Aanege hoda maana

ಆನೆಯ ಮೇಲೆ ಅಂಬಾರಿ ಕಟ್ಟಿಸಿಕೊಂಡು, ಅಕ್ಟರ್‌ ಬಾದಷಾ ಹಾಗು ಬೀರಬಲ್ ಜತೆಯಾಗಿ ರಾಜಬೀದಿಯಲ್ಲಿ ಹೊರಟಿದ್ದಾರೆ. ಆ ಸಮಯದಲ್ಲಿ ಎದುರಿಗೆ ಬಂದ ಕುಡುಕನೊಬ್ಬ, ಜೋಲಿ ಹೊಡೆಯುತ್ತ ಅಲ್ಲಿಯೇ ನಿಂತುಕೊಂಡ.

“ಸಾಮ್ರಾಟರು ಬರುತ್ತಿದ್ದಾರೆ… ದಾರಿಯ ಬದಿಗೆ ನಿಂತುಕೊ” ಎಂದು ಜನರು ಅವನಿಗೆ ಎಚ್ಚರಿಸಿದ್ದು, ಪ್ರಯೋಜನವಾಗಲಿಲ್ಲ.

ದಾರಿಗಡ್ಡವಾಗಿ ನಿಂತುಕೊಂಡೇ “ಓಹೋ… ನೀವಿಬ್ಬರು ಈ ಆನೆಯ ಮಾಲಿಕರೊ! ನನಗೊಂದು ಆನೆ ಬೇಕಾಗಿದೆ. ಹೇಳಿ ಈ ಆನೆಯನ್ನು ಮಾರುವಿರಾ? ಎಷ್ಟಾದರೂ ಸರಿ, ದುಡ್ಡು ಕೊಡಬಲ್ಲೆ” ಗುಂಡಿನ ಮತ್ತಿನಲ್ಲಿ ಕೇಳಿದ.

ಆತನ ಮಾತು ಕೇಳಿದ ಬಾದಷಾಗೆ ಕೋಪಬಂತು. ಹಾಗೆಲ್ಲ ಕಂಡಕಂಡಲ್ಲಿ ಸಿಟ್ಟಿಗೇಳುವದು ತನಗೆ ಭೂಷಿತವಲ್ಲವೆಂದು ಸುಮ್ಮನಾದ. ನಾಳೆ ದರ್ಬಾರಿನಲ್ಲಿ ಈ ಕುಡುಕನನ್ನು ವಿಚಾರಿಸಿದರಾಯಿತು ಎಂದುಕೊಂಡ.

“ಮಹಾರಾಜ್, ಕುಡುಕನೊಬ್ಬನ ಮಾತುಗಳನ್ನು ಅಷ್ಟೊಂದು ಗಂಭೀರವಾಗಿ ಸ್ವೀಕರಿಸಬೇಡಿ. ಈ ಪ್ರಸಂಗವನ್ನು ಮರೆತುಬಿಡುವದು ಒಳಿತು” ಬೀರಬಲ್ ಹಿತಮಾತು ಹೇಳಿದ.

“ಅಲ್ಲಯ್ಯ, ಸಾಮ್ರಾಟರಾದ ನಮ್ಮ ಆನೆಯನ್ನೇ ಕೊಳ್ಳಲು ಬಂದಿದ್ದಾನಲ್ಲ…! ಎಷ್ಟಯ್ಯ ಈತನ ಸೊಕ್ಕು?” ಕೋಪದಿಂದಲೇ ಕೇಳಿದನು ಅಕ್ಟರ್, ಆತನ ಕೋಪ ಇನ್ನೂ ಶಮನವಾಗಿರಲಿಲ್ಲ.

 

ಮರುದಿನ, ರಾಜ ಸೈನಿಕರು, ಆ ಕುಡುಕನನ್ನು ಪತ್ತೆ ಹಚ್ಚಿ, ಮಹಾರಾಜರ ಮುಂದೆ ಮಾಜರು ಪಡಿಸಿದರು.

“ಓಹೋ…! ನೀನೇನೋ ನಮ್ಮ ಆನೆಯನ್ನು ಕೊಂಡುಕೊಳ್ಳಲು ಬಂದಿದ್ದವನು ? ಹೇಳು, ನಿನ್ನ ಹತ್ತಿರ ಎಷ್ಟು ಹಣವಿದೆ?” ಕೆಂಗಣ್ಣಿನಿಂದಲೇ ಬಾದಷಾ ಕೇಳಿದ.

“ಜಹಾಂಪನಾ, ನನ್ನದು ತಪ್ಪಾಯಿತು. ದಯವಿಟ್ಟು ನನ್ನ ಅಪರಾಧವನ್ನು ಕ್ಷಮಿಸಬೇಕು” ಅಡ್ಡಬಿದ್ದ.

“ಹೇಳು, ನೀನು ಸಾಮ್ರಾಟರ ಆನೆಯನ್ನು ಖರೀದಿಸುವಷ್ಟು ಶ್ರೀಮಂತನೊ ? ನೋಡಿಯೇ ಬಿಡೋಣ, ನಿನ್ನ ದೌಲತ್ತು ಎಷ್ಟಿದೆ ಎಂಬುದನ್ನು ಮತ್ತೆ ಕೇಳಿದರು ಬಾದಷಾ.

“ನಾನಲ್ಲ ಬಾದಷಾ, ಆನೆ ಖರೀದಿಸಬೇಕಾದವನು. ಮುತ್ತಿನ ವ್ಯಾಪಾರಸ್ಥ ನೊಬ್ಬನಿಗೆ ಆನೆ ಬೇಕಾಗಿತ್ತು… ನಾನು ಬರೀ ದಲಾಳಿ ಮಾತ್ರ, ಆದರೆ ನಿನ್ನೆ ಆ ವ್ಯಾಪಾರಿ ಸತ್ತುಹೋದ. ಹೀಗಾಗಿ ಖರೀದಿಸುವದು ಸಾಧ್ಯವಾಗುವದಿಲ್ಲ” ಆ ಕುಡುಕ ಎರಡೂ ಕೈ ಜೋಡಿಸಿ, ವಿನಯಪೂರ್ವಕ ವಾಗಿ ಅರುಹಿದ.

ಆತನ ಬುದ್ಧಿವಂತಿಕೆಯ ಈ ಉತ್ತರದ ಹಿಂದೆ ಯಾರಿದ್ದಾರೆ ಎಂಬುದು ಅಕ್ಷರನ ಸೂಕ್ಷ್ಮಮತಿಗೆ ಅರ್ಥವಾಯಿತು. “ಹೇಳು, ಈ ಮಾತುಗಳು ನಿನ್ನವೋ.. ಅಥವಾ ಬೇರೆಯವರು ಹೇಳಿಕೊಟ್ಟರಾ…?” ಮಹಾರಾಜ್‌ರು ಕೇಳಿದರು.

“ಜಹಾಂಪನಾ, ನಿನ್ನೆ ರಾತ್ರಿ ನನ್ನ ನಶೆ ಇಳಿದ ಮೇಲೆ, ನಾನು ಮಾಡಿದ ಬಾ ಅಚಾತುರ್ಯ ಅರಿವಿಗೆ ಬಂತು. ಇಂದು ಬೆಳಿಗ್ಗೆ ಬೀರಬಲ್‌ರನ್ನು ಕಂಡಾಗ….” ಎಂದು ಕುಡುಕನ ಮಾತು ಅರ್ಧಕ್ಕೆ ತಡೆದ ಮಹಾರಾಜ್‌ರು “ತಿಳಿಯಿತು ಬಿಡು… ಇದೆಲ್ಲ ನಮ್ಮ ಬೀರಬಲ್‌ನ ಉಪಾಯ” ಎಂದು ಹೇಳಿ, ಇನ್ನು ಮುಂದೆ ಸೆರೆ ಕುಡಿಯದಂತೆ ಆತನಿಂದ ಪ್ರಮಾಣ ಮಾಡಿಸಿಕೊಂಡುಬಿಟ್ಟರು. ಬದುಕಿದೆಯಾ ದಾಕ ಬಡಜೀವವೇ ಎಂದು ಕುಡುಕ ನಿಟ್ಟುಸಿರು ಬಿಟ್ಟ.

Leave a Comment

error: Content is protected !!
%d bloggers like this: