Beerbal Kagegala Balaga Yanisiddu

ಅಕ್ಷರ್ ಬಾದಷಾ ಎಲ್ಲಿಯೇ ಹೋಗಲಿ, ಆತನ ಜತೆ ಬೀರಬಲ್ ಇದ್ದೇ ಇರುತ್ತಿದ್ದ. ಒಂದು ಸಲ, ಇಬ್ಬರೂ ಬೇಟೆಯಾಡಲೆಂದು ಕಾಡಿಗೆ ಹೋಗಿದ್ದರು. ಅಡವಿಯಲ್ಲಿ ಅಲೆದಾಡಿ, ಬೇಟೆಯಾಡಿದರು. ಹಿಂತಿರುಗಿ ಬರುವಾಗ, ಊರ ಹೊರಗಿದ್ದ ಆಲದ ಮರದಡಿ ಕುಳಿತು, ವಿಶ್ರಮಿಸಿ ಕೊಳ್ಳುತ್ತಿದ್ದರು. ಆ ಮರದ ತುಂಬ ಕಾಗೆಗಳಿದ್ದವು. ಅವುಗಳನ್ನು ನೋಡಿದ ಬಾದಷಾರಿಗೆ ಏನನಿಸಿತೋ, “ಬೀರಬಲ್, ನಮ್ಮ ಸಾಮ್ರಾಜ್ಯದಲ್ಲಿ ಎಷ್ಟು ಕಾಗೆಗಳಿರಬಹುದು…? ನಿಖರವಾಗಿ ಹೇಳಬಲ್ಲೆಯಾ?” ಒಮ್ಮೆಲೆ ಕೇಳಿದರು. ಬಾದಷಾರ ಈ ಅನಿರೀಕ್ಷಿತ ಪ್ರಶ್ನೆಗೆ ಒಂದಿಷ್ಟು ವಿಚಲಿತನಾಗದೆ, ಬೀರಬಲ್ ತಕ್ಷಣ ಉತ್ತರಿಸಿದ, “ಮಹಾರಾಜ, ತಮ್ಮ ಸಾಮ್ರಾಜ್ಯದಲ್ಲಿರುವ ಒಟ್ಟು ಕಾಗೆಗಳ ಸಂಖ್ಯೆ ಮುವತ್ತು ಸಾವಿರದ ಆರು ನೂರಾ ಇಪ್ಪತ್ತಾರು.” “ಅದೇನು ಅಷ್ಟು ಖಚಿತವಾಗಿ ಹೇಳುತ್ತೀಯಲ್ಲ? ಒಂದು ವೇಳೆ ಕಾಗೆಗಳ ಸಂಖ್ಯೆ ನೀನು ಹೇಳಿದುದಕ್ಕಿಂತ ಕಡಿಮೆಯಾಗಿದ್ದರೆ…?” ಕೇಳಿದರು ಬಾದಷಾ. ಅದಕ್ಕೆ ಬೀರಬಲ್- “ಮಹಾರಾಜ, ಒಂದು ವೇಳೆ ಹಾಗೇನಾದರೂ ಆಗಿದ್ದರೆ… ಕಡಿಮೆ ಇದ್ದಷ್ಟು ಸಂಖ್ಯೆಯ ಕಾಗೆಗಳು, ತಮ್ಮ ಬಂಧು-ಬಾಂಧವರನ್ನು ಕಾಣಲು ಬೇರೆ ರಾಜ್ಯಕ್ಕೆ ಹೋಗಿರುತ್ತವೆ.” “ಅಚ್ಛಾ…! ಹಾಗೇ ಅಂತ ಇಟ್ಟುಕೊಳ್ಳೋಣ. ಆದರೆ ಅವುಗಳ … Read more

Tags:

Gundiyalli Biddante Kanasu

ಮಾತಿನಲ್ಲಿ ಪ್ರಚಂಡನಾಗಿರುವ ಬೀರಬಲ್‌ನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅಕ್ಟರ್‌ ಆಲೋಚಿಸುತ್ತಲೆ ಇದ್ದ. ಆ ಅವಕಾಶಕ್ಕಾಗಿ ಕಾಯುತ್ತಿದ್ದ. ಒಂದು ಮುಂಜಾನೆ ಬೀರಬಲ್ ಅಂತಃಪುರಕ್ಕೆ ಬಂದ. ಆಗಿನ್ನೂ ಅಕ್ಟರ್‌ ಎದ್ದಿರಲಿಲ್ಲ. “ಇದೇನು ಮಹಾಪ್ರಭು, ಇನ್ನು ಮಲಗಿಕೊಂಡಿದ್ದೀರಿ? ಬಹುಶಃ ಸಕ್ಕರೆಯ ನಿದ್ದೆಯಲ್ಲಿದ್ದಂತೆ ಕಾಣುತ್ತದೆ ? ಅಥವಾ ಯಾವುದಾದರೂ ಸವಿಗನಸು ಕಾಣುತ್ತಿದ್ದಿರಬಹುದು ?” ಬೀರಬಲ್ ಚೇಷ್ಟೆ ಮಾಡಿದ. ಈ ಮಾತಿನ ಮಲ್ಲನನ್ನು ಸೋಲಿಸಲು ಇದೊಂದು ಅವಕಾಶ ಎಂದು ಮನಸ್ಸಿನಲ್ಲಿ ಅಂದುಕೊಂಡ ಅಕ್ಟರ್‌, ನೀನು ಹೇಳುವುದು ಸರಿ ಬೀರಬಲ್. ಈಗ ಸ್ವಲ್ಪ ಸಮಯಕ್ಕೆ ಮೊದಲು ನನಗೆ ಕನಸೊಂದು ಬಿದ್ದಿತ್ತು. ಆ ಕನಸಿನಲ್ಲಿ ನೀನು ಕಕ್ಕಸಿನ ಗುಂಡಿಯಲ್ಲಿ ಬಿದ್ದಿದ್ದೆ. ನಾನು ಜೇನುತುಪ್ಪದ ಗುಂಡಿಯಲ್ಲಿ ಬಿದ್ದಂತೆ ಕನಸು ಕಂಡೆ” ಮುಗುಲ್ನಗುತ್ತ ಬೀರಬಲ್‌ನ ಮುಖ ನೋಡಿದ. ತನಗೆ ಅವಮಾನ ಮಾಡುವ ಉದ್ದೇಶದಿಂದ ಮಹಾರಾಜರು ಹೀಗೆ ಹೇಳುತ್ತಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂದುಕೊಂಡ ಬೀರಬಲ್. “ಮಹಾರಾಜ ನನಗೂ ಅದೇ ಕನಸು ಬೀಳಬೇಕೆ! ಎಂಥ ವಿಚಿತ್ರವಿದು! ಅದನ್ನು ಹೇಳಲೆಂದೇ ನಾನು ಇಲ್ಲಿಗೆ ಬಂದದ್ದು. ಕಕ್ಕಸು … Read more

Tags:

Tande katteyo…Mattadara Mariyo…

ರಾಜಧಾನಿಯಲ್ಲಿ ಚಳಿ ಇನ್ನೂ ಹಾಗೆಯೇ ಇತ್ತು. ಸಂಜೆಯ ವಾಯುವಿಹಾರವನ್ನು ಅಕ್ಟರ್‌ ಹಾಗು ಬೀರಬಲ್ ಮುಂದುವರೆಸಿದ್ದರು. ಅಂದು ಇವರಿಬ್ಬರ ಜತೆ ರಾಜಕುಮಾರನೂ ಬಂದಿದ್ದ. ಮೂವರೂ ಮೈತುಂಬ ಉಣ್ಣೆಯ ಬಟ್ಟೆ ಧರಿಸಿಕೊಂಡು, ಬೆಳಗಿನ ಸೊಬಗು ಸವಿಯುತ್ತ ಸವಿಯುತ್ತ ತುಂಬ ದೂರ ಬಂದಿದ್ದರು. ಅದಾಗಲೇ ಸೂರ್ಯ ಉದಯಿಸಿ ಬಹಳ ಸಮಯವಾಗಿತ್ತು. ಸೂರ್ಯ ಮೇಲೇರುತ್ತಿದ್ದಂತೆ, ಕೊರೆಯುವ ಚಳಿಯೂ ಕರಗತೊಡಗಿತ್ತು. ಚಳಿ ಕಡಿಮೆಯಾದಂತೆ, ಮೈಮೇಲಿನ ಉಣ್ಣೆಯ ಬಟ್ಟೆ ಬೇಡವೆನಿಸತೊಡಗಿತ್ತು. ಬೀರಬಲ್‌ನ ವಿನೋದದ ಮಾತುಗಳನ್ನು ಕೇಳುತ್ತಲಿದ್ದ ಅಕ್ಟರ್‌ ಬಾದಷಾ, ಯಾವುದೋ ಚಿತ್ತದಲ್ಲಿ ತನ್ನ ಮೈಮೇಲಿದ್ದ ಉಣ್ಣೆಯ ನಿಲುವಂಗಿ ತೆರೆದು ಬೀರಬಲ್‌ನ ಹೆಗಲ ಮೇಲೆ ಚೆಲ್ಲಿದ್ದ. ಬಿಸಿಲು ಹೆಚ್ಚಾಗುತ್ತಿದ್ದಂತೆ, ರಾಜಕುಮಾರನೂ ಸಹ,  ತಂದೆಯಂತೆಯೇ ಮಾಡಿದ್ದ. ಈಗ ಬೀರಬಲ್‌ನ ಹೆಗಲ ಮೇಲೆ ತನ್ನದೂ ಸೇರಿ ಮೂರು ನಿಲುವಂಗಿಗಳು. ಆತನ ಸ್ಥಿತಿ ನೋಡಿ, ಅಕ್ಟರ್‌ಗೆ ನಗು ಬಂತು. ಯಾವಾಗಲೂ ಮತ್ತೊಬ್ಬರನ್ನು ಕಂಡು ಲೇವಡಿ ಮಾಡುವ ಈ ಬೀರಬಲ್‌ನನ್ನು ಹಾಗೆಯೇ ಬಿಡಬಾರದು ಅಂದುಕೊಂಡ ಅಕ್ಟರ್‌, “ಇದೇನು ಬೀರಬಲ್ ಈಗ ನೀನು ಒಂದು ಕತ್ತೆಯ ಹೊತ್ತಂತಾಗಲಿಲ್ಲವೆ ?” … Read more

Tags:

Tirugu Bana

ಅಕ್ಟರ್‌ನ ಆಸ್ಥಾನದಲ್ಲಿ ಅಬ್ದುಲ್ ಫಜಲ್ ಹೆಸರಿನ ಚಾಣಾಕ್ಷ ಮಂತ್ರಿ ಇದ್ದ. ಅವನಾದರೂ ಕೂಡ ಅತ್ಯಂತ ಕುಶಾಗ್ರಮತಿಯೂ ಹಾಗೂ ಅಷ್ಟೇ ದಕ್ಷನಾದ ಮಂತ್ರಿಯಾಗಿದ್ದ. ಆದರೆ ಒಂದಿಷ್ಟು ಗಂಭೀರ ಸ್ವಭಾವ. ಬೀರಬಲ್ ಎಲ್ಲರನ್ನೂ ಒಮ್ಮೊಮ್ಮೆ ಅಕ್ಷರ್ ಬಾದಷಾರನ್ನು ಕೂಡ ಗೇಲಿ ಮಾಡುವದು, ಅಬ್ದುಲ್ ಫಜಲ್‌ನಿಗೆ ಸೇರುತ್ತಿರಲಿಲ್ಲ. ಆದರೆ ತನಗಿಂತ ಹೆಚ್ಚು ಅಧಿಕಾರ ಹೊಂದಿದ್ದ ಹಾಗೂ ಸಾಮ್ರಾಟರಿಗೆ ಅತೀ ಆಪ್ತನಾಗಿದ್ದ ಬೀರಬಲ್‌ನಿಗೆ ಎದಿರು ಮಾತನಾಡದೆ ಸುಮ್ಮನಿದ್ದ. ಹೇಗಾದರೂ ಮಾಡಿ ಈತನನ್ನು ಅವಮಾನಿಸಬೇಕೆಂಬ ದುರ್ವಿಚಾರ ಅಬ್ದುಲ್ ಫಜಲ್‌ನದು. ಆ ದಿನ ದರ್ಬಾರನಲ್ಲಿ ಎಲ್ಲರೂ ಸೇರಿದ್ದಾರೆ. ಅಕ್ಟರ್‌ ಬಾದಷಾ ಕೂಡ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ. ಇದೇ ಸದವಕಾಶ ಅಂದುಕೊಂಡ ಅಬ್ದುಲ್ ಫಜಲ್, “ಬೀರಬಲ್ ಇಂದಿನಿಂದ ನಿಮ್ಮನ್ನು ಈ ರಾಜ್ಯದ ನಾಯಿಗಳ ನಾಯಕರನ್ನಾಗಿ ಮಾಡಲಾಗಿದೆ” ತಮಾಷೆ ಮಾಡಿದ. “ಓಹೊ… ಹಾಗಿದ್ದರೆ, ಇನ್ನು ಮುಂದೆ ನೀವೆಲ್ಲ ನನ್ನ ಆಜ್ಞೆ ಪಾಲಿಸ ಬೇಕಾಗುತ್ತದೆ” ತಕ್ಷಣವೇ ಬೀರಬಲ್ ನುಡಿದಾಗ, ಅಕ್ಷರ್‌ ಆದಿಯಾಗಿ ಎಲ್ಲರೂ ಬಿದ್ದು ಬಿದ್ದು ನಗತೊಡಗಿದರು. ತನ್ನ ಮಾತು ತನಗೇ ತಿರುಗುಬಾಣವಾಯಿತಲ್ಲ ಎಂದು ಅಬ್ದುಲ್ … Read more

Tags:

Rayabhari manganadaddu…

ಅರಬ್ ದೇಶದಿಂದ ಒಬ್ಬ ರಾಯಭಾರಿ ದೆಹಲಿಗೆ ಬಂದ. ಸಾಮ್ರಾಟ್ ಅಕ್ಷರನ ಸಾಮ್ರಾಜ್ಯದಲ್ಲಿನ ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ ಆತ ಗ್ರಂಥವೊಂದನ್ನು ಬರೆಯುವವನಿದ್ದ. “ಈ ರಾಯಭಾರಿಗಳು ನಮ್ಮ ಅತಿಥಿ. ಅವರಿಗೆ ಯಾವುದೂ ಕೊರತೆ ಯಾಗದಂತೆ ನೋಡಿಕೊಳ್ಳಿ’ ಎಂದು ಅಕ್ಬರ್ ತನ್ನ ರಾಜಭಟರಿಗೆ, ಸೇವಕರಿಗೆ ಆದೇಶಿಸಿದ್ದ. ಆ ರಾಯಭಾರಿಯನ್ನು ತುಂಬ ಚೆನ್ನಾಗಿ  ನೋಡಿಕೊಳ್ಳಲಾಗಿತ್ತು. ರಾಯಭಾರಿ ಸಾಹಿತ್ಯ ಪ್ರೇಮಿಯಾಗಿದ್ದರಿಂದ, ಆತನಿಗೂ ಬೀರಬಲ್‌ನಿಗೂ ಬೇಗನೆ ಸ್ನೇಹ-ಬಾಂಧವ್ಯ ಚಿಗುರಿತು. ಇಬ್ಬರೂ ಮೇಲಿಂದ ಮೇಲೆ ಕೂಡುತ್ತಿದ್ದರು, ಹರಟುತ್ತಿದ್ದರು, ಚರ್ಚಿಸುತ್ತಿದ್ದರು. ಸಾಮ್ರಾಟ್‌ನ ಅಂತರಂಗದ ಗೆಳೆಯನಾಗಿದ್ದರಿಂದ, ಬೀರಬಲ್‌ನಿಂದ, ರಾಜ್ಯಾಡಳಿತದ ಎಷ್ಟೋ ವಿಷಯಗಳು ಅವರಿಬ್ಬರ ಮಾತುಕತೆಯಲ್ಲಿ ಬಂದು ಹೋಗುತ್ತಿದ್ದವು. ಆಗ ಆ ದಿನ… ಬೀರಬಲ್ ಹಾಗು ರಾಯಭಾರಿ ವಾಯುವಿಹಾರಕ್ಕೆಂದು ರಾಜಧಾನಿಯಿಂದ ತುಂಬ ದೂರದವರೆಗೆ ಬಂದಿದ್ದರು. ಅದು ಗೋಧೂಳಿ ಸಮಯ, ಹಿಂಡು ಹಿಂಡಾಗಿ ದನಕರುಗಳು ಸ್ವಸ್ಥಾನಕ್ಕೆ ಹಿಂತಿರುಗುತ್ತಿದ್ದವು. ಆಗ ಹಿಂಡಿನಲ್ಲಿದ್ದ ಹೋರಿಯೊಂದಕ್ಕೆ ಮದವೇರಿರಬಹುದು. ದಿಕ್ಕೆಟ್ಟು ಓಡುತ್ತ ಇವರಿಬ್ಬರ ಕಡೆ ಬರುತ್ತಿತ್ತು. ಮುಂದಾಗಬಹುದಾದ ಅಪಾಯ ಅರಿತ ರಾಯಭಾರಿ ತಕ್ಷಣ ಹತ್ತಿರದಲ್ಲಿದ್ದ ಮರವನ್ನೇರಿದ. ಬೀರಬಲ್‌ಗೂ ಮರ ಏರುವಂತೆ ಒತ್ತಾಯಿಸುತ್ತಲೇ … Read more

Tags:

Samratra Husimunisu

ಒಂದು ದಿನ ಯಾವುದೋ ವಿಚಾರ ಮಾಡಲು ಬೀರಬಲ್ ಅಕ್ಟರ್‌ನ ಅಂತಃಪುರಕ್ಕೆ ಬಂದ. ಅಕ್ಟರ್‌ನಿಗೆ ತುರ್ತಾಗಿ ಒಂದು ಸಂಗತಿ ತಿಳಿಸಬೇಕಾಗಿತ್ತು. ಆದರೆ ಅದರ ಬಗ್ಗೆ ಅರಿವಿರದ ಅಕ್ಟರ್‌, ತಮಾಷೆಯ ಭಾವದಲ್ಲಿದ್ದ. ಬೀರಬಲ್‌ನೊಂದಿಗೆ ಒಂದಿಷ್ಟು ಚೇಷ್ಟೆ ಮಾಡಬೇಕೆನಿಸಿತ್ತು. ತನ್ನ ಕಡೆಗೆ ಅವಸರದಿಂದ ಬಂದ ಬೀರಬಲ್‌ನ ಮೇಲೆ ಕೋಪ ಬಂದಿರುವಂತೆ ನಟಿಸಿದ. ಸಾಮ್ರಾಟನ ಮನೋಸಾಗರದಲ್ಲಿ ಏನಿದೆ ಎಂಬುವುದನ್ನು ಅರಿಯದ ಬೀರಬಲ್, “ಜಹಾಂಪನಾ…” ಎಂದು ಹೇಳುತ್ತಿದ್ದಂತೆಯೆ, “ಬೀರಬಲ್, ನಿನ್ನೊಡನೆ ಈಗ ಮಾತನಾಡಲು ನನಗೆ ಮನಸ್ಸಿಲ್ಲ. ನೀನು ಏನೇ ಹೇಳಿದರೂ ಖಂಡಿತವಾಗಿ ನಾನು ಒಂದು ಮಾತನ್ನು ಆಡುವುದಿಲ್ಲ” ಅಕ್ಟರ್‌ ಕೋಪದಿಂದ ನುಡಿದ. ದೊರೆಯ ಕೋಪದ ಮಾತು ಕೇಳಿದ ಬೀರಬಲ್ ಅಸಮಾಧಾನ ಗೊಳ್ಳಲಿಲ್ಲ. ನಯವಾದ ಮಾತುಗಳಲ್ಲಿಯೆ, “ಜಹಾಂಪನಾ ನೀವೇನು ಮಾತನಾಡಬೇಡಿ, ನಾನೆ ಮಾತನಾಡುತ್ತೇನೆ. ಸಾಮ್ರಾಟರಿಗೆ ಈ ಬಡವನ ಹತ್ತಿರ ಮಾತನಾಡಲು ಸಮಯ ಇರುವುದಿಲ್ಲ ಎಂಬುದು ನನಗೆ ಗೊತ್ತು. ಆದ್ದರಿಂದ ನಾನು ಮಾತನಾಡುತ್ತೇನೆ, ಅದನ್ನು ನೀವು ಕೇಳಿಸಿಕೊಂಡರೆ ಸಾಕು” ಎಂದು ಬೀರಬಲ್ ಹೇಳಿದ. ಬೀರಬಲ್‌ನ ಜಾಣ ಮಾತು ಕೇಳಿ ಅಕ್ಟರ್‌ ಮುಗುಳಕ್ಕ. … Read more

Tags:

Shrestatheya lakshanagalendare…

ಒಮ್ಮೆ, ಅಕ್ಚರ್ ಬಾದಷಾನಿಗೆ ಒಬ್ಬ ವಿದೇಶಿ ವ್ಯಕ್ತಿ ಒಂದು ಸುಂದರವಾದ ಗುಲಾಬಿ ಹೂವನ್ನು ಗೌರವಪೂರ್ವಕವಾಗಿ ಅರ್ಪಿಸಿದ. ಆ ಹೂವನ್ನು ಬಾದಷಾ ತುಂಬ ಸಂತೋಷದಿಂದಲೇ ಸ್ವೀಕರಿಸಿದ. ಆ ಹೂವಿನ ಪರಿಮಳ ಗಮನಿಸುತ್ತ, ಅದರ ಪರಿಮಳವನ್ನು ಆಸ್ವಾದಿಸತೊಡಗಿದ. ಹಾಗಿರಲು, ಅಕ್ಟರ್‌ನ ತಲೆಯೊಳಗೆ ಒಂದು ವಿಚಾರ ಕಾಣಿಸಿಕೊಂಡಿತು. ಹಾಗೆಯೇ ಕೆಲವೊಂದು ಪ್ರಶ್ನೆಗಳು ಸುಳಿದಾಡಿದವು. ಉತ್ತರ ಪಡೆಯ ಬೇಕೆಂದರೆ, ಬೀರಬಲ್ ಊರಲ್ಲಿರಲಿಲ್ಲ. ಆತನೊಬ್ಬನೆ ಮಾತ್ರ ಇಂಥ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಚತುರ ಅಂತೆನಿಸಿದರೂ…, ಬೇರೆ ಪಂಡಿತರನ್ನು ಕೇಳುವ ಆತುರ ಹುಟ್ಟಿತು. ಅದೇ ದಿನ ದರ್ಬಾರ್‌ನಲ್ಲಿ ತನ್ನ ಪ್ರಶ್ನೆಗಳನ್ನು ಮುಂದಿಟ್ಟ. “ಮಾನ್ಯ ಸಭಾಸದರೆ, ನಾನು ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ಅವುಗಳಿಗೆ ಯಾರು ಸಮಂಜಸವಾದ ಉತ್ತರಗಳನ್ನು ಕೊಡುತ್ತಾರೆ, ಅವರಿಗೆ ಎಂದಿನಂತೆ ಇನಾಮು ಕೊಟ್ಟು, ಗೌರವಿಸಲಾಗುವದು” ಎಂದು ಬಾದಷಾ ಈ ಕೆಳಗಿನ ಐದು ಪ್ರಶ್ನೆಗಳನ್ನು ಕೇಳಿದನು. ೧. ಹೂವುಗಳಲ್ಲಿ ಯಾವ ಹೂವು ಶ್ರೇಷ್ಠವಾದುದು? ಹಾಲು ನಮಗೆ ಅತ್ಯುತ್ತಮವಾದುದು ? ೩. ಈ ಜಗತ್ತಿನಲ್ಲಿ ತುಂಬ ರುಚಿಯಾದ ವಸ್ತು ಯಾವುದು? ೪. ಯಾವ ಗಿಡದ … Read more

Tags:

Murkhara munde summane irbekaste

ಕುದುರೆಯ ಖರೀದಿಯ ವಿಷಯದಲ್ಲಿ ಮೋಸ ಹೋಗಿ ತಾನು ಮೂರ್ಖನಾದೆನಲ್ಲ ಎಂಬುದು ಅಕ್ಟರ್‌ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಈ ಸಂಗತಿಯನ್ನು ಮರೆಯಲು ಪ್ರಯತ್ನಿಸಿದಷ್ಟು, ಅದು ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಹಾಗೆಯೇ ಆತನಿಗೆ ಇನ್ನೊಂದು ವಿಚಾರ ಬಂತು. “ಮೂರ್ಖರ ಜತೆ ವ್ಯವಹರಿಸುವ ಪ್ರಸಂಗ ಬಂದರೆ ಏನು ಮಾಡಬೇಕು ?” ದರ್ಬಾರು ಸೇರಿದಾಗ ಈ ವಿಷಯ ಪಂಡಿತರ ಮುಂದಿಟ್ಟ. ಅಕ್ಟರ್‌ನ ಈ ಪ್ರಶ್ನೆಯ ಹಿಂದೆ ಇರಬಹುದಾದ ಕಾರಣ ಬೀರಬಲ್‌ಗೆ ತಿಳಿದಿತ್ತು. ಆದರೂ ಆತ ಏನು ಮಾತನಾಡದೆ ಸುಮ್ಮನೆ ಕುಂತಿದ್ದ. ಒಬ್ಬ ಪಂಡಿತ ಎದ್ದು ನಿಂತು ಹೇಳಿದ, “ಮಹಾರಾಜ್, ಮೂರ್ಖರ ಜತೆ ಅದೆಂಥ ವ್ಯವಹಾರದ ಮಾತು? ಅವರಿಗೆ ಲೋಕಾನುಭವವೇ ಇರುವದಿಲ್ಲ… ಅಂದಮೇಲೆ ವ್ಯವಹರಿಸುವ ಮಾತಲ್ಲಿ ಬರುತ್ತದೆ?” ಮತ್ತೊಬ್ಬ ಹೇಳಿದ, “ಅಂಥ ಮೂರ್ಖರ ತಲೆ ಬೋಳಿಸಿ, ಕತ್ತೆಯ ಮೇಲೆ ಮೆರವಣಿಗೆ ಮಾಡಬೇಕು.” “ಹುಜೂರ್, ಮೂರ್ಖನ ಸಹವಾಸವಾದರೆ, ಆತನ ಮುಖಕ್ಕೆ ಕಪ್ಪು ಬಳಿದು, ಆತನ ಕಣ್ಣು ಕಟ್ಟಿ ಅಡವಿಯಲ್ಲಿ ಬಿಟ್ಟು ಬರಬೇಕು” ಎಂದು ಇನ್ನೊಬ್ಬ ಸೂಚಿಸಿದ. “ಜಹಾಂಪನಾ, ಅಂಥವರು ತಮ್ಮ ರಾಜ್ಯಲ್ಲಿರುವದು … Read more

Tags:

error: Content is protected !!