Alphabetical- ಅಕ್ಷರಗಣ

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳು ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮ ಇಲ್ಲ ಗಣ ವಿಂಗಡಣೆಯ ನಂತರ ಒಂದು ಅಥವ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಳಲ್ಲಿ ಯಗಣ, ಮಗಣ ,ತಗಣ ರಗಣ,ಜಗಣ ,ಭಗಣ, ನಗಣ, ಮತ್ತು ಸಗಣ, ಗಳೆಂದು ಎಂಟು ವಿಧಗಳು ಇವುಗಳನ್ನು ಯಾ ಮಾ ತಾ ರಾ ಜ ಭಾ ನ ಸ ಲ ಗಂ ಸೂತ್ರದ ಆಧಾರದಿಂದ ನಿರ್ಣಯಿಸಲಾಗಿದೆ.

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವೂ ಸಹಕಾರಿ ಗುರು ಲಘು ಮೂರಿರೆ ಮ-ನ ಗಣ.

  • ಗುರು ಲಘು ಮೊದಲಲಿ ಬರಲು ಭಯ ಗಣ ಮೆಂಬರ್
  • ಗುರು ಲಘು ನಡುವಿರೆ ಜ-ರ ಗಣ
  • ಗುರು ಲಘು ಕೊನೆಯಲ್ಲಿ ಬರಲು ಸತ ಗಣಮಕ್ಕು

ಅಕ್ಷರ ವೃತ್ತಗಳು:

ಅಕ್ಷರ ಗಣಗಳನ್ನೊಳಗೊಂಡ ಅಕ್ಷರ ವೃತ್ತಗಳನ್ನು ಕನ್ನಡ ಕವಿಗಳು ಸಂಸ್ಕತದಿಂದ ತೆಗೆದುಕೊಂಡಿದ್ದಾರೆ. ಈ ಸಂಸ್ಕೃತ ವೃತ್ತಗಳಲ್ಲಿ ಸಮವೃತ್ತ ಅರ್ಧ ಸಮವೃತ್ತ ವಿಷಮ ವೃತ್ತ ಎಂದು ಮೂರು ವಿದಗಳುಂಟು.ಯಾದುವೇ ವಿದವಾದರೂ ಒಂದು ವೃತ್ತಕ್ಕೆ ನಾಲ್ಕು ಪಾದಗಳಿರುತ್ತವೆ.

ಸಮವೃತ್ತಗಳು:

ಸಮವೃತ್ತವೊಂದರ ನಾಲ್ಕು ಪಾದಗಳಲ್ಲೂ ಒಂದೇ ಲಕ್ಷಣವಿರುತ್ತದೆ. ಸಮವೃತ್ತಗಳಲ್ಲಿ ಪಾದವೊಂದಕ್ಕೆ ಒಂದರಿಂದ ಇಪ್ಪತ್ತಾರು ಅಕ್ಷರಗಳವರೆಗೆ ಇರಬಹುದು.ಪ್ರತೀ ಪಾದದಕ್ಷರ ಸಂಖ್ಯೆಯನ್ನು ಅನುಸರಿಸಿ ಸಮವೃತ್ಕಳಲ್ಲಿ ಇಪ್ಪತ್ತಾರು ಗುಂಪುಗಳಿವೆ.ಪ್ರತಿಯೊಂದು ಗುಂಪಿಗೂ ಛಂದಸ್ಸು ಎನ್ನುತ್ತಾರೆ.

ಇವುಗಳಲ್ಲಿ ಕನ್ನಡ ಕವಿಗಳು ಬಳಸಿಕೊಂಡಿರುವ ವೃತ್ತಗಳು ಕೆಲವು ಮಾತ್ರ ಮೊದಲನೇ ನಾಗವರ್ಮನು,ತನ್ನ ಛಂದೋಂಬುಧಿಯಲ್ಲಿ ಕೆಲವು ವೃತ್ತಗಳನ್ನು ಒಂದೆಡೆ ಹೇಳುತ್ತಾ ಅವುಗಳನ್ನು ‘ಖ್ಯಾತ ಕರ್ಣಾಟಕಗಳು ಎಂದು ಕರೆದಿದ್ದಾನೆ. ಆ ಖ್ಯಾತ ಕರ್ಣಾಟಕಗಳ ಜೊತೆಗೆ ಇನ್ನೂ ಕೆಲವು ವೃತ್ತಗಳನ್ನು ಕನ್ನಡ ಕವಿಗಳು ಬಳಸಿದ್ದಾರೆ. ಅವುಗಳಲ್ಲಿ ಮಾಲಿನೀ ವೃತ್ತ,ಉತ್ಸವ ,ಹರಿಣೀ ವೃತ್ತ,ಮಂದಾಕ್ರಾಂತ, ಮಲ್ಲಿಕಾಮಾಲೆ,ತರಳ ವೃತ್ತಗಳು ಪ್ರಸಿದ್ಧವಾಗಿವೆ.

ಹರಿಣೀ ವೃತ್ತ:

ಪಂಪನು ಈ ವೃತ್ತವನ್ನು ಪಂಪಭಾರತದಲ್ಲಿ ಬಳಸಿದ್ದಾನೆ.

• ಹರಿಣೀ ವೃತ್ತದ ಲಕ್ಷಣಗಳು

  1. ನಾಲ್ಕು ಸಮ ಸಾಲಿನ ಪದ್ಯಬಾಗ
  2. ಪ್ರತೀ ಸಾಲಿನಲ್ಲೂ 17ಅಕ್ಷರಗಳಿವೆ
  3. ನ,ಸಮರಸ, ಎಂಬ ಐದು ಗಣ 1ಲಘು 1 ಗುರು ಬರುತ್ತದೆ

ಖ್ಯಾತ ಕರ್ನಾಟಕಗಳು

ಅಕ್ಷರಗಣ ಛಂದಸ್ಸಿಗೆ ಸೇರಿದ ಪದ್ಯ ಜಾತಿಯಿದು. ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗುವ ವೃತ್ತಗಳನ್ನು “ಖ್ಯಾತ ಕರ್ನಾಟಕಗಳೆಂದು ಕರೆಯುವರು

ಲಕ್ಷಣ:

ಪ್ರತೀ ವೃತ್ತವು ತನ್ನದೇ ಆದ ಲಕ್ಷಣ ಹೊಂದಿರುತ್ತದೆ ಇದು ನಾಲ್ಕು ಸಾಲಿನ ಪದ್ಯವಗಿದ್ದು ನಾಲ್ಕು ಸಾಲುಗಳೂ ಸಮನವಾಗಿರುತ್ತವೆ. ಪರೀಕ್ಷೆಯಲ್ಲಿ ಒಂದು ಸಾಲನ್ನು ಮಾತ್ರ ನೀಡಿ ಪ್ರಸಾರ ಹಾಕಲು ಕೇಳುತ್ತಾರೆ ಗಣ ಗುರುತಿಸಲು ಯಮಾತಾರಾಜಭಾನಸಲಗಂ ಸೂತ್ರ ಬಳಸಬೇಕು ಖ್ಯಾತ ಕರ್ನಾಟಕಗಳಲ್ಲಿ 6 ವಿಧ. ಅವುಗಳೆಂದರೆ

  1.  ಉತ್ಪಲ ಮಾಲಾವೃತ್ತ
  2. ಚಂಪಕಮಾಲಾ ವೃತ್ತ
  3. ಸಗ್ಧರಾ
  4. ಮಹಾಸರಾ
  5. ಶಾರ್ದೂಲ ವಿಕ್ರೀಡಿತ
  6. ಮತ್ತೇಭ ವಿಕ್ರೀಡಿತ

ಪದ್ಯ: ಗುರುವೋಂದಾದಿಯೊಳುತ್ಪಲಂ ಗುರು ಮೊದಲ್ ಮೂರಾಗೆ ಶಾರ್ದೂಲಮಾ

ಗುರು ನಾಲ್ಕಾಗಿರಲಂತು ಸಗ್ಧರೆ ಲಘು ದ್ವಂದ್ವಂ ಗುರು ದ್ವಂದ್ವಂ ಮಾ ಗಿರೆ ಮತ್ತೇಭ ಲಘು ದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ ಹರಿಣಾಕ್ಷೀ,ಲಘುನಾಲ್ಕು ಚಂಪಕಮಿವಾರಂ ಖ್ಯಾತ ಕರ್ನಾಟಕಂ

 ಉತ್ಪಲ ಮಾಲಾವೃತ್ತ:

  1. ನಾಲ್ಕು ಸಮ ಸಾಲಿನ ಪದ್ಯಬಾಗ
  2. ಪ್ರತೀ ಸಾಲಿನಲ್ಲೂ 20 ಅಕ್ಷರಗಳಿವೆ
  3. ಭರನ,ಭ,ಬರ ಎಂಬ ಆರು ಗಣ ಲಘು 1 ಗುರು ಬರುತ್ತದೆ

ಸೂತ್ರ: “ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳುರಲ್”

ಚಂಪಕ ಮಾಲಾವೃತ್ತ

  1. ನಾಲ್ಕು ಸಮ ಸಾಲಿನ ಪದ್ಯಬಾಗ
  2. ಪ್ರತೀ ಸಾಲಿನಲ್ಲೂ 21 ಅಕ್ಷರಗಳಿವೆ
  3. ನ ಜ ಭ ಜ ಜ ಜ ರ ಎಂಬ ಏಳು ಗಣ ಬರುತ್ತದೆ.

ಸೂತ್ರ: “ನಜಭಜಜಜರಂ ಬಗೆಗೊಳಿತಿರೆ ಚಂಪಕಮಾಲೆಯೆಂದಪರ್

ಸಗ್ಧರಾ ವೃತ್ತ:

1) ನಾಲ್ಕು ಸಮ ಸಾಲಿನ ಪದ್ಯಭಾಗ

2) ಪ್ರತೀ ಸಾಲಿನಲ್ಲೂ 21 ಅಕ್ಷರಗಳಿವೆ

3) ಮರಬನಯಯಯ ಎಂಬ 7 ಬರುತ್ತದೆ

ಸೂತ್ರ: “ತೋರಲ್ ಮಂ ರಂಭನಂ ಮೂಯಗಣಮುಮದೆತಾಂಸಗ್ಧರಾ ವೃತ್ತಮಕ್ಕುಂ”

ಮಹಾಸಗ್ಧರಾ ವೃತ್ತ:

  1. ನಾಲ್ಕು ಸಮ ಸಾಲಿನ ಪದ್ಯಬಾಗ
  2. ಪ್ರತೀ ಸಾಲಿನಲ್ಲೂ 22 ಅಕ್ಷರಗಳಿವೆ
  3. ಸ ತ ತ ನ ಸ ರ ರ ಎಂಬ 7 ಗಣ 1 ಗುರು ಬರುತ್ತದೆ

ಸೂತ್ರ: “ಸತತಂ ನಂಸಂರರಂಗಂ ನೆರೆದೆಸೆಯ ಮಹಾಸ್ರಗ್ಧರಾ ವೃತ್ತಮಕ್ಕುಂ”

ಶಾರ್ದೂಲ ವಿಕ್ರೀಡಿತ ವೃತ್ತ:

  1. ನಾಲ್ಕು ಸಮ ಸಾಲಿನ ಪದ್ಯಭಾಗ
  2. ಪ್ರತೀ ಸಾಲಿನಲ್ಲೂ 19 ಅಕ್ಷರಗಳಿವೆ
  3. ಮಸಜಸತತಗ ಎಂಬ 6 ಗಣ ಕಡೆಯಲ್ಲಿ 1 ಗುರು ಬರುತ್ತದೆ.

ಸೂತ್ರ: ” ಕಣೋಪ್ಪಲ್ ಮಸಜಂಸತಂತಗಮುಮಾ ಶಾರ್ದೂಲ ವಿಕ್ರೀಡಿತಂ”

ಮತ್ತೇಭ ವಿಕ್ರೀಡಿತ ವೃತ್ತ:

  1. ನಾಲ್ಕು ಸಮ ಸಾಲಿನ ಪದ್ಯಬಾಗ
  2. ಪ್ರತಿ ಸಾಲಿನಲ್ಲೂ 20 ಅಕ್ಷರಗಳಿವೆ
  3. ಸಭರನಮಯ ಎಂಬ 6 ಗಣ ಕಡೆಯಲ್ಲಿ 1 ಲಘು 1 ಗುರು ಬರುತ್ತದೆ.

ಸೂತ್ರ: “ಸಭರಂನಂ ಮಯಲಂಗಮುಂ ಬಗೆಗೋಲಲ್ ಮತ್ತೇಭ ವಿಕ್ರೀಡಿತಂ”

Leave a Comment

error: Content is protected !!
%d bloggers like this: