ರೋದಯವಾಯಿತು ಶನಿಯು ಕಾಡುತ್ತಾನ –(ನಪುಂಸಕಲಿಂಗ)
ಶನಿಯು ಕಾಡುತ್ತಾನೆ — (ಪುಲ್ಲಿಂಗ)
ಹುಡುಗ ಓದುತ್ತಾನೆ
ಶನಿಯು ಕಾಡುತ್ತಿದೆ
ಚಂದ್ರನು ಉದಯನಾದನು
ಸೂರನು ಉದಯನಾದನು
ಸೂರನು ಮೂಡಿದನು
5) ದೇವತೆಗಳ ಹೆಸರುಗಳನ್ನು ಹೇಳುವ ಶಬ್ದಗಳು ಸ್ತ್ರೀಲಿಂಗ ಅಥವಾ ನಪುಂಸಕ ಲಿಂಗಗಳಲ್ಲಿ ಹೇಳಲ್ಪಡುವವು.
ಸ್ತ್ರೀ ನಪುಂಸಕಗಳು :
ದೇವತೆಯು ಒಲಿದಳು
ದೇವತೆ ಒಲಿಯಿತು — (ನಪುಂಸಕಲಿಂಗ)
ಹುಡುಗಿ ಓದುತ್ತದೆ — (ನಪುಂಸಕಲಿಂಗ)
ಹುಡುಗಿ ಓದುವಳು
ಸರಸ್ವತಿ ಒಲಿದಳು
ಸರಸ್ವತಿ ಒಲಿಯಿತು
1) ಗುಣವಾಚಕ ಪದಗಳು ಮೂರು ಲಿಂಗಗಳಲ್ಲಿ ಬದಲಾವಣೆಯನ್ನು ಹೊಂದುವ
(ಪುಲ್ಲಿಂಗ) | (ಸ್ತ್ರೀಲಿಂಗ) | (ನಪುಂಸಕಲಿಂಗ) |
ಚಿಕ್ಕವನು | ಚಿಕ್ಕವಳು | ಚಿಕ್ಕದು |
ಎಳೆಯನು | ಎಳೆಯಳು | ಎಳೆಯದು |
ಒಳ್ಳೆಯವನು | ಒಳ್ಳೆಯವಳು | ಒಳಿತು, (ಒಳ್ಳೆಯದು) |
ಹೊಸಬನು | ಹೊಸಬಳು | ಹೊಸತು (ಹೊಸದು) |
ಹಳೆಯನು | ಹಳೆಯಳು | ಹಳೇಯದು (ಹಳೆದು) |
ದೊಡ್ಡವನು | ದೊಡ್ಡವಳು | ದೊಡ್ಡದು |
ಸತ್ಯವಂತ | ಸತ್ಯವಂತಳು | ಸತ್ಯವಾದುದು |
ನೀಚನು | ನೀಚಳು | ನೀಚ |
ಮೇಲಿನ ಉದಾಹರಣೆಗಳಿಂದ ಪುಲ್ಲಿಂಗದಲ್ಲಿ ಬನು, ಅನು, ವಂತ, ಮೊದಲಾದ ಪ್ರತ್ಯಯಗಳು, ಸ್ತ್ರೀಲಿಂಗದಲ್ಲಿ ಅಳು ಎಂಬ ಪ್ರತ್ಯಯವೂ ನಪುಂಸಕಲಿಂಗದಲ್ಲಿ ತು, ದು ಎಂಬ ಪ್ರತ್ಯಯಗಳೂ ಸೇರುವವು.
2) ಸರ್ವನಾಮಗಳು ಮೂರು ಲಿಂಗಗಳಲ್ಲಿ ಬದಲಾವಣೆಯ ರೀತಿ.
ಪುಲ್ಲಿಂಗ | ಸ್ತ್ರೀಲಿಂಗ | ನಪುಂಸಕಲಿಂಗ |
ನಾನು | ನಾನು | ನಾನು |
ನೀನು | ನೀನು | ನೀನು |
ಅವನು (ಆತನು) | ಅವಳು (ಆಕೆಯು) | ಅದು |
ತಾನು | ತಾನು | ತಾನು |
ಯಾವನು | ಯಾವಳು | ಯಾವದು |
ಇವನು (ಈತನು) | ಇವಳು (ಈಕೆಯು) | ಇದು |
3) ಸಂಖ್ಯಾವಾಚಕ ಶಬ್ದಗಳು ಮೂರು ಲಿಂಗಗಳಲ್ಲಿ ಬದಲಾವಣೆಯ ರೀತಿ :
ಪುಲ್ಲಿಂಗ | ಸ್ತ್ರೀಲಿಂಗ | ನಪುಂಸಕಲಿಂಗ |
ಒಬ್ಬನು | ಒಬ್ಬಳು | ಒಂದು |
ಎರಡು | ಇಬ್ಬರು | ಎರಡು |
ಮೂವರು | ಮೂವರು | ಮೂರು |
ನಾಲ್ವರು | ನಾಲ್ವರು | ನಾಲ್ಕು |
ಐವರು | ಐವರು | ಐದು |
ಒಂದು ವಸ್ತುವನ್ನು ಹೇಳುವ ಶಬ್ದಗಳು ಏಕವಚನಗಳು, ಒಂದಕ್ಕಿಂತ ಹೆಚ್ಚಾದ ವಸ್ತುಗಳನ್ನು ತಿಳಿಸುವ ಶಬ್ದಗಳಿಗೆ ಬಹುವಚನವೆನ್ನುವರು.
ಏಕವಚನ | ಬಹುವಚ | ಪ್ರತ್ಯಯ |
ಮರ | ಮರಗಳು (ಮರ+ಗಳು) | ಉ |
ಕಾಲು | ಕಾಲುಗಳು (ಕಾಲು+ಗಳು) | ಉ |
ತಾಯಿ | ತಾಯಿರು
ತಾಯಂದಿರು |
ಉ |
ಅಣ್ಣ | ಅಣ್ಣಂದಿರು
(ಅಣ್ಣ+ಅಂದಿರು) |
ಉ |
ಅಕ್ಕ | ಅಕ್ಕಂದಿರು (ಅಕ್ಕ+ಅ೦ದಿರು) | ಉ |
ಅರಸ | ಅರಸರು
(ಅರಸ+ ಅರು) |
ಉ |
ಕಿವಿ | ಕಿವಿಗಳು | ಉ |
ಮೇಲಿನ ನಾಮಪದದ ಬಹುವಚನದಲ್ಲಿ ಪ್ರಕೃತಿಗೂ ಪ್ರತ್ಯಯಕ್ಕೂ ನಡುವೆ ಅರು, ಗಳು, ಅರುಗಳ, ಅಂದಿರ, ಅಂದಿರುಗಳು, ಇದು, ಎರು, ಅವು, ಕಳಿ, ವರು ಮೊದಲಾದ ಆಗಮಗಳು ಬರುತ್ತವೆ.
I hope you enjoyed reading ನಾಮಪದ ಎಂದರೇನು ಅದರ ವಿಧಗಳು(Namapada endarenu in Kannada), if you loved the information please share with your friends and relatives❤️.