KannadaKaliyona

Kannada Rajyotsava prabandha |ಕನ್ನಡ ರಾಜ್ಯೋತ್ಸವ 2023

Kannada Rajyotsava essay in Kannada, Kannada Rajyotsava prabandha.

Kannada Rajyotsava Essay in Kannada

ಕನ್ನಡ ಸಾಹಿತ್ಯಕ್ಕೆ ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸವಿದೆ. ಕನ್ನಡ ನಮ್ಮ ಮಾತೃಭಾಷೆ, ನಾವೆಲ್ಲರೂ ಕನ್ನಡ ತಾಯಿಯ ಮಕ್ಕಳು, ಕನ್ನಡಿಗರೇ ಆದ ನಾವೆಲ್ಲರೂ ಹಲವು ರಾಜ್ಯಗಳಲ್ಲಿ ಹಂಚಿಹೋಗಿದ್ದೆವು, ಭಾಷೆ, ಸಂಸ್ಕೃತಿಗಳು, ಆಚಾರ ವಿಚಾರಗಳು, ಸಂಪ್ರದಾಯ, ಪರಂಪರೆಗಳು ಉಳಿದು ಬೆಳೆದು ಬರಲು ಭಾಷಾವಾರು ಪ್ರಾಂತ್ಯಗಳ ರಚನೆ ಅನಿವಾರ್ಯವಾಯಿತು.

ಇಂತಹ ಸಮಯದಲ್ಲಿ ಕನ್ನಡಿಗರ ಹೋರಾಟ ಪ್ರಾರಂಭವಾಯಿತು. ಈ ಹೋರಾಟದ ಫಲವಾಗಿ ಭಾಷಾವಾರು ಪ್ರಾಂತ್ಯ ರಚನೆಯ ಬೇಡಿಕೆಯೂ ಈಡೇರಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯದ ಉದಯವಾಯಿತು. ಕನ್ನಡದ ಏಕೀಕರಣವಾಯಿತು. ಅಂದು ಕನ್ನಡದ ಪ್ರಥಮ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಆನಂತರ ರಾಜ್ಯದ ಹೆಸರಿನ ಬಗ್ಗೆ ವಾದ ವಿವಾದಗಳು ಶುರುವಾದವು. ಇದು ಕನ್ನಡಿಗರ ನಾಡು, ಕರುನಾಡು ಆದ್ದರಿಂದ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಬೇಕು ಎಂಬ ಹೋರಾಟ ಪ್ರಾರಂಭವಾಯಿತು. ಭಾಷಾವಾರು ಪ್ರಾಂತ್ಯರಚನೆಯ ಹದಿನೇಳು ವರ್ಷಗಳ ನಂತರ 1973 ನವೆಂಬರ್ 1ರಂದು ದಿ. ದೇವರಾಜ ಅರಸು ಅವರ ಮುಖಂಡತ್ವದಲ್ಲಿ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಯಿತು.

ಪ್ರಾಚೀನ ಕಾಲದಿಂದಲೂ ಕರ್ನಾಟಕ ರಾಜ್ಯವು ಕಲೆ ಸಾಹಿತ್ಯ, ಸಂಸ್ಕೃತಿಗಳ ತವರು ಮನೆಯಾಗಿದೆ. ಭವ್ಯ ಇತಿಹಾಸವುಳ್ಳ ಕನ್ನಡಿಗರಿಗೆ ವರ್ಷಕ್ಕೊಮ್ಮೆ ಬರುವ ರಾಜ್ಯೋತ್ಸವ ಒಂದು ಅಭಂರ್ವ ದಿನವಾಗಿದೆ. ಆ ದಿನ ರಾಜ್ಯದ ಮೂರ ಮೂಲೆಗಳಲ್ಲಿಯೂ ರಾಜ್ಯೋತ್ಸವದ ಕಾರ್ಯಕ್ರಮಗಳು ನಡೆಯುತ್ತವ.

ಕನ್ನಡ ತಾಯಿ  ಭುವನೇಶ್ವರಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಇಂತಹ ಕಾರ್ಯಕ್ರಮಗಳು ನಮಗೆ ನಾಡು ನುಡಿಯ ಸಂಸ್ಕೃತಿಗಳ ಸಮಗ್ರ ದರ್ಶನ ಎಂದು ತೋರುತ್ತವೆ.

ಅನೇಕ ಮಂದಿ ಗಣ್ಯವ್ಯಕ್ತಿಗಳು ಅಂದು ನಾಡು ನುಡಿಯ ಬಗ್ಗೆ ಭಾಷಣ ಮಾಡುತ್ತಾರೆ. ನಮ್ಮಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತದೆ. ಇದರ ಜೊತೆಗೆ ಅಂದು ಅನೇಕ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಕನ್ನಡಿಗರಿಗೆ ಕನ್ನಡಾಭಿಮಾನವನ್ನು ಬಿಂಬಿಸಲು ಸಹಾಯಕರಾಗುತ್ತಾರೆ.

ಅಂದಿನಿಂದ ಇಂದಿಗೂ ಬೆಳೆದುಕೊಂಡು ಬಂದಿರುವ ಈ ಉತ್ಸವ ಕನ್ನಡದ ಏಳೆಗಾಗಿಯೇ ಇದೆ ಎಂದರೂ ತಪ್ಪಾಗಲಾರದು. ಕಾರಣ ವರ್ಷಕ್ಕೊಮ್ಮೆ ಈ ಉತ್ಸವ ಹರ್ಷದ ಜೊತೆಗೆ ಪ್ರತಿಯೊಬ್ಬರಿಗೂ ತಮ್ಮ ಇರುವಿಕೆಯ ನಾಡಿನ ಬಗ್ಗೆ ಪರಿಚಯಿಸುತ್ತದೆ.

Here you learnt Kannada Rajyotsava prabandha in Kannada and hope this article helped you♥️

Before leaving,

Also read : Independence Day speech in Kannada

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading