Gundiyalli Biddante Kanasu

ಮಾತಿನಲ್ಲಿ ಪ್ರಚಂಡನಾಗಿರುವ ಬೀರಬಲ್‌ನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅಕ್ಟರ್‌ ಆಲೋಚಿಸುತ್ತಲೆ ಇದ್ದ. ಆ ಅವಕಾಶಕ್ಕಾಗಿ ಕಾಯುತ್ತಿದ್ದ.

ಒಂದು ಮುಂಜಾನೆ ಬೀರಬಲ್ ಅಂತಃಪುರಕ್ಕೆ ಬಂದ. ಆಗಿನ್ನೂ ಅಕ್ಟರ್‌ ಎದ್ದಿರಲಿಲ್ಲ.

“ಇದೇನು ಮಹಾಪ್ರಭು, ಇನ್ನು ಮಲಗಿಕೊಂಡಿದ್ದೀರಿ? ಬಹುಶಃ ಸಕ್ಕರೆಯ ನಿದ್ದೆಯಲ್ಲಿದ್ದಂತೆ ಕಾಣುತ್ತದೆ ? ಅಥವಾ ಯಾವುದಾದರೂ ಸವಿಗನಸು ಕಾಣುತ್ತಿದ್ದಿರಬಹುದು ?” ಬೀರಬಲ್ ಚೇಷ್ಟೆ ಮಾಡಿದ.

ಈ ಮಾತಿನ ಮಲ್ಲನನ್ನು ಸೋಲಿಸಲು ಇದೊಂದು ಅವಕಾಶ ಎಂದು ಮನಸ್ಸಿನಲ್ಲಿ ಅಂದುಕೊಂಡ ಅಕ್ಟರ್‌, ನೀನು ಹೇಳುವುದು ಸರಿ ಬೀರಬಲ್.

ಈಗ ಸ್ವಲ್ಪ ಸಮಯಕ್ಕೆ ಮೊದಲು ನನಗೆ ಕನಸೊಂದು ಬಿದ್ದಿತ್ತು. ಆ ಕನಸಿನಲ್ಲಿ ನೀನು ಕಕ್ಕಸಿನ ಗುಂಡಿಯಲ್ಲಿ ಬಿದ್ದಿದ್ದೆ. ನಾನು ಜೇನುತುಪ್ಪದ ಗುಂಡಿಯಲ್ಲಿ ಬಿದ್ದಂತೆ ಕನಸು ಕಂಡೆ” ಮುಗುಲ್ನಗುತ್ತ ಬೀರಬಲ್‌ನ ಮುಖ ನೋಡಿದ.

ತನಗೆ ಅವಮಾನ ಮಾಡುವ ಉದ್ದೇಶದಿಂದ ಮಹಾರಾಜರು ಹೀಗೆ ಹೇಳುತ್ತಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂದುಕೊಂಡ ಬೀರಬಲ್.

“ಮಹಾರಾಜ ನನಗೂ ಅದೇ ಕನಸು ಬೀಳಬೇಕೆ! ಎಂಥ ವಿಚಿತ್ರವಿದು! ಅದನ್ನು ಹೇಳಲೆಂದೇ ನಾನು ಇಲ್ಲಿಗೆ ಬಂದದ್ದು. ಕಕ್ಕಸು ಗುಂಡಿಯಲ್ಲಿ ನಾನು ಬಿದ್ದಿದ್ದೆ, ಜೇನುತುಪ್ಪದ ಗುಂಡಿಯಲ್ಲಿ ನೀವು ಬಿದ್ದಿದ್ದೀರಿ. ಆಮೇಲೆ ನಮ್ಮ ನಮ್ಮ ಗುಂಡಿಯಿಂದ ನಾವು ಮೇಲೆದ್ದು ಬಂದೆವು. ಆಗ ಪ್ರೀತಿಯಿಂದ ನೀವು ನನ್ನ ಮೈಯನ್ನು ನೆಕ್ಕತೊಡಗಿದಿರಿ. ನಾನೂ ಕೂಡ ಅಷ್ಟೇ ಪ್ರೀತಿಯಿಂದ ನಿಮ್ಮ ಮೈಯನ್ನು ನೆಕ್ಕತೊಡಗಿದೆ” ಎಂದು ಬೀರಬಲ್ ನಗುತ್ತ ಹೇಳಿದ.

ಅವನ ಮಾತು ಕೇಳಿದ ಅಕ್ಟರ್‌ಗೆ ನಾಚಿಕೆಯಾಯಿತು. ಮುಂಜಾನೆಯ ಸಮಯದಲ್ಲಿ ಈತನನ್ನು ಕೆಣಕಿ ನಾನು ದಡ್ಡತನ ಮಾಡಿದೆ ಎಂದು ಅಕ್ಟರ್‌ ಹಳಹಳಿಸಿದ.

ಕೊನೆಗೂ, ಬೀರಬಲ್‌ನನ್ನು ಸೋಲಿಸುವುದು ಅಕ್ಟರ್‌ಗೆ ಸಾಧ್ಯವಾಗಲೆ ಇಲ್ಲ. ಆದರೂ ಒಮ್ಮೆಯಾದರೂ ತಾನು ಗೆಲ್ಲಬೇಕು ಎಂಬ ಛಲ ಹಾಗೆಯೇಡಿ.

Leave a Comment

error: Content is protected !!
%d bloggers like this: