ಹಸೀನಾಳು ತಾಯಿತಂದೆಯರು ಹೇಳಿದ ಹಾಗೆ ಕೇಳುತ್ತಾಳೆ. ಹಸೀನಾಳ ತಾಯಿತಂದೆಯರು ಹಸೀನಾಳನ್ನು ಪ್ರೀತಿಸುತ್ತಾರೆ. ಹಸೀನಾಳಿಗೆ ಹಣ್ಣನ್ನು ಕೊಡುತ್ತಾರೆ. ಹಸೀನಾಳಿಂದ ಪುಸ್ತಕವನ್ನು ಓದಿಸುತ್ತಾರೆ. ಹಸೀನಾಳಲ್ಲಿ ಕೆಟ್ಟ ಗುಣಗಳಿಲ್ಲ.
ಮೇಲಿನ ವಾಕ್ಯಗಳಲ್ಲಿ ‘ಹಸೀನಾ’ ಎಂಬ ಪದವು ಮತ್ತೆ ಮತ್ತೆ ಬಂದಿದೆ. ಅದನ್ನು ಹಾಗೆಯೇ ಹೇಳಿದರೆ ಕೇಳಲು ಹಿತವೆನಿಸುವುದಿಲ್ಲ. ಹಾಗಾಗಿ ಅಂತಹ ಕಡೆಗಳಲ್ಲಿ ಅವಳು, ಅವಳ, ಅವಳಿಗೆ ಅವಳಿಂದ, ಅವಳಲ್ಲಿ ಮುಂತಾದ ಪದಗಳನ್ನು ಬಳಸುತ್ತೇವೆ. ಹಾಗೆ ಬಳ ಅರ್ಥ ಕೆಡುವುದಿಲ್ಲ. ಹೀಗೆ ನಾಮಪದಗಳ ಬದಲಾಗಿ ಬಳಸುವ ಪದಗಳನ್ನು ‘ಸರ್ವನಾಮ’ ಎನ್ನುತ್ತೇವೆ.
ಈ ರೀತಿಯಲ್ಲಿ ನಾವು ಅನೇಕ ಸರ್ವ ಬಳಸುತ್ತೇವೆ. ಈ ಸರ್ವನಾಮಗಳು ಲಿಂಗ, ವಚನ, ವಿಭಕ್ತಿಗಳಿಗೆ ಅನುಗುಣವಾಗಿ ಬೇರೆ ಬೇರೆಯಾಗಿರುತ್ತವೆ. ನಾನು, ನಾವು, ಅವನು, ಅವಳು, ಅವರು, ಅದು, ಇದು, ಅವು, ಇವು, ಆತನು, ಈತನು, ಆಕೆ, ಈಕೆ, ತಾನು, ತಾವು ಮೊದಲಾದ ಸರ್ವನಾ ಕಸುವುದರಿಂದ ವಾಕ್ಯಗಳ ಗಮನಿಸಬಹುದು.
ಈ ವಾಕ್ಯರುಂದದಲ್ಲಿ ಕಾಣುವ ಸರ್ವನಾಮಗಳನ್ನು ಗುರುತಿಸಿ
ಜಾನ್ ನಡೆದುಕೊಂಡು ಹೋಗುತ್ತಿದ್ದ. ಅವನು ದಾರಿಯಲ್ಲಿ ಒಂದು ನಾಯಿಯನ್ನು ಕಂಡ, ಅದು ಬೌಬೌ ಎಂದು ಬೊಗಳುತ್ತಿತ್ತು. ಅದನ್ನು ಕಂಡು ಅವನಿಗೆ ಹೆದರಿಕೆಯಾಯಿತು. ಇದನ್ನು ನೋಡಿದ ಮೇರಿ ಅಲ್ಲಿಗೆ ಬಂದಳು. ಅದರ ಬೊಗಳುವಿಕೆ ಕೇಳಿ ಅವಳಿಗೂ ಹೆದರಿಕೆಯಾಯಿತು. ಇವರ ಹೆದರಿಕೆ ನೋಡಿ ಮನೆಯ ಮಾಲೀಕರಾದ ರಾಮರಾಯರು ಹೊರಗೆ ಬಂದರು. ಅವರು ನಾಯಿಯನ್ನು ಗದರಿಸಿದರು. ಅದು ಬಾಲ ಮಡಚಿಕೊಂಡು ಕುಂಯ್ ಕುಂಯ್ ಎನ್ನುತ್ತಾ ಸುಮ್ಮನಾಯಿತು.
ಸರ್ವನಾಮಗಳಲ್ಲಿ ಮೂರು ವಿಧ:
- ಪುರುಷಾರ್ಥಕ ಸರ್ವನಾಮ
- ಆತ್ಮಾರ್ಥಕ ಸರ್ವನಾಮ
- ಪ್ರಶ್ನಾರ್ಥಕ ಸರ್ವನಾಮ
ಪುರುಷಾರ್ಥಕ ಸರ್ವನಾಮಗಳು
ಮಾತನಾಡುವ ವ್ಯಕ್ತಿಗೆ ವ್ಯಕ್ತಿಗಳಿಗೆ ಸಂಬಂಧಿಸಿದ ಪದಗಳು ‘ಉತ್ತಮ ಪುರುಷ’ದ ಪದಗಳು, ಉದಾಹರಣೆಗೆ ನಾನು, ನನ್ನನ್ನು, ನನ್ನಿಂದ, ನಮ್ಮ ನಮ್ಮಲ್ಲಿ ಇತ್ಯಾದಿ. ಇವುಗಳು ಸರ್ವನಾಮಗಳಾದುದರಿಂದ ಇವುಗಳನ್ನು ಉತ್ತಮಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ಮತ್ತೊಬ್ಬರೊಡನೆ ಮಾತನಾಡುವಾಗ ಅವರನ್ನು ಸಂಬೋಧಿಸಿ ಅವರನ್ನು ಕುರಿತು ಹೇಳುವುದನ್ನು ಸೂಚಿಸುವ ಪದಗಳು ‘ಮಧ್ಯಮ ಪುರುಷ’ದ ಪದಗಳು, ಉದಾಹರಣೆಗೆ, ನೀನು, ನಿನ್ನನ್ನು ನೀವು ನಿಮ್ಮನ್ನು, ನಿಮ್ಮಿಂದ, ನಿಮ್ಮ, ನಿಮ್ಮಲ್ಲಿ ಇತ್ಯಾದಿ. ಇವುಗಳು ಸರ್ವನಾಮಗಳಾದುದರಿಂದ ಇವುಗಳನ್ನು ‘ಮಧ್ಯಮಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ನಮ್ಮನ್ನು ಕುರಿತು ಅಥವಾ ಯಾರೊಡನೆ ಮಾತನಾಡುತ್ತೇವೆಯೋ ಅವರನ್ನು ಕುರಿತು ಹೇಳದೆ ಬೇರೆ ಯಾರನ್ನೋ ಕುರಿತು ನಾವು ಮಾತನಾಡುತ್ತೇವೆ. ಇದನ್ನು ಸೂಚಿಸುವ ಪದಗಳು ‘ಪ್ರಥಮಪುರುಷ’ ಪದಗಳು, ಉದಾಹರಣೆಗೆ: ಅವನು, ಅವಳು, ಅವರು ಇತ್ಯಾದಿ. ಇವುಗಳು ಸರ್ವನಾಮಗಳಾದುದರಿಂದ ಇವುಗಳನ್ನು ಪ್ರಥಮ ಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ಆತ್ಮಾರ್ಥಕ ಸರ್ವನಾಮ
- ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು.
- ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು.
ಸೃಜನಾಳು ಸೃಜನಾಳ ಪುಸ್ತಕವನ್ನು ಕಳೆದು ಹಾಗಾಗಿ ‘ಸೃಜನಾ ತನ್ನ ಪುಸ್ತಕವನ್ನು ಶೇಖರನು ಶೇಖರನಿಗೆ ಪುಸ್ತಕವು ಬೇಕ ಎಂದು ಹೇಳಿದರೆ ಸರಿಯಾಗದು. ಎಂದು ಹೇಳುತ್ತೇವೆ. ಹೀಗೆಯೇ ಕೇಳಿದನು ಎಂದು ಹೇಳುವ ಬದಲಿಗೆ ‘ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು’ ಎಂದು ಹೇಳುತ್ತೇವೆ. ಹೀಗೆ ಪ್ರಥಮ ಪುರುಷದಲ್ಲಿ ಬಳಸಲಾಗುವ ಸರ್ವನಾಮಗಳು “ಆತ್ಮಾರ್ಥಕ ಸರ್ವನಾಮ’ಗಳೆನಿಸಿಕೊಳ್ಳುತ್ತವೆ.
ಪ್ರಶ್ನಾರ್ಥಕ ಸರ್ವನಾಮ
ಯಾರು ಬಂದರು? ಯಾವನು ಬಂದನು? ನೀನು ಏನು ಮಾಡಿದೆ? ನೀನು ಏಕೆ ಬಂದೆ?
ಈ ಮೇಲಿನ ವಾಕ್ಯಗಳಲ್ಲಿ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಸರ್ವನಾಮಗಳನ್ನು ಬಳಸಲಾಗಿದೆ. ಇವುಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನುವರು.
ಯಾರು, ಎಂಥವನು, ಎಂಥವಳು – ಇವೆಲ್ಲ ಪ್ರಶ್ನಾರ್ಥಕ ಸರ್ವನಾಮಗಳೆ. ತಾನು, ತಾವು, ತಮ್ಮನ್ನು, ತಮಗೆ, ತಮ್ಮ ತನ್ನ ಇವೆಲ್ಲವೂ ಆತ್ಮಾರ್ಥಕ ಸರ್ವನಾಮಗಳೆ.