Deshiya-Anyadeshiya Padagalu

ದೇಶೀಯ-ಅನ್ಯದೇಶೀಯ ಪದಗಳು

 

ಒಂದು ಭಾಷೆ ಜನರು, ಬೇರೊಂದು ಭಾಷೆಯ ಜನರೊಂದಿಗೆ ವ್ಯವಹರಿಸಿದಾಗ ಅವರು ಬಳಸುವ ಭಾಷೆಯ ಶಬ್ದಗಳೂ ಸಹ ಪರಸ್ಪರ ವರ್ಗಾವಣೆಯಾಗುತ್ತವೆ. ಹೀಗೆ ಒಂದು ಭಾಷೆಯಲ್ಲಿ ಹಲವು ಭಾಷೆಯ ಶಬ್ದಗಳೂ ಸೇರಬಹುದು. ನಮ್ಮ ಕನ್ನಡ ಭಾಷೆಯಲ್ಲಿ ಸಂಸ್ಕೃತ, ಇಂಗ್ಲಿಷ್, ಹಿಂದಿ, ಪೋರ್ಚುಗೀಸ್, ಫಾರ್ಸಿ, ಉರ್ದು, ಪ್ರಾಕೃತ ಇತ್ಯಾದಿ ಭಾಷೆಯ ಶಬ್ದಗಳು ಆಯಾ ಕಾಲದ ಜನರ ಸಂಪರ್ಕದೊಂದಿಗೆ ಬೆರೆತುಕೊಂಡಿವೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ,

 

‘ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು’ ಈ ವಾಕ್ಯದಲ್ಲಿ

 

೧. ಮೋಟಾರು

 

– ಇಂಗ್ಲಿಷ್ ಭಾಷೆಯ ಶಬ್ದ

 

೨. ಜಬರ್ದಸ್ತ್ – ಹಿಂದಿ ಭಾಷೆಯ ಶಬ್ದ

 

೩. ಜೀವನ, ಮುಖ್ಯ ಸಂಸ್ಕೃತ ಭಾಷೆಯ ಶಬ್ದಗಳು ೪. ಓಡಾಡು, ಗುರಿ, ನಾವು, ತಿಳಿಯಬೇಕು – ಕನ್ನಡ ಭಾಷೆಯ ಶಬ್ದಗಳು,

 

ಹೀಗೆ ನಾವು ಮಾತನಾಡುವ ಕನ್ನಡ ಭಾಷೆಯಲ್ಲಿ ಬೇರೆಬೇರೆ ಭಾಷೆಯ ಪದಗಳು ಬೆರೆತು, ಅವುಗಳಲ್ಲಿ ಕನ್ನಡದ ಪದಗಳು ಯಾವುವು? ಬೇರೆ ಭಾಷೆಯ ಪದಗಳು ಯಾವುವು? ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗದಷ್ಟು ಚಿರಪರಿಚಿತವಾಗಿವೆ. ಭಾಷೆಯ ತಿಳಿವಳಿಕೆಯ ದೃಷ್ಟಿಯಿಂದ ಅಚ್ಚಗನ್ನಡ ಶಬ್ದಗಳನ್ನು ‘ದೇಶ’ ಶಬ್ದಗಳು ಎನ್ನುತ್ತೇವೆ. ಉಳಿದವುಗಳನ್ನು ‘ಅನ್ಯದೇಶೀಯ’ ಶಬ್ದಗಳು ಎನ್ನುತ್ತೇವೆ.

 

೧. ದೇಶ್ಯ ಶಬ್ದಗಳು

 

ಕನ್ನಡ ಭಾಷೆಯ ಮೂಲ ಶಬ್ದಗಳನ್ನು ಅಥವಾ ಅಚ್ಚಗನ್ನಡದ ಶಬ್ದಗಳನ್ನು ‘ದೇಶ್ಯ ಶಬ್ದಗಳು’ ಎನ್ನುತ್ತೇವೆ.

 

ಮನೆ, ಹೊಲ, ಮರ, ಗದ್ದೆ, ಆಳು, ಗಿಡ, ತೆಂಕಣ, ಬಡಗಣ, ಮೂಡಣ, ನೇಸರು, ಕಲ್ಲು, ಕಡಿಮೆ, ಹೆಚ್ಚು, ನೀರು, ತಿನ್ನು, ಸಣ್ಣ, ದೊಡ್ಡ, ಸಾರು, ಬೆಣ್ಣೆ, ಮಜ್ಜಿಗೆ, ಹಾಲು, ಮೊಸರು, ತುಪ್ಪ, ಬಾಯಿ, ಕಿವಿ, ಮೂಗು, ಕಾಡು – ಇತ್ಯಾದಿಗಳು

 

೨. ಅನ್ಯದೇಶ್ಯ ಶಬ್ದಗಳು

 

ಮರಾಠಿ, ಅರಬ್ಬಿ, ಫಾರ್ಸಿ, ಪೋರ್ಚುಗೀಸ್, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಶಬ್ದಗಳನ್ನು ಅನ್ಯದೇಶ್ಯ ಶಬ್ದಗಳು’ ಎಂದು ಕರೆಯುತ್ತಾರೆ.

 

ಅ) ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು :

 

ಭೂಮಿ, ಪೃಥ್ವಿ, ರಾತ್ರಿ, ದಿವಸ, ರಾಮ, ಲಕ್ಷ್ಮಣ, ಪುರಾಣ, ಶಿರ, ಹಸ್ತ, ಪಾದ, ನೇತ್ರ, ಸ್ವರ್ಗ, ಔಷಧ, ಶತ್ರು, ಮಿತ್ರ, ರಾಶಿ, ಅರಣ್ಯ, ಯುದ್ಧ, ಲೇಖನ, ಗ್ರಂಥ, ವಾಕ್ಯ – ಇತ್ಯಾದಿಗಳು.

 

ಆ) ಹಿಂದಿ ಭಾಷೆಯಿಂದ ಬಂದ ಶಬ್ದಗಳು :

 

ಅರ್ಜಿ, ಕಛೇರಿ, ಕಾರ್ಖಾನೆ, ಚುನಾವಣೆ, ಕಾನೂನು, ಗುಲಾಮ, ರಸ್ತೆ, ಕಾಗದ, ಸಲಾಮು, ದರ್ಬಾರು, ಬಂದೂಕ, ಮಹಲ್, ದವಾಖಾನೆ, ಅಸಲಿ, ನಕಲಿ, ಕುರ್ಚಿ – ಇತ್ಯಾದಿಗಳು

 

2) ಇಂಗ್ಲಿಷ್ ಭಾಷೆಯಿಂದ ಬಂದ ಶಬ್ದಗಳು :

 

ರೋಡ್, ರೈಲ್, ಬ್ಯಾಂಕ್, ಲಾಯರ್, ಪೊಲೀಸ್, ಕಾಲೇಜ್, ಸ್ಕೂಲ್, ಹೋಟೆಲ್, ಸ್ಕೂಟರ್, ಪೆಟ್ರೋಲ್, ಬುಕ್, ನೋಟ್ಸ್, ಪೇಜ್, ಕಾಫಿ, ಟೀ, ಎಲೆಕ್ನಿಕ್, ಸರ್ಕಲ್ – ಇತ್ಯಾದಿಗಳು

 

ಈ) ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು : :> ಅಲಮಾರು, ಸಾಬೂನು, ಪಾದ್ರಿ, ಮೇಜು ಇತ್ಯಾದಿಗಳು.

 

V. ಚಟುವಟಿಕೆಗಳು :

 

೧. ನಿಮ್ಮ ಸುತ್ತಮುತ್ತಲಿನಲ್ಲಿ ಇರುವ ಔಷಧೀಯ ಸಸ್ಯಗಳ ಗುಣಗಳನ್ನು ಪಟ್ಟಿಮಾಡಿರಿ. ೨. ನಿಮ್ಮ ಸುತ್ತಮುತ್ತಲಿನಲ್ಲಿ ಇರುವ ಸಸ್ಯಗಳ ಎಲೆಗಳನ್ನು ಸಂಗ್ರಹಿಸಿರಿ. ೩. ಔಷಧೀಯ ಸಸ್ಯಗಳನ್ನು ಬೆಳೆಸಿರಿ.

 

 

Leave a Comment

error: Content is protected !!
%d bloggers like this: