Contents
ಅಲಂಕಾರ
ಅಲುಕಾರ ಎಂದರೇನು?
ಕವಿಯ ಪ್ರತಿಭೆ ಭಾಷೆಯ ಮೂಲಕ ಅಭಿವ್ಯಕ್ತವಾದಾಗ, ಆ ಭಾಷೆಯಲ್ಲಿ ಹುದುಗಿರುವ ಶಬ್ದಾರ್ಥ ವೈಚಿತ್ರಗಳಿಗ ಅಲಂಕಾರ ಎನ್ನುವರು.
ವಸ್ತ್ರಾಭರಣಗಳು ಒಡಲನ್ನು ಅಲಂಕರಿಸುವಂತೆ ಶಬ್ದಾರ್ಥ ಚಮತ್ಕಾರಗಳು ಕಾವ್ಯಕ್ಕೆ ಭೂಷಣ ಅಥವಾ ಅಲಂಕಾರವಾಗಿವೆ. ಅಲಂಕಾರದಲ್ಲಿ ಎರಡು ವಿಧ :
1. ಶಬ್ದಾಲಂಕಾರ
ಕಿವಿಗಳಿಗೆ ಇಂಪನ್ನುಂಟುಮಾಡುವ ಕವಿಯ ಚಮತ್ಕಾರದ ಶಬ್ದ ಜೋಡಣೆಗೆ ಶಬ್ದಾಲಂಕಾರವೆಂದು ಹೆಸರು.
ಉದಾ: ಎಳೆಗಿಳಿಗಳ ಬಳಗಗಳು ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು.
ಶಬ್ದಾಲಂಕಾರದಲ್ಲಿ ಮೂರು ವಿಧಗಳು:
೧. ಅನುಪ್ರಾಸ
೨. ಯಮಕ
೩. ಚಿತ್ರಕವಿತ್ವ
ಅನುಪ್ರಾಸ
ಅಕ್ಷರಗಳ ಪುನರುಕ್ತಿಯೇ ಅನುಪ್ರಾಸ, ಅನುಪ್ರಾಸದಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬಂದರೆ ಅದಕ್ಕೆ ವೃತ್ಯನುಪ್ರಾಸ ವೆಂದೂ, ಎರಡು ವ್ಯಂಜನಗಳಿಂದ ಕೂಡಿದ ಪದ ಜೊತೆ ಜೊತೆಯಾಗಿ ಪುನರಾವರ್ತಿತವಾದರೆ ಛೇಕಾನುಪ್ರಾಸವೆಂದೂ ಕರೆಯುವರು.
ಉದಾ: ವೃತ್ಮನುಪ್ರಾಸಕ್ಕೆ: ಬಲ್ಲವನೇ ಬಲ್ಲ ಬೆಲ್ಲದ ಸವಿಯ.
ಛೇಕಾನುಪ್ರಾಸಕ್ಕೆ:
೧. ಎಳೆಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.
೨. ಉಗುಳಿ ಉಗುಳಿ ರೋಗ ಬಗುಳಿ ಬಗುಳಿ ರಾಗ ಮಾಡಿ ಮಾಡಿ ಕೆಟ್ಟರು, ನೀಡಿ ನೀಡಿ ಕಟ್ಟರು.
ಯಮಕ
ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ ಪದ ಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯಸ್ಥಾನಗಳಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎಂದು ಹೆಸರು.
ಉದಾ: ಎಳವಾಸ ತೊಡರ್ದುದನೆ ಮಿಸು ಪಳೆವಾಸೆಯ ದೆಸೆಯ ನಿಂದಳಂ ಕೈವಿಡಿದೊ ಲೈಳೆವಾಸೆಯಾಂತ ನಂಬುಜ ದಳವಾಸಡಗೊಂಡ ಪಳನದಡೆ ಗವನೀಶಂ ||
೩. ಚಿತ್ರ ಕವಿತ್ತು: ಅಕ್ಷರಗಳನ್ನೂ, ಪದಗಳನ್ನೂ ಕುಶಲತೆಯಿಂದ ಆರಿಸಿ ಜೋಡಿಸಿ ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ ಚಿತ್ರಕವಿತ್ರವೆನ್ನುವರು.
ಉದಾ: ನನ್ನನ ನನ್ನನ ನಿನ್ನೊ => ನನ್ನ ಮೈ ಮುಂದೆ ನಿನ್ನು ಬೆನ್ನನ ಮುದದಿ |
2. ಅರ್ಥಾಲಂಕಾರಗಳು:
ಕಾವ್ಯಗಳಲ್ಲಿನ ಕವಿಗಳ ಅರ್ಥ ಚಮತ್ಕಾರದ ಮಾತುಗಳಿಗೆ ಅರ್ಥಾಲಂಕಾರವೆಂದು ಹೆಸರು, ಅ. ಉಪಮಾಲಂಕಾರ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುವುದು.
ಉದಾ: ಆ ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.
ಮೇಲಿನ ಉದಾಹರಣೆಯಲ್ಲಿ ಉಪಮಾನ ಉಪಮಾವಾಚಕ ಶಬ್ದ ಸಮಾನ ಧರ್ಮ : ಮಗುವಿನ ಮುಖ, ಚಂದ್ರನ ಮುಖ, ಅಂತ.
ಆಹ್ಲಾದಕತೆ (ಮನೋಹರವಾಗಿರುವುದು), ಉಪಮಾಲಂಕಾರದಲ್ಲಿ ‘ಸುದೃಶ್ಯ’ (ಹೋಲಿಕೆ) ಮುಖ್ಯವಾದುದು. ಉಪಮಾನ, ಉಪಮೇಯ, ಸಮಾನ ಧರ್ಮ, ಉಪಮಾವಾಚಕ ಶಬ್ದ – ಈ ನಾಲ್ಕೂ ಬಂದಿದ್ದರೆ ಅದು ಪೂರ್ಣೋಪಮಾಲಂಕಾರ ವೆಂದೂ, ಯಾವುದಾದರೂ ಒಂದು ಲುಪ್ತವಾಗಿದ್ದರೆ ಅದು ಲುಪ್ಲೋಪಮಾಲಂಕಾರವೆಂದೂ ಕರೆಯುತ್ತಾರೆ.
3. ರೂಪಕಾಲಂಕಾರ:
ಉಪಮಾನ, ಉಪಮೇಯ ವಸ್ತುಗಳನ್ನು ಒಂದು ಮತ್ತೊಂದರಂತೆ’ ಎಂದು ವರ್ಣಿಸದೇ `ಒಂದು ಮತ್ತೊಂದೆಯೇ’ ಎಂದು ಅಬೇಧವನ್ನು ಕಲ್ಪಿಸಿ ಹೇಳುವುದು ರೂಪಕಾಲಂಕಾರವನಿಸುವುದು.
ಉದಾ:
- ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ
- ಆ ಶಾಲೆಗೆ ವಿದ್ಯಾರ್ಥಿಯೊಂದು ರತ್ನ.
ಮೊದಲನೇ ವಾಕ್ಯದಲ್ಲಿ ಒಂದು ಮತ್ತೊಂದರಂತೆ ಎಂದು ಹೇಳಿಲ್ಲ ವಿದ್ವಾಂಸನೂ, ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಬೇಧವಿಲ್ಲ ಎಂದು ಹೇಳಿದೆ. ಎರಡನೇ ವಾಕ್ಯದಲ್ಲಿ ವಿದ್ಯಾರ್ಥಿಯೂ, ರತ್ನವೂ ಒಂದೇ ಎಂದು ವರ್ಣಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
4. ಉತ್ಪಕಾಲಂಕಾರ:
ಒಂದು ಪದಾರ್ಥವನ್ನೂ, ಅಥವಾ ಸನ್ನಿವೇಶವನ್ನೂ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದಕ್ಕೆ ಉಪ್ಪೇಶಾಲಂಕಾರ ಎನ್ನುವರು.
ಉದಾ :
- ಹಾಲು ತುಂಬಿದ, ಸಾಲು ಸಾಲಾಗಿ ಕಾಣುವ ಭತ್ತದ ತೆನೆಗಳು ತಮ್ಮನ್ನು ಗಿಳಿಗಳು ಬಂದು ಸೀಳಿ ಬಿಡುತ್ತವೆಂಬ ಭಯದಿಂದ ಭೂಮಿಗೆ ಇಳಿದು ಹೋದವೋ ಎಂಬಂತೆ ಗದ್ದೆಯ ನೀರಿನಲ್ಲಿ ಅವು ಪ್ರತಿಫಲಿಸಿ ಕಾಣುತ್ತಿದ್ದವು.
- ಇಲ್ಲಿ ಸಹಜವಾಗಿ ನೀರಿನಲ್ಲಿ ಪ್ರತಿಫಲಿಸಿ ಕಾಣುವ ಭತ್ತದ ತೆನೆಗಳನ್ನು, ಗಿಳಿಗಳ ಭಯದಿಂದ ಅವು ಭೂಮಿಗೆ ಇಳಿದು ಹೋಗಿವೆ. ಎಂದು ಸಂಭಾವನೆಮಾಡಿ ಹೇಳಿರುವುದರಿಂದ ಇದು ಉತ್ತೇಕಾಲಂಕಾರವಾಗಿದೆ.
- ತ್ರೈಲೋಕ್ಯ ಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಿಕೊಳ್ಳುವುದಕ್ಕೆ ಮಾಡಿಟ್ಟ ಕನ್ನಡಿಯೋ, ಭೂದೇವಿಯು ಕ್ರೀಡಿಸುವುದಕ್ಕೆ ನಿರ್ಮಾಣಮಾಡಿದ ಸ್ಪಟಿಕದ ನೆಲೆಮನೆಯೋ ಎಂಬಂತೆ ನೆಲೆಯಿಲ್ಲದ ತಂಗೊಳವು ಅತಿ ರಮಣೀಯವಾಗಿ ಕಂಗೊಳಿಸಿತು.
- ಅನ್ನೋದ ಸರೋವರವನ್ನು ವರ್ಣಿಸಿರುವ ಕವಿಯು ಆ ತಂಗೊಳವನ್ನು ಕನ್ನಡಿಗೂ, ಸ್ಪಟಿಕದ ನೆಲೆಮನೆಗೂ ಬೇಧವಿಲ್ಲ. ಎರಡೂ ಒಂದೇ ಎಂದು ಕಲ್ಪಿಸಿ ಹೇಳಿರುವುದರಿಂದ ಇದು ಉತ್ಪಕಾಲಂಕಾರವಾಗಿದೆ.
5. ದೃಷ್ಟಾಂತಾಲಂಕಾರ:
ಎರಡು ಬೇರೆ ಬೇರೆ ವಾಕ್ಯಗಳು ಪರಸ್ಪರ ಅರ್ಥ ಸಾದೃಶ್ಯದಿಂದ ಒಂದರ ಪ್ರತಿಬಿಂಬ ಮತ್ತೊಂದು ಎಂದು ತೋರುವಂತಿದ್ದರೆ ಅದು ದೃಷ್ಟಾಂತಾಲಂಕಾರ ಎನಿಸುವುದು.
ಉದಾ: ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು. ಅಟ್ಟಿ ಮೇಲೆ ಒಲೆ ಉರಿಯಿತು; ಕೆಟ್ಟ ಮೇಲೆ ಬುದ್ದಿ ಬಂತು. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ.
ಮೇಲ್ಕಂಡ ವಾಕ್ಯಗಳಲ್ಲಿ ಊರಿಗೆ ಉಪಕಾರ ಮಾಡುವುದೂ, ಹೆಣಕ್ಕೆ ಶೃಂಗಾರ ಮಾಡುವುದೂ ಒಂದೇ, ಅಟ್ಟ ಮೇಲೆ ಒಲೆ ಉರಿಯುವುದೂ, ಕೆಟ್ಟ ಮೇಲೆ ಬುದ್ಧಿ ಬರುವುದೂ ಎರಡೂ ಒಂದೇ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎರಡೂ ಒಂದೇ. ಒಂದಕ್ಕೊಂದು ಬಿಂಬ, ಪ್ರತಿಬಿಂಬಗಳಂತೆ ಕಾಣುತ್ತವ, ಉಪಮಾನ, ಉಪಮೇಯಗಳ ಭಾವ ಬಿಂಬ ಪ್ರತಿಬಿಂಬಗಳಾಗಿ ಕಾಣುವುದರಿಂದ ಇದು ದೃಷ್ಟಾಂತಾಲಂಕಾರವಾಗಿದೆ.
6. ಅರ್ಥಾಂತರ ನ್ಯಾಸಾಲಂಕಾರ:
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲೀ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲೀ ಸಮರ್ಥಿಸಿ ಹೇಳುವುದು ಅರ್ಥಾಂತರ ನ್ಯಾಸಾಲಂಕಾರವಾಗುವುದು.
ಉದಾ: ತುಂಗಭುಜನನ್ನೂ, ಆತನ ಮದಿಸಿದ ಆನೆಯನ್ನೂ, ಚತುರಂಗ ಬಲವನ್ನೂ ಸಿಂಹವು ಕೊಂದು ಹಾಕಿತು. ಕೆಟ್ಟ ಆಲೋಚನೆ ಮಾಡುವವರು ಯಾರು ತಾನೆ ಕೆಡುವುದಿಲ್ಲ?
ಇಲ್ಲಿ ಎರಡು ವಾಕ್ಯಗಳಿವೆ. ಒಂದು ಸಾಮಾನ್ಯ ವಾಕ್ಯ, ಮತ್ತೊಂದು ವಿಶೇಷ ವಾಕ್ಯ. ಸಿಂಹವು ತುಂಗಭುಜ, ಅವನ ಆನೆ ಮತ್ತು ಚತುರಂಗ ಬಲವನ್ನು ಕೊಂದುದು – ವಿಶೇಷ ವಾಕ್ಯವು “ಕೆಟ್ಟ ಆಲೋಚನೆ ಮಾಡುವವರು ಕಡುತ್ತಾರೆ? ಎಂಬುದು ಸಾಮಾನ್ಯ ವಾಕ್ಯಾರ್ಥ.
ಇವೆರಡೂ ವಾಕ್ಯಗಳು ಒಂದನ್ನೊಂದು ಸಮರ್ಥಿಸುತ್ತದೆ. ವಿಶೇಷ ವಾಕ್ಯವು ಸಾಮಾನ್ಯ ವಾಕ್ಯದಿಂದ ಸಮರ್ಥಿತವಾಗಿದೆ. ಆದ್ದರಿಂದ ಇದು ಅರ್ಥಾಂತರ ನ್ಯಾಸಾಲಂಕಾರವಾಗಿದೆ.