Details of article signs – ಲೇಖನ ಚಿನ್ನೆಗಳ ವಿವರ

ಸಾಮಾನ್ಯವಾಗಿ ಬರವಣಿಗೆಯಲ್ಲಿ ಖಚಿತ ಸ್ಥಳದಲ್ಲಿ ಪೂರ್ಣ ನಿಲುಗಡೆ ಅರ್ಧ ಇಲ್ಲವೇ ಅಲ್ಪ ನಿಲುಗಡೆ ಪ್ರಶ್ನೆ, ಅಚ್ಚರಿ,ಒಪ್ಪಿತ ಭಾವಗಳನ್ನು ಸೂಕ್ತ ರೀತಿಯಲ್ಲಿ ಸೂಚಿಸಲು ಅವಶ್ಯ ಸಂಕೇತಗಳನ್ನು ಬಳಸುವುದು ರೂಡಿ, ಅಂತಹ ಸ್ಪಷ್ಟಾರ್ಥ ಸೂಚಿತ ಭಾವಗಳನ್ನು ಲಿಖಿತ ಸಂಕೇತಗಳ ಮೂಲಕ ನಿರ್ದೇಶಿಸುವವೇ ಲೇಖನ ಚಿಹ್ನೆಗಳು, ಲೇಖನ ಚಿಹ್ನೆಗಳು ಇಲ್ಲದ ಬರವಣಿಗೆ ಖಚಿತ ಭಾವಾರ್ಥವನ್ನು ಕೊಡದು.

ಪೂರ್ಣ ವಿರಾಮ/ಬಿಂದು (.)

ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು.

ಉದಾ:

 1.  ಮಕ್ಕಳು ಶಾಲೆಗೆ ಸರಿಯಾದ ವೇಳೆಗೆ ಬರಬೇಕು.
 2. ರಾಮನು ಮರವನ್ನು ಕಡಿದನು.

ಅರ್ಧವಿರಾಮ (;)

ಅನೇಕ ಉಪವಾಕ್ಯಗಳು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಬಹುದು.

ಉದಾ:

 1. ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ.
 2. ಅವನು ಕಾಶಿಗೆ ಹೋಗಿಬಂದನು ; ಆದರೂ ಕೆಟ್ಟತನ ಬಿಡಲಿಲ್ಲ.

ಪ್ರಶ್ನಾರ್ಥಕ ಚಿನ್ನೆ (?)

ಪ್ರಶ್ನ ರೂಪದ ಪದ ಮತ್ತು ವಾಕ್ಯಗಳ ಮುಂದೆ (ಪ್ರಶ್ನೆ ಕೇಳುವ ಸಂದರ್ಭದಲ್ಲಿ )ವಾಕ್ಯದ ಅಂತ್ಯದಲ್ಲಿ ಪ್ರಶ್ನಾರ್ಥಕ ಚಿನ್ನೆ ಬಳಸಲಾಗುವುದು.

ಉದಾ:

 1. ಯಾರು? ಎಲ್ಲಿ? ಯಾವಾಗ?
 2. ರಾಜನು ಮಾಡಿದ ಶಪಥವೇನು?

ಅಲ್ಪ ವಿರಾಮ (,)

ಸಂಬೋದನೆಯ ಮುಂದೆ ಅಲ್ಲದೆ ಕರ್ತೃ,ಕರ್ಮ ಹಾಗೂ ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಕೊನೆಯಪದವನ್ನು ಬಿಟ್ಟು ಉಳಿದ ಪದಗಳ ಮುಂದೆ ಬಳಸುವ ಚಿನ್ನೆ.

ಉದಾ:

 1. ಹೌದು ಮೇಷ್ಟೆತಪ್ಪು ಮಾಡುತ್ತೀರಿ,ಜುಲ್ಮಾನೆ ಬೀಳುತ್ತದೆ
 2. ಮಕ್ಕಳೇ,ಬನ್ನಿರಿ

ಭಾವಸೂಚಕ ಚಿನ್ನೆ (!)

ಹರ್ಷ,ಅಚ್ಚರಿ,ದುಃಖ,ಕೋಪ,ಸಂತಸ,ತಿರಸ್ಕಾರ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳಸುವ ಚಿನ್ನೆ.

ಉದಾ :

 1. ಆಹಾ! ಎಷ್ಟು ಸುಂದರವಾಗಿದೆ!
 2. ಅಯ್ಯೋ! ಹೀಗಾಗಬಾರದಿತ್ತು!

ವಾಕ್ಯವೇಷ್ಟನ ಚಿನ್ನೆ

ಬರವಣಿಗೆಯಲ್ಲಿ ಪಾರಿಭಾಷಿಕ /ಪ್ರಧಾನ/ವಿಶಿಷ್ಟ ಪದಗಳನ್ನು ಬಳಸಿದಾಗ ಬಳಸುವಚಿನ್ನೆ ಕನ್ನಡಭಾಷೆಯಲ್ಲಿ ಅನೇಕ ‘ಇಂಗ್ಲೀಷ್’ ‘ಪರ್ಷಿಯನ್’ ಭಾಷೆಯ ಪದಗಳು ಬಳಕೆಯಲ್ಲಿವೆ.

ವಿವರಣಾತ್ಮಕ ಚಿಹ್ನೆ (“)

ಒಂದು ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಬಳಸುವ ಚಿನ್ನೆ

ಉದಾ: 

ಭಾಷಾ ವಿಜ್ಞಾನ: ಭಾಷೆಯ ವೈಜ್ಞಾನಿಕ ಅಧ್ಯಯನ ಉದ್ಧರಣ ಚಿನ್ನೆ ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಣ್ಣೆ ಯನ್ನು ಬಳಸಲಾಗುವುದು

ಉದಾ: “ ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು” ಎಂದು ಸರ್.ಎಂ.ವಿಶ್ವೇಶ್ವರಯ್ಯನವರು ಹೇಳಿದರು.

ಆವರಣ ಚಿನ್ನೆ

ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ:

 1. ಒಮ್ಮೆ ಕಾನನ (ಅರಣ್ಯ) ದಲ್ಲಿ ಹಸುವೊಂದು ಹುಲಿಯ ಬಾಯಿಗೆ ತುತ್ತಾಯಿತು.
 2. ನೀರನ್ನು ವಿಭಜಿಸಿದರೆ ಆಮ್ಲಜನಕ(ಆಕ್ಸಿಜನ್ ) ಜಲಜನಕ( ಹೈಟ್ರೋಜನ್ ) ಗಳು ಉತ್ಪತ್ತಿಯಾಗುತ್ತದೆ.

ಗ್ರಾಂಥಿಕರೂಪ

ಗ್ರಾಮೀಣ ಭಾಗದ ಜನರು ಮಾತನಾಡುವ ಭಾಷೆ ಗ್ರಾಂಥಿಕ ಭಾಷೆಯಿಂದ ಸ್ವಲ್ಪ ಭಿನ್ನವಾಗಿರುತ್ತದೆ ಅಂತಹ ಪದಗಳನ್ನು ಗ್ರಾಂಥಿಕಭಾಷೆಗೆ ಪರಿವರ್ತಿಸಿ ಬರೆಯುವ ರೂಪವೇ ಗ್ರಾಂಥಿಕ ರೂಪ. ಇವು ಕೂಡಾ ದಂತ್ಯ ಅಕ್ಷರಗಳು ಎಂದು ಹೇಳುತ್ತಾರೆ.

ಉದಾ:

 1. ಬ್ಯಾಸರ-ಬೇಸರ
 2. ಐಸಿರಿ-ಐಶ್ವರ
 3. ಮೊಗ-ಮಗ
 4. ಬ್ಯಾಸಕಿ-ಬೇಸಿಗೆ
 5. ಇಸವಾಸ- ವಿಶ್ವಾಸ
 6. ಸಿಡಿದ್ದಾಂಗ-ಸಿಡಿದಹಾಗೆ
 7. ಹೀಂಗ-ಹೀಗೆ
 8. ಕಳುವಾರೆ-ಕಳುಹಿಸಿದ್ದಾರೆ
 9. ಇಲ್ಲದ್ದಂಗ-ಇಲ್ಲದಂತೆ
 10. ಸಕ್ಕಾರಿ-ಸಕ್ಕರೆ
 11. ವಿಲಾತಿ-ವಿಲಾಯತಿ

Leave a Comment

error: Content is protected !!
%d bloggers like this: