Contents
ಕಾಲಗಳು
ನಿಮಗೆ ತಿಳಿದಿರುವಂತೆ ಕಾಲಗಳಲ್ಲಿ ಮೂರು ವಿಧ :
೧. ಭೂತಕಾಲ
೨. ವರ್ತಮಾನ ಕಾಲ
೩. ಭವಿಷ್ಯತ್ ಕಾಲ
ಕೆಲಸ ಅಥವಾ ಕ್ರಿಯೆ ಯಾವ ಕಾಲದಲ್ಲಿ ನಡೆಯಿತು ಎಂಬುದನ್ನು ವಾಕ್ಯದಲ್ಲಿನ ‘ಕ್ರಿಯಾಪದ ನಿರ್ಧರಿಸುತ್ತದೆ. ಕ್ರಿಯಾಪದದ ಮೂಲ ರೂಪವನ್ನು ‘ಧಾತು’ ಎಂದು ಕರೆಯುತ್ತೇವೆ. ಧಾತುವಿಗೆ ‘ಕಾಲಸೂಚಕ ಪ್ರತ್ಯಯ’ ಹಾಗೂ ‘ಆಖ್ಯಾತ ಪ್ರತ್ಯಯ’ ಸೇರಿ ‘ಕ್ರಿಯಾಪದ’ ಆಗುತ್ತದೆ. ಕ್ರಿಯಾಪದದಲ್ಲಿ ಕಾಲಸೂಚಕ ಪ್ರತ್ಯಯಗಳು ಮೂರೂ ಕಾಲದಲ್ಲಿ ಯಾವ ರೀತಿ ಬಳಕೆಯಾಗುತ್ತವೆ ಎಂಬುದನ್ನು
ವಿವರವಾಗಿ ತಿಳಿಯೋಣ(Detailed Explanation) :
ವರ್ತಮಾನ ಕಾಲ
ವರ್ತಮಾನ ಕಾಲವು ಕ್ರಿಯೆಯು ನಡೆಯುತ್ತಿರುವುದನ್ನು ಸೂಚಿಸುತ್ತದೆ. ಅಂದರೆ ಕ್ರಿಯೆಯು ಪ್ರಸ್ತುತ ಕಾಲದಲ್ಲಿ ನಡೆದರೆ ಅದು ವರ್ತಮಾನ ಕಾಲ ಅನಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು(Example) ಗಮನಿಸಿ.
=> “ಮೇರಿ ಶಾಲೆಗೆ ಹೋಗುತ್ತಾಳೆ”
ಇಲ್ಲಿ ಮೇರಿ ಶಾಲೆಗೆ ಹೋಗುವ ಕ್ರಿಯೆಯು ವರ್ತಮಾನ ಕಾಲದಲ್ಲಿ ನಡೆಯುತ್ತಿರುವುದನ್ನು ಸೂಚಿಸುತ್ತದೆ. ವರ್ತಮಾನ ಕಾಲದ ಕ್ರಿಯಾಪದಗಳು ಹೇಗೆ ಆಗುತ್ತವೆ ಎಂಬುದನ್ನು ಗಮನಿಸಿ,
=> ಕಾಲಸೂಚಕ ಪ್ರತ್ಯಯ + ಅಖ್ಯಾತ ಪ್ರತ್ಯಯ = ಕಿಯಾಪದ
=> ಕಾಲಸೂಚಕ ಪ್ರತ್ಯಯ + ಅಖ್ಯಾತ ಪ್ರತ್ಯಯ = ಕ್ರಿಯಾಪದ
೧. ಪ್ರಥಮ ಪುರುಷ
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ
೨. ಮಧ್ಯಮ ಪುರುಷ
೩. ಉತ್ತಮ ಪುರುಷ
ಇಲ್ಲಿ ‘ಉತ್ತ’ ಎಂಬುದು ವರ್ತಮಾನ ಕಾಲವನ್ನು ಸೂಚಿಸುವ ಪ್ರತ್ಯಯ ಎಂಬುದನ್ನು ನೆನಪಿಡಿ.
೨. ಭೂತಕಾಲ
ಭೂತಕಾಲವು ಈ ಹಿಂದೆ ನಡೆದು ಹೋದ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಆ ಕ್ರಿಯೆಯು ಮುಗಿದು ಹೋಗಿದ್ದರೆ ಅದು ಭೂತಕಾಲವೆನಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.
“ಸಲೀಮನು ಶಾಲೆಗೆ ಹೋದನು” ಇಲ್ಲಿ ಸಲೀಮನು ಶಾಲೆಗೆ ಹೋಗಿರುವ ಕ್ರಿಯೆಯು ಭೂತ ಕಾಲದಲ್ಲಿ ನಡೆದಿರುವುದನ್ನು ಸೂಚಿಸುತ್ತದೆ. ಭೂತಕಾಲದ ಕ್ರಿಯಾಪದಗಳು ಹೇಗೆ ಆಗುತ್ತವೆ ಎಂಬುದನ್ನು ಗಮನಿಸಿ.
ಧಾತು
ನೋಡು
ಕ್ರಿಯಾಪದ :
= ನೋಡಿದನು
= ನೋಡಿದಳು
= ನೋಡಿತು
= ನೋಡಿದ
= ನೋಡಿದೆನು
೧. ಪ್ರಥಮ ಪುರುಷ
ಸ್ತ್ರೀಲಿಂಗ
ನಪುಂಸಕಲಿಂಗ
೨. ಮಧ್ಯಮ ಪುರುಷ
೩. ಉತ್ತಮ ಪುರುಷ
ಇಲ್ಲಿ ‘ದ’ ಎಂಬುದು ಭೂತ ಕಾಲವನ್ನು ಸೂಚಿಸುವ ಪ್ರತ್ಯಯ ಎಂಬುದನ್ನು ನೆನಪಿಡಿ.
೩. ಭವಿಷ್ಯತ್ ಕಾಲ
ಭವಿಷ್ಯತ್ ಕಾಲವು ಮುಂದೆ ನಡೆಯುವ ಕ್ರಿಯೆಯನ್ನು ವಿವರಿಸುವ ಕಾಲವಾಗಿದೆ. ಅಂದರೆ ಕ್ರಿಯೆ ಮುಂದೆ ಜರುಗುವುದನ್ನು ಸೂಚಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.
=> “ರಾಮನು ಶಾಲೆಗೆ ಹೋಗುವನು”
ಇಲ್ಲಿ ರಾಮನು ಶಾಲೆಗೆ ಹೋಗುವ ಕ್ರಿಯೆಯು ಭವಿಷ್ಯತ್ ಕಾಲದಲ್ಲಿ ನಡೆಯುವುದನ್ನು ಸೂಚಿಸುತ್ತದೆ. ಭವಿಷ್ಯತ್ ಕಾಲದ ಕ್ರಿಯಾಪದಗಳು ಹೇಗೆ ಆಗುತ್ತವೆ ಎಂಬುದನ್ನು ಗಮನಿಸಿ.
+ ಕಾಲಸೂಚಕ ಪ್ರತ್ಯಯ + ಅಖ್ಯಾತ ಪ್ರತ್ಯಯ – ಕ್ರಿಯಾಪದ
Example :
ಇಲ್ಲಿ ‘ವ’ ಎಂಬುದು ಭವಿಷತ್ ಕಾಲವನ್ನು ಸೂಚಿಸುವ ಪ್ರತ್ಯಯ ಎಂಬುದನ್ನು ನೆನಪಿಡಿ. ಹೀಗೆ ಕನ್ನಡ ವ್ಯಾಕರಣದಲ್ಲಿ ‘ಕಾಲ’ವನ್ನು ಮೂರು ಬಗೆಗಳಲ್ಲಿ ಗುರುತಿಸಲಾಗಿದೆ.
ಕಾಲ ಪಲ್ಲಟ :
ವಾಕ್ಯದಲ್ಲಿ ಒಂದು ನಿರ್ದಿಷ್ಟ ಕಾಲದ ಪ್ರಯೋಗವು ಮತ್ತೊಂದು ಕಾಲದ ಅರ್ಥವನ್ನು ಸೂಚಿಸುವುದೇ ಕಾಲಪಲ್ಲಟ.
ಉದಾ : ನಮ್ಮಣ್ಣನು ನಾಳೆ ಬರುತ್ತಾನೆ.
ಈ ವಾಕ್ಯದಲ್ಲಿ ಬರುತ್ತಾನೆ’ ಎಂಬುದು ವರ್ತಮಾನ ಕಾಲದಲ್ಲಿದೆ. ಆದರೆ ‘ನಾಳೆ’ ಎನ್ನುವ ಶಬ್ದ ಭವಿಷ್ಯತ್ ಕಾಲವನ್ನು ಸೂಚಿಸುತ್ತಿದೆ. ವ್ಯಾಕರಣದ ನಿಯಮಗಳನುಸಾರ ಈ ವಾಕ್ಯವು ‘ನಮ್ಮಣ್ಣನು ನಾಳೆ ಬರುವನು’ ಎಂದು ಪ್ರಯೋಗವಾಗಬೇಕಿತ್ತು. ಹೀಗೆ ನಿರ್ದಿಷ್ಟ ಕಾಲದಲ್ಲಿ ಪ್ರಯೋಗವಾಗಬೇಕಾದ ಕ್ರಿಯಾಪದ ಬೇರೊಂದು ಕಾಲದಲ್ಲಿ ಪ್ರಯೋಗವಾಗುವುದನ್ನು ‘ಕಾಲಪಲ್ಲಟ’ ಎಂದು ಕರೆಯಲಾಗುತ್ತದೆ.