ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1) ಮೂಲಧಾತು (ಸಹಜ) ಗಳು
2)ಸಾಧಿತ ಧಾತುಗಳು
1). ಮೂಲ ಧಾತುಗಳು :
“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು”
ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ
ಮೂಲಧಾತು + ಪ್ರತ್ಯಯ =ಕ್ರಿಯಾಪದ
ಮಾಡು + ತ್ತಾನೆ =ಮಾಡುತ್ತಾನೆ
ನೋಡು + ಇಸು =ನೋಡಿಸು
ತಿನ್ನು +ತ್ತಾನೆ = ತಿನ್ನುತ್ತಾಳೆ
2)ಸಾಧಿತ ಧಾತುಗಳು :
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ.
ಉದಾ :
ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು
ಅಬ್ಬರ + ಇಸು + ಅಬ್ಬರಿಸು
ಕಳವಳ + ಇಸು + ಕಳವಳಿಸು
ಕನ್ನಡ + ಇಸು + ಕನ್ನಡಿಸು
ಚಿತ್ರ + ಇಸು + ಚಿತ್ರಿಸು
ಸ್ತುತಿ + ಇಸು + ಸುತ್ತಿಸು
ಸಿದ್ದಿ + ಇಸು + ಸಿದ್ದಿಸು
ಓಲಗ + ಇಸು + ಓಲಗಿಸು
ಮಲಗು + ಇಸು + ಮಲಗಿಸು
ಪ್ರೀತಿ +ಇಸು + ಪ್ರೀತಿಸು
ರಕ್ಷ + ಇಸು + ರಕ್ಷಿಸು
ಧಗಧಗ + ಇಸು + ಧಗಧಗಿಸು
ಥಳ ಥಳ + ಇಸು + ಥಳ ಥಳಿಸು
ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.
ಉದಾ : ಯತ್ತಿಸಯ, ಸ್ತುತಿಸು, ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.
ಪ್ರೇರಣೆ ಎಂದು “ಇನೋಬ್ಬರಿಂದ ಕೆಲಸ ಮಾಡಿಸುವುದು”
ಉದಾ : ಮೂಡಿಸು ಕಲಿಸು, ಬರೆಯಿಸು, ನುಡಿಸು ಹೇಳಿಸು, ಇತ್ಯಾದಿ
ಸಕರ್ಮಕ ಧಾತುಗಳು ಮತ್ತು ಅಕರ್ಮಕ ಧಾತುಗಳು ಎಂದು ವಿಧಗಳುಂಟು
ಸಕರ್ಮಕ ಧಾತುಗಳು :
“ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು”
“ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ.
ಉದಾ :
ಕರ್ತೃಪದ ಪರ್ಮಪದ ಕ್ರಿಯಾಪದ
ರಾಮನ್ನು ಮರವನ್ನು ಕಡಿಯುತ್ತಾನೆ
ಭೀಮನ್ನು ಬಕಾಸುನನ್ನು ಕೊಂದನು
ದೇವರು ಲೋಕವನ್ನು ರಕ್ಷಿಸುವನ್ನು
ಶಿಲ್ಪಿಗಳು ಗುಡಿಯನ್ನು ಕಟ್ಟಿದರು
ವಿದ್ಯಾರ್ಥಿಗಳು ಪಾಠವನ್ನು ಓದಿದರು
ಹುಡುಗರು ಕೆಲಸವನ್ನು ಮಾಡುತ್ತಾರೆ
ಅನೇಕರು ನದಿಯನ್ನು ದಾಟಿದರು
ಸಾಧುಗಳು ದೇವರನ್ನು ನಂಬುತ್ತಾರೆ
ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ
ಅಕರ್ಮಕ ಧಾತುಗಳು :
ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ.
ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ.
ಉದಾ :
ಕರ್ತೃಪದ ಕ್ರಿಯಾಪದ ಧಾತು
ಮಗು ಹುಟ್ಟಿತು ಹುಟ್ಟು
ರಾಮನು ಬಂದನು ಬಂದ
ಮಳೆ ಬೀಳುತ್ತದೆ ಬೀಳು
ಮಗುವು ಅಳುತ್ತಿದೆ ಅಳು
ಕೂಸು ಮಲಗಿತು ಮೊಲಗು
ರಾಮನು ಓಡಿದನ್ನು ಓಡು
ಆಕಾಶ ಹೊಳೆಯುತ್ತಿದೆ ಹೊಳೆ
ಅವನು ಬದುಕಿದನು ಬದುಕು
ಕಳ್ಳರು ಹೆದರಿದರು ಹೆದರು
ಅವರು ಸೇರಿದರು ಸೇರು
ಇವಳು ನೆನೆದಳು ನೆನೆ
ಹುಡುಗರು ಓದಿದರು ಓದು