Krudanthagalu

         ಕೃದಂತಗಳು

ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವುಗಳನ್ನು ಕೃದಂತನಾಮ, ಕೃದಂತ ಭಾವನಾಮ, ಕೃದಂತಾವ್ಯಯ ಗಳೆಂದು ವಿಂಗಡಿಸಲಾಗಿದೆ.

ಕೃದಂತನಾಮಗಳು: ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ `ಅ’ ಎಂಬ ಕೃತ್ ಪ್ರತ್ಯಯ ಬರುವುದು. ಆಗ ಧಾತುವಿಗೂ ಕೃತ್ ಪ್ರತ್ಯಯಕ್ಕೂ ನಡುವೆ ವರ್ತಮಾನ, ಭವಿಷ್ಯತ್ ಕಾಲದಲ್ಲಿ ‘ವ’ “ಉವ’ ಎಂಬ ಕಾಲ ಸೂಚಕ ಪ್ರತ್ಯಯಗಳೂ ಭೂತಕಾಲದಲ್ಲಿ ‘ದ’ ಎಂಬ ಪ್ರತ್ಯಯವೂ ನಿಷೇದಾರ್ಥಕದಲ್ಲಿ ಅದ’ ಎಂಬ ಪ್ರತ್ಯಯವೂ ಆಗಮವಾಗುತ್ತದೆ. ಇದನ್ನೇ ಕೃದಂತನಾಮಗಳೆನ್ನುವರು.

ಉದಾ:

೧.ವರ್ತಮಾನ ಕೃದಂತಕ್ಕೆ

೨.ಭೂತ ಕೃದಂತಕ್ಕೆ

 

ನಿಷೇಧ ಕೃದಂತಕ್ಕೆ :

ಮಾಡು + ವ + ಅ

ಬರೆ + ಉವ + ಅತಿನ್ನು + ದ + ಅ

 

= ಮಾಡುವ

 

= ಬರೆಯುವ

 

ಹೋಗು + ದ + ಅ = ಹೋದ

 

: ಮಾಡು + ಆದ + ಅ = ಮಾಡದ

 

ಕೃದಂತ ಭಾವನಾಮ: ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತ ಭಾವನಾಮಗಳಾಗುತ್ತವೆ. ಇಕೆ, ಇಗೆ, ಗೆ, ತ, ಟ, ವಳಿಕೆ, ಅಪು, ವಣಿಗೆ ಮುಂತಾದ ಭಾವಾರ್ಥ ಕೃತ್ ಪ್ರತ್ಯಯಗಳಿವೆ.

ಅಂಜು + ಇಕ ಅಂಜಿಕ

 

ಉಡು + ಇಗೆ = ಉಡಿಗೆ

 

ನಂಬು + ಗೆ = ನಂಬುಗೆ

 

ಓಡು + ಟ = ಓಟ

 

ಕೃದಂತಾವ್ಯಯ: ಧಾತುಗಳ ಮೇಲೆ ಉತ್ತ, ಉತ್ತ, ಅದೆ, ದರೆ, ಅಲು, ಅಲಿಕ್ಕೆ, ಅ, ಇ ದು ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.

ಉದಾ: ಮಾಡು + ಉತ= ಮಾಡುತ

 

ತಿನ್ನು + ಉತ್ತ = ತಿನ್ನುತ

 

ಬರು + ಅಲು = ಬರಲು

 

ತಿನ್ನು + ಅಲಿಕ್ಕೆ = ತಿನ್ನಲಿಕ್ಕೆ

 

ದ್ವಿರುಕ್ತಿ

ಕ್ರಿಯೆಯ ತೀವ್ರತೆಯನ್ನು ಸೂಚಿಸಲು ಒಂದು ಪದ ಒಟ್ಟಿಗೆ ಎರಡು ಸಲ ಬಂದರೆ ದ್ವಿರುಕ್ತಿಯಾಗುತ್ತದೆ.

ಉದಾ: ಸುರೇಶ, ಬೇಗಬೇಗ ಬಾ.

ಅವನು ಬಿದ್ದು ಬಿದ್ದು ನಕ್ಕನು.

ಹೀಗೆಯೇ ಮೊತ್ತಮೊದಲು, (ಮೊದಲು + ಮೊದಲು) ತುತ್ತತುದಿ (ತುದಿ + ತುದಿ) ನಟ್ಟನಡುವೆ (ನಡುವೆ + ನಡುವೆ) ಮುಂತಾದವು ದ್ವಿರುಕ್ತಿಗಳು.

 

ಜೋಡುನುಡಿ

ಇಲ್ಲಿ ಎರಡು ಪದಗಳಿದ್ದು, ಅವು ಒಂದಕ್ಕೊಂದು ಪೂರಕವಾದ ಅಥವಾ ವಿರುದ್ಧವಾದ ಅರ್ಥಗಳನ್ನು ಹೊಂದಿದೆ. ಅಂದರೆ ಇಲ್ಲಿ ಎರಡು ಪದಗಳಿಗೂ ಅರ್ಥವಿದೆ.

ಉದಾ: ಮನೆಮಠ, ಆಟಪಾಠ, ನೋವು ನಲಿವು, ಬೆಟ್ಟಗುಡ್ಡ, ಹಳ್ಳಕೊಳ್ಳ ಗಿಡಬಳ್ಳಿ, ತರುಲತೆ ಇತ್ಯಾದಿ.

 

ಪ್ರತಿಧ್ವನಿಶಬ್ದ

ಇಲ್ಲಿ ಎರಡು ಪದಗಳಿದ್ದು, ಒಂದು ಪದಕ್ಕೆ ಅರ್ಥವಿರುತ್ತದೆ. ಮತ್ತೊಂದು ಪುಷ್ಟಿ (ಒತ್ತು) ಕೊಡುತ್ತದೆ. ಆದರೆ ಅರ್ಥವಿರುವುದಿಲ್ಲ.

ಉದಾ: ದೆವ್ವಗಿವ್ವ, ದುಡ್ಡು ಗಿಡ್ಡು, ಬಟ್ಟೆ ಬರೆ ಇಲ್ಲಿ ದೆವ್ವ, ದುಡ್ಡು, ಬಟ್ಟೆ ಎಂಬುದಕ್ಕೆ ಅರ್ಥವಿದೆ. ಆದರೆ ಗಿವ್ವ, ಗಿಡ್ಡು ಬರೆ ಎಂಬುದಕ್ಕೆ ಅರ್ಥವಿಲ್ಲ.

 

ಅನುಕರಣಾವ್ಯಯ

ಒಂದು ವಸ್ತುವು ಈ ರೀತಿ ಧ್ವನಿ ಹೊರಡಿಸುತ್ತದೆ ಎಂದು ಭಾವಿಸಿ, ಅದನ್ನು ಅನುಕರಣೆ ಮಾಡಿ ಹೇಳುವ ಪದಗಳು.

 

ಉದಾ: ಪಟಪಟನೆ, ರಪರಪನೆ, ಪಳಪಳನೆ, ಸರಸರನೆ,ಇತ್ಯಾದಿ.

(ಇವು ದ್ವಿರುಕ್ತಿಗಳಂತೆ ಕಂಡರೂ ದ್ವಿರುಕ್ತಿಗಳಲ್ಲ.)

Leave a Comment

error: Content is protected !!
%d bloggers like this: