KannadaKaliyona

Tatsama Tadbhava in kannada

 

What is Tatsama Tadbhava in kannada ?

Tatsama Tadbhava in kannada -ತತ್ಸಮ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದದೆ ಬಳಸಲ್ಪಡುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುವರು. ತತ್+ಸಮ ಎಂದರೆ ಅದಕ್ಕೆ (ಸಂಸ್ಕೃತ ಪದಕ್ಕೆ) ಸಮಾನವಾದುದು ಎಂದು ಅರ್ಥ.

ಉದಾ: ಶ್ರೀ, ಸೂರ್ಯ, ತ್ಯಾಗ, ವಿಜ್ಞಾನ, ಪುಸ್ತಕ, ಸರಸ್ವತಿ,

ತದ್ಭವ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣವಾಗಿ ಬದಲಾವಣೆ ಹೊಂದಿ ಬರುವ ಪದಗಳನ್ನು ‘ತದ್ಭವ’ಗಳೆನ್ನುವರು.

ಉದಾ: ಸಜ್ಜೆ, ಲಕುಮಿ, ಹದಿಬದೆ, ಸಿರಿ, ಚಾಗ, ಹೊತ್ತಗೆ.

ಇನ್ನೂ ಕೆಲವು ತತ್ಸಮ, ತದ್ಭವ ಪದಗಳನ್ನು ನೋಡೋಣ.

Tatsama Tadbhava in kannada list

ತತ್ಸಮ – – – – – – – ತದ್ಬವ
1)ಸ್ವರ್ಗ – ಸಗ್ಗ
2)ಆಶ್ಚರ್ಯ – ಅಚ್ಚರಿ
3)ರತ್ನ – ರತುನ
4)ಶಯ್ಯಾ – ಸಜ್ಜೆ
5)ಸಾಹಸ – ಸಾಸ
6)ಭ್ರಮೆ – ಬೆಮೆ
7)ಕಾರ್ಯ – ಕಜ್ಜ
8)ಪ್ರಯಾಣ – ಪಯಣ
9)ಸ್ನೇಹ – ನೇಹ
10)ಪುಸ್ತಕ – ಹೊತ್ತಿಗೆ
11)ವಿಧಿ – ಬಿದಿ
12)ಪ್ರತಿ – ಪಡಿ
13)ಪೃಥ್ವಿ – ಪೊಡವಿ
14)ಧ್ವನಿ – ದನಿ
15)ವನ – ಬನ
16)ಲಕ್ಷ್ಮಿ – ಲಕುಮಿ
17)ಸ್ಫಟಿಕ – ಪಟಿಕ
18)ಕ್ರೌಂಚೆ – ಕೊಂಚೆ
19)ತಟ – ದಡ
20)ಪಲ್ಲಯಣ – ಹಲ್ಲಣ
21)ಹಂಸ – ಅಂಚೆ
22)ಆಕಾಶ – ಆಗಸ
23)ಸಂಧ್ಯಾ – ಸಂಜೆ
24)ಬ್ರಹ್ಮ – ಬೊಮ್ಮ
25)ರಾಕ್ಷಸ – ರಕ್ಕಸ
26)ಮುಖ – ಮೊಗ
27)ಮೃತ್ಯು – ಮಿತ್ತು
28) ಬೀದಿ – ವೀದಿ
29)ಅದ್ಭುತ – ಅದುಬುತ
30) ಪಕ್ಷಿ – ಪಕ್ಕಿ
31) ಮುಸುಳಿದ – ಮುಬ್ಬಾದ
32)ಮಂಟಪ – ಮಂಡಪ
33)ಅಪ್ಪಣೆ – ಅಣತಿ
34)ಶೃಂಗಾರ – ಸಿಂಗಾರ
35) ವಿದ್ಯಾ – ಬಿಜ್ಜೆ
36)ವೇದ – ಬೇದ
37)ತಪಸ್ವಿ – ತವಸಿ
38) ದಾಳಿಂಬೆ – ದಾಳಿಂಬ
39)ನಿತ್ಯ – ನಿಚ್ಚ
40)ದಂಷ್ರ್ಟಾ – ದಾಡೆ
41) ನಾಯಿ – ಗಾವಸಿಂಗ (ಗ್ರಾಮಸಿಂಗ)
42)ಶಿಲಾ – ಸಿಲೆ
43) ಚೀರಾ (ವಸ್ತ್ರ )- ಸೀರೆ
44) ಪರ್ವ – ಹಬ್ಬ
45) ಘೋಷಣೆ – ಗೋಸನೆ
46) ಶಿರಿ – ಸಿರಿ
47) ಮತ್ಸರ – ಮಚ್ಚರ
48) ವರ್ಷ – ವರುಷ
49)ಮುಗ್ದೆ – ಮುಗುದೆ
50)ಶುಂಠಿ – ಸುಂಟಿ
51)ಅಕ್ಷರ – ಅಕ್ಕರ
52)ಕಾವ್ಯ – ಕಬ್ಬ
53) ಯುಗ – ಜುಗ
54) ವ್ಯೆಂತರ – ಬೆಂತರ
55) ಶರ್ಕರಾ – ಸಕ್ಕರೆ
56) ಕಲಮಾ – ಕಳವೆ
57) ಅಬ್ದಿ – ಅಬುದಿ
58) ಪ್ರಸಾದ – ಹಸಾದ
59) ದಾತೃ – ದಾತಾರ
60) ಅಗ್ನಿ – ಅಗ್ಗಿ
61) ಶೂನ್ಯ – ಸೊನ್ನೆ
62) ಕಾಮ – ಕಾವ
63) ಚಂಪಕ – ಸಂಪಿಗೆ
64) ಕುಬ್ಬ – ಗುಜ್ಜ
65) ಶಂಖ – ಸಂಕು
66) ಉದ್ಯೋಗ – ಉಜ್ಜುಗ
67)ಧ್ಯಾನ – ಜಾನ
68)ದಾರಿ – ಬಟ್ಟೆ
69) ಪಟ್ಟಣ – ಪತ್ತನ
70) ವೀರ – ಬೀರ
71)ಜಟಾ – ಜಡೆ
72) ಪರವಶ – ಪಲವಸ
73)ಶೇಷ – ಸೇಸೆ
74) ಯಶಸ್ – ಯಶಸ್ಸು
75)ಭಂಗ – ಬನ್ನ
76) ಸರಸ್ವತಿ – ಸರಸತಿ
77) ಮೂರ್ತಿ – ಮೂರುತಿ
78)ಸ್ತಂಭ – ಕಂಬ

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading