Ardha bisilu, ardha neralina nadige

ಒಂದು ಸಲ, ಅಕ್ಟ‌-ಬೀರಬಲ್‌ರ ಮಧ್ಯೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಮನಸ್ತಾಪ ಉಂಟಾಗಿತ್ತು. ಅದುವೇ ಮುಂದೆ ಬಾದಷಾರ ಕೋಪಿಗೆ ಕಾರಣವೂ ಆಯಿತು. “ಈಗೀಂದಿಗೆ, ನಮ್ಮ ನಗರ ಬಿಟ್ಟು ಹೊರಗೆ ಹೋಗು. ನಿನ್ನನ್ನು ಗಡಿಪಾರು ಮಾಡಲಾಗಿದೆ…” ಸಾಮ್ರಾಟರು ಆಜ್ಞೆ ಮಾಡಿದರು.

ಸ್ವಾಭಿಮಾನಿಯಾಗಿದ್ದ ಬೀರಬಲ್ ಊರನ್ನ ತೊರೆದು ಬಿಟ್ಟ. ಆತ ದೂರದ ಒಂದು ಹಳ್ಳಿಗೆ ಹೋಗಿ, ಅಲ್ಲಿ ವೇಷ ಬದಲಿಸಿಕೊಂಡು ವಾಸ ಮಾಡತೊಡಗಿದ.

ಬೀರಬಲ್‌ನಿಲ್ಲದೆ ದರ್ಬಾರು ತನ್ನ ಲವಲವಿಕೆ ಕಳೆದುಕೊಂಡಿತು. ಆತನ ಗೈರುಹಾಜರಿಯಿಂದಾಗಿ ಸಭೆಯಲ್ಲಿ ಚರ್ಚೆಗಳು ನೀರಸವೆನಿಸತೊಡಗಿದವು. ಆ ಬೀರಬಲ್‌ನ ವಿನೋದದ ಮಾತುಗಳನ್ನು ಕೇಳುವ ಭಾಗ್ಯ ತಪ್ಪಿ ಹೋಗಿದ್ದಕ್ಕೆ ಅಕ್ಟರ್ ಕಳಾಹೀನನಾದ.

ಬೀರಬಲ್‌ನನ್ನು ಕ್ಷಮಿಸಿ, ಆತನನ್ನು ಮರಳಿ ಕರೆಯಿಸಿಕೊಳ್ಳಬೇಕೆಂದರೆ, ಅ ಆಸಾಮಿ ಪತ್ತೇ ಇಲ್ಲ. ಎಲ್ಲ ಕಡೆ ಸೇವಕರನ್ನು ಕಳಿಸಿ, ಆತನನ್ನು ಹುಡುಕ ಲಾಯಿತು. ಆದರೂ ಬೀರಬಲ್‌ನ ವಾಸ್ತವ್ಯ ಯಾರಿಗೂ ತಿಳಿಯಲಿಲ್ಲ.

ಕೊನೆಗೆ ಬಾದಷಾನಿಗೆ ಒಂದು ಹಂಚಿಕೆ ಹೊಳೆಯಿತು. “ಯಾರಾದರೂ ಅರ್ಧ ಬಿಸಿಲು, ಅರ್ಧ ನೆರಳಿನಲ್ಲಿ ನಡೆದುಕೊಂಡು ಅರಮನೆಗೆ ಬಂದು ಬಾದಷಾರನ್ನು ಕಂಡರೆ ಅವರಿಗೆ ಎರಡು ಸಾವಿರ ನಾಣ್ಯಗಳನ್ನು ಕೊಡಲಾಗುವದು” ಘೋಷಣೆಯನ್ನು ರಾಜ್ಯದ ಎಲ್ಲೆಡೆ ಸಾರಲಾಯಿತು.

ಕೇಳಿದವರಿಗೆಲ್ಲ ಬಹುಮಾನ ಪಡೆಯುವ ಆಶೆ, ಆದರೆ ಅರ್ಧ ಬಿಸಿಲು, ಇನ್ನರ್ಧ ನೆರಳಿನಲ್ಲಿ ನಡೆದುಕೊಂಡು ಹೋಗೋದು ಹೇಗೆ? ಉಪಾಯ ತಿಳಿಯದ ಪೇಚಾಡಿದರು.

ಈ ಬಹುಮಾನದ ಸಮಾಚಾರ ಬೀರಬಲ್‌ನ ಕಿವಿಗೂ ಮುಟ್ಟಿತು. ಬಹುಮಾನ ಪಡೆಯುವ ಹಂಚಿಕೆಯೂ ಅವನ ಮನದಲ್ಲಿ ರೂಪ ತಾಳಿತು. ಅದನ್ನು ತಕ್ಷಣ ಕಾರ್ಯರೂಪಕ್ಕೆ ಇಳಿಸಿದ್ದು ಹೀಗೆ, ಬೀರಬಲ್ ಒಂದು ಮಂಚವನ್ನು ಸಿದ್ಧಗೊಳಿಸಿದ. ಆ ಮಂಚಕ್ಕೆ ನೂಲಿನ ಪಟ್ಟಿಗಳನ್ನು ಹೆಣೆದ. ಆಮೇಲೆ, ತನ್ನ ಗುಡಿಸಲ ಪಕ್ಕದಲ್ಲಿದ್ದ ಒಬ್ಬ ರೈತನನ್ನು ಕರೆದು ಹೇಳಿದ

“ತಗೋ, ಈ ಮಂಚವನ್ನು ತಲೆಯ ಮೇಲೆ ಹೊತ್ತುಕೊಂಡು ಬಾದಷಾರ ಹತ್ತಿರ ನಡೆದುಕೊಂಡು ಹೋಗು. “ಮಹಾರಾಜ್ ತಮ್ಮ ಆಜ್ಞೆಯಂತೆ ನಾನು ಅರ್ಧ ಬಿಸಿಲು ಹಾಗು ಇನ್ನರ್ಧ ನೆರಳಿನಲ್ಲಿ ತಮ್ಮ ಅರಮನೆಗೆ ನಡೆದುಕೊಂಡು ಬಂದಿದ್ದೇನೆ. ನನಗೆ ಬಹುಮಾನ ಕೊಡಿ” ಎಂದು ಕೇಳಿಕೊ. ನಿನಗೆ ಎರಡು ಸಾವಿರ ನಾಣ್ಯಗಳು ಸಿಗುತ್ತವೆ. ಹೋಗು ಇದರಿಂದ ನಿನ್ನ ಬಡತನವಾದರೂ ಸ್ವಲ್ಪಮಟ್ಟಿಗೆ ನೀಗೀತು” ಎಂದ.

 

ಆ ಪ್ರಕಾರ, ಬಡರೈತ ಬೀರಬಲ್‌ನ ಮಾತಿನಂತೆ, ಮಂಚವನ್ನು ಹೊತ್ತುಕೊಂಡು ಅರಮನೆಗೆ ಬಂದ. ಅಕ್ಟರ್‌ರನ್ನು ಕಂಡು, ತನಗೇ ಬಹುಮಾನ ಕೊಡಬೇಕು ಎಂದು ಕೇಳಿಕೊಂಡ. ಆತನ ಉಪಾಯ ಕಂಡು ಅಕ್ಟರ್‌ಗೆ ಸಂತೋಷವಾಯಿತು. ಆದರೆ ಖಂಡಿತವಾಗಿಯೂ ಇದು ಈ ರೈತನ ಸ್ವಂತ ಆಲೋಚನೆಯಲ್ಲ, ಇಂಥ ಆಲೋಚನೆಗಳೆಲ್ಲ ಹೊಳೆಯುವದು ಬೀರಬಲ್‌ನಿಗೆ ಮಾತ್ರ ಎಂಬುದು ಅಕ್ಟರ್ ಅರಿತ ವಿಷಯವೇ ಆಗಿತ್ತು.

“ನಿಜ ಹೇಳು, ನಿನಗೆ ಈ ಹಂಚಿಕೆ ಯಾರು ಹೇಳಿಕೊಟ್ಟರು?” ಬಾದಷಾ ಪ್ರಶ್ನಿಸಿದ.

“ಮಾಫ್ ಕರನಾ ಜಹಾಂಪನಾ, ನಮ್ಮ ಹಳ್ಳಿಯಲ್ಲಿ ಒಬ್ಬ ಪಂಡಿತ ನಿದ್ದಾನೆ. ಆತನ ಹೆಸರು ನನಗೆ ಗೊತ್ತಿಲ್ಲ. ಕೇಳಿದರೆ ಯಾರಿಗೂ ಹೆಸರು ನಿ ಹೇಳುವದಿಲ್ಲ, ಅವನೇ ನನಗೆ ಈ ಉಪಾಯ ಹೇಳಿಕೊಟ್ಟವನು…” ರೈತ ವಿವರಿಸಿದ.

ಅಕ್ಟರ್‌ ಆ ರೈತನಿಗೆ ಎರಡು ಸಾವಿರ ನಾಣ್ಯಗಳನ್ನು ಕೊಟ್ಟು ಹೇಳಿದ, “ನಡೆ, ನಿಮ್ಮ ಜತೆ ನಾವೂ ಬರುತ್ತೇವೆ. ನಿಮ್ಮ ಹಳ್ಳಿಯ ಪಂಡಿತನನ್ನು ನಾವೂ ನೋಡಬೇಕಲ್ಲ.” ಅವನೊಂದಿಗೆ ಅಕ್ಟರ್‌ ಹೊರಟ. ಅಲ್ಲಿಗೆ ಬಂದು, ನೋಡಿದರೆ ಆ ಪಂಡಿತ ಬೇರಾರೂ ಆಗಿರದೆ ಬೀರಬಲ್‌ನೇ ಆಗಿದ್ದ.

“ಸಣ್ಣ ಪುಟ್ಟ ವಿಷಯಕ್ಕೆಲ್ಲ ಸಿಟ್ಟು ಮಾಡಿಕೊಂಡು, ಹೀಗೆ ಮುಖ ತಪ್ಪಿಸಿಕೊಂಡು ಇರೋದೆ ?” ಆಕ್ಷೇಪಿಸುವ ಸ್ವರದಲ್ಲಿ ಅಕ್ಟರ್‌ ಕೇಳಿದರೆ, “ಜಹಾಂಪನಾರ ಆದೇಶ ಪಾಲಿಸುವದು ಈ ಬಡ ಗುಲಾಮನ ಕರ್ತವ್ಯವಲ್ಲವೆ… ಅದಕ್ಕಾಗಿ ನಾನು ಇಲ್ಲಿ ಬಂದು, ತಲೆ ಮರೆಸಿಕೊಂಡು ಇರಬೇಕಾಯಿತು” ಬೀರಬಲ್ ಕೈ ಮುಗಿದು ಹೇಳಿದ.

“ಈಗ ನಮ್ಮ ಆಜ್ಞೆ ಹಿಂದಕ್ಕೆ ಪಡೆದಿದ್ದೇವೆ… ಈಗಿಂದೀಗ ನೀನುನಮ್ಮ ಜತೆ, ರಾಜಧಾನಿಗೆ ಬರಬೇಕು…” ಹುಸಿಕೋಪದಿಂದ ಬಾದಷಾ ಹೇಳಿ ತಮ್ಮೊಂದಿಗೆ ಬೀರಬಲ್‌ನನ್ನು ಕರೆತಂದರು. ಮತ್ತೆ, ಬಾದಷಾನ ದರ್ಬಾರಿಗೆ ಎಂದಿನ ಕಳೆ ಬಂತು.

Leave a Comment

error: Content is protected !!
%d bloggers like this: