Nudigattu oogattu

ನುಡಿಗಟ್ಟು : ವಿಶೇಷಾರ್ಥವುಳ್ಳ ಮತ್ತು ಒಳಾರ್ಥವುಳ್ಳ ಪದಪುಂಜವನ್ನು ನುಡಿಗಟ್ಟು ಎನ್ನುವರು.

ನಮ್ಮ ಭಾವನೆಯನ್ನು ಸಂಗ್ರಹಿಸಿ ಅರ್ಥಪೂರ್ಣವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಪದಪುಂಜವೇ ನುಡಿಗಟ್ಟು, ಇದು ಭಾಷೆಯ ಬಿಗುವನ್ನು ಹೆಚ್ಚಿಸಿ ಮಾತಿನ ಸೊಬಗನ್ನು ಇಮ್ಮಡಿಗೊಳಿಸುತ್ತದೆ.

  1. ಅಟ್ಟಕ್ಕೇರಿಸು – ಹೊಗಳಿ ಹೊಗಳಿ ಉಬ್ಬಿಸು.
  2. ಗುಡ್ಡವನ್ನು ಬೆಟ್ಟ ಮಾಡು ಅಲ್ಪ ವಿಷಯವನ್ನು ದೊಡ್ಡದು ಮಾಡು.
  3. ಕಂಬಿ ಕೀಳು – ಹೇಳದೆ ಕೇಳದೆ ಓಡಿ ಹೋಗು, ಪಲಾಯನ ಮಾಡು.
  4. ನೀರಿನ ಮೇಲೆ ಹೋಮ – ಭಾರಿ ದೊಡ್ಡ ಕೆಲಸ ಮಾಡಿದರೂ ಪ್ರತಿಫಲ ದೊರಕದೆ ಹೋಗುವುದು.
  5. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ – ಸಣ್ಣವರ ಮೇಲೆ ಬಲ ಪ್ರದರ್ಶನ.

ನಾಣ್ಣುಡಿ, ಲೋಕೋಕ್ತಿ : ಒಂದು ವಿಷಯವನ್ನು ಕುರಿತು ಪರಿಣಾಮಕಾರಿಯಾಗಿ ತಿಳಿ ಹೇಳುವ ಘನವಾದ ಅರ್ಥವನ್ನು ಹೊಂದಿರುವ ಹೇಳಿಕೆಗಳೇ ಗಾದೆ ಮಾತುಗಳು, ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ವಾಕ್ಯದಲ್ಲಿ ಗಾದೆ ಹೇಳಬಲ್ಲದು. ಗಾದೆ ಜಾನಪದ ಸಾಹಿತ್ಯ ಪ್ರಕಾರಗಳಲ್ಲೊಂದು. ಗಾದೆ ಅನುಭವದಿಂದ ಹುಟ್ಟಿಕೊಳ್ಳುವಂಥದ್ದು.

  1. ಕೂತು ಉಣ್ಣುವವನಿಗೆ ಕುಡಿಕೆ ಸಾಲದು
  2. ನಾಲಿಗೆ ಚೆನ್ನಾಗಿದ್ದರೆ ನಾಡೆಲ್ಲಾ
  3. ಕೈಕೆಸರಾದರೆ ಬಾಯಿ ಮೊಸರು.
  4. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
  5. ಕುಣಿಯಲಾರದವ ನೆಲ ಡೊಂಕು ಅಂದ.

ಒಗಟು :  ಒಗಟನ್ನು ಒಂಟು, ಒಡಪು, ಒಡಚು, ಒಡಗತೆ ಇತ್ಯಾದಿಯಾಗಿ ಕನ್ನಡದಲ್ಲಿ ನಾನಾ ರೂಪಗಳಲ್ಲಿ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಒಗಟಿಗೆ “Riddle” ಎಂದು ಹೇಳುತ್ತಾರೆ. ಮುಖ್ಯವಾಗಿ ಒಗಟು ಎಂದಾಗ ಒಂದು ಸಮಸ್ಯೆ ಎಂದರ್ಥವಾಗುವುದು, ಒಗಟುಗಳು ಬುದ್ಧಿಪ್ರಧಾನವಾದವುಗಳಾಗಿದ್ದು ಅರ್ಥಗರ್ಭಿತವಾಗಿರುತ್ತವೆ.

ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿಮುನಿ, ಚಿಪ್ಪುಂಟು ಆಮೆಯಲ್ಲ, ಜುಟ್ಟುಂಟು ಪೂಜಾರಿಯಲ್ಲ. ಮೂರು ಕಣ್ಣುಂಟು ಹರನಲ್ಲ, ಹಾಗಾದರೆ ನಾನು ಯಾರು? (ತೆಂಗಿನ ಕಾಯಿ)

ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ ದೇವಾಲಯವಲ್ಲ.

Leave a Comment

error: Content is protected !!
%d bloggers like this: