Contents
Kannada Ogatugalu with Answer
Here you will learn Kannada ogatugalu ,Kannada ogatugalu with answers, riddle n Kannada and also get 300 plus questions. Download Kannada ogatugalu answers pdf.
Kannada Ogatu
1. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ.
2. ಅಂಕು ಡೊಂಕಿನ ಬಾವಿ ಶಂಕ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರೂ ಇಲ್ಲ.
4. ಅಜ್ಜನ ದುಡ್ಡು ಎಣಿಸಲಾರೆ, ಅಮ್ಮನ ಸೀರೆ ಮಡಿಚಲಾರೆ. ಗಿಡ ಗಿಡಕ್ಕೆ ಮೊಸರು ಉಗ್ಗಿದೆ.
5. ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿರುವನು.
6. ಬಂಗಾರದ ಗುಬ್ಬಿ ಬಾಲದಿಂದ ನೀರು ಕುಡಿಯುತ್ತೆ. ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೇಳಗೆ ನೀರು.
7. ಗುಡ್ಡದ ಹಿಂದೆ ಗು೦ಡಕಲ್ಲು ಇಟ್ಟಿದೆ. ನಡು ಸಣ್ಣ, ನಾಗರ ಬಣ್ಣ ಹಿಡಿಯಲಿಕ್ಕೆ ಹೋದರೆ ಕಡಿಲಿಕ್ಕೆ ಬರುತ್ತೆ.
10. ಎರಡು ಮನೆ ಒ೦ದೇ ಕ೦ಬ.
11. ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ.
12. ಚೋಟುದ್ದ ಹುಡುಗಿ, ಮಾರುದ್ದ ಜಡೆ.
13. ನೀರಿದ್ದರೂ ನದಿಯಲ್ಲ, ಜುಟ್ಟಿದ್ದರೂ ಭಟ್ಟನಲ್ಲ, ಮೂರು ಕಣ್ಣಿದ್ದರೂ ಮುಕ್ಕಣ್ಣನಲ್ಲ.
14. ಸುತ್ತಲೂ ಸುಣ್ಣದ ಗೋಡೆ, ಯಾವ ಕಡೆನೂ ಬಾಗಿಲಿಲ್ಲ.
15. ಆರು ಗೆರೆಯಿದ್ದರೂ ಹೀರೇಕಾಯಲ್ಲ, ಹುಳಿಯಿದ್ದರೂ ಲಿಂಬೆಕಾಯಲ್ಲ ಹಸಿರಿದ್ದರೂ ನಿಂಬೆಕಾಯಲ್ಲ.
16. ಮುಳ್ಳಿದ್ದರೂ ಮರವಲ್ಲ, ಅಂಕೆಯಿದ್ದರೂ ಪುಸ್ತಕವಲ್ಲ, ಚಕ್ರವಿದ್ದರೂ ಗಾಡಿಯಲ್ಲ, ಗಂಟೆಯಿದ್ದರೂ ಗುಡಿಯಲ್ಲ
17. ಕಂಠದಲ್ಲಿ ಕಪ್ಪಿದ್ದರೂ ಕಲಕಂಠನಲ್ಲ, ಶಿರದೊಳಗೆ ಜುಟ್ಟಿದ್ದರೂ ವಿಪ್ರ ತಾನಲ್ಲ ಮೈಯೊಳು ಕಣ್ಣಿದ್ದರೂ ದೇವೇಂದ್ರನಲ್ಲ.
18. ನೆತ್ತಿಯಲಿ ತಿಂದು, ಪಕ್ಕದಲ್ಲಿ ಸುರಿಸುವುದು, ಸುದತಿಯರ ಕರದಲ್ಲಿ ತಿರುಗುವುದು, ಒತ್ತಿದರೆ ಅದರೊಳಗೆ ದವಸ, ಬಿತ್ತರಿಸಿ ಹೇಳಿ ನಿಮ್ಮ ಮನೆಯಲಿಹುದು.
18. ಅಲ್ಲಿ ಬುಳು ಬುಳು, ಇಲ್ಲಿ ಬುಳುಬುಳು, ಕಲ್ಯಾಣದಲ್ಲಿ ಬುಳುಬುಳು.
20. ಸೂಜಿಗಿಂತ ಸಣ್ಣ, ಕಾಗೆಗಿಂತ ಕಪ್ಪು.
21. ಮುಂದೆ ಬಾಯೊಳಗಿಕ್ಕು, ಚಂಡಿಗೆಯ ಹೊರಗಿಕ್ಕು, ಹೆಂಡತಿಯ ಬರುತಿಕ್ಕು ಕಡೆಯೊಂದು ಉಡೆಯಕ್ಕು ಸರ್ವಜ್ಞ.
22. ಮಾತಾಡು ಮಾತಾಡು ಮಲ್ಲಿಗೆ, ಸೇವಂತಿಗೆ ಒಬ್ಬರನ್ನು ಕಟ್ಟಿಗೆ, ಒಬ್ಬರನ್ನು ಬಿಟ್ಟಿದೆ ಒಬ್ಬರನ್ನು ಕರಕೊಂಡು ಬರುತ್ತಿದೆ ಮಲ್ಲಿಗೆ, ಯಾರನ್ನು ಕಟ್ಟಿದೆ, ಯಾರನ್ನು ಬಿಟ್ಟಿದೆ ಯಾರನ್ನು ಕರಕೊಂಡು ಬರುತ್ತಿದೆ ಮಲ್ಲಿಗೆ.
23. ದುಂಡಾಗಿರುವ ನನಗೆ ಕೈ ಇಲ್ಲ, ಕಾಲಿಲ್ಲ ಬಾಯಿ ಮಾತ್ರ ಇದೆ. ಸುಟ್ಟರೆ ಸಾಯಲಾರೆ ಬಡಿದರೆ ಬದುಕಲಾರೆ ನಾನು ಯಾರು?
24. ಕಾಲಿದ್ದರೂ ನಡೆಯದು, ಮೂಲೆಯಲಿ ಕಟ್ಟಿಹುದು, ಬಾಲಕನ ಹೊರುವುದು. ಯಾವುದು?
25. ಕರಿ ಹೊಲದ ಮಧ್ಯದಲಿ ಬಿಳಿದಾರಿ.
26. ಅಕ್ಕ ಅಕ್ಕ ಬಾವಿ ನೋಡ, ಬಾವಿಯೊಳಗೆ ನೀರು ನೋಡ, ನೀರಿನೊಳಗೆ ಬಳ್ಳಿ ನೋಡ, ಬಳ್ಳಿಗೊಂದು ಹೂವ ನೋಡ. ನಾನು ಯಾರು ?
27. ತವರು ಮನೆಗೆ ಹೋಗುವಾಗ ಓಡೋಡಿ ಹೋಗುತ್ತಾಳೆ, ಗಂಡನ ಮನೆಗೆ ಹೋಗುವಾಗ ತಡೆತಡೆದು ಬರುತ್ತಾಳೆ.
28. ಮನೆ, ಮನೆ ಮನಿಗಾರ! ಮನಿ ಶೃಂಗಾರ ನೋಡಲು ಮನೋಹರ, ಮುಟ್ಟಿದರೆ ಹರೋಹರ.
29. ಬಾನ ಸೋಮಯ್ಯನ ಮಗಳು ಮಂಗಳ ಪೂಜೆಗೆ ಹೋಗಿ ಬುದ್ಧಿವಂತನ ಕೈಗೆ ಸಿಕ್ಕು ಗುರು-ಗುರು ಅನ್ನುತ್ತ ಸುಖ ಪಟ್ಟು ಸನ್ಯಾಸಿನಿ ಯಾದಳು.
30. ಮೂರು ಜನ ಬಾವಿಗೆ ಸ್ನಾನಕ್ಕೆ ಹೋಗುತ್ತಾರೆ, ಒಬ್ಬಳು ತೇಲುತ್ತಾಳೆ, ಒಬ್ಬಳು ಕರಗುತ್ತಾಳೆ, ಒಬ್ಬಳು ಮುಳುಗುತ್ತಾಳೆ.
31. ಹಸಿರು ಕೋಟೆಯೊಳಗೊಂದು ಬಿಳಿಯ ಕೋಟೆ, ಬಿಳಿಯ ಕೋಟೆಯೊಳಗೊಂದು ಕೆಂಪು ಕೋಟೆ, ಕೆಂಪುಕೋಟೆಯೊಳಗೆ ಕರಿಯ ಸೈನಿಕರು.
32. ಹಾದಿಯಲ್ಲಿ ಹೋಗುವವನನ್ನು ಕರೆಯುವದು, ಮು೦ದೆ ಕುಳಿತುಕೊಂಡು ಅಳುವುದು.
Kannada Ogatugalu with Answers
33. ತಾಯಿಗೆ ಒಂದು ತಂದೆಗೆ ಮೂರು.
34. ನಾನು ಹುಟ್ಟುವುದು ಚಳಿಯಲ್ಲಿ, ಸಾಯಿವ ಬಿಸಿಲಲ್ಲಿ, ಕಲ್ಲಾಗಿ ಕೂರಲು ಬಲ್ಲೆ ನಾನು ಯಾರು ಹೇಳ ಬಲ್ಲಿರ?
35. ನಾಲ್ಕು ಕಾಲುಗಳಿದ್ದರೂ ಪ್ರಾಣಿ ನಾನಲ್ಲ. ಬೆನ್ನು ತೋಳುಗಳುಂಟು ಮನುಷ್ಯನಾನಲ್ಲ. ಹಾಗಾದರೆ ನಾನು ಯಾರು ಹೇಳಬಲ್ಲಿರಾ?
36. -ಅರೆಯುವ ಕಲ್ಲು, ಕಲ್ಲಿನ ಮೇಲೆ ಕೊರಡು, ಕೊರಡನ ಮೈಮೇಲೆರಡು ಕೈ ಸುಗಂಧ ಸೂಸಿ ಬರುವುದು.
37. ಬಾಳೆಹಣ್ಣಿನೊಳಗೆ ಭಾರೀ ಗೋಲಿಗಳು,
38. ನಾಲಿಗೆ ಇದ್ದರೂ ಮಾತನಾಡಲಾರೆ, ಮುಳ್ಳಿದ್ದರೂ ಗಿಡವಲ್ಲ. ಹಾಗಾದರೆ ನಾನು ಯಾರು ?
39. ನನ್ನನ್ನು ಅಂಗಡಿಯಲ್ಲಿಟ್ಟು ಮಾರುವುದಿಲ್ಲ, ತಕ್ಕಡಿಯಲ್ಲಿಟ್ಟು ತೂಗುವುದಿಲ್ಲ, ಹಬ್ಬಕ್ಕೆ ನಾನು ಬೇಕೇಬೇಕು. ನಾನಾರು ಹೇಳ ಬಲ್ಲಿರಾ?
40. ಊರೆಲ್ಲಾ ಸುತ್ತಿ ಬಂದು ಬಾಗಿಲಲ್ಲಿ ಕೂಡುತ್ತೇನೆ. ನಾನು ಯಾರು? 41. ಎರಡು ಗೂಡು, ಗೂಡಿನಲ್ಲಿ ಎರಡು ಪಕ್ಷಿ ಕುಳಿತುಕೊಂಡು ಎದುರಿಗಿದ್ದುದ್ದನ್ನೆಲ್ಲಾ ನೋಡಬಲ್ಲವು.
42. ಅಪ್ಪ ಅಂದ್ರೆ ಕೂಡ್ತದೆ. ಅಣ್ಣ ಅಂದ್ರೆ ಕೂಡುದಿಲ್ಲ.
43. ತಾಯಿ ಚೋಟುದ್ದ ಇದ್ದರೆ ಮಗಳು ಮಾರುದ್ದ ಇರುವಳು.
44, ‘ಆಳುದ್ದ ಮರ ನಾನು ಮಾರುದ್ದ ಎಲೆ ಉಂಟು ಗೇಣುದ್ದ ಕಾಯುಂಟು ನಾನು ಯಾರು?
45. ಕೆರೆಯ ತುಂಬೆಲ್ಲ ನರಿಯ ಹೆಜ್ಜೆಗಳು.
46. ಕುಯ್ಯುತ್ತಾರೆ, ಕುಯ್ದ ನಂತರ ಚೆಲ್ಲುತ್ತಾರೆ ಆದರೆ ತಿನ್ನುವುದಿಲ್ಲ.
47. ಬಟ್ಟಲು ತುಂಬ ಹುರುಳಿ ಕಾಳು, ಯಾರಪ್ಪನೂ ತಿನ್ನಲಾರ.
48. ಬಿಸಿಲಿಗೂ, ಮಳೆಗೂ ಅರಳುವೆನು, ಎಲ್ಲರ ತಲೆಯ ಮೆರೆಯುವೆನು ಹೂವಲ್ಲ ಮತ್ತೆ ನಾನಾರು ಹೇಳಿ ? ಮೇಲೆ
49, ಬೆಳ್ಳಗಿರುವೆ ಆದರೆ ಸುಣ್ಣವಲ್ಲ, ಸಿಹಿಯಾಗಿರುವೆ ಆದರೆ ಜೇನಲ್ಲ, ನಾಲ್ಕು ನಲ್ಲಿ ಯಿಂದ ಬರುವೆ ಆದರೆ ನೀರಲ್ಲ ಹಾಗಾದರೆ ನಾನು ಯಾರು ?
50. ಹಗ್ಗ ಹಾಸಿದೆ, ಕರು ಮಲಗಿದೆ.
51. ಮೂರು ವಸ್ತು ಮೂರು ಬಣ್ಣ, ಕುಡಿಕೆಯಲ್ಲಿ ಹಾಕಿದರೆ ಒಂದ ಬಣ್ಣ.
52. ಮುಂದೆ ಸಾಹುಕಾರ, ಹಿಂದೆ ಸಾವಿರ ಜನರು,
53. ಹಲ್ಲಿಲ್ಲದ ಹಕ್ಕಿ, ಮೊಲೆಯಿಲ್ಲದ ತಾಯಿ, ನಾನು ಯಾರು ?
54. ಹಸಿರು ಕೋಟೆ ಅದರೊಳಗೆ ಬಿಳಿಯ ರಾಜ, ಕದತೆರೆದರೆ ಹೊಸಾ ಬರುತ್ತಾರೆ ಕರಿಯ ಸೈನಿಕರು,
55. ಮನೆಯ ಮಾಡಿದನೊಬ್ಬ, ಹೆಣೆದು ಕಟ್ಟಿದನೊಬ್ಬ, ಕುಣಿಕುಣಿದಾಡಿ ಸತ್ತವನೊಬ್ಬ, ಸಂತೆಯಲಿ ಹೆಣವ ಮಾರಿದರು ಸರ್ವಜ್ಞ.
56. ಹತ್ತು ಸಾವಿರ ಕಣ್ಣ, ನೆಲಾದರು ಬಾಲ, ಹುತ್ತಿನ ಹುಳವ ಹಿಡಿಯುವದು ಕವಿಜನರ ಇದನೇಳಿ ಮತ್ತೆ ಸರ್ವಜ್ಞ.
57. ಬಂದಿಹೆನು ನಾನೊಮ್ಮೆ, ಬಂದು ಹೋಗುವೆನೊಮ್ಮೆ. ಬಂದೊಮ್ಮೆ ಹೋಗಿಬಾರೆ ನಾರಿ ಕವಿಗಳಲಿ ವಂದ್ಯರಿದ ಪೇಳಿ ಸರ್ವಜ್ಞ.
58. ನಡುಗಪ್ಪ, ಕಡೆ ಬಿಳಿದು, ತೊಡುವ ವಸ್ತ್ರವಲ್ಲ ಬಿಡದೆ ನೀರುಂಚು ಮಡುವಲ್ಲ ಕವಿಗಳೆ ಬೆಡಗು ಪೇಳುವರು ಸರ್ವಜ್ಞ.
59. ಮುಂಜಾನೆ ನಾಲ್ಕು ಕಾಲಿಂದ ನಡೆಯುವದು, ಮದ್ಯಾಹ್ನ ಎರಡು ಕಾಲಿ೦ದ ನಡೆಯುವದು, ಸ೦ಜೆ ಮೂರುಕಾಲಿಂದ ನಡೆಯುವ ಪ್ರಾಣಿ ಯಾವುದು ?
60. ಪೇಟೆಯಿಂದ ದುಡ್ಡು ಕೊಟ್ಟು ತರುವುದು, ಹೆಚ್ಚುತ್ತಾ ಅಳುವುದು.
61. ಹಚ್ಚ ಹಸಿರಿನ ತೋಟದಲ್ಲಿ ಬೆಳ್ಳಿಯ ಗೂಟ.
62. ಕರಿ ಹೊಲದ ನಡುವೆ ಸೂಜಿ ಬಿದ್ದಿದೆ.
63. ಹಗ್ಗ ಹಾಸಿದೆ ಗೂಳಿ ಮಲಗಿದೆ.
64. ಹಸಿರು ಕೊಡದ ತು೦ಬ ಸಿಹಿ ನೀರು.
65. ಬುದ್ಧಿಯನ್ನು ಚುರುಕುಗೊಳಿಸುವ ಒಗಟುಗಳು ನಾನು ತ೦ದೆನು ನಿನ್ನ, ನೀನೇಕೆ ನೋಡುವೆ ನನ್ನ, ನಾನೇನು ಮಾಡುವೆ ನಿನ್ನ ?
66. ಮಾತು ಕೇಳಿಸಿದರೂ ಮುಖ ಕಾಣದು, ಕಿವಿಗೆ ಹತ್ತಿರವಾದರೂ ಬಾಯಿಗೆ ದೂರ ನಾನಾರು ಹೇಳಿ?
67. ನೋಡುವವರು ಇಬ್ಬರು, ಮಾಡುವವರು ಐವರು ತಿನ್ನುವವರು ಮುವ್ವತ್ತೆರ ರಡು ಮಂದಿ.
72. ಅಕ್ಕ ಅಕ್ಕ ಗಿಡ ನೋಡ, ಗಿಡತುಂಬ ಕಾಯಿನೋಡ, ತಿಂದರೆ ಬಾಯಿ ವಾಸನೆ ನೋಡ, ನಾನು ಯಾರು ನೀವು ಹೇಳ ಬಲ್ಲಿರಾ?
73. ಗಿಡ- ಗಿಡಕ್ಕೆ ಗುಂಡಕಲ್ಲು ಕಟ್ಟಿದೆ.
74. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಇದನ್ನು ಒಡೆಯದಿದ್ದರೆ ನಿಮ್ಮ ಮನೆ ಕುಲದೇವರ ಆಣೆ.
75. ಒಂದು ಹೋಯಿತು, ಒಂದು ಬಂದಿತು, ಒಂದು ಕಳೆಯಿತು ಒಂದು ಸಿಕ್ಕಿತು.
76. ಮನೆ ಮೇಲೆ ಮನೆ, ಮನೆ ಮೇಲೆ ಕಂಬ, ಕ೦ಬದ ಮೇಲೆ ಎರಡು ಗಿಳಿ, ಗಿಳಿ ಮೇಲೆ ಗುಡ್ಡ, ಗುಡ್ಡದ ಮೇಲೆ ಹುಲ್ಲು, ಹುಲ್ಲಿನ ಮೇಲೆ ಕುರಿ ಓಡುತ್ತವೆ.
77. ಕತ್ರನ್ನಾಕಿ, ಕಾಲುಂಗುರದಾಕಿ, ಸರನೆ ಹೋಗಿ, ಬರನೆ ಬಾಳೆ.
78. ಗಿಡ್ಡ ಹುಡುಗ, ಗಿದ್ದ ಅಕ್ಕಿ ಹೊತ್ತಾನೆ. 79. ಗಿಡ್ಡ ಹುಡುಗ ದೊಡ್ಡ ಹೊಡೀತಾನ.
80. ಕತ್ತಲ ಮನೆಯಲ್ಲಿ ಕರಿಯವ್ವ ಕೂತಿದ್ದಾಳೆ.
81. ಅಚ್ಚಂಬಟ್ಟಣ ಬಾರಾಣದಾಗ ಅಕ್ಕಮ್ಮ ಜಡಿ ಹಾಕಿದ್ದಾಳೆ.
82. ಅಚ್ಚಂಬಟ್ಟಣ ಬಾರಾಣದಾಗ ಚಿಟಗುಬ್ಬಿ ತಲೆ ಒಡೆದಿದೆ.
83. ಅನಲಾಲ, ಲಾಲ, ಅನಗೋಲ ಗೋಲ, ಆನ ತಕ್ಕತೈಯ್.
84. ಕೆರೆಯಲ್ಲಿ ಕ್ಯಾಕರಸತೈತಿ, ಬಣವೆಯಲ್ಲಿ ಬಡಬಡಸುತೈತಿ, ಗುಡಿಯಲ್ಲಿ ಗುಡುಗುಡುಸುತೈತಿ. ಅ೦ಗಿ ಕಳಿತೈತಿ, ಬಾಯಲ್ಲಿ ಇಳಿತೈತಿ.
86. ಬೇಲಿಯಲ್ಲಿ ಇರುವುದು, ನಾಲಿಗೆ ಚಾಚುವದು, ನಾರಿಯರ ಸೆರಗು ಹಿಡಿದು ಎಳೆಯುವದು.
87. ತೋಟವಾಗಿ ಇರುವದು, ಆಕಾಶದೊಳಗಿನ ನೀರ ತರಿಸುವುದು.
88. ಕುಂಬಿ ಮೇಲೆ ಇರುವದು, ಬಿಂದಿಗೆ ನೀರು ಕುಡಿಯುವದು, ಘಮಘಮ ನಾರುವದು.
89. ಆರ್ ಆರ್ ಕೆ. ಝಗಡೆಮೆ, ಎಸ್ ಕಾ ಕ್ಯಾ ಕಸೂರ್, ಎಚ್ ಕೊ ಬುಲಾವೋ, ಎಲ್ ಕೆ ಜಲಾವೋ.
90. ಗುಡ್ಡದ ಮೇಲೆ ಕೌದಿ ಒಣ ಹಾಕಿದೆ, ಒಣಗಲೊಲ್ಲದು.
91. ಗಿಡ್ಡ ಹುಡುಗ ಅಡ್ಡ ಬಿದ್ದಾ ನ.
92. ಹತ್ತು ತಲೆ ಕೆಂಪು ಆರು ತಲೆ ಕರಿ.
93. ಕೈಯಿಂದ ಐವತ್ತನ್ನು ತೆಗೆದರೆ ಏನು ಉಳಿಯುತ್ತದೆ ?
94. ಅವನೂ ಕೊಡುವಂತಹುದಲ್ಲ, ಇವನೂ ಕೊಡುವಂತಹದಲ್ಲ, ಆದರೆ ಅವನೂ ಕೊಟ್ಟ, ಇವನೂ ಕೊಟ್ಟ.
95. ಎಲೆಗೊಂದು ಕಾಯಿ, ತಲೆಗೊಂದು ಕಾಯಿ, ನೀ ಬೇಗ ಹೇಳದಿದ್ದರೆ ದನ ಕಾಯಿ.
96. ಹಲ್ಲುಂಟು ಮೃಗವಲ್ಲ, ಸೊಲ್ಲು ಸೋಜಗವಲ್ಲ, ಕೊಲ್ಲುವುದ ತನ್ನ ನಂಬಿದರೆ ಅದರಿಂದ ಬಲ್ಲವರು ಹೇಳಿ ಸರ್ವಜ್ಞ ಸ೦ದ ಮೇಲ್ಕುಡುತಿಹುದದು, ಬೆ೦ದಮೇಲಾರಿಹುದು, ಬಂಧುಗಳನೆದ್ದು ಬಡದಿಹುದು ಕವಿಗಳಲಿ ನಂದನರು ಹೇಳಿ ಸರ್ವಜ್ಞ.
98. ಹುಲ್ಲು ನಾಲಿಗೆ ಅಲ್ಲ- ಸೊಲ್ಲು ಸೋಜಿಗವಲ್ಲ ಕೊಲ್ಲದೇ ಮೃಗವ ಹಿಡಿಯುವದು ಲೋಕದೊಳು ಗೆಲ್ಲ ರಾವಿನೊಳು ಸರ್ವಜ್ಞ.
9. ಕಾಲಿಲ್ಲದೆ ಹರಿಗೂ, ತೋಳಿಲ್ಲದೆ ಹೊರಗೂ, ನಾಲಿಗಿಲ್ಲದಲೆ ಉರಿಯುವುದು ಕವಿಕುಲದ ಮೇಲುಗಳು ವೇಳೆ ಸರ್ವಜ
Riddle in Kannada
100. ಕಪ್ಪು ಬಣ್ಣದ ಸೀರೆ ಒಪ್ಪುವಳು, ಗಗನದಲಿ ಕಪ್ಪಿನ ಸೀರೆ ಬಲಿಯಾಗೆ ಅವಳನ್ನು ಅಪ್ಪುವವರಿಲ್ಲ ಸರ್ವಜ್ಞ.
101. ಹಲವು ಮಕ್ಕಳ ತಂದೆ, ತಲೆಯಲ್ಲಿ ಜುಟ್ಟವಗೆ, ಸಲಗಳಿಗೆ ಜಾವವರಿವನ ಹೆ೦ಡತಿಗೆ ಮೊಲೆಯಿಲ್ಲ.
102. ನೆತ್ತಿಯಲ್ಲಿ ಉಂಬುವದು, ಸುತ್ತಲೂ ಸುರಿಸುವುದು, ಎತ್ತಿದರೆ ಎರಡು ಹೋಳಾಗುವುದು ಕವಿಗಳೇ ಇದಕುತ್ತರವ ಪೇಳಿ ?
103. ಕೋಡಗವು ಕುದುರೆಯಲ್ಲಿ ನೋಡ ನೋಡುತ ಹುಟ್ಟಿ ಕಾಡಾನೆಗೆರಡು ಗರಿಮಾಡಿ ಗಗನದಿಂದಾಡುವದ ಕ೦ಡೆ.
104. ಕಾಲಲ್ಲಿ ಕೊಂಬುಂಟು ಬಾಲದ ಪಕ್ಷಿಯದು ಮೇಲೆ ಹಾರುವುದು ಹದ್ದಲ್ಲ ಕವಿಗಳಲಿ ಬಾಲರಿದ ಹೇಳಿ.
105. ಅ೦ಗಡಿಯೊಳಗಿಟ್ಟು ಮಾರುವದಲ್ಲ, ತಕ್ಕಡಿಯೊಳಗಿಟ್ಟು ತೂಗುವದಲ್ಲ, ನಾನಾರು ?
106. ಹುಳುಕು ಮೋರೆ ಹೊನ್ನವ್ವ ನಾನು ಯಾರು ?
107. ತಟ್ಟಿದ ಪೆಟ್ಟಿಗೆ ಹುಟ್ಟಿಕೊಂಡ ಆ ಸಂಖ್ಯೆ ಮಕ್ಕಳು ಸಾಲು ಸಾಲಾಗಿ ಕುಳಿತವು ತಪ್ಪು ಹೊಡೆತ ತಿಂದವುಗಳು ಅಂಗವಿಕಲತೆಯಿ೦ದ ನರಳಿದವು.
110. ಹೋಗುತ್ತಾ ಬರುತ್ತಾ ಇರುವೆವು ನಾವು ಯಾರು ?
111. ನಾವಿಬ್ಬರು ಹೋದ ಮೇಲೆ ಮರಳಿ ಬರಲಾರೆವು ಹಾಗಾದರೆ ನಾವು ಯಾರು ?
112. ಚಿನ್ನ ಬಿಡಿಸಿ ಬಿಸಾಕ್ತಾನೆ, ಬೆಳ್ಳಿಯನ್ನು ತಿಂತಾರೆ.
113. ಚಿಪ್ಪಿದ್ದರೂ ಆಮೆಯಲ್ಲ, ಜುಟ್ಟಿದ್ದರೂ ಪೂಜಾರಿಯಲ್ಲ, ಮೂರು ಕಣ್ಣಿದ್ದರೂ ಹರನಲ್ಲ ಹಾಗಾದರೆ ನಾನಾರು ?
114. ಹಿಡಿದರೆ ಹಿಡಿ, ಹಿಡಿತುಂಬ ಬಿಟ್ಟರೆ ಮನೆ.
115. ಎರಡು ಚಕ್ರವಿದ್ದರೂ ಬಂಡಿಯಲ್ಲ, ದೀಪವಿದ್ದರೂ ಶಿವಾಲಯವಲ್ಲ, ಗಂಟೆ ಇದ್ದರೂ ದೇವಾಲಯವಲ್ಲ, ಸವಾರಿ ಮಾಡಲು ಬಹುದು ಕುದುರೆಯಂತೂ ಅಲ್ಲ. ಹಾಗಾದರೆ ನಾನಾರು?
116. ಜುಟ್ಟು ನೆಟ್ಟಗಿದ್ದರೆ ಹೊಟ್ಟೆ ಪಿಟ್ಟಗುಂಟು ನಾನು ಯಾರು ?
117. ಆಗಿದರೆ ಸಿಪ್ಪೆ ಇಲ್ಲ, ನುಂಗಿದರೆ ಬೀಜ ಇಲ್ಲ, ನಾನು ಯಾರ ತೋಟದಲ್ಲೂ ಸಿಗಲ್ಲ. ನಾನ್ಯಾರು ?
118. ನಮ್ಮ ಮನೆಯ ಹಿಂದುಗಡೆ ಒಂದು ಮರ ಹುಟ್ಟಿದೆ. ಎಲ್ಲರಿಗೂ ಕಾಣಿಸುತ್ತದೆ ನನಗೆ ಕಾಣಿಸುವುದಿಲ್ಲ.
119. ಮಳೆ ಇಲ್ಲದೇ ಕೆರೆ ತುಂಬಿತು, ಮಡಿವಾಳ ಇಲ್ಲದೇ ಮಡಿಯಾಯ್ತು.
120. ಕಟ್ಟೆ ಇಲ್ಲದ ಕೆರೆಯಲ್ಲಿ ತಟ್ಟೆ ತೇಲುತ್ತಲಿದೆ.
121. ಗಾಳಿಯಲ್ಲಿ ಹಾರಾಡುವೆನು ಗಾಳಿಪಟವಲ್ಲ, ಮೂರು ಬಣ್ಣದಿಂದ ಆಗಿರುವೆನು ಕಾಮನಬಿಲ್ಲಲ್ಲ. ಹಾಗಾದರೆ ನಾನು ಯಾರು ?
122. ಗಡಿಗೆಯೊಂದು, ರಂಧ್ರ ಒಂಭತ್ತು ನಾನು ಯಾರು ?
123. ನಾಲಿಗೆ ಇದ್ದರೂ ನಾಯಿ ಅಲ್ಲಿ, ಮುಳ್ಳಿದ್ದರೂ ಗಿಡವಲ್ಲ, ನೆತ್ತರಿದ್ದರೂ ನರನಲ್ಲ, ನಾನ್ಯಾರು ಹೇಳಬಲ್ಲಿರಾ ?
124. ನೀರೊಳಗಿದ್ದರೆ ಗಿಲಿಗಿಲಿ, ನೀರು ಬಿಟ್ಟು ಹೊರಬಂದರೆ ಎಲಿದಲಿ. ನಾನು ಯಾರು?
125. ತೆಲವು ತಾಮ್ರದ್ದು ನಡುವು ಹಸಿರು, ತುದಿಯಲ್ಲಿ ಮುತ್ತು. ನಾನು ಯಾರು ?
126, ಮುಕ್ಕಣ್ಣನಿಗೆ ಮೂರು ಕಣ್ಣು, ಆಕಳಿಗೆ ಆರು ಕಣ್ಣು 127. ಎದುರಿಗೆ ಬಂದರೆ ಕೋಲಿಂದ ಹಾಕುತ್ತಾರೆ, ಮರೆಯಲ್ಲಿದ್ದರೆ ಹಾಲು ಹಾಕುತ್ತಾರೆ.
128, ಗರಿಕೆಯ ಇಷ್ಟದ ದೇವರು ವರ್ಷಕ್ಕೊಮ್ಮೆ ಬರ್ತಾನೆ.
129. ಜನಿಸಿದ್ದು ಸೆರೆಮನೆ, ಸೇರಿದ್ದು ಅರಮನೆ.
130. ನೀರ ಮೇಲೆ ನಡೆಯುವ ನಾನು ಆಕಡೆಯವರಿಗೂ ಬೇಕು, ಈ ಕಡೆಯವರಿಗೂ ಬೇಕು. ಹಾಗಾದರೆ ನಾನಾರು ಹೇಳುವಿರಾ ?
131. ಒಬ್ಬ ಹೆಣ್ಣಿಗಾಗಿ ಕೆಟ್ಟ ಇನ್ನೊಬ್ಬ ಮಣ್ಣಿಗಾಗಿ ಕೆಟ್ಟ, ಹಾಗಾದರೆ ಇವರಾರು ಹೇಳಿ ?
132. ಸಾಗರದಲ್ಲಿ ಜನಿಸಿದ ನಾನು ಸಾರಿನ ಮಿತ್ರ ಹೌದು.
133. ಊರುಂಟು ಜನರಿಲ್ಲ, ನದಿಯುಂಟು ನೀರಿಲ್ಲ, ರಸ್ತೆ ಉಂಟು ವಾಹನವಿಲ್ಲ. ಹಾಗಾದರೆ ನಾನು ಯಾರು ?
134. ಕಲ್ಲನ್ನು ತುಳಿಯುತ್ತದೆ, ಮುಳ್ಳನ್ನು ತುಳಿಯುತ್ತದೆ ನೀರನ್ನು ಕಂಡರೆ ನಿಂತೇ ಬಿಡುತ್ತದೆ.
135. ಆಣೆಕಟ್ಟು, ಪಣಕಟ್ಟು, ಪಗಡೆ ಕಟ್ಟು ಅದನ್ನು ಹೇಳಿದವರಿಗೆ ಎಪ್ಪತ್ತೆರಡು ಕಜ್ಜಾಯ.
136. ಕುರುಕುರು ಮೇಯುತ್ತದೆ, ಕುಳ್ಳೇನೇ ಕಾಳುವುದಿಲ್ಲ.
137. ಕತ್ತಲು ತುಂಬಿದ ಮನೆಯಲ್ಲಿ, ಕಂಬ ಬಿದ್ದರೆ ನಿಮ್ಮಪ್ಪ ಸೂ ಎತ್ತಲಾರ ನಮ್ಮಪ್ಪನೂ ಎತ್ತಲಾರ, ಯಾರಪ್ಪನೂ ಎತ್ತಲಾರ,
138. ಹಳ್ಳದಲ್ಲಿ ಹುಟ್ಟಿದ್ದು, ಕೊಳದಲ್ಲಿ ಬೆಳದದ್ದು, ಶೆಟ್ಟಿ ಕಾಣಾ ಪಟ್ಟಣಕ್ಕೆ ಹೋದದ್ದು ನನಗೆ ಕಂಡದ್ದು, ನನ್ನೊಂದಿಗೆ ಬಂದದ್ದು.
139. ಕಪ್ಪಗಿದ್ದರೂ ಕಸ್ತೂರಿಯಲ್ಲ, ಬೆಳ್ಳಗಿದ್ದರೂ ಸುಣ್ಣವಲ್ಲ ನೀರಿದ್ದರೂ ಬಾವಿಯಲ್ಲ, ರೆಕ್ಕೆಗಳಿದ್ದರೂ ಪಕ್ಷಿಯಲ್ಲ.
140. ಎದುರು ಬದುರು ಕುಳಿತಾಗ ಕಷ್ಟ, ತುಂಬ ಒಳಗೆ ಹೋದಾಗ ಸುಖ,
141. ವನಕ್ಕೆ ಒಡೆಯ ನಾನು. ಆನೆಯನ್ನು ಬೇಟೆಯಾಡುವವನು ನಾನು. ಆದರೆ ಮನುಷ್ಯನ ಬಲೆಗೆ ಬೀಳುವವ ನಾನಾರು ಹೇಳಿ ?
142. ಒ೦ದು ಅರ್ದೊಳು ! ಒಂದು ಬರ್ದೋಳು, ಒಂದು ತು೦ಬೋಳು.
143. ಅಪ್ಪನ ಭಾರೀ ರುಮಾಲು, ಇಪ್ಪತ್ತು ಜನರು ಸೇರಿಯೂ ಅವನ ತಲೆಗೆ ಸುತ್ತಲಾರರು.
144. ಚಂದ್ರನಂತೆ ಗುಂಡಾಗಿದ್ದರೂ, ಎಲೆಗಿಂತ ತೆಳುವಾಗಿದೆ, ಅದು ತಿ೦ದರೆ ಬಲು ರುಚಿ.
145. ದೇವಸ್ಥಾನಕ್ಕೆ ಹೋದವ ನಾನಾರು ? ಮರಕ್ಕೆ ಹೋದವ ನಾನಾರು? ಬಾವಿಗೆ ಹೋದವ ನಾನಾರು ?
146. ಒಳ್ಳೆಯ ಕೋಳಿ ಮುಳ್ಳಿನ ಮರದಲ್ಲಿ ಮೊಟ್ಟೆ ಇಟ್ಟಿದೆ.
147. ಬೆಳ್ಳಿಯ ಪೊರೆಯನ್ನು ಇಡುವೆ ಆದರೆ ನಾಗರಹಾವಲ್ಲ, ಗು೦ಡಗಿರುವೆ ಆದರೆ ಆಟ ಆಡುವ ಗುಂಡಲ್ಲ, ದೇರವು ಮಡಿಕೆಗಳಿ೦ದ ಕೂಡಿರುವುದು ಆದರೆ ಕುಂಬಳಕಾಯಿಯಲ್ಲ. ಹಾಗಾದರೆ ನಾನು ಯಾರು ?
148. ನಾನು ನಿಂತರೆ ನಿರೀಕ್ಕೆ, ಉಳಿತರೆ ಕಡತ್ತೆ, ಆದರೆ ಕೆಲೆ ಸಿಕ್ಕುವುದಿಲ್ಲ.
149. ತುಂಬಿದ ಬಾವಿಯಲ್ಲಿ ಬೆಳ್ಳಿಯ ಬಟ್ಟಲು ತೇಲ್ತಾಯಿದೆ,
150. ಅಪರೂಪಕ್ಕೆ ಒಂದು ಹಸು ತಂದಿರುವೆ, ಹುಲ್ಕಿಣಿ ಕರೆಯೊಲ್ಲ, ಕಲ್ಲಿಟ್ರೆ ಕರೆಯುತ್ತೆ.
151. ಆರು ಮೂರು ಗೂಟ, ಸಾನ್ ಭೋಗರ ತೋಟಕ್ಕೆ ಹೋಗಲಿಕ್ಕೆ ದಾರಿಯುಂಟು, ಬರಲಿಕ್ಕೆ ದಾರಿಯಿಲ್ಲ.
152. ಅಪ್ಪ ಚೆಲ್ಲಿದ ರೊಕ್ಕ ಎಣಿಸಲಿಕ್ಕಾಗದು, ಅಮ್ಮ ಹಾಸಿದ ಚಾಪೆ ಸುತ್ತಲಿಕ್ಕಾಗದು.
153. ಅಕ್ಷರವಿದ್ದರೂ ಲಿಪಿಯಲ್ಪ, ಶಾಸನವುಂಟು ಶಿಲೆಯಲ್ಲ, ಪೈರುಂಟು ಗದ್ದೆಯಲ್ಲ.
154. ಒಪ್ಪುವಂಥ ಹಳದಿ ಸೀರೆಯನ್ನುಟ್ಟವಳು ಒಪ್ಪುವಂಥವರಿಗೆಲ್ಲ ನಾನೇ ಮೊದಲು.
Ogatu in Kannada
155. ಮನೆಗೆ ಮೂರು ಬಂಧುಗಳು ಬರುತ್ತಾರೆ, ಇಬ್ಬರು ಹೊರಗೆ ಉಳಿಯುತ್ತಾರೆ, ಒಬ್ಬನು ಒಳೆಗೆ ಹೋಗುತ್ತಾನೆ, ಅವರು ಯಾರು ಯಾರು ಹೇಳಿ ?
15. ಒಂಟಿ ಕಾಲಿನ ಕೋಳಿ, ಒಂಭೈನೂರು ಮೊಟ್ಟೆ ಇಡುತ್ತದೆ.
157. ಕರಿಯಣ್ಣ, ಕರಿಯಣ್ಣ ಎಷ್ಟು ದಪ್ಪ, ನೀನು ಇದ್ದರೂ ಅಷ್ಟೇ ಸತ್ತರೂ ಅಷ್ಟೇ.
158. ಕೈ ಹಿಡಿಯುವನು ಪತಿ ಅಲ್ಲ, ಬಟ್ಟೆ ಹರಿಯುವವನು ಹುಚ್ಚನಲ್ಲ.
159. ಕರಿ ಬಿಳಿ ಎರಡೆತ್ತು, ಕರಿಎತ್ತು ನೀರಿಗೆ ಹೋಯ್ತು, ಬಿಳಿ ಎತ್ತು ಮನೆಗೆ ಬಂತು.
160. ಅಕ್ಕನ ಮನೆಯೊಳಗೆ ತಂಗಿ ಹೋಗಬಹುದು, ಆದರೆ ತಂಗಿಯ ಮನೆಯೊಳಗೆ ಅಕ್ಕ ಹೋಗಲಾರಳು.
161. ಆಕಾಶದಲ್ಲಿ ಹಾರಾಡುವೆನು ಆದರೆ ನಾನು ಪಕ್ಷಿಯಲ್ಲ. ಕೊ೦ಬುಗಳಿದ್ದರೂ ಎತ್ತಲ್ಲ, ಬಾಲವಿದ್ದರೂ ಹನುಮಂತನಲ್ಲಿ ನಾನು ಯಾರು.
162. ಒಂದು ಬಾವಿಯಲ್ಲಿ ಒಂದೇ ಮೀನು.
163. ಆಚೆಯ ದಿನ್ನೆಯಮೇಲೊಂದು ಟಗರು, ಈಚೆಯ ದಿನ್ನೆಯ ಮೇಲೊಂದು ಟಗರು, ಅಪ್ಪ ಅಂದರೆ ಡಿಕ್ಕಿ ಹೊಡೆಯುತ್ತವೆ, ಅವ್ವ ಅಂದರೆ ಡಿಕ್ಕಿ ಹೊಡೆಯೊಲ್ಲ.
164. ಊರ ಸುತ್ತಲೂ ತಿರುಗಿ ಕೊಯ್ದರೂ ಒಂದು ಹಿಡಿ ಹೂವಾಗಲಾರವು.
165. ಬಣ್ಣದ ಬೆಡಗಿನ ಸಿಂಗಾರಿ ಸೊಂಡಿಲ ಮೂಗಿನ ರಾಜಕುಮಾರಿ ಹೂವಕ್ಕನ ಪಾಯಸ ಹೀರಿ, ಕುಪ್ಪಳಿಸಿ, ಕುಪ್ಪಳಿಸಿ ಹಾರುವ ನಾರಿ ಯಾರಿವಳು ?
166. ತಾನು ಹೆತ್ತ ಮಕ್ಕಳನ್ನು ಹೆರವರಿಗೆ ಕೊಟ್ಟು ತಾನು ಬರಿ ತೊಟ್ಟಿಲನ್ನು ತೂಗುವಳು ಯಾರು ?
167. ಅಯ್ಯಪ್ಪನ ಆಕಳಿಗೆ ಮೈತುಂಬ ಕಜ್ಜಿ.
168. ಕರಿ ಕುಂಬ್ಳೆ ಕಾಳಯ್ಯ, ಸರ್ವತ್ತಾದರೂ ಬರಲೇ ಇಲ್ಲ.
169. ನೀರೊಳಗೆ ನಡೆಯುವೆನು ಮೃಗವು ನಾನಲ್ಲ, ಹಾರಲರಿಯನು ಹಾದಿ ನಡೆಯುವವನಾನಲ್ಲ,
170, ಮೂರು ವಸ್ತು, ಮೂರು ಬಣ್ಣ, ಪಿಂಜರೆಯಲ್ಲಿ ಸೇರಿದ ಮೇಲೆ ಒಂದೇ ಬಣ್ಣ.
171. ಗು೦ಡಾಗಿರುವ ನನಗೆ ಕೈ ಕಾಲುಗಳಿಲ್ಲ, ಬಾಯಿ ಮಾತ್ರ ಇರುವುದು. ಸುಟ್ಟರೆ ನಾನು ಸಾಯಲಾರೆ, ಬಡಿದರೆ ಬದುಕಲಾರೆ, ಹಾಗಾದರೆ ನಾನು ಯಾರು ?
172. ನೆಟ್ಟರೆ ಹುಟ್ಟುವವನಲ್ಲ. ಕಿತ್ತರೆ ಬಾಡುವವನಲ್ಲ. ಹಾಗಾದರೆ ನಾನು ಯಾರು ?
113.ಪುಟ್ಟ-ಪುಟ್ಟ ದೇವಸ್ಥಾನಕ್ಕೆ ಬಗ್ಗಿ-ಬಗ್ಗಿ ನಮಸ್ಕಾರ ಮಾಡು
174. ನೋಡಲು ಬೇರೆ-ಬೇರೆ ಬಣ್ಣ, ಉಜ್ಜಿದರೆ ಒಂದೇ ಬಣ್ಣ!
175. ಕುಂಬಾರ ಮಾಡಿದ ಮಡಿಕೆಯಲ್ಲ, ಬಡಿಗ ಮಾಡಿದ ಬಂಡಿಯಲ್ಲ, ಮಾನವ ಮಾಡಿದ ಯಂತ್ರವಲ್ಲ. ಒ೦ದು ನಿಮಿಷವೂ ಪುರುಸೊತ್ತಿಲ್ಲ!
176. ಬಾಲವಿಲ್ಲದ ಬಜಾರಿ, ನಾಲ್ಕು ಕಾಲಿನ ಕಠಾರಿ, ನೀರಲ್ಲಿರುವ ಸಿಂಗಾರಿ, ಇದನ್ನು ಹೇಳಿದವರಿಗೆ ಚಿನ್ನದ ಕಠಾರಿ.
177. ಸುಡು ಬಿಸಿಲಿಗೆ ಬಾಡದೆ ಬರಡದೇ ಇರುವ ಕಾಯಿ
178. ತಾತಾಬಾಯಿ ಮೈ ತುಂಬಾ ತೂತು!
179. ರೋಗವಿಲ್ಲದೆ ನರಳುವನು, ತಪ್ಪು-ತಡೆ ಇಲ್ಲದೆ ಜುಟ್ಟು ಹಿಡಿಯುವನು. ಹಾಗಾದರೆ ನಾನು ಯಾರು ?
180. ಮೂರು ಕಣ್ಣಿನ ಕರು, ಊರೆಲ್ಲ ಸುತ್ತಿ ಬಂದು ದೇವರ ಮುಂದೆ ತಲೆ ಜಕ್ಕೊ೦ಡ್ತಿದೆ!
181. ಬಟ್ಟಲದ ಬಾಯಂತೆ ಹುಟ್ಟುವದು, ಲೋಕದೊಳು ಮುಟ್ಟುವುದು ತನ್ನ ಹೆಂಡಿರನ್ನು ಕವಿಗಳಿದ ದಿಟ್ಟ ದಿಂ ಪೇಳಿ ಸರ್ವಜ್ಞ,
12. ಎಂಟು ಬಳ್ಳದ ನಾಮ, ಗಂಟಲಲಿ ಮುಳ್ಳುಂಟು, ಬಂಟರನು ಹಿಡಿದು ಬಿಡಿಸುವುದು ಕವಿಗಳಲ್ಲಿ ಬಂಟರಿದ ಪೇಳಿ ಸರ್ವಜ್ಞ.
13. ಕಚ್ಚಿದರೆ ಕಚ್ಚುವದು ಕಿಚ್ಚನ- ಚೇಳಲ್ಲ, ಆಶ್ಚರ್ಯವಲ್ಲ ಅಂದೆಲ್ಲ ಈ ಮಾತು ನಿಶ್ಚಯಂ ಬಲೆ ಸರ್ವಜ್ಞ
184. ಗೇಣುದ್ದ ಹುಡುಗನಿಗೆ ಮಾರುದ್ದ ಗಡ್ಡ
186. ಗೇಣುದ್ದ ಹುಡುಗನಿಗೆ ಮಾರುದ್ದ ಗಡ್ಡ |
186. ಚಿಕ್ಕವನು ಒಬ್ಬನಿಗೆ ಬೇಟಿಯಾಗುವಷ್ಟರಲ್ಲಿ ದೊಡ್ಡವನು ಹನ್ನೆರಡು ಜನರಿಗೆ ಬೇಟಿಯಾಗುವನು.
187. ಬೆಳ್ಳಗಿನ ಹುಡುಗ ಕರಿ ಟೋಪಿ ಹಾಕಿದ್ದಾನೆ.
188. ಅವನದು ಮೂರು ಅವನ ಹೆಂಡ್ತಿದು ಒ೦ದು.
189, ಅಂಕು-ಡೊಂಕದ ಬಾವಿ, ಶ೦ಕು- ಚಕ್ರದ ಬಾವಿ ಗಿಣಿ ಕುಡಿಯುವಷ್ಟು ನೀರಿಲ್ಲ.
190. ಹಗಲೆಲ್ಲ ಅರಳುತ್ತದೆ, ರಾತ್ರಿಯೆಲ್ಲ ಮಲಗುತ್ತದೆ.
191. ಸೀರೆಯನ್ನು ತೆದು, ರವಿಕೆಯನ್ನು ತೆರೆದು ನಂತರ ಬಾಯಿಗೆ ಸಿಕ್ಕಿತು|
192. ಅಣ್ಣನಿಗೆ ಅರವತ್ತು ಕಣ್ಣುಗಳು|
193. ಒಂದು ಎರಡಾಗುವನು, ಎಡವು ಬಲವಾಗುವೆನು, ಬಲವು ಎಡವಾಗುವನು, ಬೆಳಕಿನ ಆಶ್ರಯದ ಬದುಕಿಕೊಂಡಿರುವೆನು, ನಾನು ಯಾರು ?
193. ರಾತ್ರಿ ದೊಡ್ಡಿ ಹಟ್ಟೇಲಿ ಕೂಡಿಕೊಂಡಿವೆ, ಬೆಳಗಾಗಿ ನೋಡಿದರೆ ಒಂದೂ ಇಲ್ಲ.
194. ಕರಿಯದೇ ಬರುವೆನು, ಯಾರು ನಾನು ?
195. ಬರಿಗಾಲಲ್ಲಿ ಸಿಕ್ಕಿ ಸಿಕ್ಕಿ ಕಡೆಗೆ ತಿರುಗಾಡುವೆನು ನಾನು ಯಾರು ?
19. ಮೈ ತುಂಬಾ ಕೂದಲುಗಳಿದ ರೂ ಕರಡಿ ನಾನಲ್ಲ, ಮುಖದಲ್ಲಿ ಮೂರು ಕಣ್ಣುಗಳಿದ್ದರೂ ಮುಕ್ಕಣ್ಣ ನಾನಲ್ಲ, ಹಾಗಾದರೆ ನಾನು
197. ನೂರಾರು ಮಕ್ಕಳಿಗೆ ಒ೦ದೇ ಒ೦ದು ಉಡುದಾರ.
198. ಪು೦ಡಾದ ಮುಖವುಳ್ಳ, ಕೈಗಳುಳ್ಳ, ಶಬ್ದ ಮಾಡುವವ, ಪರರಿಗುಪಕಾರ ಮಾಡುವವ ನಾನು ಯಾರು ?
199. ನನಗೆ ಸಮುದ್ರವೇ ಹೆತ್ತ ತಾಯಿ, ಲಕ್ಷ್ಮಿ ಸಹೋದರಿ, ವಿಷ್ಣು ಭಾವ, ಬ್ರಹ್ಮ ಅಳಿಯ, ಚಂದ್ರನು ಅಣ್ಣ, ಇಷ್ಟು ದೊಡ್ಡ ದೊಡ್ಡ ಬಂಧುಗಳಿದ್ದರೂ ನನ್ನ ಹಣೆ ಬರಹಕ್ಕೆ ತಿರುಕನ ಕೈಯಲ್ಲಿ ಸಿಕ್ಕು ಅವನ ಬಾಯಿ ಉಸುರಿಗೆ ಪಕ್ಕಾಗಿ ನರಳಬೇಕಾಯಿತೇ ನನ್ನ ಪಾಡು?
200. ಅಕ್ಕ-ಅಕ್ಕ ಗಿಡ ನೋಡ, ಗಿಡದೊಳಗಿನ ಎಲೆ ನೋಡ ಎಲೆಯೋಳಗಿನ ತೂತು, ತೂತೊಳಗಿನ ಮಾತು ನೋಡ |
201. ಪಪ ಕಾಲೆತ್ತಿ ಹಾಕುವನು- ಅವ್ವಕೈ ಎತ್ತಿ ಹಾಕುವಳು!
202. ಎಲ್ಲಾ ಇದ್ರೂ ಕೈ, ಕಾಲು ಮಾತ್ರ ಇಲ್ಲ.
203. ಇಡುವದೊಂದು, ಆಡುವದೊಂದು, ನಿಲ್ಲುವದೊ೦ದು !
204. ಕಣ್ಣಿಗೆ ಕಾಣುವದಿಲ್ಲ, ಕೈಗೆ ಸಿಕ್ಕುವದಿಲ್ಲ, ಪ್ರತಿಯೊಂದು ಜೀವಿಗೂ ಇದು ಬೇಕೇ ಬೇಕು.
205. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಕದಲದೇ ಹೋಗುವನು ನಾನು ಯಾರು ?
206. ಮೂರು ಕಾಸಿನ ಕುದುರೆಗೆ ಮಾರುವ ಲಗಾಮು !
207. ಕಾಲಿಲ್ಲದೇ ನಡೆಯುವೆನು, ಬಾಯಿಲ್ಲದೇ ನುಡಿಯುವೆನು, ಓಡಿ- ಓಡಿ ನನ್ನ ಸ್ಥಳ ಸೇರುವೆನು ನಾನು ಯಾರು ?
208. ಹರಿಯು ನನಗೆ ಭಾವ, ವಿಧಿಯು ನನ್ನ ಅಳಿಯ, ಒಲವು ಸನ್ನ ಮಾತೆ, ಲಕ್ಷ್ಮಿ ನನ್ನ ಸಹೋದರಿ, ಸುಧಾಕರ ನನ್ನ ಹಿರಿಯಣ್ಣ, ಈ ಐವರು ನೆಂಟರಿದೂ ನಾನು ಈ ತಿರುಕನ ಕೈಗೆ ಸಿಕ್ಕು ನರಳುವಂತಾಯ್ತು.
9. ನಾನು ಕೂಗುತ್ತೇನೆ ಆದರೆ ಹುಲಿಯಲ್ಲ, ಬಿಗಿಯುತ್ತೇನ ಮಂಗನಲ್ಲ, ಹಾಗಾದರೆ ನಾನುಯಾರು ಹೇಳಬಲ್ಲಿರಾ ?
210. ಹುತ್ತದ ಮೇಲಿರುವ ಬುತ್ತಿಯ ನೋಡು!
201. ಎತ್ತ ಹೋದರೂ ಅಷ್ಟೇ ಹಿಂಬಾಲಿಸುತ್ತ, ಹಿಡಿಯಲು ಹೋದರೆ ಸಿಗುವುದಿಲ್ಲ ನಾನು ಯಾರು ?
212. ಸಾವಿರಾರು ಎತ್ತುಗಳಿಗೆ ಒಂದೇ ಗೋದಿ,
213. ನಾಗರದ ಬಣ್ಣ, ನಡುಕಟ್ಟು ಬಲು ಸಣ್ಣ, ಹಿಡಿಯೋಕೆ ಹೋದ್ರೆ, ಕಡಿಯೋಕೆ ಬರುತ್ತೆ!
214, ಚಕ್ರ, ಎರಡಿದ್ದರೂ ಗಾಡಿ ನಾನಲ್ಲ, ರೆಕ್ಕೆಗಳೆರಡಿದ್ದರೂ ಪಕ್ಷಿ ನಾನಲ್ಲ, ಬಾಯಿ ನನಗಿದ್ದರೂ ಕರುಳಲ್ಲ, ಪ್ರಾಣಿಯಂತೂ ಅಲ್ಲವೇ ಅಲ್ಲ, ಹಾಗಾದರೆ ನಾನು ಯಾರು ?
215. ಹಿಡಿಯಲು ಬಂದರೆ ಸಿಗುವವ ನಾನಲ್ಲ, ನೋಡೋಣವೆಂದರೆ, ಕಾಣುವವ ನಾನಲ್ಲ, ಹಾಗಾದರೆ ನಾನು ಯಾರು ?
216, ಬೆನ್ನಿನಿಂದ ತಿನ್ನುವೆನು ಬಾಯಿಯಿಂದ ಉಗುಳುವನು, ಎದುರು ಬಂದವರನು ಕೊಲ್ಲುವನು, ನಾನುಯಾರು ಹೇಳಬಲ್ಲಿರಾ ?
217. ಒಂದು ದಾಸ್ ಬುರುಡೆ, ಒಂದು ದವಲತ್ ಬುರುಡೆ, ಇಡೀ ಪ್ರಪಂಚಕ್ಕೆಲ್ಲಾ ಎರಡೇ ಬುರುಡೆ !
218. ನೀವು ಹಾಸಿದಿ, ನಾನೇ ಬಂದು ಬಿಟ್ಟೆ, ನೀವು ಅಲ್ಲಿ ಇರಲಿಲ್ಲ, ನಾನು ಹೊರಟು ಹೋದೆ ನಾನು ಯಾರು ?
219, ಹಾಲು ವರ್ಣದ ಹಕ್ಕಿ, ನೀಲವರ್ಣದ ನೀರು, ಬಾಯಿ ಎಂಜಲಾಗುವುದೆಂದು ಬಾಲದಿಂದ ನೀರು ಕುಡಿಯುತ್ತೇನೆ. ನಾನು ಯಾರು ಹೇಳಿ ?
220. ಕ೦ಬ ಒ೦ದು, ಅದಕ್ಕೆ ನಾಲ್ಕು ಕಾಲುಗಳು೦ಟು. ಅದರ ಮೇಲೊಂದು ಗುಂಡು
221. ಒಂದು ಮರ ಅದಕ್ಕೆ ಹನ್ನೆರಡು ಕವಲು, ಪ್ರತಿಯೊಂದು ಕವಲಿಗೆ ಮೂವತ್ತು ಎಲೆಗಳು, ಅದರಲ್ಲಿ ಹದಿನೈದು ಎಲೆ ಕಪ್ಪು, ಹದಿನೈದು ಎಲೆ ಬಿಳುಪು ಇದನ್ನು ಬಿಡಿಸಿ ಹೇಳುವಿರಾ
222. ಮುಳುಗಲಾರೆ ನಾನು ಯಾರು ?
223. ಬೆಳ್ಳನೆಯ ಹೊಲದಲ್ಲಿ ಕರಿ ಬೀಜ ಬಿತ್ತಿದೆ !
224. ಬೇಟೆಗಾರ ಮುಂದೆ, ಸಾವಿರಾರು ಜನ ಅವನ ಹಿಂದೆ ಹಿಂದೆ.
225. ನನಗೆ ರುಂಡವಿಲ್ಲ, ಮುಂಡವಿಲ್ಲ, ಆದರೂ ಓಡಬಲ್ಲೆನು.
226. ಅಣ್ಣ- ಅಣ್ಣ, ಸಿಪ್ಪೆಯಿಲ್ಲದ ಹಣ್ಣು ತಂದುಕೊಡಣ್ಣ.
227. ನಾವು ನಟಿಸುವ ಹಾಗೆ ನಟಿಸುವುದು, ಹೋದಲ್ಲಿಗೆ ಹಿಂದೆ ಬರುವುದು !
228. ಹೂವಲ್ಲದಿದ್ದರೂ ಅರಳುತ್ತದೆ, ಬಿಸಿಲಿಗೆ ಮಾತ್ರ ಬಾಡುವುದಿಲ್ಲ.
229. ನಾನು ಆಳುದ್ದವಿದ್ದರೂ, ಬೆಳ್ಳಗಿನ ಹೂ ನನ್ನಲ್ಲಿದೆ. ಚೋಟುದ್ದ ತಲೆ ಉಂಟು !
230. ಪಕ್ಕ ಇದ್ದರೂ ಹಾರಲಾರೆನು, ಕೊಕ್ಕು ಇದ್ದರೂ ಕೂಗಲಾರೆನು, ಕಾಲಿದ್ದರೂ ಓಡಲಾರೆನು, ಹಾಗಾದರೆ ನಾನು ಯಾರು ಹೇಳಬಲ್ಲಿರಾ ?
231. ಕೆಂಪಿರೋ ಹೆಣ್ಣಿಗೆ ಕುಟ್ಟೋಣು ಕರಗೆ !
232. ತಟ್ಟೇಲಿ ಹುಟ್ಟಿ, ತಮಾಷಿ ಮಾಡು, ಹೆಂಡತಿಯೋ ಹೋದ್ರೆ ಕಡಿಯೋಕೆ ಬಂತು.
233. ದೇವರು ಒಳಗೆ, ಗಂಧ ಹೊರಗೆ !
234. ಚೆಲ್ಲೋದುಂಟು, ಕುಯ್ಯೋದುಂಟು, ತಿನ್ನೋದಿಲ್ಲ !
238. ಗದ್ದೆ ಅಲ್ಲ ಓಡಾಡ್ಕೊಂಡು ಬಂದು, ಮೂಲೆ ಸೇರದೆ,
238. ಗೋಡೆ ಒರಗಿಕೊಂಡು ಗಬ್ಬಾಗುತ್ತೆ.
237. ನಿನ್ನ ಹೊಟ್ಟೆ ಮೇಲೆ ನನ್ನ ಹೊಟ್ಟೆ !
38. ನೋಡಿದರೆ ಬೆಳ್ಳಿ ಹುಡುಗಿ, ಹಿಡಿಯಲು ಹೋದರೆ ಜಾನುವಾ
239. ನೀಲ-ನಿಂಗಯ್ಯ, ಹಾಕುವವರುಂಟು, ತೆಗೆಯುವವರಾರು 0, ಬಡಗಲಾಗಿ ಹೋಗಿ, ಒಂದು ಜೊತೆ ಎತ್ತು ತಂದು, ಎಡಗೋ ಬಲಗೋಲು ಎಡಕ್ಕೆ ಆಗೋದಿಲ್ಲ.
241. ನೂರೊಂದು ಬೇಲಿ ಒಬ್ಬ ಕಾವಲುಗಾರ ಹಾಗಾದರೆ ಅದು ಏನು?
242. ನಮ್ಮ ಮನೆಯ ಹಿಂದೆ ಒಂದು ಮರ ಹುಟ್ಟಿ ನಿನಗೆ ಕಾಣಿಸದೆ ನನಗೆ ಕಾಣಲೊಲ್ಲದು.
243. ಹಿತ್ತಲಿರೋ ಗುಡ್ಡು, ಗುಮ್ಮ ನಿನಗೇಕೆ ಕಡ್ಡಿ ನಾಮ!
244. ಹಳ್ಳದಲ್ಲೊಬ್ಬ ಕಳ್ಳ ಕೂತ್ಕಂಡು ಬಂದವರೆಲ್ಲ ಹಿಡಿದಾಕ್ಕಾನೆ.
245. ಹೊಟ್ಟೆ ಪಿಟ್ಟಿಗೆ, ಜುಟ್ಟು ನೆತ್ತಿಗೆ
246. ಅಂಬಿನಂಗೆ ಹರಿತು, ಕೊಂಬಿನಂಗೆ ಕೂಡಿತು ಮರದಂತೆ ಜಗ್ಗಿತು.
247. ಆಗಿದರೆ ಸಿಪ್ಪೆಯಿಲ್ಲ, ನುಂಗಿದರೆ ಬಿತ್ತ ಇಲ್ಲ, ನಾನು ಯಾರ ತೋಟದಲ್ಲೂ ಇಲ್ಲ!
248. ಆಕಾರ ಅಡ್ವಣ-ಒಳಕೆರೆ ರಾವಣ- ಮತಿ ಭೂಷಣ!
249. ಉದ್ದದ ದೊಣ್ಣೆ, ಉರಿಯೋ ದೊಣ್ಣೆ, ಸುದ್ದಿ ಹೇಳೋ ಸೂಳೆಮಗನೆ !
250. ಆರು ಕಾಲು ಅಪ್ಪಣಕೆರೆ, ಬೋರಣ್ಣ ಕೂತು ತಾವು ಮೀಸೆ ತಿರುವಣ್ಣ.
251. ಎರಡು ಚಕ್ರ, ಉ೦ಟು ಬ೦ಡಿಯಲ್ಲ, ದೀಪವು೦ಟು ಶಿವಾಲಯವಲ್ಲ, ಗಂಟೆ ಉಂಟು ದೇವಾಲಯವಲ್ಲ, ಸವಾರಿ ಮಾಡಬಹುದು ಕುದುರೆಯಲ್ಲ. ಹಾಗಾದರೆ ನಾನು ಯಾರು ?
252. ಒಳನಾರು ಹೊರನಾರು ತೆಂಗು ನಾರಲ್ಲ, ಒಳಗೆ ಹರಳುಂಟು ಮಾಡಿಣ್ಯವಲ್ಲ !
253. ಒಂದು ಬಟ್ಟಲು ಹಾಲು ಕುಡಿಯೋ ಧೀರ ಹುಟ್ಟಿಲ್ಲ |
254. ಎಷ್ಟೇ ಮಳೆ ಬಂದರೂ ನೆನೆಯೋದಿಲ್ಲ.
255. ಒಂಟೊಂಟು ಜಡಾರ ಗಂಟು ನಿಮ್ಮಪ್ಪನ ತಲೆ ಕೊಂಟು.
256. ಒಂದು – ಬಿಂದು ವರ್ಷದ ಬೆಳೆ, ಒಂದು – ಆರು ತಿಂಗಳ ಬೆಳೆ ಒ೦ದು – ಒ೦ದು ದಿನದ ಬೆಳೆ, ಒಂದು – ಮೂರು ತಿಂಗಳ ಬೆಳೆ, ಎಲ್ಲವನ್ನೂ ಒ೦ದೇ ಕಣದಲ್ಲಿ ಒಕ್ಕಣೆ ಮಾಡುತ್ತಾರೆ.
257. ಕೆಂದ ಎತ್ತಿಗೆ ನೂರೊಂದು ಬಾಯಿ !
258. ಕರಿಸಾಲೆಯೋಳೆ, ಕಾಲುಂಗುರದೋಳೆ, ನೆರೆಮನೆಗೆ ಹೋದ್ರೆ ಸರನೆ ಬಾ !
259. ಕೈ ಉಂಟು ಕಾಲಿಲ್ಲ, ನಡುವಲ್ಲಿ ನೂರಾರು ರಂಧ್ರ ಉಂಟು, ಎಸೆದರೆ ಮುದುಡಿಕೊಳ್ಳುತ್ತೆ!
260. ಕಿರುಮನೆಗೆ ಚಿನ್ನದ ಬೀಗ!
261. ಕೆಂದ ಎತ್ತಿಗೆ ನೂರೊಂದು ಬಾಯಿ.
262. ಗಿಡ್ಡಿ ಕಚ್ಚಿದರೆ ಮನೆತುಂಬ ಮಕ್ಕಳು !
263. ಕೊಕ್ಕೆಯಲ್ಲಿ ಮೊಟ್ಟೆಯಿಡುತ್ತದೆ. ಕಾಲಿನಲ್ಲಿ ನೀರು ಕುಡಿಯುತ್ತದೆ.
264. ತಲೆಯಲ್ಲಿ ಜಡೆಯುಂಟು ತಪಸ್ವಿಯಲ್ಲ, ಎದೆಯಲ್ಲಿ ಹಾಲುಂಟು ಹಸುವಲ್ಲ, ಎಲೆಯ ಆಡಿಕೆಯುಂಟು ವೀಳ್ಯವಲ್ಲ.
265. ಗುಂಟ ಕಿತ್ತು ಕೊಂಡು ಸಂತೆಗೆ ಪೊಯ್ಯ.
266. ದೊಡ್ಡ ಆಲದ ಮರ ದಡ್ಡನೆ ಬಿತ್ತು, ಸಂತೆಯವರೆಲ್ಲ ಚೆಲ್ಲಾಪಿಲ್ಲಿ!
267. ಚಿಕ್ಕ ಚಿಕ್ಕ ಪೆಟ್ಟಿಗೆ ಚಿನ್ನದ ಪೆಟ್ಟಿಗೆ ಮುಚ್ಚಿ ತೆಗೆದರೆ ಮುನ್ನೂರು
268. ನಾಲ್ಕು ಕಾಲು೦ಟು ಮೃಗವಲ್ಲ, ಹಾರೋದುಂಟು ಪಕ್ಷಿಯಲ್ಲ
269. ನೀರಲ್ಲಿ ಹುಟ್ಟುತ್ತೆ, ನೀರಲ್ಲೇ ಬೆಳೆಯುತ್ತೆ, ನೀರು ಕಂಡಕೂಡಲೇ ಕರಗಿಹೋಗುತ್ತೆ.
270, ಬಲ ಎಡವಾಗುತ್ತದೆ, ಎಡ ಬಲವಾಗುತ್ತದೆ.
271. ನೂರಾರು ದನಗಳಿಗೆ ಒಂದೇ ಬಾಲ!
272. ಬಿಟ್ಟರೆ ಬೀದಿತುಂಬ ಹಿಡಿದರೆ ಹಿಡಿತುಂಬ
273, ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು ಬೆಳಗ್ಗೆ ಯೇ ಜನರು ಇದನ್ನು ನೋಡಲು ಕಾಯುವರು !
274. ಮನೆಯ ಮೇಲೆ ಮನೆಯನ್ನು ಕಟ್ಟಿ, ಅದರ ಮೇಲೆ ಮಾಸ್ತಮ್ಮನ ಗುಡಿಯನ್ನು ಕಟ್ಟಿ, ಕೊಂಬೆಯ ಮೇಲೆ ಕುಳಿತಿರುವನು ಕುಂಬಾರ ಶೆಟ್ಟಿ !
275. ಬೇಲಿಯಲ್ಲಿ ನುಗ್ಗುವ ನಾಯಿಗೆ ತಿಕದಲ್ಲಿ ಜನಿವಾರ
276. ಮೂರು ಜನ ಮುಂಡೇರು ಮುಸುಕಿನ ಔಗೇರು ಬಿಸಿಲು, ಬಿಸಿಲು ಬರದ ಹೊರತು ಮುಸುಕು ತೆಗೆಯುವವರಲ್ಲ.
277. ಯಾರೂ ಹತ್ತಲಾರದಂಥ ಮರವನ್ನು ಕರಿಯಪ್ಪನು ಹತ್ತುತ್ತಾನೆ.
278. ಯವ್ವನದಲ್ಲಿ ಹೂ ಮುಡಿಯುತ್ತಾಳೆ, ಮುಪ್ಪಾವಸ್ಥೆಯಲ್ಲಿ ಗೆಜ್ಜೆ ಕಟ್ಟಿ ಕುಣಿಯುತ್ತಾಳೆ, ಯಾರಿವಳು ?
219. ಸೂಳೆಯ ಮನೆಯ ಮುಂದೆ ಸುಗಂಧದ ಮರ ಹುಟ್ಟಿ, ಅದು ಸೂಳೆಗೆ ತಾಗಿ, ಸೂಳೆಯ ಮಕ್ಕಳಿಗೆ ತಾಗಿ, ಬೆಂಗಳೂರು ಬಾಳೆ ಮೀನಿಗೆ ತಾಗಿ ಕುಯ್ಯುವ ಹುಂಜನಿಗೆ ತಾಗಿತು!
280. ಅಣ್ಣ ತಂಮ್ಮಂದಿರು, ಇಬ್ಬರ ಮನೆಗೂ ಒಂದೇ ಗೋಡೆ !
281. ಎದುರಿನನ ಮೂಡದಲ್ಲಿ ಮೂವತ್ತೆರಡು ಕವಡಿ ಬಿದ್ದಾವ ತಗೋ ಬೇಕೆಂದರೆ ಬರುವದಿಲ್ಲ!
282. ಮಕರ ತಿಂಗಳಿಗೊಂದು ಬೆಳೆ ಆರು ತಿಂಗಳಿಗೊಂದು ಬೆಳೆ, ದಿನೊಪ್ಪತ್ತಿಗೆ ಬರುವುದೊಂದು ಬೆಳೆ, ಅವನ್ನೆಲ್ಲಾ ಒಂದು ಕಣಕ್ಕಾಗಿ ಮೂವತ್ತೆರಡು ಕಟ್ಟೆ ಅರದ್ರೆ ಎಲ್ಲ ಕೆಂಪು ಧಾನ್ಯವಾಗುತ್ತದೆ.
283, ಅಡ್ಡ ಕೊಯ್ದರೆ ಚಕ್ರವಲ್ಲ, ಉದ್ದ ಕೊಯ್ದರೆ ಶಂಖವಲ್ಲ, ಬಿಡಿಸಿದರೆ ಹತ್ತಿಪ್ಪತ್ತು ಮೂಸಿದರೆ ವಾಸನೆ.
284. ಆಡುದ್ದ ಹುಡುಗ ಈಟುದ್ದ ಹುಡುಗ ಏಟುದ್ದಾ ಪೇಟಾ ಸುತ್ತಿರುವನು.
285. ಅಲ್ಲಿ ಬುಳು ಇಲ್ಲಿ ಬುಳುಬುಳು, ಶೃಂಗೇರಿವರೆಗೆ ಬಳು ಬುಳು.
286. ಅಂಗೈಯಗಲದ ರೊಟ್ಟಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ.
287. ಅಂಗೈಯನ್ನು ಕೊಟ್ಟರೆ ಮುಂಗೈಯನ್ನು ನುಂಗುತ್ತೆ.
288. ಒಮ್ಮೆ ಸುಟ್ಟಿದ್ದನ್ನು ಪುನ: ಸುಡುತ್ತಾರೆ.
289. ಚಿಕ್ಕ ಪೋರನಿಗೆ ಮಣ್ಣಿನ ಕೆಲಸ
290. ನನ್ನ ಬಣ್ಣ ಪೂರ್ತಿ ಕೆಂಪು ನಾನು ಮುಟ್ಟಿದ್ದೆಲ್ಲಾ ಪೂರ್ತಿ ಕಪ್ಪು.
291. ಪೊರಳೀ, ಹೊರಸಿ, ಬಳಸೀ
292. ಸುತ್ತಿ, ಸುಳಿದು ಬರಬೇಡ ನನಗಾಗಿ ಮೇಲೊಬ್ಬ ಕಾಯುತ್ತ ಕುಳಿತಿರುವನು ನಿನಗಾಗಿ
293. ಆರು ತಲೆ ಕಪ್ಪು ಹತ್ತು ಕೆಂಪು ಆತನ ಸುಖದ ಸುತನು ಪಡೆಯನ ವೈರಿಯ ಮಡದಿಯ ಹುಟ್ಟು ಹೆಸರೇನು ?
294. ಕತ್ತಲು ತುಂಬಿದ ಮನೆಯಲ್ಲಿ ಕಳ್ಳನು ಕತ್ತಿ ಬೀಸ್ತಾನೆ.
295. ಕರಿ ಹುಡುಗನನ್ನು ಒತ್ತಿದರೆ ಬಿಳಿ ಹುಡುಗಿಯು ಮನೆಯನ್ನು ಬೆಳಗುತ್ತಾಳೆ.
296. ಕೈಯುಂಟು ಕಾಲಿಲ್ಲ, ಮೈಯಲ್ಲಾ ನವಗಾಯ, ಒಂಭತ್ತು ತುಂಡ, ಬೇಗಬೇಗನೆ ಬಂದು ಹೆಗಲೇರಿಕೊಂಡ ಕೈ ಕಳಚಿ ಬಿಟ್ಟರೆ ತಾ ಮುವರಿಕೊ೦ಡ.
297. ಗಿಡದಲ್ಲಿ ಹುಟ್ಟುವುದು, ಗಿಡದಲ್ಲಿ ಬೆಳೆಯುವುದು ಶಾಸ್ತ್ರಕ್ಕೆ ತಾ ಮೊದಲಾಗಿ ಬರುವುದು!
298. ಗೋಡೆಯ ಮೇಲೆ ಕರಿ ರೊಟ್ಟಿ ಸುಟ್ಟಿದ್ದಾರೆ.
299. ನಿನ್ನ ಕತ್ತಿಗೆ ನನ್ನ ಕಾಲು ನಿನ್ನ ಬಾಯಿಗೆ ನನ್ನ ಕೋಲು.
300. ಸೂಳೆಯ ಮನೆಯ ಮುಂದೆ ನೂಕಾಣಿ ಗಿಡ ಹುಟ್ಟಿ ಸೂಳೆಗೂ ಬೇಕು, ನಮಗೂ ಬೇಕು!
301. ಊರು ಸುತ್ತಾ ಮೇಯ್ಯಂಡು ಬರ್ತದೆ, ಒಂದು ಮೂಲೇಲಿ ಬಿದ್ದಿರ್ತದೆ.
302. ಎರಡು ಕೆರೆಗೆ ಒ೦ದೇ ಏರಿ!
303. ಊರೊಳಗೆಲ್ಲಾ ಭಿಕ್ಷೆ ಕೇಳ್ತಾನೆ.
304. ಐದು ಬೆರಳು ನು೦ಗುವುದು ಬಕಪಕ್ಷಿ ತಾನಲ್ಲ ವಯ್ಯಾರನ ಹೆಗಲ ಮೇಲೆ ಒಪ್ಪುತಿರುವುದು ಬೀದಿ ಬೀದಿಯಲ್ಲಿ ಸಾರುತಿಹುದು ಬಾ ಎಂದು ಕರೆದರೆ ತಾನಾಗಿ ಬರುವುದು.
305. ಕೆಂಪು ಕುದುರೆ ಮೇಲೆ ಕರಿ ಜೇನು, ಅದರ ಮೇಲೆ ಬಿಳಿ ರಾಜ
306. ಗುಂಡಾದ ಕರಿ ಮೋಡದ ಸಂಚಾರ |
307. ನೆಲಪಾತಿ ಕಿಲಕೀರ ನಾ ತು೦ಟು ಗಮನವಿಲ್ಲ.
308. ಗಿರಿರಾಜನ ಮಗಳ ಗಂಡನ ಹಿರಿ ಮಗನ ತಮ್ಮ ವಾಹನ ವೈರಿ.
309. ನೀರಿನಲ್ಲಿ ತೇಲದು ಮಣ್ಣಿನಲ್ಲಿ ನಡೆಯದು ಹುಲ್ಲಿನ ಸಂಚಾರ, ಕರಿ ಉಡುವು! ಮೂರು ಮುತ್ತು ಇಬ್ಬನಿ ಗೊಬ್ಬಣ್ಣ ನೋಡಲಾರುವುದಿಲ್ಲ.
311. ನೋಡಬಹುದು ಮುಟ್ಟ ಲ ಪ್ರಯೋಜನ. ಸ st ಲಾಗದ ಅದರಿ೦ದ ಸಾವಿರಾರು
312. ಬರೆಯದೆ ಓದುವುದು ಕರೆಯದೆ ಬರುವುದು ಬರಿಗಾಲಲ್ಲಿ ತಿರುಗಾಡುವುದು.
313. ಬಂಡೆಯ ಮೇಲೆ ಮಲಗುತ್ತೆ ತಂತಿ ಮೇಲೆ ಕುಣಿಯುತ್ತೆ.
314. ಬಿಳೀ ಕಲೆ ಕರೀಕಲ್ಲು, ಕರೀ ಕಲೆ ರಂಗೂಲಿ,
315. ಭೂಲೋಕದಲ್ಲಿಲ್ಲ, ಬೂಕನ ತಾಟದಲ್ಲಿಲ್ಲ, ಎಸೆದರೆ ಸಿಪ್ಪೆಯಿಲ್ಲ, ತಿಂದರೆ ರುಚಿಯಿಲ್ಲ.
316. ಬೆಳ್ಳಗಿದೆ ಸುಣ್ಣವಲ್ಲ, ಸಿಹಿಯಾಗಿದೆ ಜೇನಲ್ಲ, ನಾನು ನಲ್ಲಿ ಯಿಂದ ಬರುವುದು ನೀರಲ್ಲ.
317. ಮರದೊಳಗೆ ಮರ ಹುಟ್ಟಿ ಭ ಚಕ್ರದ ಕೊಡೆ ಹಿಡಿದು ಕೊಳ್ಳುವವರುಂಟು ತಿನ್ನುವವರಿಲ್ಲ.
318. ಮೈಯೆಲ್ಲಾ ಕೂದಲುಂಟು ಕರಡಿಯಲ್ಲಿ, ಮೂರು ಕಣ್ಣುಂಟು ಮುಕ್ಕಣ್ಣನಲ್ಲ.
319. ಮಳೆಗೂ ಬಿಸಿಲಿಗೂ ಅರಳುವುದು, ತಲೆಯ ಮೇಲೆ ಮೆರೆಯುವುದು, ಹೂವಲ್ಲದ ಪುಷ್ಪವದು!
320. ಸುತ್ತ ಮುತ್ತ ಮನೆ ಕಟ್ಟಿ ಸುವ್ವಾರಯ್ಯನ ಕಾವಲಿಟ್ಟು ಹೂವು ಬಿಟ್ಟರೆ ತೋಟ ಹಾಳು |
321. ಮುಳ್ಳು ಮುಳ್ಳು ಮರದಲ್ಲಿ ಮುತ್ತು-ಮುತ್ತು ಕಾಯಿ
322. ಹಬ್ಬಕ್ಕೆ ಬಂದನು ಸುಬ್ಬರಕಾಳ ಹೊಡೆದರೆ ಉಚ್ಚೆ ಹುಡ್ಕೊಂಡ !
323. ಹಾಕಕೊಬ್ಬ, ನೂಕಕೊಬ್ಬ, ಸಾಟಿದ ದೀಪ ತೋರೊಕೆ ಒಬ್ಬ !
324. ಹಗ್ಗ ಹಾಸಿದೆ, ಹಸು ಮಲಗಿದೆ.
325. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ!
326. ಅಡವಿಯಲ್ಲಿ ಹುಟ್ಟಿದ ಗಿಡ-ಮರ ತಾನಾಗಿಹುದು, ಕಡಿದರೆ ಕಪ ಕೊಡುತಿಹುದು!
327. ಹುಳವುಂಟು ಹುಣಸೇಕಾಯಿಯಲ್ಲ, ನಾರು೦ಟು ಹೀರೇಕಾಯಿಯಲ್ಲ.
328. ಉದ್ದನೆಯವಳ ಮೈಯೆಲ್ಲ ಗಂಟು.
329. ಎರಡು ಮನೆಗೆ ಒಂದೇ ಗೋಡೆ.
330. ಊರಸುತ್ತ ಮೇಸ್ಕೊಂಡು ಬರದೆ ತೊಪ್ಪೆಯೂ ಇಲ್ಲ, ಉಚ್ಚೆಯೂ ಇಲ್ಲ.
331. ಎಲೆಗೊಂದು ಕಾಯಿ ತಲೆಗೊಂದು ಕಾಯಿ ಊಟಕ್ಕೊಂದು ಕಾಯಿ ಆಟಕ್ಕೊ೦ದು ಕಾಯಿ ಜಗದೀಶನಿಗೊ೦ದು ಮಾವನಿಗೊಂದು ಕಾಯಿ. ಕಾಯಿ
332. ಎರಡು ಕಣ್ಣುಗಳುಂಟು ಮನುಷ್ಯನಲ್ಲ, ಎರಡು ಕೈಗಳುಂಟು ಕೂಲಿ ಮಾಡುವವರಲ್ಲ, ನಾಲಿಗೆಯಿಲ್ಲದೇ ನಾದ ಮಾಡುವುದು !
333. ಕಿರೀಟವುಂಟು ರಾಜನಲ್ಲ, ಗಡ್ಡವುಂಟು ತುರುಕನಲ್ಲ!
334. ಕೆಂಪು ಕೋಣೆಯ ಒಳಗೆ ಬಿಳಿಯ ಸಿಪಾಯಿಗಳು !
335. ಬಿರ್ ಬಿಲ್ಲೆ ಹೋಗೋಳೆ, ಜಿಲ್ಲೆ ಸರದೋಳೆ ಎಂತು ಮಾತ್ಸಾರ ಕಂಚಗಾರನ ಹುಡುಗಿ!
336. ನಡೆಯುವುದು ಎಂಟು ಕಾಲು ನಡೆ ತಪ್ಪಿದ್ದ ಎರಡು ಕಾಲು ತಲೆ ಐದು ಜೀವ ನಾಲ್ಕು !
337. ಗಿರಗಿರನೆ ತಿರುಗದೆ ಚಕ್ರವಲ್ಲ, ಅವಕೆರಡು ಕೊಂಬುಂಟು ಮೃಗವಲ್ಲ.
338. ಗುಂಡೀಲೊಬ್ಬ ಕುಳ್ಳ ನಿಂತ್ಕಂಡು ಬಂದೋರೆಲ್ಲಾ ಉತ್ತರ ಕೊಡ್ತಾನೆ.
339. ತಂದವರೊಬ್ಬರು, ಹಿಡಿದವರೊಬ್ಬರು ಹೊತ್ತವರೊಬ್ಬರು !
340. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು ಇದನ್ನು ನೋಡಲು ಜನ ಕಾದಿಹರು.
341. ಬೇಲಿ ನುಗ್ಗೋ ನಾಯಿಗೆ ತಿಕದಲ್ಲಿ ಜನಿವಾರ.
342. ಮನೆ ಮೇಲೆ ಮನೆ ಕಟ್ಟಿ, ಮಾಸ್ತಮ್ಮನ ಗುಡಿ ಕಟ್ಟಿ ಕೊ೦ಬೆ ಮೇಲೆ ಕುಳಿತವನೇ ಕುಂಬಾರ ಶೆಟ್ಟಿ !
343. ಮೂಲೇಲಿ ಮುದುಕಿ ಕುಯ್ಯುತ್ತಾಳೆ !
344. ಸತ್ತು ಹೋದೋರ ಸಂತೆಗೆ ಹೊತ್ತುಕೊಂಡು ಹೋಗ್ತಾರೆ.
345. ಸುಟ್ಟ ಏಡಿ ಮರ ಹತ್ತುತ್ತೆ.
346. ಹಗಲು ನಿದ್ರಿಸುವೆನು ರಾತ್ರಿ ಕಣ್ಣು ತೆರೆಯುವನು ಯಾರು ನಾನು?
347. ಹಸಿರೆಲೆಯ ಮೇಲೊಂದು ಪಸರೇ ಹಕ್ಕಿ ಕೂತಿದೆ. ಹಿಡಿಕಲಾ ಮಾವ ಹಿಟ್ಟಿಗೆ ನಂಜಿ ಕೋಮ್ |
349. ಓಡಿಯೋಣವೆಂದರೆ ಸಿಗುವುದಿಲ್ಲ, ನೋಡೋಣವೆಂದರೆ ಕಾಣುವುದಿಲ್ಲ !
35. ಹಳ್ಳದೊಳಗೆ ಕುಳ್ಳ ಕುಂತವನೆ |
351. ಅಗರಗರ ರಂಜೆ ತೊಗರಿಯ ನಿಂಬೆ ಗೌಡನ ಮಗಳು ಶೂಲಕ್ಕೆ ಬಿದ್ದಳು !
332. ಆಸಾರಾ ಕಛೇರಿಯ ಆಲದ ಮರ ಚೀಫ್ ಕೋರ್ಟು ಬಸರಿ ಮರ, ಇವೆರಡೂ ಸಿಗೋ ಹೊತ್ತಿಗೆ ಬಾ!
353. ಆರುದಾರುಂಟು ಹೀರೇಕಾಯಲ್ಲಿ, ಒಳಗೆ ಹುಳಿವುಂಟು ನಿಂಬೆಹಣ್ಣಲ್ಲ, ಮೇಲೆ ಹಸಿರುಂಟು ಹುಣಸೇಕಾಯಲ್ಲ.
354. ಬಿಳಿ ಕುದುರೆ ಹಸಿರು ಬಾಲ,
355. ಮಣ್ಣಿನಲ್ಲಿ ಹುಟ್ಟಿ, ಮಣ್ಣಿನಲ್ಲಿ ಬೆಳೆದು ಮಣ್ಣಿನಲ್ಲೇ ಸಾಯುವುದು |
36. ಮುಟ್ಟಲಾಗುವುದಿಲ್ಲ, ಪ್ರಯೋಜನೆ ಉಂಟು !
357. ಮುಳ್ಳುಂಟು ಗಿಡವಲ್ಲ, ನಾಲಿಗೆಯುಂಟು ಪ್ರಾಣಿಯಲ್ಲ ಟೋಪಿಯುಂಟು ಕಾಂಗ್ರೆಸ್ಸಲ್ಲ. ಹಾಗಾದರೆ ನಾನು ಯಾರು?
354. ಮೂವತ್ತೆರಡು ಜನ ಆಗೀತಾರೆ, ಒಬ್ಬ ರುಚಿ ನೋಡ್ತಾನೆ.
149. ಮೂರು ಕಣ್ಣುಂಟು ಈಶ್ವರನಲ್ಲ, ಜುಟ್ಟುಂಟು ಮನುಷ್ಯನಲ್ಲ, ಕಟ್ಟೆಯುಂಟು ಕೆರೆಯಲ್ಲ, ನೀರುಂಟು ನಿಲ್ಲ, ಹಾಗಾದರೆ
10. ವ್ಯಾಪಾರ ಸಾಪಾರ ಯಾವಾಗ ? ಎದುರು ಬದುರು ಆದಾಗ, ಅಳೋದು ಪಳೋದು ಯಾವಾಗ ? ಅರ್ಧ ಒಳಗೆ ಹೋದಾಗ, ನಗೋದು ಪಗೋದು ಯಾವಾಗ ? ಪೂರ್ತಿ ಒಳಗೆ ಹೋದಾಗ,
361. ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ.
362. ಕೊನೆಯವರೆಗೂ ಹೂವಿಲ್ಲ ಹಣ್ಣು ಮಾತ್ರ ಬಿಡ್ತದೆ.
363. ಸುತ್ತ ಮುತ್ತ ಸುಣ್ಣದ ಗೋಡೆ ಎತ್ತ ನೋಡಿದರೂ ಬಾಗಿಲಿಲ್ಲ !
364. ಕುದುರೆಯಿಲ್ಲದ ಕೋಎ!
365. ಕುರುಬರ ಹೈದರಿಗೆ ಮೈಯೆಲ್ಲ ಜುಂಗು.
366. ಕುದುರೆ ಮೇಲೆ ಕೂತ ಕೊಳಾರಿ, ಬೆತ್ತದ ಹಿಡಿ ಹಿಡಿಲಾರಿ, ಬಿದ್ದಿದ್ದ ಹೂವು ಮುಡಿಲಾರಿ !
367. ಕೂತ ಜಾಗಕೆ ಬರದೆ ಆಯಸ್ಸು ಕೇಳಾಕೆ, ಅದರ ಮೇಲೆ ಜೇಡಿ ಮಣ್ಣಿನದು ಅವರೆ ಹುಳಾನ ತಿಂತದೆ ಅದೂ ಊರದೆ ಒ೦ತಾವೂ ನಿಲ್ಲೋದಿಲ್ಲ !
368. ಕೆಂದಾವರೆ ಕೊಳದಲ್ಲಿ ಸೂಸಿ ಹುಟ್ಟಿ ಎಳಸು ಎಂಭತ್ತು, ಕುಸುರಿ ಮುವ್ವತ್ತು ಹೆಸರು ಹೇಳಿದವರಿಗೆ ಮೊಸರು ಅನ್ನ,
369. ಕೆಂಡದಂಥ ಕೆಂಪು, ಉಂಗುರದಂಥ ನುಣುಪು, ಅಪ್ಪ ಊಟ ಮಾಡ್ತೀನಿ ಅ೦ದ್ರೆ ನಾ ಹೇಳೀನಿ ಎಂದ.
370. ಕೂಸು ಕುದುರೆ ಗಾತ್ರ, ಮಾಸು ಮನೆಗಾತ್ರ, ಕೂಸಿನವರ ತಾಯಿ ಸಾಸಿವೆ ಗಾತ್ರ .
371. ಕೆ೦ಡಗಣ್ಣಿನಂತಹ ಲಿಂಗ ದೇವರಂತೆ ನೆಲಮಾಳಿಗೆಯೊಳಗೆ ಮೂರು ತಿಂಗಳು ಇದ್ದರಂತೆ ಗುದ್ದಲಿ ಗುರು ಶಾಂತಪ್ಪೋರು ‘ಬ೦ದು ಅಬ್ಬರಿಸಿದಾಗ ‘ಪರ ಪರ’ ನರ ಮುಟ್ಟಿತೆ೦ದು ಅಬ್ಬರಿಸಿದರು.
Kannada Ogatugalu Answers
Download answers of Kannada ogatu pdf and check your knowledge,
Here you learnt about Kannada ogatugalu and there answers and hope you enjoyed reading♥️