ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ, ಹೀಗೆ ಕಾಲಪಲ್ಲಟವಾಗುವಾಗ ಭವಿಷ್ಯತ್ ಕಾಲದ ಕ್ರಿಯಾಪದಗಳು ವರ್ತಮಾನ ಕಾಲದಲ್ಲೂ ವರ್ತಮಾನದ ಕಾಲದ ಕ್ರಿಯಾಪದಗಳು ಭವಿಷ್ಯತ್ ಕಾಲದಲ್ಲೂ ಪ್ರಯೋಗವಾಗುವುವು.
ಉದಾ.: ೧. ವರ್ತಮಾನಕಾಲವು ಭವಿಷ್ಯತ್‌ಕಾಲದಲ್ಲಿ
– ಅವನು ಒಳಗೆ ಊಟ ಮಾಡುವನು (ಊಟ ಮಾಡುತ್ತಾನೆ ಎಂದಾಗಬೇಕು)
– ಅವಳು ಒಳಗೆ ಅಡುಗೆ ಮಾಡುವಳು (ಅಡುಗೆ ಮಾಡುತ್ತಾಳೆ ಎಂದಾಗಬೇಕು)
ಉದಾ.: 2. ಭವಿಷ್ಯತ್ ಕಾಲವು ವರ್ತಮಾನಕಾಲದಲ್ಲಿ
– ಅವನು ನಾಳೆ ಹೋಗುತ್ತಾನೆ (ಹೋಗುವನು ಎಂದಾಗಬೇಕು)
– ನಾನು ಮುಂದಿನ ತಿಂಗಳು ಬರುತ್ತೇನೆ (ಬರುವೆನು ಎಂದಾಗಬೇಕು)