KannadaKaliyona

Jayavendu belaguva mallikarjuna

Jayavendu belaguva mallikarjunain Kannada

ಜಯವೆಂದು ಬೆಳಗುವೆ ಮಲ್ಲಿಕಾರ್ಜುನನೆ ಮಲ್ಲಿಕಾರ್ಜುನನೆ ಭಕ್ತಮಂದಿರನೇ || ಪ ||

ಸಿರಿಯಾಳ ಸುತನ ಮಾಂಸವ ಬೇಡಿದವನ ಶರಣೆ ನಂಬೆಕ್ಕನ ಭಕ್ತಿಗೊಲಿದವನೆ ಪರತರ ಮೋಕ್ಷವ ಕೊಟ್ಟು ಸಲಹುವನೆ |1|

ಸಾಗರದೊಳಗಿನ ವಿಷವ ಕುಡಿದವನೆ ಭೋಗಿ ಕಂಕಣನಾಗಿ ಜಗದಿ ಮರೆದವನೆ ಶ್ರೀಗಿರಿಯೊಳು ನಿತ್ಯವಾಸ ಗೈದವನೆ || 2 ||

ಕುರಿಯ ಹಿಕ್ಕಿಯಲ್ಲಿ ಲಿಂಗವಾದವನೆ ತರುಳ ಗೊಲ್ಲಾಳನ ಭಕ್ತಿಗೊಲಿದವನೆ ಸರಿನಿನಗಾರೋ ಶ್ರೀಗಿರಿಯ ವಲ್ಲಭಗೆ || 3 ||

ಹರಿನೇತ್ರ ಕಮಲ ಪೂಜೆಗೆ ಮೆಚ್ಚಿದವನೆ ಸುರಧೇನು ಸುಮನೇ ಸದ್ಭಕ್ತ ವರದನೇ ದುರಿತ ದಾವಾನಲ ನೀನೇ ಶಂಕರನೇ || 4 ||

ಬಡವಿಯು ಜಲ್ಲೆನೆ ನಿನ್ನ ಮಹಿಮೆಯನೇ ಕೊಡುಪಾದ ಭಕ್ತಿಯೊಂದನ ಬೇಡ್ವ, ನಾನು ನುಡಿಸನ್ನ ಬಾಯಿಂದ ನಿನ್ನ ನಾಮವನೆ || 5 ||

ವರವೇದ ಶಾಸ್ತ್ರಕ್ಕೆ ನಿಲುಕದಂಥವನೇ ಹರಿಯಜಯರಿಗೆ ರೂಪು ತೋರಿದಂಥವನ ಅರಿಯೆನು ನಿನ್ನ ಘನತೆಯನು ಶಿವನೇ || 6 ||

Jayavendu belaguva mallikarjuna in English

Jayavendu beḷaguve mallikārjunane mallikārjunane bhaktamandiranē || pa ||

siriyāḷa sutana mānsava bēḍidavana śaraṇe nambekkana bhaktigolidavane paratara mōkṣava koṭṭu salahuvane ||1||

sāgaradoḷagina viṣava kuḍidavane bhōgi kaṅkaṇanāgi jagadi maredavane śrīgiriyoḷu nityavāsa gaidavane || 2 ||

kuriya hikkiyalli liṅgavādavane taruḷa gollāḷana bhaktigolidavane sarininagārō śrīgiriya vallabhage || 3 ||

harinētra kamala pūjege meccidavane suradhēnu sumanē sadbhakta varadanē durita dāvānala nīnē śaṅkaranē || 4 ||

baḍaviyu jallene ninna mahimeyanē koḍupāda bhaktiyondana bēḍva, nānu nuḍisanna bāyinda ninna nāmavane || 5 ||

varavēda śāstrakke nilukadanthavanē hariyajayarige rūpu tōridanthavana ariyenu ninna ghanateyanu śivanē || 6 ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading