Dwirukthi joodu Nudi

ದ್ವಿರುಕ್ತಿ:  (ದ್ವಿ-ಎರಡು, ಉಕ್ತಿ-ಮಾತು)

ಕೆಳಗಿನ ವಾಕ್ಯಗಳನ್ನು ಗಮನಿಸಿರಿ

  • ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು.
  • ಷರೀಫನು ನಗುತ್ತ ನಗುತ್ತ ಮಾತನಾಡಿದನು.

ಮೇಲಿನ ವಾಕ್ಯಗಳಲ್ಲಿ ‘ಮತ್ತೆ’, ‘ನಗುತ್ತ’ ಎಂಬ ಪದಗಳು ಎರಡೆರಡು ಬಾರಿ ಬಳಕೆಯಾಗಿವೆ. ಇವುಗಳನ್ನು ‘ದ್ವಿರುಕ್ತಿ’ ಎನ್ನುವರು.

ಸಾಮಾನ್ಯವಾಗಿ ವಿಷಯಕ್ಕೆ ಒತ್ತುಕೊಡಲು ದ್ವಿರುಕ್ತಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.

  • ಇತ್ತ ಕಡೆಗೆ ಬೇಗಬೇಗ ಬಾ.
  • ಗುಡ್ಡಗಳಲ್ಲಿ ದೊಡ್ಡದೊಡ್ಡ ಕಲ್ಲುಗಳಿವೆ.

ಇಲ್ಲಿ ‘ಬೇಗಬೇಗ’, ‘ದೊಡ್ಡದೊಡ್ಡ’ ಎಂಬ ಪದಗಳು ದ್ವಿರುಕ್ತಿಗಳಾಗಿವೆ.

ಜೋಡುನುಡಿ :

ಕೆಳಗಿನ ವಾಕ್ಯಗಳನ್ನು ಗಮನಿಸಿರಿ –

  • “ಚಿಕ್ಕ ಮಕ್ಕಳಿಗೆ ವೇಷಭೂಷಣಗಳನ್ನು ನಾವು ತೊಡಿಸುತ್ತೇವೆ” ಎಂದನು ಪಿಂಟೋ.
  • ಉಪವಾಸದ ರಾತ್ರಿ ಹಣ್ಣುಹಂಪಲು ತಿನ್ನುತ್ತಾರೆ.

ಮೇಲಿನ ವಾಕ್ಯಗಳಲ್ಲಿ ‘ವೇಷಭೂಷಣ’, ‘ಹಣ್ಣು ಹಂಪಲು’ – ಈ ಪದಗಳಲ್ಲಿ ಎರಡು ಬೇರೆಬೇರೆ ಪದಗಳಿದ್ದು ಅವು ಜೊತೆಜೊತೆಯಾಗಿ ಬಳಕೆಯಾಗಿವೆ. ಇವು ಜೋಡುನುಡಿಗಳು.

ಸಾಮಾನ್ಯವಾಗಿ ಮಾತುಗಳನ್ನು, ವಿಷಯಗಳನ್ನು ಮೆರುಗುಗೊಳಿಸಲು ಜೋಡುನುಡಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.

  • ಎಲ್ಲರೂ ತಮ್ಮ ನೋವುನಲಿವುಗಳನ್ನು ಹಂಚಿಕೊಂಡರು.
  • ಅವರು ಊರುಕೇರಿ ತಿರುಗಿ ಬಂದರು.

ಇಲ್ಲಿ ‘ನೋವುನಲಿವು,’ ‘ಊರುಕೇರಿ’ ಎಂಬ ಪದಗಳು

Leave a Comment

error: Content is protected !!
%d bloggers like this: