Parisara Samrakshane essay in Kannada |ಪರಿಸರ ಮಾಲಿನ್ಯಾ ಪ್ರಬಂಧ

Parisara Samrakshane essay in Kannada

In this article, you will learn how to write Parisara Samrakshane essay in Kannada, Parisara prabandha in Kannada for your school exams or any competitive exams.

ಪೀಠಿಕೆ

ಮನುಷ್ಯ ಪರಿಸರದ ಕೂಸು ಎಂಬುದು ಪ್ರಸಿದ್ಧವಾದ ಮಾತು, ಪರಿಸರ ಎಂಬುದು ಮನುಷ್ಯನಿಗೆ ಮಾತ್ರವಲ್ಲಿ ಪ್ರತಿಯೊಂದು ಜೀವಿಗೂ ತಾಯಿಯ ಸಮಾನ, ಆದರೆ ಇಂದು ಮಾನವ ಪರಿಸರದ ಮೇಲೆ ಬಲತ್ಕಾರ ಮಾಡುತ್ತಿದ್ದಾನೆ. ಇದರಿಂದ ಪರಿಸರ ನಾಶವಾಗುತ್ತಿದೆ.Parisara Prabandha in Kannada 

ನಮ್ಮ ಸುತ್ತ ಮುತ್ತ ಇರುವ ಬೆಟ್ಟ-ಗುಡ್ಡಗಳು, ಮರಗಿಡಗಳು, ಸಾವಿರುವ ಭೂಮಿ ಸಾಗ ಸರೋವರಗಳು, ಹಳ್ಳಕೊಳಗಳು, ಪಶುಪಕ್ಷಿಗಳು ಆರಣ್ಯ, ಗಾಳಿ, ಆಕಾಶ ಇವೆಲ್ಲವೂ ಸೇರಿ ಪರಿಸರವೆನಿಸಿದೆ. ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವೆಂದೂ ಕರೆಯುತ್ತಾರೆ.

ಪರಿಸರವನ್ನು ಮುಖ್ಯವಾಗಿ ಪ್ರಾಕೃತಿಕ ಪರಿಸರ ಮತ್ತು ಮಾನವ ನಿರ್ಮಿತ ಪರಿಸರವೆಂದು ವಿಭಾಗಿಸುತ್ತೇವೆ :-
1)ನದಿ, ಸಮುದ್ರ, ಸರೋವರ, ಅರಣ್ಯ, ಬೆಟ್ಟ ಗುಡ್ಡ, ಪರ್ವತ, ಮುಂತಾದವುಗಳು ಪ್ರಾಕೃತಿಕ ಪರಿಸರವಾದರೆ,

2)ಕಟ್ಟಡಗಳು, ಕೃಷಿಭೂಮಿ, ಕೈಗಾರಿಕೆಗಳು, ನಗರಗಳು, ಅಣೆಕಟ್ಟುಗಳು, ಕಾಲುವೆ, ರಸ್ತೆಗಳು, ಮಾನವ ನಿರ್ಮಿತ ಪರಿಸರವಾಗಿದೆ.

ಪರಿಸರವನ್ನು ಬಿಟ್ಟು ಮನುಷ್ಯ ಜೀವನ ಸಾಧ್ಯವೇ ಇಲ್ಲ. ಆದರೆ ಇಂದು ಮನುಷ್ಯ ತನ್ನ ಸ್ವಾರ್ಥ ಸುಖಕ್ಕಾಗಿ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾನೆ. ಪರಿಸರವನ್ನು ಹಾಳುಮಾಡುತ್ತಿದ್ದಾನೆ. ಇದರಿಂದಾಗಿ, ಅತಿವೃಷ್ಟಿ, ಅನಾವೃಷ್ಟಿ, ಹವಾಮಾನದ ಏರುಪೇರುಗಳು ಸಂಭವಿಸಿ, ಸುನಾಮಿ, ಪ್ರವಾಹ, ಚಂಡಮಾರುತ, ಭೂಕಂಪ ಮೊದಲಾದ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ.

What are the causes of Parisara Malinya ?

⇒ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ವಿವಿಧ ರೀತಿಯಲ್ಲಿ ಹಾಳು ಮಾಡುತ್ತಿದ್ದಾನೆ.
⇒ಇದಕ್ಕೆ ಪ್ರತಿಯಾಗಿ ಪ್ರಕೃತಿಯು ನೆರೆ ಹಾವಳಿ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಆಕಾಲವೃಷ್ಟಿ, ಚಂಡಮಾರುತ, ಸಾಂಕ್ರಾಮಿಕರೋಗಗಳ ಮೂಲಕ ಪ್ರತಿಭಟನೆಯನ್ನು ನಡೆಸಿದೆ.
⇒ಇದನ್ನು ಅರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿ ಅಗತ್ಯವಾಗಿದೆ.
⇒ಪರಿಸರ ಮಾಲಿನ್ಯಕ್ಕೆ ಅತಿಕ್ರಮಣ ಸಾಗುವಳ, ಆರಣ್ಯನಾಶ, ರಾಸಾಯನಿಕ ಗೊಬ್ಬರಗಳ ಬಳಕೆಗಣಿಗಾರಿಕ ಮುಂತಾದವು ಕಾರಣಗಳಾಗಿವೆ.

What are the Effects ?

⇒ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಎಷ್ಟೋ ಜೀವಸಂಕುಲಗಳು ಅಳಿವಿನಂಚಿನಲ್ಲಿವೆ.
⇒ಪರಿಸರದಲ್ಲಿ ಒಂದು ಅಂಶವು ಅಳಿದು ಹೋದರೆ ಸಮತೋಲನ ತರುತ್ತದೆ. ಪರಿಸರ ದಿನದಿಂದ ದಿನಕ್ಕೆ ನಾಶವಾಗುತ್ತಾ ಸಾಗಿದರೆ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ನೀರು ಗಾಳಿ ಆಹಾರ ಸಿಗದೇ ಹೋಗಬಹುದು.
⇒ಆದ್ದರಿಂದ ಇದನ್ನರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ.

Parisara malinya(ಪ್ರಕೃತಿ ಮಾಲಿನ್ಯ)

ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿ ಎಂದೂ ಬೀಳದಷ್ಟು ಮಳೆ ಸುರಿಯಿತು. ಊರುಗಳು ಜಲಪ್ರಳಯದಲ್ಲಿ ಮುಳುಗಿದವು, ಸಾವಿರಾರು ಮನೆಗಳು ಉರುಳಿದವು. ಜನ ಹಾಗೂ ಜಾನುವಾರುಗಳು ಪ್ರಾಣ ಕಳೆದುಕೊಂಡವು, ಲಕ್ಷಾಂತರ ಬೆಲೆಯ ದಳ ಪಾಳಾಯಿತು, ಬಹುತೇಕ ಜನರಿಗೆ ನಿಲ್ಲಲು ನೆಲೆಯಿಲ್ಲದ, ತಿನ್ನಲು ಆಹಾರವಿಲ್ಲದ ಗತಿಬಂತು.

ಸರಕಾರವು ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಜನರಿಗೆ ಪೊಟ್ಟಣಗಳನ್ನು ವಿತರಿಸಿ, ದೋಣಿ, ತಪ್ಪಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಜನರನ್ನು ಜಾನುವಾರುಗಳನ್ನು ಸ್ಥಳಾಂತರಿಸಿತು. ವಾಡಿಕೆಯಂತೆ ಬರಬೇಕಾದಷ್ಟು ಮಳೆಬಾರದಿರುವುದನ್ನು ‘ಅನಾವೃಷ್ಟಿ‘ ಅಥವಾ ‘ಬರ‘ ಎನ್ನುತ್ತೇವೆ. ಆಗ ಬೆಳೆ ಇರುವುದಿಲ್ಲ, ಕುಡಿಯಲು ನೀರು ದೊರಕುವುದಿಲ್ಲ. ಜನರಿಗೆ-ಜಾನುವಾರುಗಳಿಗೆ ಆಹಾರ ಮತ್ತು ನೀರಿನ ಅಭಾವ ಉಂಟಾಗುತ್ತದೆ.

ಇತ್ತೀಚೆಗೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ‘ಬರ’ ಪರಿಸ್ಥಿತಿ ಉಾಡಿಕೆಯಂತೆ ಬರಬೇಕಾದಷ್ಟು ಮಳೆಬಾರದಿರುವುದನ್ನು ‘ಅನಾದೃಷ್ಟಿ’ ಅಥವಾ ‘ಬರ’ ಎನ್ನುತ್ತೇವೆ. ಈಗ ಬೆಳೆ ಇರುವುದಿಲ್ಲ, ಕುಡಿಯಲು ನೀರು ದೊರಕುವುದಿಲ್ಲ, ಜನರಿಗೆ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ಅಭಾವ ಉಂಟಾಗುತ್ತದೆ. ಇತ್ತೀಚೆಗೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ‘ಬರ’ ಪರಿಸ್ಥಿತಿ ಇರುವುದು ಕಂಡುಬಂದಿದೆ.

ಇದಕ್ಕೆ ವಿರುದ್ಧವಾಗಿ ವಾಡಿಕೆಗಿಂತಲೂ ಅಧಿಕಪಟ್ಟು ಮಳೆ ಬೇಡವಾದ ಸಮಯದಲ್ಲಿ ಸುರಿಯುವ ಸ್ಥಿತಿಯೇ ಅತಿವೃಷ್ಟಿ, ಅತಿವೃಷ್ಟಿಯಿಂದಲೂ ರೈತರಿಗೆ ಕಟಾವಿಗೆ ಬಂದ ಬೆಳೆ ಕೈಗೆ ಸಿಗದೇ ನಷ್ಟವಾಗುತ್ತಿದೆ.

ಭೂಮಿಯು ಕಂಪಿಸುವುದರಿಂದ ಭೂಕಂಪನಗಳು ಉಂಟಾಗುತ್ತವೆ. ಭೂಕಂಪನದಿಂದ ಮನೆಗಳು ಕಟ್ಟಡಗಳು ಕುಸಿದು ಬೀಳುತ್ತವೆ. ರಸ್ತೆಗಳು ಕಾಣದಾಗುತ್ತವೆ. ವಿದ್ಯುತ್, ದೂರವಾಣಿ, ಮೊದಲಾದ ಸಂಪರ್ಕಗಳು ಸಂಪೂರ್ಣವಾಗಿ ನಾಶವಾಗುತ್ತವೆ.

ಭೂಕಂಪನದಿಂದ ಕಟ್ಟಡಗಳ ಅಡಿಯಲ್ಲಿ ಸಿಲುಕಿದ ಸಾವಿರಾರು ಜನರು ಹಾಗೂ ದನಕರುಗಳು ಪ್ರಾಣ ಕಳೆದುಕೊಳ್ಳುವುದುಂಟು. ನಮ್ಮ ದೇಶದಲ್ಲಿ ಅಂಡಮಾನ್ ನಿಕೋಬಾರ್, ಅಸ್ಸಾಂ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮುಂತಾದ ಪ್ರದೇಶಗಳು ಭೂಕಂಪ ಸಂಭವಿಸುವ ಪ್ರದೇಶಗಳೆಂದು ಗುರುತಿಸಿದ್ದಾರೆ.

ಜಪಾನ್ ದೇಶದಲ್ಲಿ ಆಗಾಗ ಭೂಕಂಪಗಳಾಗುತ್ತಿದ್ದು, ಇದರಿಂದ ರಕ್ಷಣೆ ಪಡೆಯಲು ಅಪಾಯ ಬಾರದಂತಹ ಮನೆಗಳನ್ನು ನಿರ್ಮಿಸುವುದರಲ್ಲಿ ಅಲ್ಲಿನ ಜನ ಯಶಸ್ವಿಯಾಗಿದ್ದಾರೆ.

Types of Parisara Malinya

1. ವಾಯು ಮಾಲಿನ್ಯ

⇒ ಪರಿಸರದಲ್ಲಿನ ವಸ್ತುಗಳ ಅತಿಯಾದ ಬಳಕೆಯಿಂದಾಗಿ ಇಂದು ಮನುಷ್ಯನು ಪರಿಸರದಲ್ಲಿ ಇದ್ದ ಅರಣ್ಯವನ್ನು ನಾಶ ಮಾಡುತ್ತಿದ್ದಾನೆ.

⇒ ಪರಿಸರ ನಾಶವಾದರೆ ಮಾನವನೇ ನಾಶವಾದಂತೆ ಎಂದು ತಿಳಿದೂ ಸಹ ಮಾನವನು ತಪ್ಪು ಮಾಡುತ್ತಿದ್ದಾನೆ. ಪರಿಸರ’ ಎಂಬ ಶಬ್ದದ ವ್ಯಾಪ್ತಿ ವಿಶಾಲವಾದುದು. ಇದು ಮನೆಯಿಂದ ಆಕಾಶದವರೆಗೂ ಇದೆ.

⇒ ಮನೆಯ ಸುತ್ತಲಿನ ಗಟಾರದ ವಾಸನೆ ಮುಂತಾದವು ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ.

2. ಜಲಮಾಲಿನ್ಯ

⇒ ನದಿಯ ನೀರು ಕಲುಷಿತಗೊಂಡಿದೆ. ಕಾರ್ಖಾನೆಗಳು ಇದರಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅವು ಹೊರ ಹಾಕುವ ಪ್ರವಾಹ ಹೊಲಸುಮಯವಾದದ್ದು ಅಂತಹ ನೀರು ಕುಡಿದಲ್ಲಿ ಅಪಾಯ ತಪ್ಪದು.

⇒ ಅದೇ ರೀತಿಯಲ್ಲಿ ಹಳ್ಳಿಯಲ್ಲಿಯ ಕೆರೆಗಳಲ್ಲಿ ಜನರು ಬಟ್ಟೆ ಒಗೆಯುತ್ತಾರೆ, ದನಕರುಗಳ ಮೈ ತೊಳೆಯುತ್ತಾರೆ. ಇದರಿಂದ ನೀರು ಕೊಡುತ್ತದೆ. ಅದೇ ನೀರು ಕುಡಿಯುತ್ತಾರೆ. ಇದು ಮಾರಕವಲ್ಲವೇ ? ದನಕರುಗಳು ಆ ನೀರಿನಲ್ಲಿಯೇ ಮಲ, ಮೂತ್ರ ಮಾಡಿ ನೀರಿನ ಸ್ವಚ್ಛತೆಯನ್ನೇ ಹಾಳು ಮಾಡಿದಾಗ ಅದೇ ನೀರನ್ನು ನಾವು ಕುಡಿದಾಗ ನಮ್ಮ ಆರೋಗ್ಯ ಕೆಡುವುದು ಸ್ವಾಭಾವಿಕ.

⇒ ಸಾಂಕ್ರಾಮಿಕ ರೋಗಗಳು ಇಂಥ ಸ್ಥಳದಲ್ಲಿ ಸಾಮಾನ್ಯ ಇದರಿಂದ ಪರಿಸರ ಹಾಗೂ ಆರೋಗ್ಯ ಎರಡೂ ಕೆಡುತ್ತವೆ.

3. ಧ್ವನಿ ಮಾಲಿನ್ಯ

⇒ ಧ್ವನಿವರ್ಧಕಗಳ ಸದ್ದು, ಪಟಾಕಿಗಳ ಸದ್ದು ಶಬ್ದ ಮಾಲಿನ್ಯವನ್ನುಂಟು ಮಾಡುತ್ತವೆ.

⇒ ಇದರಿಂದ ಕಿವಿಯ ಪರದೆ ಹರಿಯಬಹುದು, ಕಿವುಡುತನ ಬರಬಹುದು, ನಾವು ಅಭ್ಯಾಸ ಮಾಡುವ ಕೋಣೆ ಹಾಗೂ ಮಲಗುವ ಕೋಣೆಗಳು ಧ್ವನಿ, ಮಾಲಿನ್ಯದಿಂದ ದೂರವಿದ್ದರೆ ಇದರಿಂದಾಗುವ ಹಾನಿಯಿಂದ ನಾವು ತಪ್ಪಿಸಿಕೊಳ್ಳಬಹುದಾಗಿದೆ.

⇒ ಹೆಚ್ಚು ಸಪ್ಪಳ ಮಾಡುವ ವಾಹನಗಳನ್ನು ಸಂಚಾರದಿಂದ ರದ್ದುಗೊಳಿಸಬೇಕು, ಶಬ್ದ ಮಾಲಿನ್ಯದ ಬೆಳವಣಿಗೆಯ ಅನಾಹುತಗಳನ್ನು ಜನರಲ್ಲಿ ಪ್ರಚಾರಪಡಿಸಬೇಕು.

Importance of Parisara Samrakshane in Kannada

ಮಲಿನತೆಗಳನ್ನು ತಡೆಯುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹಿರಿಯರು ವಿಚಾರ ಮಾಡಬೇಕು ಏಕೆಂದರೆ,

  1. ಕೆಲವು ವರ್ಷಗಳ ಹಿಂದೆ ಸುನಾಮಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸಿ ಸಮುದ್ರತೀರದ ಪ್ರದೇಶಗಳು ಕ್ಷಣಮಾತ್ರದಲ್ಲಿ ಕಡಲ ತೆರೆಗಳಿಂದ ಕೊಚ್ಚಿಹೋಗಿ ಸಾವಿರಾರು ಜನರು ಜಲ ಸಮಾಧಿಯಾದರು.
  2. ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮದಿಂದ ಈ ಸುನಾಮಿ ಉಂಟಾಯಿತೆಂದು ಹೇಳಲಾಗುತ್ತಿದೆ. ನಲವತ್ತು-ಐವತ್ತು ಅಡಿಗಳೆತ್ತರಕ್ಕೆ ಏರಿದ ಸಮುದ್ರದ ಅಲೆಗಳು ತೀರದಲ್ಲಿದ್ದ ಜನರನ್ನು ಸಾಮಗ್ರಿಗಳನ್ನು ನಾಶಮಾಡಿದವು.
  3. ಇತ್ತೀಚೆಗೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದಾಗಿ ಹಿಮಗಡ್ಡೆಗಳು ಕರುಗುತ್ತಿವೆ. ಈ ರೀತಿ ಹಿಮಗಡ್ಡೆಗಳು ಕರಗುವುದರಿಂದ ನದಿಗಳಲ್ಲಿ ಪ್ರವಾಹ ಉಂಟಾಗಿ ಸಮುದ್ರದ ನೀರಿನ ಮಟ್ಟ ಏರುತ್ತಿದೆ. ಎಂದು ಹವಾಮಾನ ತಜ್ಞರು ಎಚ್ಚರಿಕೆ ಕೊಡುತ್ತಿದ್ದಾರೆ. ಧ್ರುವ ಪ್ರದೇಶಗಳಲ್ಲೂ ಹಿಮ ಕರಗುತ್ತಿದೆ. ಇವೆಲ್ಲವೂ ಅಪಾಯದ ಸೂಚನೆಗಳಾಗಿವೆ.
  4. ಚಂಡಮಾರುತ, ಹಿಮಪಾತ, ಅಗ್ನಿಪರ್ವತಗಳು ಶಿಲಾರಸವನ್ನು ಉಗುಳುವುದು ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸಿ ಮಾನವನಿಗೆ, ಪ್ರಾಣಿಗಳಿಗೆ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುತ್ತಿವೆ. ಪ್ರಕೃತಿ ವಿಕೋಪಗಳು ಸಂಭವಿಸಲು ಮನುಷ್ಯನೇ ಕಾರಣನಾಗಿದ್ದು ಪ್ರಕೃತಿ ರಕ್ಷಣೆಯಲ್ಲಿ ತೊಡಗಿದರೆ ಪ್ರಕೃತಿಯನ್ನು ಕಾಪಾಡಬಹುದು.
  5. ಪ್ರಕೃತಿ ರಕ್ಷಣೆ = ನಮ್ಮ ಉಸಿರು

ಪ್ರಕೃತಿ ರಕ್ಷಣೆ ಸಲಹೆಗಳು

ಪ್ರಕೃತಿ ರಕ್ಷಣೆ ಅಂದರೆ ಕಾರಖಾನೆಗಳನ್ನು ಮುಚ್ಚಬೇಕೆಂದಾಗಲಿ, ವಾಹನಗಳನ್ನು ಓಡಿಸಬಾರದೆಂದಾಗಲಿ ತಿಳಿಯಬಾರದು.

  1. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಬ್ದಮಾಲಿನ್ಯದಿಂದಾಗುವ ಬಗ್ಗೆ ವಿವರಣೆ ಕೊಡಬೇಕು.
  2.  ಮರಗಿಡಗಳನ್ನು ನೆಡುವದರಿಂದ ಪರಿಸರದಲ್ಲಿ ಶುದ್ಧವಾದ ವಾಯ ದೊರೆಯುವ ಸಾಧ್ಯವಿದೆ.
  3. ವನ್ಯ ಜೀವಿಗಳ ರಕ್ಷಣೆಗಾಗಿ ಸರಕಾರ ಅಭಯಾರಣ್ಯಗಳನ್ನು ಮಾಡಿವೆ. ವನ್ಯ ಜೀವಿಗಳನ್ನು ರಕ್ಷಿಸುವ ಬಗ್ಗೆ ಸರಕಾರಕ್ಕೆ ನೆರವು ನೀಡುವದು ಅಗತ್ಯ.
  4. ವನದಲ್ಲಿನ ಎಷ್ಟೋ ಸಸ್ಯಗಳು ಔಷಧಿಗಳಿಗಾಗಿ ಬಳಸಲ್ಪಡುತ್ತವೆ. ಇಂತಹ ಸಸ್ಯಗಳನ್ನು ಮನೆಯ ಬಳಿಯೂ ಬೆಳೆಯಲು ಆಸಕ್ತಿವಹಿಸಬೇಕು.
  5. ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಬಂಧದ(Parisara malinya prabandha in Kannada)ಮೂಲಕ ಪರಿಸರ ವಿಚಾರಗಳನ್ನು ಅನ್ವೇಷಿಸಬೇಕು.

ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ಸುತ್ತಲಿನ ವಾತಾವರಣವನ್ನು ಕೆಡಿಸುವ ಕೆಲಸ ಮಾಡದಿದ್ದರೆ ಪರಿಸರ ಸಂರಕ್ಷಣೆ ಸಾಧ್ಯ.

Environmentalist Salumarada Thimmakka

ಆಲದ ಮರದ ತಿಮ್ಮಕ್ಕ ಎಂದೂ ಕರೆಯಲ್ಪಡುವ ಸಾಲುಮರದ ತಿಮ್ಮಕ್ಕ, ಕರ್ನಾಟಕ ರಾಜ್ಯದ ಭಾರತೀಯ ಪರಿಸರವಾದಿ, ಹುಲಿಕಲ್ ಮತ್ತುಕುದೂರು ನಡುವಿನ ನಾಲ್ಕು ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಡುವ ಮತ್ತು ಆರೈಕೆ ಮಾಡುವ ಕೆಲಸಕ್ಕೆಹೆಸರುವಾಸಿಯಾಗಿದ್ದಾಳೆ. ಅವಳು ಸುಮಾರು 8000 ಇತರ ಮರಗಳನ್ನು ಕೂಡ ನೆಟ್ಟಿದ್ದಾಳೆ.

Here you learnt about Parisara malinya prabandha in Kannada and Parisara Samrakshane essay hope you enjoyed reading our article.

ಮನೆ ಮನಗಳಲ್ಲೂ ಸ್ವಚ್ಚತೆ ತರುವುದು ನೆಮ್ಮದಿ, ಇದರಿಂದ ಆಗುವುದು ದೇಶದ ಅಭಿವೃದ್ಧಿ

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading