Angaiyali eke kudalugalilla?

ಒಂದು ದಿನ, ಅಕ್ಟರ್ ಬಾದಷಾ, ಸುಮ್ಮನೆ ತನ್ನ ಅಂಗೈಗಳನ್ನು ನೋಡುತ್ತ ಕುಳಿತಾಗ, ಒಂದು ವಿಚಾರ ಆತನಿಗೆ ಬಂತು, “ಈ ಅಂಗೈಯಲ್ಲಿ ಕೂದಲುಗಳೇಕೆ ಇಲ್ಲ??”

“ಈ ಪ್ರಶ್ನೆ ಕೇಳಿ, ಬೀರಬಲ್‌ನನ್ನು ಪೇಚಿಗೆ ಸಿಲುಕಿಸಬೇಕು, ನೋಡೋಣ ಅವನೇನು ಹೇಳುತ್ತಾನೆ?” ಅಂದೊಂಡ ಅಕ್ಟ‌, ಮರುದಿನ ದರ್ಬಾರ್‌ನಲ್ಲಿ ಈ ಪ್ರಶ್ನೆ ಆತನಿಗೆ ಕೇಳಿಯೇ ಬಿಟ್ಟ.

“ಬೀರಬಲ್, ನನ್ನ ಈ ಅಂಗೈಗಳಲ್ಲಿ ಕೂದಲುಗಳೇಕೆ ಇಲ್ಲ?”

“ಜಹಾಂಪನಾ, ತಾವು ದಾನಶೂರರು, ಕೊಡುಗೈ ದೊರೆಗಳು. ಯಾವಾಗಲೂ ಬಡವರಿಗೆ ದಾನ ಕೊಡುತ್ತೀರಿ. ಇದರಿಂದ ಆ ವಸ್ತುಗಳು, ನಿಮ್ಮ ಎರಡೂ ಕೈಗಳಿಗೆ ಸ್ಪರ್ಶಿಸಿ, ತಿಕ್ಕಿ ಹೋಗುವದರಿಂದಾಗಿ, ನಿಮ್ಮ ಅಂಗೈಯ ಮೇಲೆ ಕೂದಲು ಬೆಳೆಯಲು ಸಾಧ್ಯವೇ ಆಗುವದಿಲ್ಲ” ತಕ್ಷಣ ಉತ್ತರಿಸಿದ್ದ ಬೀರಬಲ್.

ಪ್ರಶಂಸೆಯ ಮಾತುಗಳಿಗೆ ಯಾರು ಪ್ರಸನ್ನರಾಗುವದಿಲ್ಲ! ಉಬ್ಬಿಹೋದ ಬಾದಷಾ, ಬೀರಬಲ್‌ಗೆ ದೊಡ್ಡ ಬಕ್ಷೀಸು ಕೊಟ್ಟ.

ಇದಾಗಿ ಒಂದೆರಡು ದಿನಗಳಾಗಿರಬೇಕು, ಅಕ್ಟರ್‌ಗೆ ಮತ್ತೊಂದು ವಿಚಾರ ಬಂತು. “ನಾವೇನೋ ದಾನ ಕೊಡುವದರಿಂದ, ನಮ್ಮಂತವರ ಅಂಗೈಯ ಮೇಲೆ ಕೂದಲುಗಳು ಬೆಳೆಯುವದಿಲ್ಲ. ಆದರೆ ಈ ಬೀರಬಲ್ ಯಾರಿಗೂ ದಾನ-ಧರ್ಮ ಮಾಡುವವನಲ್ಲ… ಅವನ ಅಂಗೈ ಮೇಲೇಕೆ ಕೂದಲುಗಳಿಲ್ಲ…?” ಕೇಳಿಯೇ ಬಿಡೋಣ… ಎಂದು ಅಕ್ಟರ್‌ ಆಲೋಚಿಸಿದ.

ಮರುದಿನದ ದರ್ಬಾರ್‌ನಲ್ಲಿ ಮರೆಯದೆ ಅಕ್ಟರ್ ಕೇಳಿದ “ಬೀರಬಲ್, ಮೊನ್ನೆ ನನ್ನ ಅಂಗೈಯಲ್ಲಿ ಕೂದಲು ಏಕೆ ಬೆಳೆದಿಲ್ಲ ಎಂಬ ಪ್ರಶ್ನೆಗೆ, ದಾನ ನೀಡಿ ನೀಡಿ, ನನ್ನ ಅಂಗೈಯಲ್ಲಿ ಘರ್ಷಣೆಯಾಗುತ್ತದೆ. ಆ ಕಾರಣಕ್ಕೆ ಕೂದಲು ಬೆಳೆಯುವದಿಲ್ಲ ಅಂತ ಹೇಳಿದ್ದೆ. ಅದೇನೊ ಸರಿ, ಆದರೆ ನೀನಾವ ದಾನ ಮಾಡುತ್ತಿ ಎಂದು ನಿನ್ನ ಅಂಗೈಯಲ್ಲಿ ಕೂದಲುಗಳು ಬೆಳೆದಿಲ್ಲ?” ಅಕ್ಟರ್‌ನ ಮಾತುಗಳಲ್ಲಿ ವ್ಯಂಗ್ಯವಿತ್ತು… ಆದರೆ ಕುಚೋಗ್ಯತನ ವಿರಲಿಲ್ಲ.

ತಮ್ಮಿಂದ ಕಾಣಿಕೆಗಳನ್ನು ಪಡೆಯುತ್ತಲೇ “ಜಹಾಂಪನಾ, ಇರುವದರಿಂದ, ಸದಾಕಾಲ ಘರ್ಷಣೆಯಾಗಿ, ನನ್ನ ಅಂಗೈಯ ಕೂಡ ಬೋಳಾಗಿದೆ… ಇಲ್ಲಿ ಕೂದಲು ಬೆಳೆದಿಲ್ಲ.” ಸಹಜವಾಗಿ ಬೀರಬಲ್ ಉತ್ತರಿಸಿದ.

ಮತ್ತೆ ಜಹಾಂಪನಾ ಖುಷಿ ಆದರು. ಮತ್ತೆ ಆತನಿಗೆ ಉಡುಗೊರೆ ಕೊಡಲು ಸಿದ್ಧರಾಗುತ್ತಿದ್ದಂತೆ, ದರ್ಬಾರ್‌ದ ಒಬ್ಬ ಪಂಡಿತ ಎದ್ದುನಿಂತು “ಅದೆಲ್ಲ ಸರಿ, ಸಾಮ್ರಾಟರೆ, ತಾವು ಕೊಡುತ್ತೀರಿ… ಈತ ಸದಾ ಪಡೆಯುತ್ತಲೇ ಇರುತ್ತಾನೆ… ಆದ್ದರಿಂದ ತಮ್ಮಿಬ್ಬರ ಅಂಗೈಯಲ್ಲಿ ಕೂದಲು ಬೆಳೆದಿಲ್ಲ… ಒಪ್ಪಿಕೊಳ್ಳೋಣ. ಪರಂತೂ, ನಮ್ಮ ದರಬಾರದ ಎಲ್ಲ ಸದಸ್ಯರೂ ಈ ಬೀರಬಲ್‌ನಷ್ಟು ಸುದೈವಿಗಳಲ್ಲವಲ್ಲ. ಹಾಗಿದ್ದಲ್ಲಿ ನಮ್ಮ ಅಂಗೈಯಲ್ಲಿ ಯಾಕೆ ಕೂದಲುಗಳು ಬೆಳೆದಿಲ್ಲ?” ಪ್ರಶ್ನೆ ಎಸೆದಿದ್ದ.

“ಅರೇ…! ಹೌದಲ್ಲ ಬೀರಬಲ್! ಈ ಪಂಡಿತನು ಹೇಳುವ ಮಾತಿನಲ್ಲಿ ಅರ್ಥವಿದೆ. ಇದಕ್ಕೇನು ಹೇಳುತ್ತೀ?” ಅಕ್ಟರ್ ಕೇಳಿದ.

“ಉತ್ತರ ಅವರ ಪ್ರಶ್ನೆಯಲ್ಲಿಯೇ ಇದೆ ಸಾಮ್ರಾಟರೆ, ಈ ಬೀರಬಲ್ ನಷ್ಟು ನಾವು ಸುದೈವಿಗಳಲ್ಲವಲ್ಲ ಎಂಬ ಹೊಟ್ಟೆಕಿಚ್ಚಿನಿಂದ ಅವರು ಯಾವಾಗಲೂ ತಮ್ಮ ಕೈಗಳನ್ನು ಉಜ್ಜಿಕೊಳ್ಳುತ್ತಲೇ ಇರುತ್ತಾರೆ. ಅಂದಾಗ, ಅವರ ಅಂಗೈಯಲ್ಲಿ ಕೂದಲು ಹೇಗೆ ಬೆಳೆದಾವು!” ಬೀರಬಲ್‌ನ ಮಾತಿಗೆ ಉಳಿದೆಲ್ಲ ಪಂಡಿತರು ನಾಚಿ ತಲೆ ತಗ್ಗಿಸಿದರು.

ಪ್ರಶ್ನೆ ಕೇಳಿದ್ದಾತ ಅವಮಾನಿತನಾದ. ಮಾತಿನಲ್ಲಿ ಯಾರಿಗೂ ಸೋಲದ ಬೀರಬಲ್‌ಗೆ ಅಂದು ಅಕ್ಟರ್‌ ದೊಡ್ಡ ಉಡುಗೊರೆಯನ್ನೇ ಕೊಟ್ಟು ಗೌರವಿಸಿದರು.

Leave a Comment

error: Content is protected !!
%d bloggers like this: