Contents
ವ್ಯಾಖ್ಯಾನ
Namapada Endarenu? ನಾಮ ಎಂದರೆ ಹೆಸರು, ವ್ಯಕ್ತಿ, ವಸ್ತು, ಪ್ರಾಣಿ ಹಾಗೂ ಸ್ಥಳಗಳ ಹೆಸರನ್ನು ತಿಳಿಸುವ ಪದವು ನಾಮಪದ(Namapada in Kannada) .
ಉದಾ(Examples)
- ವ್ಯಕ್ತಿ
- ವಸ್ತು
- ಪ್ರಾಣಿ
- ನಾಯಿ
- ಮೈಸೂರು
ನಾಮ ಪ್ರಕೃತಿ
ನಾಮಪದದ ಮೂಲರೂಪವನ್ನು ನಾಮಪ್ರಕೃತಿ ಎನ್ನುತ್ತಾರೆ. ವಾಕ್ಯದಲ್ಲಿ ಪ್ರಯೋಗವಾಗುವ ನಾಮಪದ ಹಾಗೂ ವಾಕ್ಯಾರ್ಥಕ್ಕೆ ಸಂಬಂಧ ಕಲ್ಪಿಸಿಕೊಡುವ ಪ್ರತ್ಯಯ ರೂಪಗಳೇ ವಿಭಕ್ತಿ ಪ್ರತ್ಯಯಗಳು. ಈ ರಚನೆಗಳು ಭಾಷೆಯ ಅನಿವಾರ್ಯ ಅಂಗ.
ನಾಮಪ್ರಕೃತಿ + ವಿಭಕ್ತಿ ಪ್ರತ್ಯಯ = ನಾಮಪದ ಮನ
ನಾಮ ಪ್ರಕೃತಿಗಳ ಮುಂದೆ ಸೇರಿಕೊಂಡು ಬೇರೆ ಬೇರೆ ಅರ್ಥ ಉಂಟುಮಾಡುವ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯ ಎಂದು ಹೆಸರು. ಕನ್ನಡದಲ್ಲಿ ಏಳು ವಿಭಕ್ತಿಗಳಿವೆ ಹಾಗೆಯೇ ಅವುಗಳಿಗೆ ಏಳು ಪ್ರತ್ಯಯಗಳಿವೆ.
ನಾಮಪದ ವಿಧಗಳು
೧. ಗುಣವಾಚಕ
ನಾಮಪದ ವ್ಯಕ್ತಿ, ವಸ್ತುಗಳ ಗುಣವಿಶೇಷಣಗಳನ್ನು ತಿಳಿಸುವ ನಾಮಪದಗಳಿಗೆ ಗುಣವಾಚಕ ನಾಮಪದ ಎಂದು ಹೆಸರು.
ಉದಾ:
- ಬೆಂಗಳೂರು ಸುಂದರ ನಗರ.
- ಇದು ಕರಿಯ ನಾಯಿ.
- ವಸ್ತುಗಳು ವಿಶೇಷ್ಯವಾಗಿಯೂ,ಮೊದಲಾದವುಗಳೆಲ್ಲ ವಿಶೇಷಣವಾಗುತ್ತವೆ.
- ವಿಶೇಷಣ
- ವಿಶೇಷ್ಯ
- ದೊಡ್ಡ ಕಲ್ಲು
- ಹಳೆಯ
- ಸು೦ದರ
- ಅಂಗಿ
- ರಾವಣ
- ಬಾಲಕ
- ಗುಣ,
- ವಿಶೇಷಣ
- ಕರಿಯ
- ಬಳಿಯ
- ರೀತಿ,
- ಸ್ವಭಾವ
- ವಿಶೇಷ್ಯ
- ಬಟ್ಟೆ
- ಎತ್ತು
- ಹಣ್ಣು
- ಮಗ
- ಹುಡುಗ
- ಜಾಣ
- ದಡ್ಡ’ಒಂದು, ಎರಡು, ಮೂರು, ಹತ್ತು ಐವತ್ತು ನೂರು, ಸಾವಿರ, ಲಕ್ಷ, ಕೋಟಿ ಇತ್ಯಾದಿಗಳು.
ಗುಣವಾಚಕ ಪದಗಳು ಮೂರು ಲಿಂಗಗಳಲ್ಲಿ ಬದಲಾವಣೆಯನ್ನು ಹೊಂದುವ
ಮೇಲಿನ ಉದಾಹರಣೆಗಳಿಂದ ಪುಲ್ಲಿಂಗದಲ್ಲಿ ಬನು, ಅನು, ವಂತ, ಮೊದಲಾದ ನಪುಂಸಕಲಿಂಗದಲ್ಲಿ ತು, ದು ಎಂಬ ಪ್ರತ್ಯಯಗಳೂ ಸೇರುವವು. ಪ್ರತ್ಯಯಗಳು, ಸ್ತ್ರೀಲಿಂಗದಲ್ಲಿ ಅಳು ಎಂಬ ಪ್ರತ್ಯಯವೂ,
ಇದರಲ್ಲಿ ನಾಲ್ಕು ವಿಧಗಳುಂಟು,
೧. ಪುರುಷವಾಚಕ ಸರ್ವನಾಮ
ಉದಾ: ಯಾರು, ಯಾವಳು, ಏನು, ಎಲ್ಲಿ ಮೊದಲಾದವು.
೨. ಪ್ರಶ್ನಾರ್ತಕ ಸರ್ವನಾಮ
ಪ್ರಶ್ನೆಗಳನ್ನು ಕೇಳಲು ಬಳಸುವ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮಗಳೆಂದು ಕರೆಯುವರು.
ಉದಾ:
- ಯಾರು ಅವನು?
- ಯಾವ ಊರು ನಿನ್ನದು?
೩. ಅತ್ಮರ್ಥಕ ಸರ್ವನಾಮ
ತಾನು, ತಾವು ಎಂಬ ರೂಪಗಳು ಆತ್ಮಾರ್ಥಕ ಸರ್ವನಾಮಗಳು ಎನ್ನುತ್ತಾರೆ.
ಉದಾ:
- ಅವನು ತನ್ನ ಪಾಡಿಗೆ ತಾನು ಹೋದನು.
- ಅವರು ತಮ್ಮ ಪಾಡಿಗೆ ತಾವು ಹೋದರು.
೪. ನಿರ್ದೇಶಾತ್ಮಕ ಸರ್ವನಾಮ
ನಾಮಪದಗಳಿಗೆ ವಿಶೇಷಣಗಳಾಗಿ ಕೆಲಸಮಾಡುವ ಸರ್ವನಾಮಗಳು ನಿರ್ದೇಶಾತ್ಮಕ ಸರ್ವನಾಮಗಳೆನಿಸುವುವು.
ಉದಾ:
- ತೇಜಸ್ವಿಯವರ ಮನೆಯ ಹೆಸರು ಪಂಚವಟಿ. ಆ ಮನೆ ಮೂಡಿಗೆರೆಯಲ್ಲಿದೆ.
- ಬೇಂದ್ರೆಯವರ ಮನೆ ಇದ್ದ ಬೀದಿ ಸಾಧನ ಕೇರಿ. ಈ ಬೀದಿ ಧಾರವಾಡದಲ್ಲಿದೆ.
೨. ಸಂಖ್ಯಾವಾಚಕ
ನಾಮಪದ ಸಂಖ್ಯೆಗಳನ್ನು ಸೂಚಿಸುವ ನಾಮಪದಗಳಿಗೆ ಸಂಖ್ಯಾವಾಚಕ ನಾಮಪದ ಎಂದು.
ಉದಾ :
- ಒಂದು ವರ್ಷದಲ್ಲಿ ಮುನ್ನೂರ ಅರವತ್ತೈದು ದಿನಗಳಿವೆ.
- ರಾಮನಿಗೆ ಇಂದು ಐದು ರೂಪಾಯಿ ಲಾಭವಾಯಿತು.
- ಒಂದು ಶಾಲೆ
- ಹತ್ತು ರೂಪಾಯಿ
- ಸಾವಿರ ಕುದುರೆಗಳು
- ಕೋಟಿ ಜನರು
೩. ಸರಿಮಾಣ ವಾಚಕ
ಅನ್ನು ಇನ್ನು, ಹೆಚ್ಚು ಕಮ್ಮಿ ಮುಂತಾದ ಅರ್ಥವನ್ನೊಳಗೊಂಡ ಪದಗಳೇ ಕರಿಮಣ.
ಉದಾ :
- ರವಿಗೆ ಒಂದಷ್ಟು ಹಣ ಕೊಡು.
- ರಮೇಶನಿಗೆ ಸಂಬಳ ಕಮ್ಮಿ.
೪. ದಿಗ್ವಾಚಕ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮೂಡಣ, ಪಡುವಣ, ಬಡಗಣ, ತೆಂಕಣ, ಆಚೆ ಈಚೆ ಮುಂತಾದ ದಿಕ್ಕು ಸೂಚಿಸುವ ಪದಗಳು ದಿಗ್ವಾಚಕಗಳು ಎನಿಸುವುವು.
ಉದಾ :
- ಕರ್ನಾಟಕದ ಉತ್ತರಕ್ಕೆ ಮಹಾರಾಷ್ಟ್ರವಿದೆ.
- ಶರಾವತಿ ನದಿಯ ಆಚೆ ಕಾರವಾರ ನಗರವಿದೆ.
೫. ವಸ್ತುವಾಚಕ
ವ್ಯಕ್ತಿ, ವಸ್ತುಗಳ ಹೆಸರನ್ನು ಹೇಳುವ ಶಬ್ದಗಳು ವಸ್ತುವಾಚಕ ಎನಿಸುವುವು.
ವಸ್ತುವಾಚಕದಲ್ಲಿ ೩ ವಿಧಗಳಿವೆ :
೧. ರೂಢನಾಮ
ರೂಢಿಯಿಂದ ಬಂದ ಸಾಮಾನ್ಯ ವಾಚಕಗಳು. ಉದಾ: ಅರಸ, ನಾಯಿ, ನದಿ, ಹುಡುಗ, ಇತ್ಯಾದಿ.
೨. ಅಂಕಿತನಾಮ
ಇಟ್ಟ ಹೆಸರುಗಳು ಅಂಕಿತನಾಮ ಎನಿಸುವುವು. ಉದಾ: ಮೈಸೂರು, ಧರ್ಮರಾಯ, ಚಾಮುಂಡಿಬೆಟ್ಟ ಇತ್ಯಾದಿ.
೩. ಅನ್ವರ್ಥಕನಾಮ
ಅರ್ಥಕ್ಕೆ ಅನುಗುಣವಾಗಿ ಇರಿಸಲಾದ ಹೆಸರುಗಳು.
ಉದಾ: ಕುರುಡ, ಕುಂಟ, ಮೂಕ, ಹೆಳವ ಇತ್ಯಾದಿ.
೬. ಭಾವವಾಚಕ
ವ್ಯಕ್ತಿ ವಸ್ತುಗಳ ಗುಣ, ಭಾವ, ವಾಧರ್ಮ ಇತ್ಯಾದಿಗಳ ಅರಿವು ಹಾಗೂ ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳು ಭಾವವಾಚಕ ನಾಮಪದಳೆನಿಸುವುವು.
ಉದಾ:
- ಬಿಳುಪ್ಪ ಹಿರಿಮೆ, ನೋಟ ಮೊದಲಾದವು.
ವಸ್ತುಗಳು ಮತ್ತು ಕ್ರಿಯೆಯ ಭಾವ (ಧರ್ಮ) ತಿಳಿಸುವ ಶಬ್ದಗಳು ಭಾವನಾಮಗಳೆನಿಸುವವು.
- ಹಿರಿಯದರ ಭಾವ – ಹಿರಿಮೆ
- ಕರಿಯದರ ಭಾವ – ಕಪ್ಪು
- ಬಿಳಿಯದರ ಭಾವ – ಬಿಳುಪು
- ಮಾಡುವದರ ಭಾವ – ಮಾಟ
- ನೋಡುವದರ ಭಾವ – ನೋಟ
- ಕೂಡುವದರ ಭಾವ – ಕೂಟ
೭. ಪರಿಮಾಣ ವಾಚಕಗಳು
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳು.
ಉದಾ :-
- ಹಲವು, ಕೆಲವು, ಅನಿತು, ಇನಿತು, ಎನಿತು, ಅಷ್ಟು, ಇಷ್ಟು, ಇತ್ಯಾದಿ.
- ಹಲವು ಜನರು, ಕೆಲವು ಗ್ರಾಮಗಳು ಇತ್ಯಾದಿ.
- ಗಾತ್ರಕ್ಕೆ ಉದಾ : ಅನ್ನದ ರಾಶಿ, ಆನೆಯಷ್ಟು , ಬೆಟ್ಟದಷ್ಟು ದೊಡ್ಡ.
- ಅಳತೆಗೆ ಉದಾ: ಇಷ್ಟು ದೂರ, ಅಷ್ಟು ಸಕ್ಕರೆ, ಇಷ್ಟು ಹಾಲು, ಇಷ್ಟುಪು ಸ್ತಕಗಳು ಇತ್ಯಾದಿ.
೮. ಪ್ರಕಾರ ವಾಚಕಗಳು
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರ ವಾಚಕಗಳೆನಿಸುವವು.
ಉದಾ :-
- ಅಂತಹ, ಇಂತಹ, ಎಂತಹ, ಇಂಥ, ಅಂತಹದು, ಎಂಥ, ಅಂಥ, ಇತ್ಯಾದಿ.
- ಇಂತಹ ದುಷ್ಟರು ಉಂಟೆ ?
- ಅಂತ ಸಜ್ಜನರು ವಿರಳ!
- ಅವನು ಎಂತಹನು ?
- ಇವನು ಇಂತಹನು ಇತ್ಯಾದಿ.
೯. ದಿಗ್ವಾದಕಗಳು
ದಿಕ್ಕುಗಳ ಹೆಸರುಗಳನ್ನು ಸೂಚಿಸುವ ಶಬ್ದಗಳು ದಿಗ್ವಾಚಕಗಳಾಗಿವೆ.
ಉದಾ:- ಪೂರ್ವ (east), ಪಶ್ಚಿಮ (west), ಉತ್ತರ (north) , ದಕ್ಷಿಣ (south), ಆನ್ನೇಯ, ನೈಋತ್ಯ , ವಾಯವ್ಯ, ಈಶಾನ್ಯ, ಆಚೆ, ಈಚೆ, ತೆಂಕಣ, ಪಡುವಣ, ಬಡವಣ…
ಸರ್ವನಾಮ
ನಾಮಪದಕ್ಕೆ ಬದಲಾಗಿ ಬಳಸುವ ಪದಗಳಿಗೆ ಸರ್ವನಾಮ ಎಂದು ಹೆಸರು.
- ಗುರುಗಳು ಪಾಠಶಾಲೆಗೆ ಹೊರಟರು. ಅವರ ಸಂಗಡ ವಿದ್ಯಾರ್ಥಿಗಳೂ ಹೋದರು. ಅಲ್ಲಿ ಅವರು ಪಾಠಗಳನ್ನು ಕಲಿತರು.
- ಅಡವಿಗೆ ಶ್ರೀರಾಮನು ಹೊರಟನು ಅವನ ಸಂಗಡ ಸೀತೆಯೂ ಲಕ್ಷ್ಮಣನೂ ಹೋದರು. ಅಲ್ಲಿ ಅವರು ಪರ್ಣಶಾಲೆಯಲ್ಲಿ ವಾಸಿಸಿದರು.
ಮೇಲಿನ ಎರಡೂ ವಾಕ್ಯಗಳಲ್ಲಿಯ ಅಲ್ಲಿ ಪಾಠಶಾಲೆಯಲ್ಲಿ ಅಡವಿಯಲ್ಲಿ ಅವರ ಸಂಗಡ ಗುರುಗಳ, ಅವನ ಸಂಗಡ ಶ್ರೀರಾಮನು ಇತ್ಯಾದಿ ಶಬ್ದಗಳು ತರಗಳು ನಾಮಪದಗಳ ಬದಲು ಬಳಸುವ ಬೇರೊಂದು ಪದಗಳಾಗಿವೆ. ಅಲ್ಲಿ ದಿನಸ್ಪರ ಪದಗಳು ನಾಮಪದಗಳು ಅವುಗಳ ಬದಲಾಗಿ ಅವರ, ಅವನ, ಅಲ್ಲಿ ಬೇರೊಂದು ಶಬ್ದಗಳನ್ನು ಉಪಯೋಗಿಸಲಾಗಿದೆ.
ಉದಾ :- ಇದು, ಆದು, ಯಾವುದು, ಎಲ್ಲಿ ಏನು, ಅವನು, ಇವನು ಅವರು ಇವಳು ಯಾವಳು ತಾನು ನೀನು, ನೀವು, ನಾವು ಅವರು, ಇವನು (ನಾನ್) ಆಂ (ಆನ್) ನೀಂ (ನೀನ್) ತಾವೂ ಯಾರೂ, ಏನ್, ಏನು
- ನಾನು ನಾವು ಇವು ಉತ್ತಮ ಪುರುಷ ಸರ್ವನಾಮಗಳು. ನೀನು ನೀವು ಮಧ್ಯಮ ಪುರುಷ ಸರ್ವನಾಮಗಳು.
- ಅವನು, ಅವರು, ಅದು, ಅವು, ಅವಳು, ಅವರು, ಇವು ಪ್ರಥಮ ಪುರುಷ ಸರ್ವನಾಮಗಳು.
- ಯಾವುದು, ಏನು, ಏತಕ್ಕೆ ಅವುದು, ಏನ್ ಇವೆಲ್ಲ ಪ್ರಶ್ನಾರ್ಥಕ ಸರ್ವನಾಮಗಳು.
ನಾಮಪದಗಳ ಸ್ಥಾನದಲ್ಲಿ ಇದ್ದು ಅವುಗಳನ್ನು ಸೂಚಿಸುವ ಶಬ್ದಗಳು ೯ ನಾಮಗಳೆನಿಸುವವು.
- ಚಂದ್ರಶೇಖರನು ಪತ್ರವನ್ನು ಬರೆದನು. -ಮೊದಲನೆಯ ವಾಕ್ಯದಲ್ಲಿ ಪತ್ರವನ್ನು ಬರೆದವನು ಯಾರು ಚಂದ್ರಶೇಖರನು. ಇವನು, ಗಂಡಸು, ಎಂಬುದಾಗಿ ಅರ್ಥ ಹೊಳೆಯುವದು. ಆದ್ದರಿಂದ ಚಂದ್ರಶೇಖರನು ಪುಲ್ಲಿಂಗ ಇದರಂತೆ ಸುರೇಶ, ಶಂಭು, ಕನಕ, ಬಸವ, ರಾಮ, ಭೀಮ, ಮನುಷ್ಯ, ಹುಡುಗ, ಕಳ್ಳ, ಮುದುಕ, ದೊಡ್ಡವ ಇತ್ಯಾದಿ.
- ಸುಜಾತಾ ರಂಗವಲ್ಲಿಯಲ್ಲಿ ಜಾಣಳು. -ಈ ವಾಕ್ಯದಲ್ಲಿ ರಂಗವಲ್ಲಿಯಲ್ಲಿ ಯಾರು ಜಾಣ ಸುಜಾತಾ, ಎಂಬುದಾಗಿ ಹೆಣ್ಣುಮಗಳು ಅರ್ಥ ವ್ಯಕ್ತವಾಗುವದು. ಆದ್ದರಿಂದ ಹೆಣ್ಣು- ಸ್ತ್ರೀ ಸ್ತ್ರೀಲಿಂಗ ಸ್ತ್ರೀ ಗುರುತು.ಉದಾ :- ಗಿರಿಜಾ, ಕಮಲೆ, ತಾಯಿ, ಅಕ್ಕ, ತಂಗಿ, ಅತ್ರ ಅಜ್ಜಿ, ಚೆಲುವ ಚಿಕ್ಕಮಗಳು, ಸಚಿವೆ, ಅಧ್ಯಕ್ಷೆ ಬಾಲಿಕೆ, ರಾಣಿ, ಸಹೋದರಿ, ಪತ್ನಿ, ತಂಗಿ, ಅರಸಿ, ಗಾಣಗಿ ಹೂವಾಡಗಿ ಸೂಲಗಿತ್ತಿ ಮುಂತಾದವುಗಳು.
- ಬೆಕ್ಕು ಹಾಲನ್ನು ಕುಡಿಯಿತು. – ಈ ವಾಕ್ಯದಲ್ಲಿ ಗಂಡಸು ಹೆಂಗಸು ಹೆಂಗಸು ಎರಡರ ಅರ್ಥಹೊಳೆಯದೆ ಬೇರೊಂದರ ಅರ್ಥ ಹೊಳೆಯಿತು ಯಾವ ಹಾಲು ಕುಡಿಯಿತು ?. ಬೆಕ್ಕು ನಪುಂಸಕ ಲಿಂಗ, ಪುರುಷ ಸ್ತ್ರೀಯರಲ್ಲದ ಗುರುತು.
- ಪುರುಷರ (ಗಂಡಸರ) ಹೆಸರುಗಳನ್ನು ಹೇಳುವ ಶಬ್ದಗಳು ಪುಲ್ಲಿಂಗವಾಚಕಗಳು.
- ಸ್ತ್ರೀಯರ (ಹೆಣ್ಣುಮಕ್ಕಳ) ಹೆಸರುಗಳನ್ನು ಹೇಳುವ ಶಬ್ದಗಳು ಸ್ತ್ರೀಲಿಂಗವಾಚಕಗಳು
- ಪುರುಷ ಹಾಗೂ ಸ್ತ್ರೀಯರ ಹೆಸರುಗಳನ್ನು ಬಿಟ್ಟು ಬೇರೊಂದು ವಸ್ತುಗಳ ಹೆಸರನ್ನು ಹೇಳುವ ಶಬ್ದಗಳು ನಪುಂಸಕವಾಚಕಗಳು.
- ಕೆಲವೊಂದು ವಸ್ತುಗಳು ನಪುಂಸಕ ಲಿಂಗಗಳಾಗಿವೆ.
- ದೇವತೆಗಳ ಹೆಸರುಗಳನ್ನು ಹೇಳುವ ಶಬ್ದಗಳು ಸ್ತ್ರೀಲಿಂಗ ಅಥವಾ ನಪುಂಸಕ ಲಿಂಗಗಳಲ್ಲಿ ಹೇಳಲ್ಪಡುವವು. Ex – ದೇವತೆಯು ಒಲಿದಳು.
ನಿತ್ಯ ನಪುಂಸಕ ಅಂಗಗಳು ಜನ ಕೊರಗಿತು, ಮಗು ಓದುತ್ತಿದೆ, ಶಿಶು ಹುಟ್ಟಿತು, ದಂಡು ಬಂದಿತು, ಕೂಸು ಅಳುತ್ತದೆ. ಮೇಲಿನ ವಾಕ್ಯಗಳಲ್ಲಿಯ ಜನ, ಮಗು, ಕೂಸು, ಶಿಶು, ದಂಡು ಇತ್ಯಾದಿ ಶಬ್ದಗಳು ಯಾವಾಗಲೂ ನಪುಂಸಕ ಲಿಂಗಗಳಲ್ಲಿ ಪ್ರಯೋಗಿಸಲ್ಪಡುವವು.
ನಾನು, ನೀನು, ತಾನು, ಒಳ್ಳೆಯ, ಕೆಟ್ಟ ಎಲ್ಲ ಸರ್ವನಾಮಗಳು ಪುಲ್ಲಿಂಗ, ಸ್ತ್ರೀಲಿಂಗ ನಪುಂಸಕ ಲಿಂಗಗಳಲ್ಲಿ ಪ್ರಯೋಗಿಸಲ್ಪಡುವವು.
- ನಾನು ಹಿರಿಯನು (ಪುಲ್ಲಿಂಗ)
- ನಾನು ತಾಯಿಯು (ಸ್ತ್ರೀಲಿಂಗ)
- ನಾನು ಹುಲಿ (ನಪುಂಸಕಲಿಂಗ)
- ನೀನು ಅಣ್ಣ (ಪುಲ್ಲಿಂಗ)
- ನೀನು ಅಕ್ಕ (ಸ್ತ್ರೀಲಿಂಗ)
- ನೀನು ಕರಡಿ (ನಪುಂಸಕಲಿಂಗ)
7) ಮೇಅನವು ವಿಶೇಷಾಧೀನ ಅಂಗಗಳು (ನಾನು, ನೀನು, ತಾನು) 1) ನೀನು ಕಲ್ಲು ಇಲ್ಲಿ ಕಲ್ಲು ವಿಶೇಷ ಇದಕ್ಕೆ ನೀನು ಆಧೀನವಾಗಿದೆ. ಆದ್ದರಿಂದ
ವಿಶೇಷ್ಯಾಧೀನ ಲಿಂಗವಾಗಿದೆ, ಇದರಂತೆ ತಾನು, ಎಂಬುದು.
1. ತಾನು ಹಿರಿಯನೆಂದು ಹೇಳಿದನು ತಾನ ಕಿರಿಯಳೆಂದು ತಿಳಿದಳು.
(ಪುಲ್ಲಿಂಗ)
(ಸ್ತ್ರೀಲಿಂಗ)
2. ಒಳ್ಳೆಯ ಎನ್ನುವದಕ್ಕೆ ಉದಾಹರಣೆ :
- ಒಳ್ಳೆಯ ಮಗು
- ಒಳ್ಳೆಯ ಮಗಳು
- ಒಳ್ಳೆಯ ಆಕಳು
3. ಕೆಟ್ಟ ಎನ್ನುವದಕ್ಕೆ ಉದಾ :
- ಕೆಟ್ಟಗಂಡ
- ಕೆಟ್ಟ ಹೆಂಡತಿ
- ಕೆಟ್ಟ ಬೆಕ್ಕು
4. ಎಲ್ಲ ಎನ್ನುವದಕ್ಕೆ ಉದಾ:
- ಎಲ್ಲ ಹುಡುಗರು ಬಂದರು
- ಎಲ್ಲ ಹುಡುಗಿಯರು ಬಂದರು ಎಲ್ಲ ಶಿಶುಗಳು ಹೋದವು
Very good information for students..
Niceery