KannadaKaliyona

Kittur Rani chennamma information in kannada

ಇತಿಹಾಸ

Kittur rani chennamma information in kannada :ಭಾರತ ದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಪ್ರತಿ ಸಂಸ್ಥಾನಕ್ಕೂ ಅದರ ಶ್ರೇಯೋಭಿವೃದ್ಧಿಯೇ ಪ್ರಥಮ ಆದ್ಯತೆಯಾಗಿತ್ತು. ಸಾಮ್ರಾಜ್ಯ ವಿಸ್ತರಣೆ ಎನ್ನುವುದು ಕ್ಷತ್ರಿಯ ಧರ್ಮದ ಮೂಲಗುಣ. ಅದಕ್ಕನುಗುಣವಾಗಿ ಸಂಸ್ಥಾನಗಳ ನಡುವಿನ ಪೈಪೋಟಿ ತೀರಾ ಸಹಜವಾಗಿತ್ತು. ಭಾಷೆ, ಆಹಾರ ಹಾಗು ಸಾಂಸ್ಕೃತಿಕ ವಿಚಾರಗಳಲ್ಲಿ ಪ್ರತಿ ಸಂಸ್ಥಾನಗಳೂ ಒಂದಕ್ಕಿಂತ ಭಿನ್ನವಾಗಿದ್ದವು.

ಹಾಗೆಯೇ, ಏಕ ಭಾಷಾ ಪ್ರದೇಶಗಳಲ್ಲಿರುವ ಸಂಸ್ಥಾನಗಳ ನಡುವೆಯೂ ಅನೇಕ ಕಾರಣಗಳಿಗಾಗಿ ಸಂಘರ್ಷವಿರುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿ, ಸಂಸ್ಥಾನಗಳ ನಡುವೆ ಐಕ್ಯಾತಾ ಮನೊಭಾವ ಅಷ್ಟಾಗಿ ಇರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅಖಂಡ ಭಾರತದ ಕಲ್ಪನೆ ಇನ್ನೂ ಸ್ಪಷ್ಟವಾಗಿ ಮೂಡಿರದಿದ್ದದು, ಆ ಮನೋಸ್ಥಿತಿಗೆ ಕಾರಣವಿರಬಹುದು.

ಭಾರತದಲ್ಲಿನ ಸ್ಥಿತಿ-ಗತಿಗಳನ್ನು ಸ್ಪಷ್ಟ ಮತ್ತು ಸೂಕ್ಷ್ಮವಾಗಿ ಅವಲೋಕಿಸಿದ ಬ್ರಿಟಿಷರು, ತಮ್ಮ ಒಂದೊಂದೇ ದಾಳಗಳನ್ನು ಉರುಳಿಸಲು ಆರಂಭಿಸಿದರು. ರಾಜಾ-ಮಹಾರಾಜಗಳಿಗೆ ಸಲಹೆ, ಸಹಾಯ ಮಾಡುವ ಸೋಗಿನಲ್ಲಿ, ಆಸ್ಥಾನದ ಆಪ್ತವಲಯ ಸೇರಿಕೊಂಡರು. ಬಳಿಕ ತಮ್ಮ ಕುತಂತ್ರ, ಒಡೆದು ಆಳುವ ನೀತಿ ಹಾಗು ಮುಂತಾದ ದುರ್ಮಾರ್ಗಳಿಂದ ರಾಜ್ಯಗಳನ್ನು ತಮ್ಮ ವಶಕ್ಕೆತೆ ಗೆದುಕೊಳ್ಳಲು ಆರಂಭಿಸಿದರು.

Kittur rani chennamma information in kannada

ನಂತರ, ದಕ್ಷಿಣ ಭಾರತದತ್ತ ದಾಳಿಯಿಡಲು ಶುರುವಿಟ್ಟುಕೊಂಡರು. ಆಗ ದಕ್ಷಿಣದ ಕೆಲವು ರಾಜರು ಬ್ರಿಟಿಷರೊಂದಿಗೆ ಪರಾಕ್ರಮದಿಂದ ಹೋರಾಡಿ ಸೋಲೊಪ್ಪಿಕೊಂಡರು. ಕೆಲವರು ಅಧೀರರಾಗಿ ಶರಣಾಗತರಾದರು. ಇನ್ನು ಕೆಲವರು ಆಂಗ್ಲರನ್ನು ಎದುರಿಸಲಾರದೇ ಹೆದರಿ ಓಡಿ ಹೋದರು. ಆದರೆ, ಉತ್ತರ ಕರ್ನಾಟಕ ಭಾಗದ ಒಂದು ಸಣ್ಣ ಸಂಸ್ಥಾನ ಮಾತ್ರ ಬ್ರಿಟಿಷರಿಗೆ ಪ್ರಬಲ ಸವಾಲನ್ನು ಒಡ್ಡಿತು. ಆ ಸಂಸ್ಥಾನವೇ ‘ಕಿತ್ತೂರು’. ಆಗ ಕಿತ್ತೂರಿನ ಆಡಳಿತ ಸೂತ್ರ ಹಿಡಿದಿದ್ದ ವೀರ ಮಹಿಳೆಯೇ ‘ರಾಣಿ ಚೆನ್ನಮ್ಮ’.

ಕಿತ್ತೂರು ಪ್ರಸ್ತುತ ಕಿತ್ತೂರು ಕರ್ನಾಟಕ ರಾಜ್ಯದ ಒಂದು ತಾಲ್ಲೂಕು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಧಾರವಾಡ-ಬೆಳಾಗಂ ನಗರಗಳ ನಡುವೆ ಕಿತ್ತೂರು ಇದೆ. ಐತಿಹಾಸಿಕ ಮಹತ್ವ ಪಡೆದಿರುವ ಕಿತ್ತೂರು, ಪೂನಾದಿಂದ 265 ಮೈಲು ಹಾಗು ಮೈಸೂರಿನಿಂದ 290 ಮೈಲು ದೂರದಲ್ಲಿದೆ.

ಮಲಪ್ರಭ ನದಿ ಕಿತ್ತೂರಿನ ಉತ್ತರ ಭಾಗದಲ್ಲಿ ಹರಿಯುತ್ತದೆ. ಪಶ್ಚಿಮ ಭಾಗಕ್ಕೆ ‘ಸಹ್ಯಾದ್ರಿ ಪರ್ವತ ಶ್ರೇಣಿ’ ಹಬ್ಬ ಕೊಂಡಿದೆ. ಪೂರ್ವ ಭಾಗಕ್ಕೆ ‘ಬೆಳವಲ ನಾಡು’ ಎಂದು ಕರೆಯುವ ಬಯಲು ಸೀಮೆ ಇದೆ. ಕಿತ್ತೂರು ಫಲವತ್ತನಿಂದ ಕೂಡಿದ ಭೂ ಪ್ರದೇಶವನ್ನು ಹೊಂದಿದೆ. ಮಲೆನಾಡು ಭಾಗ, ಕರಾವಳಿ ಪ್ರಾಂತ್ಯ ಹಾಗು ಬೆಳವಲ

ಬಯಲು ಸೀಮೆಗೆ ಸಂಪರ್ಕ ಸೇತುವೆಯಾಗಿ ಆತೂರು ಒಂದು ಮಹತ್ವದ ಆಯಕಟ್ಟಿನ ಪ್ರದೇಶದಲ್ಲಿ ಸ್ಥಾಪಿತವಾಗಿತ್ತು. ಇಲ್ಲಿನ ಬೈಲವಂಗಲ, ಸಂಪಗಾಂವ, ದೇಸನೂರುಗಳು ಹತ್ತಿ ಬಟ್ಟೆ ಗಿರಣಿಗಳನ್ನು ಹೊಂದಿದ್ದವು. ಜೊತೆಗೆ, ಇವುಗಳು ಪ್ರಮುಖ ಬಟ್ಟೆಯ ವ್ಯಾಪಾರ ಕೇಂದ್ರಗಳೂ ಆಗಿದ್ದವು. ಕಿತ್ತೂರಿನ ಪೂರ್ವ ಭಾಗದಲ್ಲಿನ ಫಲವತ್ತಾದ ಬಯಲುಸೀಮೆಯಲ್ಲಿ ಹತ್ತಿ, ಆಹಾರ ಧಾನ್ಯಗಳನ್ನು ಮತ್ತು ಪಶ್ಚಿಮ

ಘಟ್ಟದ ಪಶ್ಚಿಮ ಭಾಗದಲ್ಲಿ ಭತ್ತ, ಕಬ್ಬು, ಸಾಂಬಾರಿ ಬೆಳೆಯಲಾಗುತ್ತಿತ್ತು. ಕಿತ್ತೂರು ಸಂಸ್ಥಾನದಲ್ಲಿ ನಾಣ್ಯ ಟಂಕಿಸುವ

ಟಂಕಸಾಲೆಯಿತ್ತು. ‘ಲಿಂಗ ಮತ್ತು ನಂದಿ’ ಗುರುತಿನ ಧ್ವಜ ಕಿತ್ತೂರು ಸಂಸ್ಥಾನದ ಹೆಗ್ಗುರುತಾಗಿತ್ತು. ಕಿತ್ತೂರಿನ ದೇಸಾಯಿಗಳು ಪರಧರ್ಮ ಸಹಿಷ್ಣುತೆಯ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ಪ್ರಜೆಗಳ ನಡುವೆ ಮತಭೇದ ಇರಲಿಲ್ಲ. ಕಿತ್ತೂರು ಅರಮನೆಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಸಾರುವ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ, ತಾರತಮ್ಯ ಇಲ್ಲದ ಧರ್ಮ ಶ್ರದ್ಧೆ, ಆಸ್ತಿಕ ಭಾವಗಳು, ಉನ್ನತ ಸಂಸ್ಕಾರಗಳು ಹಾಗು ಗಟ್ಟಿಯಾದ ನೈತಿಕ ಶಕ್ತಿಯ ಬೆಳವಣಿಗೆಗೆ ಪೂರಕವಾದ ಭವ್ಯ ಸಾಂಸ್ಕೃತಿಕ ಪರಂಪರೆ, ಕಿತ್ತೂರಿನಲ್ಲಿ ಹಾಸು ಹೊಕ್ಕಾಗಿರುವುದನ್ನು ನಾವು ದರ್ಶಿಸಬಹುದು. ಇದು ನಮ್ಮ ಕನ್ನಡ ನಾಡಿನ ಮೇರು ಸಂಸ್ಕೃತಿಗೆ, ಕಿತ್ತೂರು ಸಂಸ್ತಾನದ ಅಮೂಲ್ಯ ಕಾಣಿಕೆಯಾಗಿದೆ.

ಕಿತ್ತೂರನ್ನು ಹಿಂದೆ ‘ಜಗನ ಹಳ್ಳಿ’ ಎಂದು ಕರೆಯುತ್ತಿದ್ದರು. ಈ ಗೀಜಗನ ಹಳ್ಳಿಯು ರಮ್ಯ ಹಾಗು ದಟ್ಟವಾದ ಅರಣ್ಯ ಪ್ರದೇಶದ ನಡುವೆ ಇತ್ತು. ದಟ್ಟಾರಣ್ಯದ ನಡುವಿರುವ ಈ ಹಳ್ಳಿಯಲ್ಲಿ ಗೀಜಗನ ಹಕ್ಕಿಗಳು’ ಯಥೇಚ್ಚ ಸಂಖ್ಯೆಯಲ್ಲಿದ್ದವು. ಆದ್ದರಿಂದ, ಈ ಹಳ್ಳಿಗೆ ಗೀಜಗನ ಹಳ್ಳಿ ಎಂದು ಕರೆದಿರುವ ಸಾಧ್ಯತೆ ಇದೆ. ಹಾಗೆಯೇ, ಬೇರ ಕಡೆಯಿಂದ ಒಂದು ಊರನ್ನು ಕಿತ್ತುಕೊಂಡು ಬಂದು ಹೊಸ ಊರೊಂದನ್ನು ಕಟ್ಟಿದ್ದರಿಂದ ಕಿತ್ತೂರು’ ಎನಿಸಿಕೊಂಡಿತೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಂಗ್ಲರ ಗೆಜೆಟಿಯರ್‌ನಲ್ಲಿ ”ಗೀಜಗನ ಹಳ್ಳಿ’ ಎಂದು ದಾಖಲಾಗಿದೆ.

ಈ ಪರಿಸರ ಮಾನವ ವಸತಿಯ ನೆಲೆಯಾಗಿತ್ತು ಎನ್ನುವುದು ಗೋಚರಿಸುತ್ತದೆ. ಆಗಲೂ ಈ ಜನ ವಸತಿ ಪ್ರದೇಶವನ್ನು ‘ಕಿತ್ತೂರು’ ಎಂದು ಕರೆಯಲಾಗುತ್ತಿತ್ತು ಎನ್ನುವುದು ಕಂಡು ಬರುತ್ತದೆ. ಇದಕ್ಕೆ ಪೂರಕವೆನ್ನುವುಂತೆ 12ನೇ ಶತಮಾನ ಗೋವಾದ ಕದಂಬ ರಾಜ ಜಯಕೇಶಿಯ ಕಾಲದ ಶಾಸನದಲ್ಲಿ ‘ದಂಡನಾಯಕರ ಸನ್ನಿಧಾನದಲ್ಲಿ ಕಿತ್ತೂರ ಅತ್ತಿಯ ಧಾವಿಯ ಶ್ರೀ ಕಲ್ಲೇಶ್ವರ ದೇವರ ಆಚಾರ್ಯ’ ಎಂದು ಉಲ್ಲೇಖವಿದೆ.

ತುಂಗಭದ್ರಾ ನದಿಯ ದಕ್ಷಿಣ ಭಾಗದಲ್ಲಿ 14ನೇ ಶತಮಾನದಲ್ಲಿ ಆರಂಭವಾದ ‘ವಿಜಯನಗರ ಸಾಮ್ರಾಜ್ಯ’ ಮತ್ತು ತುಂಗಭದ್ರೆಯ ಉತ್ತರ ಭಾಗದಲ್ಲಿ ಗುಲಬರ್ಗಾ, ಬಿಜಾಪುರ ಹಾಗು ಬೀದರ್‌ಗಳಲ್ಲಿ ಆರಂಭವಾದ ‘ಬಹುಮನಿ ಸಾಮ್ರಾಜ್ಯಗಳು ವ್ಯಾಪಿಸಿಕೊಂಡಿದ್ದವು. ಈ ಎರಡೂ ಸಾಮ್ರಾಜ್ಯಗಳು ಪರಸ್ಪರ ಕಾದಾಡಿಕೊಳ್ಳುತ್ತಲೇ ಭದ್ರವಾದ ನೆಲೆ ಒದಗಿಸಿಕೊಂಡಿದ್ದವು. ನಂತರ, 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಪತನದ ಬಳಿಕ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜಾಪುರದ ‘ಆದಿಲ್‌ ಶಾಹಿ’ ಆಳ್ವಿಕೆ ಪ್ರಾರಂಭವಾಯಿತು. ಆ ಸಮಯದಲ್ಲಿ ಕಿತ್ತೂರು ಆದಿಲ್‌ ಶಾಹಿ ಆಡಳಿತದ ಒಂದು ಭಾಗವಾಗಿ ಮುಂದುವರೆಯಿತು. ಅಂತಹ ವಿಷಮ ಸ್ಥಿತಿಯಲ್ಲಿಯೂ ಕಿತ್ತೂರು ಧರ್ಮದ ಸ್ವಂತಿಕೆಯನ್ನು ಉಪಾಡಿಕೊಂಡು, ಒಂದು ಸಂಸ್ಥಾನವಾಗಿ ರೂಪುಗೊಳ್ಳತೊಡಗಿತು.

ಯುರೋಪಿಯನ್ನರ ಆಗಮನ

ನಾವಿಕ ವಾಸ್ಕೋಡಗಾಮ ಹದಿನೈದನೇ ಶತಮಾನದಲ್ಲಿ. ಯುರೋಪ್‌ನಿಂದ ಭಾರತಕ್ಕೆ ಬರುವ ‘ಹೊಸ ಕಡಲ ಮಾರ್ಗ’ವನ್ನು ಪತ್ತೆ ಹಚ್ಚಿದ, ಈ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ ಮೊದಲ ಯುರೋಪಿಯನ್‌ಗಳೆಂದರೆ ಆಗಮಿಸಿದ ‘ಮೊರ್ಚುಗೀಸರು’. ಭಾರತಕ್ಕೆ ಆರಂಭಿಸಿದರು. ಹದಿನಾರನೇ ಶತಮಾನದಲ್ಲಿ ವ್ಯಾಪಾರಿ Sciದಲ್ಲಿ ಆವರು ಅತ್ಯಂತ

ಹದಿನೆಂಟನೆಯ ಶತಮಾನದ ಹೊತ್ತಿಗೆ ದೇಶಾದ್ಯಂತ ಪಸರಿಸುತ್ತ ಒಂದು ಪ್ರಬಲ ಶಕ್ತಿಯಾಗಿ ಬೆಳೆದರು.

ಹದಿನೆಂಟನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ‘ವೈಭವಯುತ ಕ್ರಾಂತಿ’ಯಿಂದ ಫ್ರೆಂಚರು ಅತ್ಯಂತ ದುರ್ಬಲರಾದರು. ಆದ್ದರಿಂದ, ಭಾರತದಲ್ಲಿ ಬ್ರಿಟಿಷರೊಂದಿಗೆ ಸೆಣಸಲಾರದೆ ಫ್ರೆಂಚರು ಭಾರತದಿಂದ ನಿರ್ಗಮಿಸಿದರು.

ಪ್ಲಾಸಿ ಕದನ

ಫ್ರೆಂಚರ ನಿರ್ಗಮನ ಆಂಗ್ಲರಿಗೆ ವರವಾಗಿ ಪರಿಣಮಿಸಿತು, ಹಾಗೆಯೇ, ಮೊಗಲರು 1757ರಲ್ಲಿ ನಡೆದ ‘ಪ್ಲಾಸಿ ಕದನ’ದಲ್ಲಿ ಆಂಗ್ಲರಿಗೆ ಸಂಪೂರ್ಣ ಸೋತು ಹೋದರು. ಆಗ ಬಂಗಾಳ, ಬಿಹಾರ, ಒರಿಸ್ಸಾ ಮತ್ತು ಅಸ್ಸಾಂಗಳನ್ನು ವಶಕ್ಕೆ ಪಡೆದ ಆಂಗ್ಲರು ಮತ್ತಷ್ಟು ಪ್ರಬಲರಾದರು.

ಮೈಸೂರು ಯುದ್ಧ

ದಕ್ಷಿಣ ಭಾರತವನ್ನು ಹೊರತುಪಡಿಸಿ, ಭಾರತದ ಬಹುತೇಕ ಭಾಗಗಳು ಆಂಗ್ಲರ ಅಧೀನಕ್ಕೆ ಒಳಪಟ್ಟಿದ್ದವು. ದಕ್ಷಿಣದಲ್ಲಿ ಅವರಿಗೆ ಮರಾಠರು, ಹೈದಾರಬಾದ್ ನಿಜಾಮ ಮತ್ತು ಮೈಸೂರಿನ ಟಿಪ್ಪು ಸುಲ್ತಾನ್‌ ಪ್ರಮುಖ ಎದುರಾಳಿಗಳಾಗಿದ್ದರು.

ದಕ್ಷಿಣದಲ್ಲಿ ಮೈಸೂರಿನ ಟಿಪ್ಪು ಸುಲ್ತಾನ್ ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದ. 1792ರಲ್ಲಿ ಟಿಪ್ಪುವಿಗೂ ಮತ್ತು ಆಂಗ್ಲರಿಗೆ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಹೈದಾರಬಾದ್ ನಿಜಾಮ ಮತ್ತು ಮರಾಠ ಪೇಶೆಗಳು ಟಿಪ್ಪುವನ್ನು ಬೆಂಬಲಿಸದೆ, ಆಂಗ್ಲರನ್ನು ಬೆಂಬಲಿಸಿದರು. ಟಿಪ್ಪು ಬಹುವಾಗಿ ನಂಬಿದ್ದ ಫ್ರೆಂಚರು ಕೂಡ ಅವರ ದೇಶದಲ್ಲಿ ಉಂಟಾದ ಆಂತರಿಕ ಕಲಹದಿಂದ ನೆರವಿಗೆ ಬರಲಾಗಲಿಲ್ಲ. ಟಿಪ್ಪು ಈ ಯುದ್ಧದಲ್ಲಿ ಸೋತು ತನ್ನ ಮಕ್ಕಳನ್ನು ಆಂಗ್ಲರಿಗೆ ಒತ್ತೆ ಇಟ್ಟನು. ನಂತರ 1799ರಲ್ಲಿ ಆಂಗ್ಲರೊಂದಿಗೆ ನಡೆದ ನಿರ್ಣಾಯಕ ಮೈಸೂರು

ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಹತನಾಗುತ್ತಾನೆ. ಟಿಪ್ಪುವಿನ ಮರಣದ ನಂತರ ಆಂಗ್ಲರು ಇಡೀ ದಕ್ಷಿಣ ಭಾರತವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ಮೂಲಕ ಅವರು ಅಖಂಡ ಭಾರತದ ಸಾರ್ವಭೌಮರಾದರು.

ಕಿತ್ತೂರು ಸಂಸ್ಥಾನದ ಮೂಲ ಪರುಷರು : ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಸಹೋದರರು ತಮ್ಮ ತಂದೆಯಾದ ಶಿವರುದ್ರಪ್ಪ ಶೆಟ್ಟಿಯೊಂದಿಗೆ ಜೀವನ ನಿರ್ವಹಣೆಗಾಗಿ ಬಿಜಾಪುರಕ್ಕೆ ಬರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಇವರು ಬಿಜಾಪುರಕ್ಕೆ ಬಂದಾಗ ಇಬ್ರಾಹಿಂ ಶಾಹ ಸುಲ್ತಾನಾಗಿರುತ್ತಾನೆ. ಆಗ ಹಿರೇ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ ಇಬ್ರಾಹಿಂ ಶಾಹನಿಂದ ಪರವಾನಿಗೆ ಪಡೆದು ಚಿನ್ನ-ಬೆಳ್ಳಿ ವ್ಯಾಪಾರವನ್ನು ಆರಂಭಿಸುತ್ತಾರೆ.

ಬಿಜಾಪುರದ ಆದಿಲ್ ಶಾಹಿಗಳಲ್ಲಿ ಇಬ್ರಾಹಿಂ ಶಾಹನ ಕಾಲ ಸುವರ್ಣಯುಗ, ಅವನು ಅನ್ಯ ಮತ ಸಹಿಷ್ಣುವಾಗಿದ್ದ. ಹಾಗೆಯೇ, ಹಿಂದೂ-ಮುಸ್ಲಿಂ ಸಾಮರಸ್ಯದ ಸಂಕೇತದಂತಿದ್ದ. ದೇವರುಗಳನ್ನು ಗೌರವಿಸುತ್ತಿದ್ದ. ಧರ್ಮಭೇದವನ್ನು ಮೀರಿದಂತಹ ಸಂಗೀತದ ಆದರ್ಶದ ಮೂಲಕ ಸೂಚಕವಾದ ‘ನವರಸಪುರ’ವನ್ನು ನಿರ್ಮಾಣ ಮಾಡಿ, ಹಿಂದೂಗಳಿಂದಲೇ ‘ಜಗದ್ಗುರು’ ಎನಿಸಿಕೊಂಡ ಸುಲ್ತಾನಾಗಿದ್ದಾನೆ.

ಮಲ್ಲಶೆಟ್ಟಿ ಸಹೋದರರು ಕ್ರಮೇಣವಾಗಿ ಸೈನ್ಯಕ್ಕೆ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಗುತ್ತಿಗೆಯನ್ನು ಸುಲ್ತಾನನಿಂದ ಪಡೆದುಕೊಳ್ಳುತ್ತಾರೆ. ಕೆಲವು ಇತಿಹಾಸಕಾರರ ಸಹೋದರರಿಬ್ಬರೂ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರಕಾರ, ಸಹೋದರರ ಸಾಹಸವನ್ನು ಮೆಚ್ಚಿದ ಸುಲ್ತಾನ ಅವರಿಗೆ ಕೆಲವು ಪ್ರದೇಶಗಳನ್ನು ಉಂಬಳಿಯಾಗಿ ನೀಡುತ್ತಾನೆ. ಮಲ್ಲಶೆಟ್ಟಿ ಸಹೋದರರು ‘ಸಂಪಗಾವ’ವನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ಪ್ರಾರ೦ಭಿಸುತ್ತಾರೆ.

ವ್ಯಾಪಾರಸ್ಥರಾಗಿದ್ದ ಸಹೋದರರು ಒಂದು ಸಂಸ್ಥಾನದ ‘ಮೂಲ ಸ್ಥಾಪಕ’ರಾಗುವ ಮಟ್ಟಕ್ಕೆ ಬೆಳೆದದ್ದು ನಿಜಕ್ಕೂ ಅಪರೂಪದ ಘಟನೆಯಾಗಿದೆ.

ಕಿತ್ತೂರನ್ನು ಆಳಿದ ದೊರೆಗಳು

1)ಹಿರೇ ಮಲ್ಲಶೆಟ್ಟಿ – 1585-1591

2)ಹಿರೇ ನಾಗನಗೌಡ – 1591-1643

3)ಚಿಕ್ಕ ನಾಗನಗೌಡ – 1643-1656

4)ಚೆನ್ನಪ್ಪ ಬಿಚ್ಚಗತ್ತಿ – 1656-1660

5)ಅಲ್ಲಪ್ಪಗೌಡ ಸರದೇಸಾಯಿ – 1660-1691

6)ಮುದಿಮಲ್ಲಪ್ಪ ದೇಸಾಯಿ – ಕ್ರಿ.ಶ.1696–1707

7) ಶಿವನಗೌಡ ಸರದೇಸಾಯಿ – 1707-1734

8) ಮಾಲವ ರುದ್ರಗೌಡ ದೇಸಾಯಿ ಅಥವಾ ಫಕೀರ ರುದ್ರಸರ್ಜ – 1734-1749

10)ವೀರಪ್ಪಗೌಡ ದೇಸಾಯಿ – 1749-1782

11) ಮಲ್ಲಸರ್ಜ – 1782-1816

12) ಶಿವಲಿಂಗ ರುದ್ರಸರ್ಜ – 1816-1824

13) .ಚೆನ್ನಮ್ಮ ರಾಣಿ – ಕ್ರಿ.ಶ.1824-ಕೆಲವು (ದತ್ತು ಮಗನ ಹೆಸರಲ್ಲಿ) ತಿಂಗಳು

ಕಿತ್ತೂರಿನ ನಿರ್ಮಾಣ

ಕಿತ್ತೂರಿನ ದೊರೆಗಳು ಸುಮಾರು ಎಂಬತ್ತು ವರ್ಷಗಳವರೆಗೆ ಸರದೇಸಾಯಿ ‘ಸಂಪಗಾಂವ’ನ್ನು ತಮ್ಮ ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಆದರೆ, ಕಿತ್ತೂರಿನ ಐದನೇ ದೊರೆ ಅಲ್ಲಪ್ಪನಗೌಡ ಕಾಲಘಟ್ಟದಲ್ಲಿ ರಾಜಧಾನಿಯನ್ನು ಕಿತ್ತೂರಿಗೆ ಬದಲಾಯಿಸಿ ಕೊಳ್ಳಲಾಯಿತು. ರಾಜಧಾನಿಯನ್ನು ಬದಲಾಯಿಸಿ ಕೊಂಡಿದ್ದಕ್ಕೆ ಒಂದು ಕಥೆ ಇದೆ.

ಚೆನ್ನಮ್ಮ

ದೇಸಾಯಿ ಧೂಳಪ್ಪ ಗೌಡ ‘ಕಾಕತಿ’ ಸಂಸ್ಥಾನದ ಜಹಗೀರುದಾರ, ಈತ ತನ್ನ ಪರಾಕ್ರಮ, ಶೌರ್ಯಗಳಿಗೆ ಪ್ರಸಿದ್ಧನಾಗಿದ್ದ. ಕಿತ್ತೂರು ಸಂಸ್ಥಾನಕ್ಕೆ ಧೂಳಪ್ಪ ಗೌಡ ಸದಾ ನಿಷ್ಯನಾಗಿದ್ದ, ಪದ್ಮಾವತಿ ಧೂಳಪ್ಪ ಗೌಡನ ಪತ್ನಿ, ಈ ದಂಪತಿಗಳಿಗೆ ವಿವಾಹವಾದ ಅನೇಕ ವರ್ಷಗಳವರೆಗೆ ಮಕ್ಕಳಾಗಿರಲಿಲ್ಲ. ಹಾಗಾಗಿ, ಸಂತಾನ ಪ್ರಾಪ್ತಿಗಾಗಿ ಅವರು ದೇವರುಗಳಲ್ಲಿ ಮಾಡಿಕೊಳ್ಳದ ಹರಕೆ ಇಲ್ಲ, ಮಾಡದ ಮತ- ಮುನಸ್ಕಾರಗಳಿಲ್ಲ ಎನ್ನುವಷ್ಟರ ಮಟ್ಟಿಗೆ ದೇವರ ಮೊರೆ ಹೋಗಿದ್ದರು.

ಕೊನೆಗೂ ದೇವರ ಕೃಪೆಯಿಂದ ಧೂಳಪ್ಪ ಗೌಡ ಹಾಗು ಪದ್ಮಾವತಿ ದಂಪತಿಗಳಿಗೆ 1778ನೇ ವರ್ಷದಲ್ಲಿ ಒಂದು ಹೆಣ್ಣು ಮಗು ಜನಿಸುತ್ತದೆ. ಅಪೂರ್ವ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಈ ಮಗುವಿನ ಜಾತಕ ಫಲಗಳನ್ನು ನೋಡಿದ ಅರಮನೆಯ ಜಂಗಮ ಮೂರ್ತಿಗಳು, ಮಗು ವೀರಾಂಗನೆಯಾಗಿ, ನಾಡಿನ ರಾಣಿಯಾಗಿ, ವಿಶ್ವವಿಖ್ಯಾತಳಾಗುತ್ತಾಳೆ” ಎಂದು ಭವಿಷ್ಯ ನುಡಿದರು, ಈ ಮಗುವಿಗೆ ‘ಚೆನ್ನಮ್ಮ’ ಎಂದು ನಾಮಕರಣ ಮಾಡಲಾಯಿತು.

ಧೂಳಪ್ಪಗೌಡ ದಂಪತಿಗಳ ಏಕೈಕ ಪುತ್ರಿ ‘ಚೆನ್ನಮ್ಮ’ ಕಾಕತಿ ಎನ್ನುವ ಗ್ರಾಮದಲ್ಲಿ ಜನಿಸುತ್ತಾಳೆ. ಈ ಕಾಕತಿ ಗ್ರಾಮ ಬೆಳಗಾವಿಯಿಂದ ಐದು ಮೈಲು ದೂರದಲ್ಲಿದೆ. ಎರಡು ಬೆಟ್ಟಗಳ ಮಧ್ಯದಲ್ಲಿರುವ ಕಾಕತಿ ಕಣ್ಮನ ಸೆಳೆಯುವ ನಿಸರ್ಗ ಸೌಂದರ್ಯವನ್ನು ಹೊಂದಿತ್ತು.

ಆಕೆ ಅಪಾರ ದೈವಭಕ್ತಿ, ಸೂಕ್ಷ್ಮಮತಿ, ಸಂಗೀತ ಪ್ರೇಮಿ ಆಗಿದ್ದಳು. ಧೂಳಪ್ಪ ಗೌಡ ಚೆನ್ನಮ್ಮನಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ಕೊಡಿಸಿದ್ದರು. ಚೆನ್ನಮ್ಮನಿಗೆ ಸೂಕ್ತ ಹಾಗು ಶಾಸ್ತ್ರಬದ್ಧ ಶಿಕ್ಷಣ ಪ್ರಾಪ್ತಿ ಆಗುವಂತೆ ಮಾಡಲು ವೇದ, ಪುರಾಣಗಳಲ್ಲಿ ಪಾರಂಗತರಾದ ಇಬ್ಬರು ವಿದ್ವಾಂಸರನ್ನು ನೇಮಿಸಿದ್ದರು. ಶಾಸ್ತ್ರೀಯ ಶಿಕ್ಷಣದೊಂದಿಗೆ ಕುದುರೆ ಸವಾರಿ, ಬಿಲ್ಲು ವಿದ್ಯೆ, ಮುಂತಾದ ಯುದ್ಧಾಭ್ಯಾಸಗಳನ್ನು ಚೆನ್ನಮ್ಮ ಪಡೆದಿದ್ದರು.

ಕನ್ನಡ ಮತ್ತು ಮರಾಠಿ ಭಾಷೆಗಳ ಮೇಲೆ ಚೆನ್ನಮ್ಮ ಹಿಡಿತ ಸಾಧಿಸಿದ್ದಳು. ಲಿಂಗಪೂಜೆಯಲ್ಲಿ ಚೆನ್ನಮ್ಮನಿಗೆ ವಿಶೇಷ ಆಸಕ್ತಿ. ತಂದೆಯ ಸಹವರ್ತಿಯಾಗಿ ಕುದುರೆಯ ಮೇಲೆ ಬೇಟೆಗೆ ತೆರಳುವುದು, ನದಿಯಲ್ಲಿ ಈಜುವುದು ಅವಳಿಗೆ ಅತ್ಯಂತ ಪ್ರಿಯ ಹವ್ಯಾಸವಾಗಿದ್ದವು.

ದೀನ ದಲಿತರು, ಕಾಯಕ ಜೀವಿಗಳ ಬಗೆಗಿನ ಪ್ರೀತಿ-ಕರುಣೆ, ಬಂಧು- ಬಳಗದವರೊಂದಿಗಿನ ಆತ್ಮೀಯತೆ, ಗುರು-ಹಿರಿಯರ ಮೇಲಿನ ಪೂಜ್ಯ ಭಾವನೆ ಮುಂತಾದ ಶ್ರೇಷ್ಠ ಗುಣಗಳನ್ನು ಚೆನ್ನಮ್ಮ ಹೊಂದಿದ್ದಳು. ಅವಳ ಖ್ಯಾತಿ ಕೇವಲ ಹದಿನಾರರ ಪ್ರಾಯದಲ್ಲೇ ಕಾಕತಿ ಹಾಗು ನೆರೆಹೊರೆಯ ಪುರ-ಪಟ್ಟಣಗಳನ್ನೂ ದಾಟಿ ಕಿತ್ತೂರನ್ನು ತಲುಪಿತ್ತು. ಹುಲಿ ಬೇಟೆ :

ಒಮ್ಮೆ ಚೆನ್ನಮ್ಮ ತನ್ನ ಗೆಳತಿಯರೊಂದಿಗೆ ಇರುವಾಗ, ದನಗಳನ್ನು ಕಾಯುವ ಒಬ್ಬ ವ್ಯಕ್ತಿ ಓಡಿಬಂದು ಕಾಡಿನಲ್ಲಿ ಹುಲಿಯಿದೆ ಎಂದು ಹೇಳುತ್ತಾನೆ, ಆ ಹುಲಿ ಅದಾಗಲೇ ಹಲವು ಜಾನುವಾರಗಳನ್ನು ಭಕ್ಷಿಸಿ ಜನರು ಕಂಗಾಲಾಗುವಂತೆ ಮಾಡಿತ್ತು. ಚೆನ್ನಮ್ಮ ಒಂದು ಕ್ಷಣವೂ ಯೋಚಿಸದೆ ಪರುಷ ವೇಷತೊಟ್ಟು, ಬಿಲ್ಲು ಬಾಣದೊಂದಿಗೆ ಕುದುರೆ ಏರಿ ಅರಣ್ಯ ಪ್ರವೇಶಿಸುತ್ತಾಳೆ.

ಚೆನ್ನಮ್ಮಳ ಅಂತಿಮ ದಿನಗಳು

ಚೆನ್ನಮ್ಮ ಬೈಲಹೊಂಗಲದ ಸೆರೆಮನೆಯಲ್ಲಿ ಶಿವಪೂಜೆ, ಪ್ರಾರ್ಥನೆಗಳಲ್ಲಿ ಕಾಲ ಕಳೆಯುತ್ತಿದ್ದಳು. ಸಂಗೊಳ್ಳಿ ರಾಯಣ್ಣ, ಬಾಲಣ್ಣ ಮಾರುವೇಷಗಳಲ್ಲಿ ಚೆನ್ನಮ್ಮನನ್ನು ಬೇಟಿಯಾಗಿ, ಕಿತ್ತೂರು ಸಂಸ್ಥಾನವನ್ನು ಪುನರ್ ಸ್ಥಾಪಿಸುವ ತಮ್ಮ ಹೋರಾಟಗಳ ಬಗ್ಗೆ ಹೇಳುತ್ತಿದ್ದರು.

ಪರಾಕ್ರಮಿ ಸಂಗೊಳ್ಳಿ ರಾಯಣ್ಣ ಸಂಪಗಾವಿ, ಖಾನಾಪುರ ಮತ್ತು ನಂದಗಡವನ್ನು ತನ್ನ ವಶಕ್ಕೆ ಪಡೆಯುತ್ತಾನೆ. ನಂತರ, ಹಳಿಯಾಳ ಕೋಟೆಯನ್ನೂ ವಶಕ್ಕೆ ಪಡೆದು, ಕುಸುಗಲ್ಲಿನ ಮೇಲೆ ದಾಳಿ ಮಾಡಿ ಚಿಕ್ಕ ದೇಸಾಯಿ ಮತ್ತು ವೀರಮ್ಮ ರಾಣಿಯನ್ನು ಬಿಡುಗಡೆಗೊಳಿಸಬೇಕು ಮತ್ತು ಬೈಲಹೊಂಗಲ ಕೋಟೆಗೆ ಮುತ್ತಿಗೆ ಹಾಕಿ ರಾಣಿ ಚೆನ್ನಮ್ಮನನ್ನು ಬಿಡುಗಡೆಗೊಳಿಸಬೇಕೆಂಬುದು ಇವನ ಮಹತ್ವಾಕಾಂಕ್ಷೆಯಾಗಿತ್ತು.

ಆದರೆ, ಸಂಪಗಾವಿಯ ಮಾಮಲೆದಾರನ ಕುತಂತ್ರದಿಂದ ಸಂಗೊಳ್ಳಿ ರಾಯಣ್ಣನನ್ನು ಆಂಗ್ಲರು ಬಂಧಿಸುತ್ತಾರೆ. ನಂದಗಡದಲ್ಲಿ ರಾಯಣ್ಣನನ್ನು ಗಲ್ಲಿಗೇರಿಸಲಾಗುತ್ತದೆ. ಈ ಸುದ್ಧಿ ಚೆನ್ನಮ್ಮನಿಗೆ ತಿಳಿದಾಗ ಮಮ್ಮಲ ಮರುಗುತ್ತಾಳೆ. ಇಷ್ಟೊಂದು ಆಶಾಕಿರಣವೇ ಕಣ್ಮರೆಯಾಗಿದ್ದು ಚೆನ್ನಮ್ಮಳಿಗೆ ಅಪಾರ ಯಾತನೆಯನ್ನು ಉಂಟುಮಾಡುತ್ತದೆ. ನಂತರ, 1829ರ ಫೆಬ್ರವರಿ 2ರಂದು ರಾಣಿ ಚೆನ್ನಮ್ಮ ಲಿಂಗೈಕ್ಯಳಾಗುತ್ತಾಳೆ.

Here you learn about Kittur rani chennamma information in kannada and hope you enjoyed the article.

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading