Contents
Sandhigalu in Kannada
Here you learn about Kannada sandhigalu :ನಾವು ನೀವು ಮಾತಾಡುವಾಗ ಕೆಲವೊಂದು ಶಬ್ದಗಳನ್ನು ಕೂಡಿಸಿಯೇ ಮಾತಾಡುತ್ತೇವೆ. ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವದಿಲ್ಲ. ವಸಂತ ಇಂದ ಈ ಎರಡೂ ರೂಪಗಳನ್ನು ಕೂಡಿಸಿಯೇ ವಸಂತನಿಂದ ಎಂದು ಹೇಳುತ್ತೇವೆ. ಒಮ್ಮೊಮ್ಮೆ ಶಬ್ದಗಳನ್ನು ಬಿಡಿಬಿಡಿಸಿ- ಮಹೇಶನು ಪೇಟೆಗೆ ಹೋದನು ಹೀಗೆ ಹೇಳಿದರೂ ಪ್ರಕೃತಿ ಪ್ರತ್ಯಯಗಳನ್ನು ಸಂಧಿಸಿ (ಕೂಡಿಸಿ) ಯೇ ಹೇಳಬೇಕಾಗುತ್ತದೆ. ಬಿಡಿಬಿಡಿಸಿ ಹೇಳಲು ಬರುವದೇ ಇಲ್ಲ.
ವ್ಯಾಖರನ(Definition)
- ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೆ ಕೊಡುವುದಕ್ಕೆ ಸಂಧಿ ಎಂದು ಹೆಸರು.
- ಎರಡು ಪದಗಳು ಸಂಧಿಯಾಗುವಾಗ ಮೊದಲ ಪದದ ಕೊನೆಯ ಅಕ್ಷರವೂ, ಎರಡನೇ ಪದದ ಮೊದಲ ಅಕ್ಷರವೂ ಎಡಬಿಡದೆ ಒಂದಕ್ಕೊಂದು ಸೇರುತ್ತವೆ.
- ಉದಾ (Example): ನಾವು + ಎಲ್ಲಾ = ನಾವೆಲ್ಲಾ
ಕನ್ನಡದಲ್ಲಿ ಮೂರು ಬಗೆಯ ಸಂಧಿಗಳುಂಟು :
- ಲೋಪಸಂಧಿ
- ಆಗಮಸಂಧಿ
- ಆದೇಶಸಂಧಿ
Sandhigalu in Kannada examples
ಲೋಪಸಂಧಿ
ಸಂಧಿಕಾರ ನಡೆದಾಗ ಇರುವ ಅಕ್ಷರಗಳಲ್ಲೇ ಒಂದು ಅಕ್ಷರವು ಹೊರಟು ಹೋದರೆ (ಲೋಪವಾದರೆ) ಲೋಪಸಂಧಿ ಎನ್ನುವರು.
Lopa sandhi examples in Kannada
ಉದಾ:
- ನಾವು + ಎಲ್ಲಾ = ನಾವೆಲ್ಲಾ (‘ಉ’ ಕಾರ ಲೋಪವಾಗಿದೆ)
- ಬೇರೆ + ಒಂದು = ಬೇರೊಂದು (ಎ’ ಕಾರ ಲೋಪವಾಗಿದೆ)
- ಪೇಟೆ + ಇಂದ = ಪೇಟೆಯಿಂದ
- ಬಂಧು + ಅನ್ನು = ಬಂಧನ್ನು
- ಗುರು + ಅನ್ನು = ಗುರುವನ್ನು
- ಇವನ + ಊರು = ಇವನೂರು
- ದೇವರು + ಇಂದ = ದೇವರಿಂದ
- ಒಲ್ಲೆನು + ಎಂದು = ಒಲ್ಲೆನೆಂದು
ಗಮನಿಸಿ(Note): ಲೋಪಸಂಧಿ ಎನಿಸಲು ಸಂಧಿಕಾರ ಮಾಡಿದಾಗ ಅರ್ಥಕ್ಕೆ ಹಾನಿ ಬರಬಾರದು.
ಆಗಮಸಂಧಿ
ಸಂಧಿಕಾರ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರಿದರೆ (ಆಗಮಿಸಿದರೆ) ಆಗಮಸಂಧಿ ಎನಿಸುವುದು.
Agama sandhi examples in Kannada
ಆಗಮಸಂಧಿಯಲ್ಲಿ ಎರಡು ವಿಧ(Types)
- ಯ’ ಕಾರಾಗಮ ಸಂಧಿ
- ‘ವ’ ಕಾರಾಗಮ ಸಂಧಿ
ಯಕಾರಾಗಮ ಸಂಧಿ
ಸಂಧಿಕಾರ ಮಾಡಿದಾಗ ‘ಯ’ಕಾರವು ಆಗಮವಾದರೆ ಅದು ‘ಯ’ ಕಾರಾಗಮ ಸಂಧಿ ಎನಿಸುವುದು. ಆ, ಇ, ಈ, ವು, ಎ, ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ’ಯ್’ ಕಾರಾಗಮವು ಆಗುವದು.
ಉದಾ:
- ಮನೆ + ಅಲ್ಲಿ = ಮನೆಯಲ್ಲಿ
- ಗಾಳಿ + ಇಂದ = ಗಾಳಿಯಿಂದ
- ಕೆರೆ + ಅಲ್ಲಿ = ಕೆರೆಯಲ್ಲಿ, ಕೆರೆ + ಯ್ + ಅಲ್ಲಿ = ಕೆರೆಯಲ್ಲಿ
- ಹೊಳೆ + ಇಂದ = ಹೊಳೆಯಿಂದ, ಹೊಳೆ + ಯ + ಇಂದ = ಹೊಳೆಯಿಂದ
- ಮನೆ + ಅನ್ನು = ಮನೆಯನ್ನು, ಮನೆ + ಯ್ + ಅನ್ನು = ಮನೆಯನ್ನು
- ಹೊಟ್ಟೆ + ಅಲ್ಲಿ = ಹೊಟ್ಟೆಯಲ್ಲಿ, ಹೊಟ್ಟೆ + ಮ್ + ಅಲ್ಲಿ = ಹೊಟ್ಟೆಯಲ್ಲಿ
ವಕಾರಾಗಮ ಸಂಧಿ
ಸಂಧಿಕಾರ ಮಾಡಿದಾಗ ‘ವ’ ಕಾರವು ಆಗಮವಾದರೆ ಅದು ‘ವ’ ಕಾರಾಗಮ ಸಂಧಿ ಎನಿಸುವುದು. ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ‘ವ’ ಕಾರವು ಆಗಮವಾಗಿರುವದು.
ಉದಾ:
- ನಾಣ್ಯ + ಅನ್ನು = ನಾಣ್ಯವನ್ನು
- ಹೂ + ಇಂದ = ಹೂವಿಂದ
- ಗುರು + ಅನ್ನು = ಗುರುವನ್ನು ,ಇಲ್ಲಿ ‘ವ್’ ಕಾರವು ಹೊಸದಾಗಿ ಬಂದಿದೆ
- ಮಗು + ಅನ್ನು = ಮಗುವನ್ನು ಮಗು + ವ + ಅನ್ನು = ಮಗುವನ್ನು
- ಆ + ಉಂಗುರ = ಆವುಂಗುರು, ಆ + ವ + ಉಂಗುರು = ಆವುಂಗುರು
- ಆ+ ಊರು = ಆವೂರು, ಆ + ವ್ + ಊರು = ಆವೂರು
- ಊಟ + ಅನ್ನು = ಊಟವನ್ನು ಊಟ + ವ್+ ಅನ್ನು = ಊಟವನ್ನು
Note :
1) ಅಕಾರದ ಮುಂದೆ ಅಕಾರವೇ ಬಂದರೆ ವಕಾರಾಗಮವಾಗುವದು.
- ಮಠ + ಅನ್ನು = ಮಠವನ್ನು, ಮಠ + ವ್ + ಅನ್ನು = ಮಠವನ್ನು
- ಕಂಠ + ಅನ್ನು = ಕಂಠವನ್ನು, + ವನ್ನು = ಕದವನ್ನು
- ಕಂಠ + ವ್ + ಅನ್ನು = ಕಂಠವನ್ನು ಕದ + ವ್ + ಅನ್ನು = ಕದವನ್ನು
- ಕಲಹ + ವನ್ನು = ಕಲಹವನ್ನು, ಕಲಹ + ವ + ಅನ್ನು = ಕಲಹವನ್ನು
2) ಅ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ‘ವ್’ ಕಾರವು ಆಗಮವಾಗುವದು.
- ಆ + ವೋಟ ಆವೋಟ, ಆ + ವ್ = ಓಟ
- ಆ + ಓತೀಕಾಟ = ಆವೋತೀಕಾಟ, ಆ + ವ್ + ಓತೀಕಾಟ
- ಆ + ಊರು ಆ + ಒಂಟೆ ಆವೊ೦ಟೆ
- ಆ+ವ್ + ಊರು = ಆವೂರು ಆ + ವ್ + ಒಂಟೆ = ಆವೊಂಟೆ
3) ಈ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ಯಕಾರಾಗಮವಾಗುವದು ಅಥವಾ ವಕಾರಾಗಮವೂ ಆಗಬಹುದು.
- ಈ + ಊಟ = ಈಯೂಟ, ಈ + ಯ್ + ಊಟ
- ಈ + ವ್ + ಓಲೆ = ಈವೋಲೆ
- ಈ + ಒಂಟೆ = ಈಯೊಂಟೆ, ಈ + ಯ್ + ಒಂಟೆ
4) ‘ಓ’ ಕಾರದ ಮುಂದೆ ಸ್ವರ ಬಂದರೆ ವಕಾರಾಗಮವಾಗುವದು.
ಗೋ + ಅನ್ನು = ಗೋವನ್ನು, ಗೋ + ವ್ + ಅನ್ನು (ಓ ಅ)
ಆದೇಶಸಂಧಿ
ಸಂಧಿಕಾರ ನಡೆದಾಗ ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಮತ್ತೊಂದು ಅಕ್ಷರ ಬಂದರೆ ಆದೇಶ ಸಂಧಿ ಎನ್ನುತ್ತಾರೆ. (ಕ, ತ, ಪ ವ್ಯಂಜನಗಳಿಗೆ ಗ, ದ, ಬ ಗಳು ಆದೇಶವಾಗುತ್ತವೆ.)
ಸ೦ಧಿಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರವು ಬಂದರೆ ಆದೇಶ ಸಂಧಿಯೆನಿಸುವದು.
ಸಮಾಸದ ಕೊನೆಯ ಪದದ ಮೊದಲನೆಯ ಅಕ್ಷರ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರಾದೇಶವಾಗುವದು.
Adesha sandhi examples in Kannada
ಉದಾ:
- ಮಳೆ + ಕಾಲ = ಮಳೆಗಾಲ (‘ಕ’ ಕಾರಕ್ಕೆ ‘ಗ’ ಕಾರ ಆದೇಶವಾಗಿದೆ.)
- ಬೆಟ್ಟ + ತಾವರೆ = ಬೆಟ್ಟದಾವರೆ (ತ’ ಕಾರಕ್ಕೆ ‘ದ’ ಕಾರ ಆದೇಶವಾಗಿದೆ.)
- ಬು ಹೂ + ಪುಟ್ಟ, = ಹೂಬುಟ್ಟಿ (‘ಪ’ ಕಾರಕ್ಕೆ ‘ಬ’ ಕಾರ ಆದೇಶವಾಗಿದೆ.)
- ಹಳ + ಕನ್ನಡ ಹಳಗನ್ನಡ (ಹಳ + ಗ್ + ಅ + ನಡ)
- ಕಳೆ + ಕುಂದು = ಕಳೆಗುಂದು (ಕಳೆ + ಗ್ + ಉಂದು)
- ಚಳಿ + ಕಾಲ = ಚಳಿಗಾಲ (ಚಳಿ + ಗ್ + ಆ)
- ಕೆನೆ + ವಾಲು = ಕೆನೆವಾಲು
- ಎಳೆ + ಬಳ್ಳಿ = ಎಳೆವಳ್ಳಿ, ಬಕಾರಕ್ಕೆ ವಕಾರಾದೇಶ
- ನೆಲೆ + ಮನೆ = ನೆಲೆಮನೆ, ಮಕಾರಕ್ಕೆ ವಕಾರಾದೇಶ
- ಸಕಾರಕ್ಕೆ ಚಕಾರ ಬರುವದು: ಇನ್ + ಸರ ಇಂಚರ (ಇನ್ + ಚ್ + ಅರ) , ನುಣ್ + ಸರ = ನುಚ್ಚರ (ನುಣ್+ ಚ್ + ಅರ)
2) ಸಕಾರಕ್ಕೆ ಜಕಾರ ಬರುವದು: ತಣ್ + ಸೊಡರ್ = ತಣ್ಡರ್, (ತಣ್ + ಜ + ಒಡರ್)
3) ಸಕಾರಕ್ಕೆ ಛಕಾರ ಬರುವದು: ನೂರ್ + ಸಾಸಿರ = ನೂರ್ಛಾಸಿರ (ನೂರ್ + ಛ + ಅಸಿರ)
4) ಕೆಲವು ಕಡೆ ಯಾವ ಆದೇಶವು ಬರುವದಿಲ್ಲ: ಕಣ್ + ಸವಿ = ಕಣ್ಣವಿ, ಬೆಳ್ + ಸಿರಿ = ಬೆಳ್ಳಿರಿ.
ಪ್ರಕೃತಿ ಭಾವ
ಲೋಪ, ಆಗಮ, ಆದೇಶ ಸಂಧಿಗಳಾಗದಿರುವ ವಾಕ್ಯಕ್ಕೆ ಪ್ರಕೃತಿಭಾವ.
- ಅವನು ಬಂದನೇನು ? – ಅವನು = ಸಂಧಿಯಿಲ್ಲ.
- ಇದೇನಾಯಿತು – ಇದೇನಾಯಿತು – ಸಂಧಿಯಿಲ್ಲ
ಭಾವ ಸೂಚಕ ಅವ್ಯಯಗಳು
ಸಂಸ್ಕೃತ ಸಂಧಿಗಳು(Samskrutha sandhi in Kannada)
ಸಂಸ್ಕೃತ ಸಂಧಿಗಳಲ್ಲಿ ಮೂರು ವಿಧ :
- ಸ್ವರಸಂಧಿ
- ವ್ಯಂಜನಸಂಧಿ
- ವಿಸರ್ಗಸಂಧಿ.
ಸ್ವರಸಂಧಿ
ಸ್ವರಸಂಧಿಯಲ್ಲಿ ೪ ವಿಧ :
ಸವರ್ಣ ದೀರ್ಘ ಸಂಧಿ
ಒಂದೇ ಜಾತಿಯ ಅಕ್ಷರಗಳು ಪರಸ್ಪರ ಪರವಾಗಿ ಸಂಧಿಯಾದ ನಂತರ ಅದೇ ಅಕ್ಷರವು ದೀರ್ಘವಾದರೆ ಅದು ಸವರ್ಣದೀರ್ಘಸಂಧಿ ಎನಿಸುವುದು.
ನಿಯಮ ಉದಾ :-
ಸವರ್ಣ ಸ್ವರಗಳು ಒಂದರ ಮುಂದೆ ಬಂದರೆ ಅವೆರಡರ ಸ್ಥಳದಲ್ಲಿ ಅದೇ ಜಾತಿಯ ದೀರ್ಘಸ್ವರವು ಆದೇಶವಾದಾಗ,
- ಸಚಿವ + ಆಲಯ = ಸಚಿವಾಲಯ (ಸಚಿವ್ + ಆ + ಆಲಯ = ಸಚಿವಾಲಯ)
- ದೇವ + ಆಲಯ = ದೇವಾಲಯ (ಆ + ಆ = ಆ ಸವರ್ಣದೀರ್ಘ ಸ್ವರಗಳು ಬಂದು ದೀರ್ಘವಾಗಿದೆ)
- ರವಿ + ಇಂದ್ರ = ರವೀಂದ್ರ (ಇ+ಇ= ಈ ಸವರ್ಣ ಸ್ವರಗಳು ಬಂದು ದೀರ್ಘವಾಗಿವೆ)
- ಗುರು + ಉಪದೇಶ = ಗುರೂಪದೇಶ (ಉ + ಉ + ಊ ಸವರ್ಣ ಸ್ವರಗಳು ಬಂದು ದೀರ್ಘವಾಗಿದೆದೀರ್ಘವಾಗಿದೆ)
- ಮಹ್ + ಈ + ಇಂದ್ರ = ಮಹೇಂದ್ರ
- ಗುರು + ಉತ್ತಮ = ಗುರೋತ್ತಮ (ಗುರ್ + ಉ + ಉತ್ತಮ = ಗುರೋತ್ತಮ)
ಗುಣಸಂಧಿ
ಅ, ಆ ಕಾರಗಳ ಮುಂದೆ ಇ, ಈ ಕಾರವು ಬಂದರೆ ‘ಏ’ ಕಾರವು, ಉ, ಊ ಕಾರವು ಬಂದರೆ ಓ ಕಾರವೂ ‘ಋ’ ಕಾರವು ಬಂದರೆ ‘ಅರ್’ ಕಾರವೂ ಆದೇಶವಾಗಿ ಬಂದರೆ ಅದನ್ನು ಗುಣಸಂಧಿ ಎನ್ನುತ್ತಾರೆ.
- ಸುರ + ಈಶ = ಸುರೇಶ (ಅ + ಈ = ಏ)
- ಚಂದ್ರ + ಉದಯ = ಚಂದ್ರೋದಯ (ಅ + ಉ = ಓ)
- ಮಹ + ಋಷಿ = ಮಹರ್ಷಿ (ಅ + ಋ = ಅರ್) ೩.
ವೃದ್ಧಿಸಂಧಿ
ಅ, ಆ ಕಾರಗಳ ಮುಂದೆ ಏ, ಐ ಕಾರವು ಬಂದಾಗ ಐ ಕಾರವೂ, ಓ, ಔ ಕಾರವು ಬಂದಾಗ ‘B’ ಕಾರವೂ ಆದೇಶವಾಗಿ ಬಂದರೆ ವೃದ್ಧಿಸಂಧಿ ಎನಿಸುವುದು.
- ಏಕ + ಏಕ = ಏಕೈಕ (ಅ + ಏ = ಐ)
- ವನ + ಓಷದ = ವನೌಷಧ (ಅ + ಓ = ಔ)
ಯಣ್‌ಸಂಧಿ
ಸ್ವರದ ಮುಂದೆ ಸ್ವರ ಪರವಾಗಿ, ಸಂಧಿಯಾದ ನಂತರ ಯ, ವ, ರ ಅಕ್ಷರಗಳು ಆದೇಶವಾದಲ್ಲಿ
Yan sandhi examples in Kannada
- ಅತಿ + ಅಂತ = ಅತ್ಯಂತ (ಇ + ಅ =ಯ)
- ಮನು + ಅಂತರ = ಮನ್ನಂತರ (ಉ + ಅ = ವು)
- ಪಿತೃ + ಆರ್ಜಿತ = ಪಿತ್ರಾರ್ಜಿತ (ಸ + ಆ = ರ)
ವ್ಯಂಜನ ಸಂಧಿ
ಇದರಲ್ಲಿ ಮೂರು ವಿಧ :
ಜತ್ತ್ವಸಂಧಿ
ಪೂರ್ವಪದದ ಕೊನೆಯಲ್ಲಿರುವ ಕ್, ಚ್, ಟ್, ತ್, ಪ್ ಗಳಿಗೆ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಅಂದರೆ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದೇ ಜಶ್ವ ಸಂಧಿ.
- ದಿಕ್ + ಅಂತ = ದಿಗಂತ (ಕ > ಗ)
- ಷಟ್ – ಅವನ = ಷಡಾನನ (ಟ > ಡ)
- ಚಕ್ – ಆನಂದ = ಚಿದಾನಂದ (ತ > ದ)
ಶ್ರುತಸಂಧಿ
‘ಸ’ಕಾರದ ಎದುರಿಗೆ ‘ಶ’ ಕಾರವು ಬಂದು, ‘ಸ’ ಕಾರಕ್ಕೆ ‘ಶ’ ಕಾರ ಬರುವುದೂ, ‘ಸ’ ಕಾರದ ಎದುರಿಗೆ ‘ಚ’ ವರ್ಗವು ಬಂದು `ಸ’ ಕಾರಕ್ಕೆ ‘ಶ’ ಕಾರ ಬರುವುದೂ; ‘ತ’ ವರ್ಗದ ಎದುರಿಗೆ ‘ಚ’ ವರ್ಗವು ಬಂದು ‘ತ’ ವರ್ಗಕ್ಕೆ ‘ಚ’ ವರ್ಗ ಬರುವುದೂ ಶ್ರುತ ಸಂಧಿ ಎನಿಸುವುದು.
ಉದಾ:
- ತಪಸ್ – ಶಾಂತಿ = ತಪಶಾಂತಿ
- ಮನಸ್ + ಚಂಚಲ = ಮನಶ್ಚಂಚಲ
- ಶರತ್ + ಚಂದ್ರ = ಶರಚಂದ್ರ
- ಸತ್ + ಚಿತ್ರ = ಸಚ್ಚಿತ್ರ
- ಸತ್ + ಜನ = ಸಜ್ಜನ
ಅನುನಾಸಿಕ ಸಂಧಿ
ಪೂರ್ವ ಪದದ ಕೊನೆಯಲ್ಲಿನ ಕ, ಚ, ಟ, ತ, ಪ ಗಳಿಗೆ ಜ, ಞ, ಣ, ನ, ಮ (ಅನುನಾಸಿಕಗಳು) ಪರವಾದರೆ ಅದು ಅನುನಾಸಿಕ ಸಂಧಿ ಎನಿಸುವುದು.
ಉದಾ:
- ವಾಕ್ + ಮಯ = ವಾಲ್ಮೀಯ (ಕ > ಬಿ)
- ಸತ್ + ಮಾನ = ಸನ್ಮಾನ (ತ>ನ)
- ಪಟ್ + ಮುಖ = ಷಣ್ಮುಖ (ಟ > ಣ)
ವಿಸರ್ಗ ಸಂಧಿ
ವಿಸರ್ಗದೊಡನೆ ವ್ಯಂಜನಾಕ್ಷರ ಸೇರಿ ಸಂಧಿಯಾಗುವುದಕ್ಕೆ ವಿಸರ್ಗಸಂಧಿಯೆಂದು ಹೆಸರು.
- ನಿ: + ಚಲ = ನಿಶ್ಚಲ
- ಮನಃ + ತಾಪ = ಮನಸ್ತಾಪ
- ನಿ: + ಸಂದೇಹ = ನಿಸ್ಸಂದೇಹ
ಸಂಸ್ಕೃತ ವ್ಯಂಜನ ಸಂಧಿಗಳು
ಜಸ್ರ ಸಂಧಿ
ಜಸ್ ಎಂದರೆ ಸಂಸ್ಕೃತದಲ್ಲಿ ‘ಜಲಗಡದ’ ಈ ಐದು ವ್ಯಂಜನಗಳನ್ನು ತಿಳಿಸುವ ಆದೇಶ ಸಂಜ್ಞೆ ಯಾವ ಯಾವ ಅಕ್ಷರಗಳಿಗೆ ಇವು ಆದೇಶವಾಗಿ ಬರುತ್ತಿವೆ, ಎಂಬುದಾಗಿ ವಿಚಾರಿಸುವಾ.
- ಸಂಸ್ಕೃತ ವ್ಯಾಕರಣದಲ್ಲಿ ಅಜಂತ ಎಂದರೆ ಸ್ವರಾಂತ ಸಂಜ್ಞೆ
- ರಾಜನಿಗೆ ದಿಗಂಗನೆಯರು ಆರತಿಯನ್ನೆತ್ತಿದರು.
- ಅಬ್ಬಿಯ ತೆರೆಗಳು ಬಲು ದೊಡ್ಡವು.
- ಷಡಾನನನು ದೇವತೆಗಳ ಸೇನಾಪತಿ.
- ಸದಾನಂದನು ಪೇಟೆಗೆ ಹೋದನು.
ಮೇಲಿನ ವಾಕ್ಯಗಳಲ್ಲಿಯ ಅಜಂತ, ದಿಗಂಗನೆಯರು, ಅಬ್ಬಿ, ಷಡಾನನನು, ಸದಾನಂದನ ಶಬ್ದಗಳನ್ನು ಬಿಡಿಸಿ ಬರೆಯುವಾಗ….
- ಅಜ್ + ಅಂತ = ಅಜ್ + ಅಂತ = ಅಜಂತ ( ಚಕಾರಕ್ಕೆ ಜಕಾರಾದೇಶ)
- ದಿಕ್ + ಅಂಗನೆ + ದಿಗ + ದಿಗಂಗನೆ (ಕಕಾರಕ್ಕೆ ವಕಾರಾದೇಶ)
- ಆಪ್ + ಧಿ ಅಬ್ + ಧಿ = ಅಬ್ಬಿ (ಸಮುದ್ರ) (ಬಕಾರಾದೇಶ)
- ಷಟ್ + ಅವನ = ಷಟ್ + ಆನನ= ಷಡಾನನ (ಟಕಾರಕ್ಕೆ ಡಕಾರಾದೇಶ)
- ಸತ್ + ಆನ೦ದ = ಸದ್ + ಆನಂದ (ತಕಾರಕ್ಕೆ ದಕಾರಾದೇಶ)
ನಿಯಮ : ಕ ಚ ಟ ತ ಪ ಗಳಿಗೆ ಜ ಡ ದ ಬ ಆದೇಶವಾಗಿ ಬಂದರೆ ಜಶ ಸ೦ಧಿ ಎನಿಸುವದು.
ಉದಾಹರಣೆಗಳು :
- ವಾಕ್ + ದಾನ = ವಾಗ್ದಾನ (ಕಕಾರಕ್ಕೆ ಗಕಾರಾದೇಶ)
- ದಿಕ್ + ದೇಶ = ದಿಕ್ ದೇಶ – ದಿಗ್ದಶ (ಗಕಾರಾದೇಶ)
- ಅಚ್ + ಅಂತ್ ಅಚ್ ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
- ಅಚ್ + ಆದಿ = ಅಚ್ ಆದಿ – ಅಜಾದಿ (ಚಕಾರಕ್ಕೆ ಜಕಾರಾದೇಶ)
- ಷಟ್ + ಆನನ ಷಡ್ ಆನನ = ಅಡಾನನ (ಟಕಾರಕ್ಕೆ ಡಕಾರಾದೇಶ)
- ಷಟ್ + ಅಂಗನೆ = ಷಡ ಅಂಗನೆ – ಷಡಂಗನೆ (ಟಕಾರಕ್ಕೆ ಡಕಾರಾದೇಶ)
- ಚಿತ್ + ಆನಂದ = ಚಿದ್ ಆನಂದ – ಚಿದಾನಂದ (ತಕಾರಕ್ಕೆ ದಕಾರಾದೇಶ)
- ಸದ್ + ಉತ್ತರ = ಸದ್ ಉತ್ತರ – ಸದುತ್ತರ (ತಕಾರಕ್ಕೆ ದಕಾರಾದೇಶ)
- ಅಪ್ + ಜ = ಅಬ್ಬ(ಪಕಾರಕ್ಕೆ ಬಕಾರಾದೇಶ)
- ಅಪ್ + ಅಂಶ = ಅಬ್ ಅಂಶ – ಅಬಂಶ (ಸಕಾರಕ್ಕೆ ಬಕಾರಾದೇಶ)
ಪಾಣಿನಿ ಸೂತ್ರ – ಝಲಾಂ ಜಶೋಽನೇ (8-2-49)
ಜಸ್ಥ್ವ ಸಂಧಿ ಯಾಗದಿರುವ ಉದಾಹರಣೆಗಳು
ದಿಕ್ + ಚಕ್ರ = ದಕ್ಷತ್ರ, ಸತ್ + ಕವಿ = ಸತ್ಕವಿ ವಾಕ್ + ಪತಿ = ವಾಕೃತಿ, ದಿಕ್ + ಸೂಚಿ = ದಿಕ್ಕೂಚಿ
Also Read: Vishnu sahasranamam lyrics in Kannada
ಶ್ಚುತ್ವ ಸಂಧಿ
ಸತ್ + ಚಿತ್ರ + ಸಚ್ + ಚಿತ್ರ – ಸಚಿತ್ರ (ತಕಾರಕ್ಕೆ ಚಕಾರ ಪರವಾಗಿ ಚಕಾರಾದೇಶ)
- ಲಸತ್ + ಚಿತ್ರ = ಲಸಚಿತ್ರ
- ಮನಸ್ + ಶುದ್ಧಿ = ಮನಶುದ್ಧಿ (ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
- ಬೃಹತ್ + ಛತ್ರ = ಬೃಹತ್ + ಛತ್ರ = ಬೃಹಚ್ಛತ್ರ (ತಕಾರಕ್ಕೆ ಛಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
- ಮನಸ್ + ಚಂಚಲ = ಮನಸ + ಚಂಚಲ = ಮನಶ್ಚಂಚಲ (ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
- ಜಗತ್ + ಜ್ಯೋತಿ = ಜಗತ್ + ಜ್ಯೋತಿ = ಜಗಜ್ಯೋತಿ (ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಜಕಾರದೇಶ, ಅನಂತರ ಜಕಾರಾದೇಶವಾಗಿದೆ)
- ಉದಾಹರಣೆಗಳು : ಮನಶ್ಚಂಚಲ, ಮನಶ್ಚಪಲ, ಮನಶ್ಯಾಂತಿ
‘ಸ ತ ಥ ದ ಧ ನ’ ಗಳಿಗೆ ‘ತ ಚ ಛ ಜ ಝ ಞ’ ಅಕ್ಷರಗಳು ಆದೇಶವಾಗಿ ಬರುತ್ತವೆ.
ಶ್ = ಶಕಾರ ಚು ಚ ಛ ಜ ಝ ಞ ಈ ಅಕ್ಷರಗಳೇ ‘ಸ್ಟು’ ಎಂಬ ಸಂಜ್ಞೆಯಿಂದ ಕರೆಯಿಸಿಕೊಳ್ಳುವವು.
ಪಾಣಿನಿ ಸೂತ್ರ – ಸ್ತೋ ಸ್ಟುನಾಶುಃ (8-4-40)
ಅನುನಾಸಿಕ ಸಂಧಿ
ಜ, ಞ, ಣ, ನ, ಮ, ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಸಂಜ್ಞಾ ಪ್ರಕರಣದಲ್ಲಿಯ ಮಾಹೇಶ್ವರ ಸೂತ್ರಗಳಲ್ಲಿ ಯೂ ಆದೇಶ ಸಂಧಿಯೆನಿಸಿದೆ. ಏಳನೆಯದಾಗಿದೆ. ಈ ಸಂಧಿ
- ಅಪ್ + ಮಯ = ಅಮ + ಮಯ = ಅಮ್ಮಯ (ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ.)
- ಷಟ್ + ಮಾಸ = ಷಣ್ + ಮಾಸ = ಷಣ್ಮಾಸ (ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
- ವಾಕ್ + ಮಯ = ವಾಚ್ + ಮಯ = ವಾಹ್ಮಯ (ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ 2 ಕಾರಾದೇಶ)
- ಸತ್ + ಮಾನ = ಸನ್ + ಮಾನ = ಸನ್ಮಾನ (ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶ)
ನಿಯಮ : ವರ್ಗದ ಪ್ರಥಮ ವರ್ಗಗಳಾದ ಕ್ ಚ್ ಟ್ ವ್ಯಂಜನಗಳಿಗೆ ಕ್ರಮವಾಗಿ ಜ್, ಞ, ಣ್, ನ್, ಮ್ ವ್ಯಂಜನಗಳು ಆದೇಶವಾಗಿ ಬರುತ್ತವೆ.
ಉದಾಹರಣೆಗಳು :
- ವಾಕ್ ಮಾಧುರ = ವಾಜ + ಮಾಧುರ = ವಾಾಧುರ (ಕಕಾರಕ್ಕೆ ಮಕಾರ ಪರವಾಗಿ ಜಕಾರಾದೇಶ)
- ಚಿತ್ + ಮಯ = ಚಿನ್ + ಮಯ = ಚಿನ್ಮಯ (ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
- ಸತ್ + ಮಣಿ + ಸನ್ + ಮಣಿ = (ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
Chart for easy remembrance
- ಸಂಧಿ ಎಂದರೇನು?
- ದೇವರು + ಅಲ್ಲಿ, ಊರು + ಊರು, ಜಾತ್ರೆ + ಆಯಿತು, ಗುರು + ಅನ್ನು, ಹೊಲ + ಅನ್ನು ಇದನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.
- ಯಕಾರಾಗಮ ವಕಾರಾಗಮ ಸಂಧಿಗಳು ಎಲ್ಲೆಲ್ಲಿ ಬರುತ್ತವೆ, ತಿಳಿಸಿರಿ.
- ಪಿತೃ + ಅನ್ನು, ಮಾತೃ + ಅನ್ನು, ಮನೆ + ಅನ್ನು, ಗಿರಿ + ಅನ್ನು, ಸಿರಿ + ಅನ್ನು ಇವನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ. ಇಲ್ಲಿ ಲೋಪ ಮಾಡಿದ್ದರೆ ಹೇಗೆ ರೂಪಗಳಾಗುತ್ತಿದ್ದವು?
- ಅವನಲ್ಲಿ, ಊರನ್ನು, ದೇವರಲ್ಲಿ, ಮನೆಯಲ್ಲಿ, ಗುರುವನ್ನು, ಮಾತೃವನ್ನು, ಶತ್ರುವನ್ನು, ಮನವನ್ನು ಈ ಪದಗಳಲ್ಲಿರುವ ಸಂಧಿಗಳನ್ನು ಬಿಡಿಸಿ ಬರೆದು ಯಾವ ಯಾವ ಸಂಧಿಗಳೆಂಬುದನ್ನು ಹೆಸರಿಸಿರಿ.
ಈ ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಶಬ್ದದಿಂದ ತುಂಬಿರಿ:-
ನೀರ್ + ______ = ನೀರ‍್ವೊನಲ್, ಬೇರ್ + _______ = ಬೇರ‍್ವೆರಸಿ
೭. ಈ ಕೆಳಗಿನ ವಾಕ್ಯಗಳಲ್ಲಿ ದೋಷಗಳಿವೆ. ಅವನ್ನು ತಿದ್ದಿ ಹೇಳಿರಿ:-
೮. ಈಕೆಳಗೆ ಬಿಟ್ಟಿರುವ ಸ್ಥಳಗಳ ಮುಂದೆ ಆವರಣದಲ್ಲಿ ಕೊಟ್ಟಿರುವ ಸರಿಯಾದ ಒಂದು ಉತ್ತರವನ್ನು ಆರಿಸಿ ಬರೆಯಿರಿ.
Thank you so much 😊😊😊😀😀
Nice information👌 good work👍
Wonderful page… Thank you 😊
Thank you☺ share with your friends and relatives..