Belaguvanaaruti mahanta mahimage in Kannada
ಬೆಳಗುವನಾರುತಿ ಮಂಗಳ ಮೂರ್ತಿಗೆ ಮುಳಗುಂದದ ಮಹಾವಿರತ ಮಹಾಂತನಿಗೆ || ಪ ||
ಬಾಲಲೀಲೆಯ ತೋರಿ ಭಕ್ತರ ಪೊರೆದವಗೆ | ಕಾಲಕರ್ಮವ ಗೆಲಿದು ಶಿವಯೋಗಿಯಾದವಗೆ | ಶೀಲಸದ್ಗುಣ ಬಾಲಯೋಗಿ ಪ್ರಖ್ಯಾತನಿಗೆ | ಸೋಲನರಿಯದ ವೀರವಿರತಾಗ್ರ ಗಣ್ಯನಿಗೆ || 1 ||
ಶಿವನ ಧರ್ಮದ ತತ್ವ ತಿಳಿದ ಮಹಾ ಕವಿವರಗೆ | ಶಿವಭಕ್ತಿ ಸಾಮ್ರಾಜ್ಯ ಕಟ್ಟಿದ ಶರಣನಿಗೆ | ಶಿವ ಲೋಕದ ಸಿರಿಯ ಭುವಿಗೆ ತಂದಾತನಿಗೆ | ಶಿವಯೋಗ ಸಿದ್ದಿಯಲಿ ಜಗದಲ್ಲಿ ಮೆರೆದವಗೆ || 2 ||
ಮೈಸೂರು ಅರಮನೆಯ ಮಹಾಪೂಜೆ ಕೊಂಡವಗೆ 1 ಸಾಸಿರ ಲೀಲೆಗಳ ಪ್ರತ್ಯಕ್ಷ ಗೈದವಗೆ | ದಾಸನಾಗಿಹ ರಾಜಭಕ್ತಿಗೆ ಪೊಂದವಗೆ | ಕಾಸು ಬೇಡಿದ ಯೋಗಿ ಶಿವಯೋಗಿ ಶ್ರೇಷ್ಠನಿಗೆ || 3 ||
ಆರುಸ್ಥಲಗಳ ಸೇರಿ ಅರಿವನಿತವನಿಗೆ | ಸಾರಿ ಪಂಚಾಚಾರ ನಿಯಮದಲಿ ನಡೆದವಗೆ । ತೋರುವಷ್ಟಾವರಣ ಭರಿಸಿದ ಗುರುವರಗೆ | ವೀರ ವಿರತಿಯ ಪುಣ್ಯ ಸಾಕಾರವಾದವಗೆ || 4 ||
ಪ್ರಣವ ಮಂತ್ರವೆ ತಾನು ತಾನೇ ತಾನಾದವಗೆ ಜನನ ಮರಣದ ಗೆಲದು ಅಮರಾತ್ಮನಾದವಗೆ | ಘನ ಮುರುಘಾಮಠ ದೊಡೆಯ ಮಹಾಸ್ವಾಮಿಯಾದವಗೆ | ಜನಮುದ್ದು ಬಸವನಿಗೆ ಪೊಲಿದು ರಕ್ಷಿಸಿದವಗೆ || 5 ||
Belaguvanaaruti mahanta mahimage in English
Beḷaguvanāruti maṅgaḷa mūrtige muḷagundada mahāvirata mahāntanige || pa ||
bālalīleya tōri bhaktara poredavage | kālakarmava gelidu śivayōgiyādavage | śīlasadguṇa bālayōgi prakhyātanige | sōlanariyada vīraviratāgra gaṇyanige || 1 ||
śivana dharmada tatva tiḷida mahā kavivarage | śivabhakti sāmrājya kaṭṭida śaraṇanige | śiva lōkada siriya bhuvige tandātanige | śivayōga siddiyali jagadalli meredavage || 2 ||
maisūru aramaneya mahāpūje koṇḍavage 1 sāsira līlegaḷa pratyakṣa gaidavage | dāsanāgiha rājabhaktige pondavage | kāsu bēḍida yōgi śivayōgi śrēṣṭhanige || 3 ||
ārusthalagaḷa sēri arivanitavanige | sāri pan̄cācāra niyamadali naḍedavage। tōruvaṣṭāvaraṇa bharisida guruvarage | vīra viratiya puṇya sākāravādavage || 4 ||
praṇava mantrave tānu tānē tānādavage janana maraṇada geladu amarātmanādavage | ghana murughāmaṭha doḍeya mahāsvāmiyādavage | janamuddu basavanige polidu rakṣisidavage || 5 ||