Nelada mele oole, gidadalli gadige

ಚಳಿಗಾಲದ ಒಂದು ದಿನ. ಅಂದು ಅನುಭವವಾಯಿತು. ಯಾವಾಗಲೂ ಬೆಚ್ಚಗೆ ಅಂತಃಪುರದಲ್ಲಿರುತ್ತಿದ್ದ ಬಾದಷಾ ಆ ಬೆಳಿಗ್ಗೆ ಅದೇಕೋ ಒಂದಿಷ್ಟು ಹೊತ್ತು ಹೊರಗೆ ಬಂದಿದ್ದ. ಅಹಹಾ…! ಗಡಗಡ ನಡುಗಿದ್ದ. ಬೆಳಿಗ್ಗೆ ಅಕ್ಟರ್‌ಗೆ ಚಳಿಯ ವಿಪರೀತ.

ಇಂಥ ಸಮಯದಲ್ಲೇ, ವಿಚಿತ್ರ ಆಲೋಚನೆಗಳು ಮಹಾರಾಜ್‌ಗೆ ಹೊಳೆಯುವದು. ಕೂಡಲೆ ಮಂತ್ರಿಗಳನ್ನು ಕರೆದು “ಯಾರಾದರೂ ಈ ಚಳಿಯಲ್ಲಿ ಇಡೀ ರಾತ್ರಿ ನೀರಿನಲ್ಲಿ ಕುಳಿತು ಕಳೆದರೆ, ಅವರಿಗೆ ಸಾವಿರ ಬಂಗಾರದ ನಾಣ್ಯಗಳನ್ನು ಕೊಡಲಾಗುವದು ಎಂದು ಡಂಗೂರ ಸಾರಬೇಕು” ಅಪ್ಪಣೆ ಮಾಡಿದ.

ಹಣದ ಆಶೆ ಬಹಳ ಕೆಟ್ಟದ್ದು, ಅದು ಬಡವರನ್ನೂ ಬಿಟ್ಟಿಲ್ಲ. ಶ್ರೀಮಂತರನ್ನೂ ಬಿಟ್ಟಿಲ್ಲ, ಅದರ ಅಗತ್ಯವಿದ್ದವರು ಪ್ರಾಣಕ್ಕೂ ಹೆದರುವದಿಲ್ಲ. ದೆಹಲಿಯಲ್ಲೊಬ್ಬ ಕಡುಬಡವನಿದ್ದ. ಆತನ ಹೆಸರು ಹಾರೂನ್‌ಸಾಬ್ ಮಗಳ ಮದುವೆಗೆ ಹಣ ಹೊಂದಿಸಲು ಪರದಾಡುತ್ತಿದ್ದ. ಬಾದಷಾ ಸಾರಿದ ಡಂಗೂರದ ವಿಷಯ ತಿಳಿದು, ಹಾರೂನ್‌ ಸಾಬ್‌ಗೆ ಆಶೆ ಬಲಿಯಿತು.

“ಜಹಾಂಪನಾ, ಒಂದು ಇಡೀ ರಾತ್ರಿ ನಾನು ನೀರಿನಲ್ಲಿ ಇರುತ್ತೇನೆ” ಅರಮನೆಗೆ ಬಂದು, ಬಾದಷಾರಿಗೆ ಹೇಳಿದ. ಆತನ ಬಡಕಲು ಶರೀರ ಕುರುಚಲ ಗಡ್ಡ ನೋಡಿ, ಅಕ್ಟರ್‌ಗೆ ಅನುಮಾನ ಬಂತು. “ನೋಡಯ್ಯಾ.. ಇದು ದೆಹಲಿಯ ಚಳಿ, ಎಷ್ಟು ಘೋರ ನಿನಗೂ ಗೊತ್ತಲ್ಲ…?” ಪ್ರಶ್ನಾರ್ಥಕವಾಗಿ ನೋಡಿದ.

“ಗೊತ್ತು ಹುಜೂ‌! ನಮ್ಮಂಥ ಗರೀಬ್‌ರಿಗೆ ಇದೇನು ಹೊಸದೆ? ಬದುಕು ನಮ್ಮನ್ನು ಎಲ್ಲದಕ್ಕೂ ಗಟ್ಟಿಗೊಳಿಸಿರುತ್ತದೆ” ತಲೆ ತಗ್ಗಿಸಿ, ಹಾರೂನ್‌ಸಾಬ್‌ ನುಡಿದ.

“ಹಾಗಿದ್ದರೆ ಆಗಿಯೇ ಹೋಗ್ಲಿ…” ಎಂದ ಬಾದಷಾ, ಅರಮನೆಯ ಹೂದೋಟದ ಕೊಳದಲ್ಲಿ ಆ ರಾತ್ರಿ ಕುಳಿತುಕೊಳ್ಳುವಂತೆ ಹೇಳಲಾಯಿತು. ಕುತ್ತಿಗೆ ತನಕ ನೀರು ಇತ್ತು. ರಾಜಭಟರ ಕಣ್ಣರಿಕೆಯಲ್ಲಿ ಹಾರೂನ್, ಇಡೀ ರಾತ್ರಿ, ಅರಮನೆಯ ಹೂದೋಟದ ಕೊಳದಲ್ಲಿ ಕಳೆದ. ಚಳಿಯಿಂದ ಆತನ ಮೈ ಮರಗಟ್ಟಿದ್ದರೂ… ದುಡ್ಡಿನ ಅಗತ್ಯ, ಮಗಳ ಮದುವೆ ಹಾರೂನ್‌ನನ್ನು ಗಟ್ಟಿ ಮಾಡಿತ್ತು.

ಬೆಳಿಗ್ಗೆ ಗಡಗಡ ನಡುಗುತ್ತ, ರಾಜಭಟರೊಂದಿಗೆ ಅರಮನೆಗೆ ಹಾರೂನ್ ಹೋದ. ಆತ ಇಡೀ ರಾತ್ರಿ ನೀರಿನಲ್ಲಿ ಕುಳಿತದ್ದನ್ನು ರಾಜಭಟರು ನಿರೂಪಿಸಿದರು. ಬಾದಷಾಗ ತುಂಬ ಸೋಜಿಗವೆನಿಸಿತು.

“ಅದ್ದೇನಯ್ಯಾ, ಇಂಥ ಚಳಿಯಲ್ಲಿ ನೀನು ನೀರಿನಲ್ಲಿದ್ದದ್ದು…! ನಿನಗೆ ಥಂಡಿ ಅನಿಸಲಿಲ್ಲವೆ?” ಬಾದಷಾ ಆತನನ್ನು ಕೇಳಿದರು.

“ಅನಿಸುತ್ತಿತ್ತು ಹುಜೂರ್… ಆದರೂ ತಮ್ಮ ಅರಮನೆಯ – ದೀಪಗಳಿದ್ದವಲ್ಲ…, ಅವುಗಳನ್ನೇ ನೋಡುತ್ತಾ, ನೋಡುತ್ತಾ ರಾತ್ರಿ ಕಳೆದೆ” ಆ ಬಡವ ಹೇಳಿದ.

“ಹಾಂ… ಹಾಂ…! ಇದೋ ವಿಷಯಾ! ಅದಕ್ಕಾಗಿಯೇ ನೀನು ಚಳಿಯಿಂದ ಸಾಯದೇ ಬದುಕಿರುವಿ. ರಾಜಮಹಲದ ದೀಪಗಳ ಉಷ್ಣತೆಯಿಂದ ನೀರು ಬೆಚ್ಚಗಾಗಿರುತ್ತದೆ. ಆದ್ದರಿಂದ ನಿನಗೆ ಚಳಿಯಾಗಿಲ್ಲ. ನೀನೇನು ಮಹಾ ಸಾಹಸ ಮಾಡಿರುವೆ ಎಂದು ನಿನಗೆ ಇನಾಮು ಕೊಡಬೇಕು?” ಬಾದಷಾ ತಾತ್ಕಾರದಿಂದ ಹೇಳಿದ. ಆ ಮಾತು ಕೇಳಿ ಗರೀಬ್‌ ಹಾರೂನ್ ಸಾಬ್ ಹೌಹಾರಿ ಹೋದ.

ಎಷ್ಟೇ ಬಿನ್ನವಿಸಿಕೊಂಡರೂ… ಅಕ್ಟರ್‌ನ ಮನಸ್ಸು ಕರಗಲಿಲ್ಲ. “ಈತನ ಹೃದಯವೂ ಈ ದೆಹಲಿಯ ಚಳಿಯಷ್ಟೇ ಕ್ರೂರ” ಎಂದು ಮನಸ್ಸಿನಲ್ಲಿ ಶಪಿಸುತ್ತ ಹಾರೂನ್‌ಸಾಬ್’ ಮನೆಗೆ ಬಂದ. ತನಗಾದ ಅವಮಾನವನ್ನು ಹೆಂಡತಿ ಮಕ್ಕಳ ಮುಂದೆ ಹೇಳಿ ಗೋಳಾಡಿದ.

ಹಾರೂನ್‌ಸಾಬ್‌ನ ಹೆಂಡತಿಗೆ ಸಿಟ್ಟು ಬಂತು. ಸಾಮ್ರಾಟರಾದವರು ಹೀಗೋ ಮಾಡುವದು ? ಕುದಿಯತೊಡಗಿದಳು. ಆದರೆ ಬಡವನ ಸಿಟ್ಟು ದವಡೆಗೇ ಕುತ್ತು- ಅಂಡ್ಕೊಂಡು ಸುಮ್ಮನಾದಳು. ಮರುಕ್ಷಣ ಅವಳಿಗೆ ಪರಿಹಾರದ ದಾರಿ ಕಾಣಿಸಿತು.

“ಬೀರಬಲ್‌ರ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳೋಣ… ಖಂಡಿತವಾಗಿಯೂ ಅವರು ಪರಿಹಾರ ಹೇಳುತ್ತಾರೆ ಹೆಂಡತಿಯ ಸಲಹೆ ಹೊರನ್‌ಗೆ ಸರಿ ಅನಿಸಿತು. ಆ ಸಂಜೆಯೇ ಬೀರಬಲ್‌ನ ಮನೆಗೆ ಬಂದ.

ಎಲ್ಲವನ್ನೂ ಆತ ಬೀರಬಲ್‌ಗೆ ತಿಳಿಸಿದ. ಬಡವನ ಅಳಲು ಕೇಳಿ, ಬೀರಬಲ್ ಕರಗಿಹೋದ.

“ಆಯ್ತು, ನಾನು ಏನಾದರೂ ಮಾಡುತ್ತೇನೆ. ನೀನು ನಿಶ್ಚಿಂತನಾಗಿರು” ಧೈರ್ಯ ಹೇಳಿ ಕಳಿಸಿದ.

ಅದಾದ ಒಂದು ವಾರಕ್ಕೆ… ರಾಜ ದರ್ಬಾರ್‌ನಲ್ಲಿ ಬೀರಬಲ್‌ನ ಅಗತ್ಯ ತುರ್ತಾಗಿ ಕಂಡುಬಂತು. ಆ ಒಂದು ಇಡೀ ವಾರ, ಬೀರಬಲ್ ದರಬಾರ್‌ನತ್ತ ಸುಳಿದಿರಲಿಲ್ಲ. ಆತನಿಲ್ಲದೆ, ಬಾದಷಾರಿಗೆ ಹೊತ್ತು ಹೋಗದು. ಬೀರಬಲ್‌ನಿಗೆ ಬುಲಾವ್ ಹೋಯ್ತು. ತನ್ನನ್ನು ಕರೆಯಲು ಬಂದಿದ್ದ ರಾಜಸೇವಕರಿಗೆ

“ಅಡುಗೆ ಆಗುತ್ತಲಿದೆ. ಊಟ ಮಾಡಿ ಬರುತ್ತೇನೆ ಎಂದು ಜಹಾಂಪನರಿಗೆ ತಿಳಿಸಿ” ಹೇಳಿದ.

ಅಕ್ಟರ್ ಬೀರಬಲ್‌ನ ದಾರಿ ಕಾಯುತ್ತಿದ್ದ. ಸಮಯ ಕಳೆಯುತ್ತಲೇ ಇತ್ತು. ಅಕ್ಟರ್‌ನ ಸಹನೆಯ ಕಟ್ಟೆ ಒಡೆಯಿತು.

“ಅದೆಷ್ಟು ಹೊತ್ತು ಆತ ನಮ್ಮನ್ನು ಕಾಯಿಸೋದು… ಜಲ್ಲಿ ಊಟ ಮಾಡಿ ಬರುವಂತೆ ಹೇಳಿ” ಬಾದಷಾ ಸೇವಕರನ್ನು ಮತ್ತೆ ಅಟ್ಟಿದ. ಎರಡನೆಯ ಸಲವೂ ಅದೇ ಉತ್ತರ ಹೇಳಿದ್ದ ಬೀರಬಲ್ … ಮತ್ತೆ ಸ್ವಲ್ಪ ಸಮಯದ ನಂತರ ಬಂದ ಸೇವಕರಿಗೂ ಅದೇ ಉತ್ತರ.

ಅಕ್ಟರ್‌ ಸಿಟ್ಟು ಬೆಂಕಿಯಾದ. ಈ ಸಲ ತಾನೆ, ಸೇವಕರೊಂದಿಗೆ ಬೀರಬಲ್‌ನ ಮನೆಗೆ ಬಂದ. ಅಲ್ಲಿನ ದೃಶ್ಯ ನೋಡಿ ಅಕ್ಟರ್‌ಗೆ ಸೋಜಿಗ ವಾಯಿತು.

ಬೀರಬಲ್’ ಮನೆಯ ಹಿತ್ತಲಲ್ಲಿನ ಗಿಡದ ಕೊಂಬೆಗೆ ಗಡಿಗೆ ಕಟ್ಟಿದ್ದಾನೆ.

ಕೆಳಗೆ ನೆಲದ ಮೇಲೆ ಒಲೆಯಲ್ಲಿ ಉರಿ ಹಚ್ಚಿದ್ದಾನೆ. “ನೀನೆಂಥ ಪಾಗಲ್ ಇದ್ದೀ ಬೀರಬಲ್… ಒಲೆ ಅತ್ತ? ಗಡಿಗೆ ಇತ್ತ? ಹೀಗಾದರೆ ಅಡಿಗೆ ಆದಂತೆ…” ನಗುತ್ತ ಅಕ್ಟರ್‌ ಹೇಳಿದ.

“ಯಾಕಾಗೋದಿಲ್ಲ ಹುಜೂರ್ ?”

“ಅಷ್ಟು ದೂರದಲ್ಲಿರುವ ಗಡಿಗೆಗೆ, ನೆಲದ ಮೇಲಿರುವ ಒಲೆಯ ಶಾಖ ತಟ್ಟುವದಿಲ್ಲವೊ ಬೇಕೂಫ್…” ಮತ್ತೆ ನಕ್ಕ ಅಕ್ಟರ್.

“ಬಾದಷಾರ ಅರಮನೆಯ ದೀಪಗಳ ಉಷ್ಣತೆಯಿಂದ, ಹೂದೋಟದ ಕೊಳದ ನೀರು ಬಿಸಿಯಾಗೋದಾದರೆ, ಈ ಕೆಳಗಿನ ಉರಿಯ ಶಾಖ, ಗಡಿಗೆಗೆ ತಲ್ಲುವದೇನು ಮಹಾ ಬಿಡಿ” ಬೀರಬಲ್ ಉತ್ತರಿಸಿದಾಗ, ಎಲ್ಲವೂ ಅಕ್ಟರ್‌ಗೆ ಅರ್ಥವಾಗಿ ಹೋಯಿತು.

ಕೂಡಲೆ ಆತ, ಹಾರೂನ್‌ಸಾಬ್‌ಗೆ ಬರಹೇಳಿದ. ಒಂದು ಸಾವಿರ ಬಂಗಾರ ನಾಣ್ಯಗಳನ್ನು ಕೊಟ್ಟ. ಹೀಗೆ ಬೀರಬಲ್‌ನ ಚಾಣಾಕ್ಷತೆಯಿಂದ ಬಡ ಹಾರೂನ್‌ಸಾಬ್‌ನ ಮಗಳ ಮದುವೆ ಸಾಂಗವಾಗಿ ಜರುಗಿತು.

ಬೀರಬಲ್‌ನೊಂದಿಗೆ ಅಕ್ಟರ್‌ನೂ ಬಡವನ ಮನೆಯ ಮದುವೆಗೆ ಹೋಗಿದ್ದ. ನವದಂಪತಿಗಳಿಗೆ ಬೆಲೆಯುಳ್ಳ ಕಾಣಿಕೆ ಕೊಟ್ಟು, ಶುಭ ಕೋರಿದ್ದ.

Leave a Comment

error: Content is protected !!
%d bloggers like this: