ನಾಮವಾಚಕ, ಧಾತುಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ (ಬದಲಾವಣೆಯಾಗದೆ) ಏಕರೂಪವಾಗಿರುವ ಶಬ್ದಗಳು ಅವ್ಯಯಗಳು ಎನಿಸುವುವು.
ಉದಾ:
೧.ಅವನು ಚೆನ್ನಾಗಿ ಓಡಿದನು.
೨.ಅವಳು ಚೆನ್ನಾಗಿ ಓಡಿದಳು.
೩.ಅವರು ಚೆನ್ನಾಗಿ ಓಡಿದರು.
೪.ಅದು ಚೆನ್ನಾಗಿ ಓಡಿತು.
೫.ಅವು ಚೆನ್ನಾಗಿ ಓಡಿದವು.
ಇಲ್ಲಿ ಚೆನ್ನಾಗಿ ಎಂಬುದು ಅವ್ಯಯ, ಲಿಂಗ, ವಚನಗಳು ಬದಲಾದರೂ ಅವ್ಯಯ ಮಾತ್ರ ಏಕರೂಪವಾಗಿ ಪ್ರಯೋಗವಾಗುತ್ತದೆ.
ಅವ್ಯಯದ ವಿಧಗಳು :
೧. ಸಾಮಾನ್ಯಾವ್ಯಯ: ಒಂದು ಕ್ರಿಯೆ ನಡೆದ ರೀತಿಯನ್ನು ಹೇಳುವ ಅವ್ಯಯ.
ಉದಾ: ಬೇಗನೆ, ತಟ್ಟನೆ, ಬೆಳ್ಳಗೆ, ತೆಳ್ಳಗೆ ಇತ್ಯಾದಿ.
೨. ಅನುಕರಣಾವ್ಯಯ: ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ತಾನು ಕೇಳಿದಂತೆ ಪುನಃ ಅನುಕರಣಮಾಡಿ ಹೇಳುವ ಶಬ್ದಗಳು ಅನುಕರಣಾವ್ಯಯ ಎನಿಸುವುದು.
ಉದಾ: ಪಟಪಟನೆ, ಸರಸರ, ಧಗಧಗ,
೩. ಭಾವಸೂಚಕ ಅವ್ಯಯ: ಮನದಲ್ಲಿರುವ ಕೋಪ, ತಾಪ, ಹರ್ಷ, ಆಕ್ಷೇಪ ತಿರಸ್ಕಾರ, ದುಃಖ, ಮೆಚ್ಚುಗೆ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುವ ಅವ್ಯಯಗಳು.
ಉದಾ: ಅಯ್ಯೋ, ಆಹಾ, ಛೇ, ಹೂ, ಭಲೇ ಇತ್ಯಾದಿ.
೪. ಕ್ರಿಯಾರ್ಥಕ ಅವ್ಯಯ: ಕ್ರಿಯೆಯ ಸ್ಥಾನದಲ್ಲಿ ನಿಂತು, ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳು. ಉದಾ: ಬೇಕು, ಬೇಡ, ಸಾಕು, ಹಾಕು ಇತ್ಯಾದಿ.
೫ ಸಂಬಂಧಾರ್ಥಕಾವ್ಯಯ ಅಥವಾ ಸಂಬಂಧಸೂಚಕ ಅವ್ಯಯ: ಎರಡು ಪದಗಳನ್ನಾಗಲಿ, ಹೆಚ್ಚು ಪದಗಳನ್ನಾಗಲಿ, ಅಥವಾ ಹಲವು ವಾಕ್ಯಗಳನ್ನಾಗಲಿ ಜೋಡಿಸುವಂಥ ಮತ್ತು ಸಂಬಂಧಗೊಳಿಸುವಂಥ ಶಬ್ದಗಳು ಸಂಬಂಧಾರ್ಥಕಾವ್ಯಯಗಳು.
ಉದಾ: ಮತ್ತು, ಅಥವಾ, ಆದರೆ, ಆದುದರಿಂದ ಇತ್ಯಾದಿ ಉದಾ: ರಾಮನು ಬಂದನು ಆದರೆ ಲಕ್ಷ್ಮಣ ಬರಲಿಲ್ಲ (ಆದರೆ)
ಸೀತಾ ಮಾತಾಡಲಿಲ್ಲ ಆದುದರಿಂದ ನಾನೂ ಮಾತಾಡಲಿಲ್ಲ (ಆದುದರಿಂದ).
೬. ಅವಧಾರಣಾರ್ಥಕಾವ್ಯಯ: ನಿಶ್ಚಯಾರ್ಥದಲ್ಲಿ ಬರುವ ಅವ್ಯಯವಿದು. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದೇ ಅವಧಾರಣಿ.
ಉದಾ:
೧.ಅದೇ ನನ್ನ ಪುಸ್ತಕ
೨.ನಾನೇ ಪುಸ್ತಕ ಕೊಟ್ಟೆ.
Nice knowledge