KannadaKaliyona

Magalige Thayiya bhuddivaada lyrics

Magalige Thayiya bhuddivaada lyrics in Kannada

ಅತ್ತೆ ಮಾವರ ಪಾದ ತಂದೆ ತಾಯರ ಪಾದ
ಮತ್ತೆ ಗಂಡನ ಶ್ರೀಪಾದ | ನೆನದಾರೆ
ನಿನ ಬೆನ್ನ ಹಿಂದಿವೆ ಕೈಲಾಸ ||

ನೆರೆಮನೆ ಸಿರಿದೇವಿ ನೀನಾಗೆ ನನ ಮಗಳೆ
ಮನೆಯೋಳು ಭೇದ ಬಗಿಬೇಡ | ಕಂದವ್ವ
ತುಂಬಿದ ಮನೆಯ ಒಡಿಬೇಡ ||

ಬಾಳುವೆ ಮಾಡಿದರೆ ಬಾರವ್ವ ಅಂದಾರು
ಬಾಳುವೆಗೆಟ್ಟು ಮತಿಗೆಟ್ಟು | ಬಾಳಿದರೆ
ಹಡೆದವರ ಕುಲಕೆ ಹಗೆಯಾದೆ |
ಮಾತ್ತುಂಟೆ ಮಗಳಲ್ಲ ತಾಟಿ ಸೊಸೆಯಲ್ಲ
ತಾಪರದ ಚೆಕ್ಕೆ ಒಲೆಗಲ್ಲ | ಪೌರೀಗೆ
ಮಾತ ತಂದೋಳು ಮಗಳಲ್ಲ ||

ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ಇಕ್ಕಿದರು ಉಣಬೇಕು | ಪೌರೀಗೆ
ಒಳ್ಳೆಯ ಹೆಸರಾ ತರಬೇಕು |
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲಿ ಹೆಣ್ಣಿಗೆ
ತಾಯಿಯ ಮನೆಯು ಸ್ಥಿರವಲ್ಲ ||

Magalige Thayiya bhuddivaada lyrics in English

Atte māvara pāda tande tāyara pāda matte gaṇḍana śrīpāda | nenadāre nina benna hindive kailāsa ||

neremane siridēvi nīnāge nana magaḷe maneyōḷu bhēda bagibēḍa | kandavva tumbida maneya oḍibēḍa ||

bāḷuve māḍidare bāravva andāru bāḷuvegeṭṭu matigeṭṭu | bāḷidare haḍedavara kulake hageyāde | māttuṇṭe magaḷalla tāṭi soseyalla tāparada cekke olegalla | paurīge māta tandōḷu magaḷalla ||

atteya maneyalli muttāgi irabēku hottāgi ikkidaru uṇabēku | paurīge oḷḷeya hesarā tarabēku | ālakke hūvilla sālakke koneyilla jāliya maravu neraḷalli heṇṇige tāyiya maneyu sthiravalla ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading