ಒ೦ದು ಸಲ, ದೂರದ ಅರಬ ದೇಶದಿಂದ ಒಬ್ಬ ಕುದುರೆ ವ್ಯಾಪಾರಿ ಬಂದ. ಆತ ತನ್ನೊಂದಿಗೆ ಕೆಲ ಕುದುರೆಗಳನ್ನು ತಂದಿದ್ದ. ಉತ್ತಮ ತಳಿಯ ಕುದುರೆಗಳು ಅವಾಗಿದ್ದವು. ಅಕ್ಟರ್ ಬಾದಷಾರಿಗೆ ಅವುಗಳನ್ನು ನೋಡಿ, ಸಂತೋಷವಾಯಿತು.
ಆ ಎಲ್ಲ ಕುದುರೆಗಳನ್ನು, ಆತ ಹೇಳಿದ ಬೆಲೆಗೆ ಬಾದಷಾ, “ಮಹಾರಾಜ್ ! ತಮ್ಮ ಲಾಯದಲ್ಲಿ ಇಂಥ ಕುದುರೆಗಳು ಎಷ್ಟಿದ್ದರೂ ಕಡಿಮೆಯೆ! ತಾವು ಹುಕುಮಿಸಿದರೆ, ಇನ್ನಷ್ಟು ಕುದುರೆಗಳನ್ನು ನಮ್ಮ ದೇಶದಿಂದ ತಂದು ಕೊಡುತ್ತೇನೆ” ಕುದುರೆಯವ ಹೇಳಿದ.
ಅಕ್ಟರ್‌ಗೂ ಆತನ ಮಾತು ಸರಿ ಅನಿಸಿತು. ಇಂಥ ಕುದುರೆಗಳಿಂದ ತಮ್ಮ ಅಶ್ವದಳಕ್ಕೆ ಬಲ ಬರುತ್ತದೆ ಅಂದುಕೊಂಡರು. ಇನ್ನೂ ಕೆಲವು ಕುದುರೆಗಳನ್ನು ತಂದುಕೊಡುವಂತೆ ಕುದುರೆ ವ್ಯಾಪಾರಿಗೆ ಹೇಳಿದರು. ಅದಕ್ಕಾಗಿ ಐದು ಸಾವಿರ ಬಂಗಾರದ ನಾಣ್ಯಗಳನ್ನು ಮುಂಗಡವಾಗಿ ಕೊಟ್ಟರು. ಆದರೆ ಕುದುರೆ ವ್ಯಾಪಾರಿಯ ಹೆಸರು, ವಿಳಾಸ ಒಂದೂ ಕೇಳಲಿಲ್ಲ.
ಕೆಲವು ದಿನಗಳು ಕಳೆದವು. ಅಕ್ಟರ್ ಬಾದಷಾಗೆ ಮತ್ತೊಮ್ಮೆ ವಿಚಿತ್ರ ಆಲೋಚನೆ ಬಂತು. ‘ತನ್ನ ರಾಜ್ಯದಲ್ಲಿ ಎಷ್ಟು ಜನ ಮೂರ್ಖರಿರಬಹುದು? ತಿಳಿಯುವ ಕುತೂಹಲ ಕಾಣಿಸಿಕೊಂಡಿತ್ತು. ಈ ಕಾರ್ಯಕ್ಕೆ ಬೀರಬಲ್‌ನೇ ಸರಿ ಅನಿಸಿತು. ಆತ ಬೀರಬಲ್‌ನನ್ನು ಕರೆಕಳುಹಿದ.
“ಬೀರಬಲ್, ನಮ್ಮ ರಾಜ್ಯದಲ್ಲಿರುವ ಮೂರ್ಖರ ಯಾದಿ ತಯಾರಿಸ ಬೇಕಾಗಿದೆ. ಇಂದಿನಿಂದ ನೀನು ಮೂರ್ಖರ ಗಣತಿ ಕಾರ್ಯ ಪ್ರಾರಂಭಿಸಿ, ಮೂರು ತಿಂಗಳೊಳಗಾಗಿ ಅವರೆಲ್ಲರ ಹೆಸರು ಕೊಡಬೇಕು” ಆಜ್ಞಾಪಿಸಿದ
ಆ ಪ್ರಕಾರ ಬೀರಬಲ್, ರಾಜ್ಯದೆಲ್ಲೆಡೆ ಸಂಚರಿಸಿ, ಮೂರು ತಿಂಗಳ ನಂತರ ಬಾದಷಾರ ಮುಂದೆ ಹಾಜರಾದೆ. ಆತನ ಕೈಯಲ್ಲಿನ ಉದ್ದನೆಯ ಪಟ್ಟಿಯನ್ನು, ಆತುರದಿಂದಲೇ ಅಕ್ಷರ್ ವೀಕ್ಷಿಸತೊಡಗಿದ.
ಮೊದಲ ತುತ್ತಿಗೇ ಹರಳು ಎಂಬಂತೆ, ಮೂರ್ಖರ ಹೆಸರಿನಲ್ಲಿ, ಅಕ್ಟ ಬಾದಷಾನ ಹೆಸರೇ ಮೊದಲಾಗಿತ್ತು. ಸಾಮ್ರಾಟರಿಗೆ ಸಿಟ್ಟು ಬರಲು ಇಷ್ಟು ಸಾಕಲ್ಲ!
“ಇದೇನು ಬೀರಬಲ್! ನನ್ನ ಹೆಸರೇ ಮೂರ್ಖರ ಮೊದಲು ಇದೆಯಲ್ಲ! ಯಾಕೆ? ನನ್ನ ಕೂಡ ಚೇಷ್ಟೆಯೊ?” ಕೋಪದಿಂದ ಅಕ್ಟರ್ ಕೇಳಿದ.
“ಸರಿಯಾಗಿಯೇ ಇದೆಯಲ್ಲ ಮಹಾರಾಜ್, ಈ ಹಿಂದೆ ಕುದುರ ವ್ಯಾಪಾರಕ್ಕಾಗಿ ಬಂದಿದ್ದ ಅರಬನಿಗೆ, ಆತನ ಹೆಸರು, ವಿಳಾಸ ಕೇಳದೆ ಐದ ಸಾವಿರ ಚಿನ್ನದ ಬಂಗಾರಗಳನ್ನು ತಾವು ಕೊಟ್ಟಿರುವದು ಮೂರ್ಖತನವಲ್ಲವೆ?” ಬೀರಬಲ್ ಮರುಪ್ರಶ್ನೆ ಹಾಕಿದ.
“ಅದ್ದೆಗೆ ಮೂರ್ಖತನವಾದೀತು?” ಅಕ್ಟರ್‌ನ ಸಿಟ್ಟು ಇನ್ನೂ ಇಳಿದಿರಲಿಲ್ಲ.
“ಅಲ್ಲವೆ ಮತ್ತೆ, ತಮ್ಮಿಂದ ದುಡ್ಡು ಪಡೆದಿರುವ ಆ ಅಪರಿಚಿತ ವ್ಯಕ್ತಿ ಕುದುರೆಗಳನ್ನು ತರದಿದ್ದರೆ… ಆಗ ನೀವೇನು ಮಾಡಬಲ್ಲಿರಿ… ಕೊಟ್ಟ ಕೋಡಂಗಿ, ತಕ್ಕೊಂಡವ ವೀರಭದ್ರ, ಗೊತ್ತಲ್ಲ. ಅಂದಮೇಲೆ ತಮ್ಮದ ಮೂರ್ಖತನವಲ್ಲದೆ ಇನ್ನೇನು?”
ಬಾದಷಾರಿಗೆ ತಮ್ಮ ತಪ್ಪಿನ ಅರಿವಾಯಿತು. ‘ಹೌದು, ಆಗ ತಾ ಮಾಡಿದ್ದು ಮೂರ್ಖತನ ಕೆಲಸವೆ… ಮನಸ್ಸಿನಲ್ಲಿಯೇ ಅಂದುಕೊಂಡರು ಆಗ ಅವರಿಗೆ ಇನ್ನೊಂದು ವಿಚಾರ ಬಂತು.
ಆದರೆ… ಬೀರಬಲ್, ಆ ಕುದುರೆ ವ್ಯಾಪಾರಿ, ಮರಳಿ ಇಲ್ಲಿಗೆ ಬಂದು ಕುದುರೆಗಳನ್ನು ತಂದುಕೊಟ್ಟರೆ… ನಾನೇನು ಮೂರ್ಖನಾಗುವದಿಲ್ಲವಲ್ಲ…!?
ಅಕ್ಟರ್ ಮಂದಹಾಸ ಬೀರಿದ. ಬೀರಬಲ್‌ನೂ ನಕ್ಕ. ಒಂದು ಕ್ಷಣವೂ ತಡಮಾಡದೆ ಹೇಳಿದ “ಜಹಾಂಪನಾ, ಆಗ ನಿಮ್ಮ ಹೆಸರನ್ನು ತೆಗೆದುಹಾಕಿ ಆ ಸ್ಥಳದಲ್ಲಿ ಕುದುರೆಯ ವ್ಯಾಪಾರಿಯ ಹೆಸರನ್ನು ಸೇರಿಸಿದರಾಯ್ತು ಬಿಡಿ… ಅದಾಗುವವರೆಗೂ ತಮ್ಮ ಹೆಸರು ಇಲ್ಲಿರಲೇಬೇಕಾಗುತ್ತದೆ.” ಬೀರಬಲ್‌ನ ಮಾತು ಕೇಳಿ, ಅಕ್ಟರ್ ಪೆಚ್ಚಾಗಿಬಿಟ್ಟ.
ಕೊನೆಗೂ ಆ ಕುದುರೆ ವ್ಯಾಪಾರಿ ಮತ್ತೆಂದೂ ಬರಲೇ ಇಲ್ಲ. ಹೀಗಾಗಿ ಅಕ್ಟರ್‌ನ ಹೆಸರು ಮೂರ್ಖರ ಪಟ್ಟಿಯಲ್ಲಿ ಖಾಯಂ ಆಗಿ ಉಳಿದುಬಿಟ್ಟಿತು.