KannadaKaliyona

Patriotic Songs in Kannada |ದೇಶಭಕ್ತಿ ಗೀತೆಗಳು

Patriotic Songs in Kannada Lyrics

Here you will learn about patriotic songs in Kannada, patriotic songs in Kannada lyrics and list of patriotic songs in Kannada. Songs are very helpful during Independence Day and also republic day for celebration of day.

ವಂದೇ ಮಾತರಂ

ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ
ವಂದೇ ಮಾತರಂ

ಶುಭ್ರ ಜ್ಯೋತ್ಸಾ ಪುಲಕಿತ ಯಾಮಿನೀಂ ಫುಲ್ಲ ಕುಸಮಿತ ದೃಮದಲ ಶೋಭಿನೀಂ ಸುವಾಸಿನೀಂ ಸುಮಧುರ ಭಾಷಿಣೀಂ ವಂದೇ ಮಾತರಂ
ಸುಖದಾಂ ವರದಾಂ ಮಾತರಂ

– ಬಂಕಿಮ ಚಂದ್ರ ಚಟರ್ಜಿ




ಉದಯವಾಗಲಿ

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲು ಹಿನ ನಿಧಿಯು, ಸದಭಿಮಾನದ ಗೂಡು | ಪ | ಉದಯವಾಗಲಿ ನಮ್ಮ

ರಾಜನ್ಯರಿಪು ಪರುರುರಾಮ ನಮ್ಮನ ನಾಡು
ಆ ಜಲಧಿಯನೇ ಜಿಗಿದ |ಹನುಮನುದಿಸಿದ ನಾಡು
ಓಜಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ । ವೀರ ವೃಂದದ ಬೀಡು
ಉದಯವಾಗಲಿ ನಮ್ಮ

ಲೆಖಿಗಮೀತಾಕ್ಷರರು ಬೆಳೆದು ಮೆರೆದಿಹನಾಡು
ಜಕ್ಕಣ್ಣನ ಶಿಲ್ಪ ಕಲೆಯ ಅಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು ಗಳ ಕಾಡು
ಬೊಕ್ಕಸದ ಕಣಜವೈ ವಿದ್ವತ್ಯೆಗೆ ಉದಯವಾಗಲಿ ನಮ್ಮ

ಪಾವನೆಯರಾ ಕೃಷ್ಣ | ಭೀಮೆಯರ ತಾಯ್ತಾಡು
ಕಾವೇರಿ ಗೋದೆಯರು ಮೈದಳೆದ ನಲುನಾಡು
ಅವಗಂ ಸ್ಫೂರ್ತಿಸುವ ಕಬ್ಬಿಗರ ನಡೆ ಹಾದು ರಾವ ಗದುಗಿನ ವೀರ | ನಾರಾಯಣನ ಬೀಡು…
ಉದಯವಾಗಲಿ ನಮ್ಮ

– ಹುಯಿಲಗೋಳ ನಾರಾಯಣರಾವ್‌

ಜಯ ಹೇ ಕರ್ನಾಟಕ ಮಾತೆ

ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ |

ಜೈ ಸುಂದರ ನದಿ ವನಗಳ ನಾಡೆ
ಜಯ ಹೇ ರಸ ಋಷಿಗಳ ಬೀಡೇ |
ಭೂದೇವಿಯ ಮುಕುಟದ ನವ ಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಹ
ಭಾರತ ಜನನಿಯ ತನುಜಾತ
ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರ ಪೊನ್ನ ಪಂಪಲಕುಮಿಯು ರಕ್ತ ಕಬ್ಬಿಗರುದಿಸಿದ ಮಂಗಳ ಧಾಮ ಕವಿಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾನಂದ ಕಬೀರರ




ಕನ್ನಡ ಡಿಂಡಿಮ

ಭಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ |
ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವನು ಕೂಡಿಸು ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು |

ಭಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಕ್ಷಯಿಸೆ ಶಿವೇತರ ಕೃತಿ ಕೃತಿಯಲಿ
ಮೂಡಲಿ ಮಂಗಳ ಮತಿಯಲಿ
ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ

ಭಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಮೆಟ್ಟುವ ನೆಲ ಕರ್ನಾಟಕ

ಎಲ್ಲಾದರೂ ಇರು, ಎಂತಾದರೂ ಇದು ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ |
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡ ತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮೆಟ್ಟುವ ನೆಲ ಅದೆ ಕರ್ನಾಟಕ ನೀ ಸೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀ ಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರ ವ್ಯಾಸನ ನಾಲಿಪ ಕಿವಿಯದು ಕನ್ನಡವೇ ನಿತ್ಯ
ಎಲ್ಲಾದರೂ ಇರು

ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಪಿಂಪಿನ ಬನವಾಸಿಗೆ ಕರಗುವ ಮನ ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ ಎಳರಿನ ತಳಿರಿನ ತಂಪಿಗೆ
ರಸ ರೋಮಾಂಚನ ಗೊಳುವಾ ತನಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್




ಸ್ವರ್ಗದ ಸ್ಪರ್ಧಿ

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು
ಸುಂದರ ತಾಯೆಲವು ನಮ್ಮ ತಾಯ್ಕೆಲವು
ದೇವಿ ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು

ಧವಳ ಹಿಮಾಲಯ ಮುಕುಟದ ಮೆರಗು
ಕಾಲ್ಲೊಳೆಯುತಲಿದೆ ಜಲದಿಯ ಬರುಗು ಗಂಗಾ ಬಯಲಿನ ಹಸಿರಿನ ಸೆರಗು
ಕಣ ಕಣ ಮಂಗಲವು

ಕಾಶ್ಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲೆಯಾಚಲದಲಿ ಗಂಧದ ಪವನ ವಿಧ ವಿಧ ಹೂ ಫಲವು

ಹಲವು ಭಾಷೆಗಳ ನುಡಿ ಲಿಪಿಗಳ ತೋಟ ವಿಧವಿಧ ಪಂಥ ಮತಗಳ ರಸದೂಟ ಕಾಣದು ಕಾಮನ ಬಿಲ್ಲಿನ ನೋಟ
ಬಗೆ ಬಗೆ ಸಂಕುಲವು

ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ ಮುಡುಪಿದು ಬದುಕು ನಿನಗೆ ಅನನ್ಯ
ಕಣ ಕಣ ಬಲ ಛಲವು

ಕನ್ನಡಕೆ ಹೋರಾಡು

ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ

ಮೊಲೆಯ ಹಾಲಂತೆ ಸವಿಜೇನು ಬಾಯ್ದೆ ತಾಯಿಯಕ್ಕರೆಯಂತೆ ಬಲು ಸೊಗಸು ಮೈಗೆ
ಹಿರಿಯರೆನ್ನುಡಿಯಂತೆ ಶ್ರೇಯಸ್ಸು ಬಾಳೆ ಕನ್ನಡದಿ ದುಡಿದು ಮಡಿ ಇಹ ಪರದ ಏಳ್ಳೆ

ರನ್ನ ಪಂಪರನಷ್ಟು ಕನ್ನಡದ ಸೊಲ್ಲು
ಬಸವ ದೇವನ ಮೆಚ್ಚು ಹರಿಹರನ ಗೆಲ್ಲು ನಾರಣಪ್ಪನ ಕೆಚ್ಚು ಬತ್ತಳಿಕೆ ಬಿಲ್ಲು
ಕನ್ನಡವ ಕೊಲುವ ಮುನ್ನ ಓ ನನ್ನ ಕೊಲ್ಲು

ಸುಮುಹೂರ್ತವೂ ಇಂದೇ

ಬೀಳಲಿ ಮೈನೆತ್ತರು ಕಾರಿ
ಹೋದರೆ ಹೋಗಲಿ ತಲೆಹಾರಿ
ತಾಯ್ತಾಡಿನ ಮೇಲ್ಮ
ಸ್ವಾತಂತ್ರ್ಯದ ಸ್ವರ್ಗಕೆ ಏರಿ |

ಸೋದರ ಸೋದರಿಯರೇ ಮೇಲೇಳಿ ಕರೆಯುತ್ತಿಹಳಿದೋ ರಣಕಾಳಿ

ದೇಶ ಪ್ರೇಮಾವೇಶವ ತಾಳಿ
ಖಳ ವೈರಿಗಳ ಸೀಳಿ |

ತ್ಯಾಗದ ಯಾಗಕೆ ನುಗ್ಗಿರಿ ಮುಂದೆ
ಭೋಗದ ರೋಗವ ಬಡಿ ಹಿಂದೆ
ತಡ ಮಾಡಿದರಮ್ಮನ ನೀಂ ಕೊಂದೆ ಸುಮುಹೂರ್ತವು ಇಂದೆ |

ನನ್ನ ದೇಶ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನು ಅದರ ಋಣ
ಈ ಒಂದೇ ಜನುಮದಿ

ಕೆಂಪು ನೆಲದ ಹಸಿರು ಬೆಳೆ
ಕಪ್ಪು ಬಣ್ಣ ಮೊಗದ ಕಳೆ
ಸೂರ್ಯ ಚಂದ್ರ ಚುಕ್ಕೆಗಳು
ನಮ್ಮ ಹಿರಿಯ ಒಕ್ಕಲು

ನೂರು ಭಾವ ಭಾಷೆ ನೆಲ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೇ
ನಮ್ಮ ಹಾಡು ಬದುಕಲು

ಪ್ರಾಚೀನವ ತಿಕ್ಕಿತೊಳೆ
ವರ್ತಮಾನ ದಿವ್ಯ ಕಳೆ

ವಿಶ್ವವಿನೂತನ

ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ
ಜಯ ಭಾರತಿ ಕರುನಾಡ ಸರಸ್ವತಿ ಗುಡಿಗೋಪುರ ಸುರ ಶಿಲ್ಪಕಲಾಕೃತಿ
ಕೃಷ್ಣ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ

ಗಂಗ ಕದಂಬ ರಾಷ್ಟ್ರಕೂಟ ಬಲ
ಚಾಲುಕ್ಯ, ಹೊಯ್ಸಳ ಬಲ್ಲಾಳ
ಹುಕ್ಕ ಬುಕ್ಕ ಪುಲಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರ
ವಿಶ್ವವಿನೂತನ

ಆಚಾರ್ಯತ್ರಯ ಮತಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ ಶರಣದಾಸ ತೀರ್ಥರ ನಡೆ ವಿಶ್ವತಮೋಹಾರಿ ವಿಶ್ವವಿನೂತನ

ಸಾಯಣ ವಿದ್ಯಾರಣ್ಯ ಭಾಸ್ಕರ
ಮಹದೇವಿ ಮುಕ್ತಾಯಿ ಮಹಂತರ ಕಂತಿಹಂಸ ಸುಮನೋರಮ ಮುದ್ದಣ ಸರಸಹೃದಯ
ಸಂಚಾರಿ
ವಿಶ್ವನೂತನ

ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳವೊಲ, ಮಲೆ, ಕರೆ, ಸುಂದರ ದೃಷ್ಟಿ ಜ್ಞಾನದ ವಿಜ್ಞಾನದ ಕಲೆಗಳ ಸಿರಿ ಸಾರೋದಯ
ಧಾರಾನಗರಿ
ವಿಶ್ವವಿನೂತನ

ಅರಿವೇ ಗುರಿ ನುಡಿ ಜ್ಯೋತಿರ್ಲಿಂಗ ದಯಯೇ ಧರ್ಮದ ಮೂಲ ತರಂಗ ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ

– ಚನ್ನವೀರ ಕಣವಿ 

ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿ ನುಡಿಯ ದೀಪ ಒಲವೆತ್ತಿ ತೋರುವಾ ದೀಪ
ಹಚ್ಚೆವು ಕನ್ನಡದ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೋಳೆಯ ಕೊಚೇವು |
ಎಲ್ಲೆಲ್ಲಿ ಕನ್ನಡದ ಕಂಪ ಸೂಸ
ಲಲ್ಲಲ್ಲಿ ಕರಣ ಚಾಚೇವು |
ನಡುನಾಡೇ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ । ತೆರದೇವು ಮನವ | ಎರೆದೇವು ಒಲವ ಹಿಡಿನೆನವ ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ |

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಡಲ ಕಿಚ್ಚಿನ ಕಿಡಿಗಳನ್ನು
ಗಡಿ ನಾಡಿನಾಚೆ ತೋರೇವು |

ಹೊಮ್ಮಿರಲು ಪ್ರೀತಿ! ಎಲ್ಲಿಯದುಭೀತಿ | ನಾಡೊಲವೆ ನೀತಿ ಹಿಡಿ ನೆನಪು
ಮನೆ ಮನೆಗಳಲ್ಲಿ | ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ |2|

ನಮ್ಮವರು ಗಳಿಸಿದಾ ಹೆಸರ ಉಳಿಸ ಲೆಲ್ಲಾರು ಒಂದು ಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿಲ್ಲ ಮಾತೆಯನು ಪೂಜೆ ಮಾಡೇವು | ನಮ್ಮುಸಿರ ತೀಡುವೀ ನಾಡಿನಲ್ಲಿ
ಮಾಂಗಲ್ಯ ಗೀತ ಹಾಡೇವು ||

ತೊರದೇವು ಮರುಳ | ಕಡೆದೇವು ಇರುಳ ಪಡೆದೇವು ತಿರುಳ ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೇ ಮುಡಿಸಿ ಹಚ್ಚೆವು ಕನ್ನಡದ ದೀಪ | 3 |

– ಡಿ.ಎಸ್.ಕರ್ಕಿ

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲಿ ದೇಗುಲಗಳ ಭಿತ್ತಿಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯ ಸದ್ವಿಕಾಸಶೀಲ ನುಡಿಯ ಲೋಕಾವೃತ್ತ ಸೀಮೆಯೆ

ಚಲುವಿನ ನಾಡು

ಏನು ಚೆಲುವಿನ ನಾಡು | ಚೆಲುವು ಚಿಮ್ಮುವ ನಾಡು
ನನ್ನೊಲುಮೆ ಈ ನಾಡು | ಕರ್ನಾಟಕ
ನನ್ನ ಹಡದೀ ನಾಡು / ಸ್ವಪ್ನ ಸೌಧದ ಬೀಡು
ಸ್ವಾಗತ ಏಕೈಕ ಕರ್ನಾಟಕ

ಹಾಲ ಹೊಳೆ ಜೇನ ಮಳೆ
ನನ್ನ ತಾಯಿ ನುಡಿಯಲಿ
ಗಿರಿ ನವಿಲು ಗರಿಗೆದರಿ
ಹಾಡಿದಂತೆ

ಏಳು ಬಣ್ಣದಾ ಬಿಲ್ಲು ತಾಯ ಗಾಯನದಲಿ ಹುಸಿ ಹುಸಿಯ ಮನೆಯೇರಿ ನೋಡಿದಂತೆ
ಏನು ಚೆಲುವಿನ ನಾಡು
ನನ್ನ ತಾಯಿಯ ಮಡಿಲ ತುಂಬೆಲ್ಲಾ

ಮಲ್ಲಿಗೆಯು
ಅವಳ ತೋಳ ತೋಡೆಗಳಲಿ
ಮಾವು ತಳಿರು
ತೆಂಗು ಅಡಿಕೆಯ ಜಾಲ
ಅವಳ ಬೈತಲೆ ನವಿರು
ಎಳ್ಳು ಜೀರಿಗೆ ಜೋಳ
ಅವಳ ತೇರು
ಏನು ಚೆಲುವಿನ ನಾಡು

ಜಯತು ಕನ್ನಡ ನಾಡು
ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ ಜಯವು ಕನ್ನಡ ಜನಕೆ
ಜಯವು ಕನ್ನಡ ನುಡಿಗೆ
ಜಯ ನಿನಗೆ ಕರುನಾಡ ಬನಶಂಕರಿ

– ಸಾ.ಶಿ.ಮರುಳಯ್ಯ

Here you learnt about patriotic songs in Kannada and hope you enjoyed reading♥️

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading