Tande katteyo…Mattadara Mariyo…

ರಾಜಧಾನಿಯಲ್ಲಿ ಚಳಿ ಇನ್ನೂ ಹಾಗೆಯೇ ಇತ್ತು. ಸಂಜೆಯ ವಾಯುವಿಹಾರವನ್ನು ಅಕ್ಟರ್‌ ಹಾಗು ಬೀರಬಲ್ ಮುಂದುವರೆಸಿದ್ದರು.

ಅಂದು ಇವರಿಬ್ಬರ ಜತೆ ರಾಜಕುಮಾರನೂ ಬಂದಿದ್ದ. ಮೂವರೂ ಮೈತುಂಬ ಉಣ್ಣೆಯ ಬಟ್ಟೆ ಧರಿಸಿಕೊಂಡು, ಬೆಳಗಿನ ಸೊಬಗು ಸವಿಯುತ್ತ ಸವಿಯುತ್ತ ತುಂಬ ದೂರ ಬಂದಿದ್ದರು.

ಅದಾಗಲೇ ಸೂರ್ಯ ಉದಯಿಸಿ ಬಹಳ ಸಮಯವಾಗಿತ್ತು. ಸೂರ್ಯ ಮೇಲೇರುತ್ತಿದ್ದಂತೆ, ಕೊರೆಯುವ ಚಳಿಯೂ ಕರಗತೊಡಗಿತ್ತು.

ಚಳಿ ಕಡಿಮೆಯಾದಂತೆ, ಮೈಮೇಲಿನ ಉಣ್ಣೆಯ ಬಟ್ಟೆ ಬೇಡವೆನಿಸತೊಡಗಿತ್ತು.

ಬೀರಬಲ್‌ನ ವಿನೋದದ ಮಾತುಗಳನ್ನು ಕೇಳುತ್ತಲಿದ್ದ ಅಕ್ಟರ್‌ ಬಾದಷಾ, ಯಾವುದೋ ಚಿತ್ತದಲ್ಲಿ ತನ್ನ ಮೈಮೇಲಿದ್ದ ಉಣ್ಣೆಯ ನಿಲುವಂಗಿ ತೆರೆದು ಬೀರಬಲ್‌ನ ಹೆಗಲ ಮೇಲೆ ಚೆಲ್ಲಿದ್ದ.

ಬಿಸಿಲು ಹೆಚ್ಚಾಗುತ್ತಿದ್ದಂತೆ, ರಾಜಕುಮಾರನೂ ಸಹ,  ತಂದೆಯಂತೆಯೇ ಮಾಡಿದ್ದ. ಈಗ ಬೀರಬಲ್‌ನ ಹೆಗಲ ಮೇಲೆ ತನ್ನದೂ ಸೇರಿ ಮೂರು ನಿಲುವಂಗಿಗಳು.

ಆತನ ಸ್ಥಿತಿ ನೋಡಿ, ಅಕ್ಟರ್‌ಗೆ ನಗು ಬಂತು. ಯಾವಾಗಲೂ ಮತ್ತೊಬ್ಬರನ್ನು ಕಂಡು ಲೇವಡಿ ಮಾಡುವ ಈ ಬೀರಬಲ್‌ನನ್ನು ಹಾಗೆಯೇ ಬಿಡಬಾರದು ಅಂದುಕೊಂಡ ಅಕ್ಟರ್‌,

“ಇದೇನು ಬೀರಬಲ್ ಈಗ ನೀನು ಒಂದು ಕತ್ತೆಯ ಹೊತ್ತಂತಾಗಲಿಲ್ಲವೆ ?” ತಿವಿದ.

Leave a Comment

error: Content is protected !!
%d bloggers like this: