Mahesh das, Raja Birbalnaada kathe – Kannada story

ಮೊಗಲ್ ಸಾಮ್ರಾಟ ಅಕ್ಟರ್‌ ಬಾದಷಾ (೧೫೪೨-೧೬೦೫)ನ ದರಬಾರ್’ನಲ್ಲಿ ಕಲಿಗಳು, ಕವಿಗಳು, ಕಲಾವಿದರು, ವಿದ್ವಾಂಸರು ಮತ್ತು ಸಂಗೀತಗಾರರು ಇದ್ದರು. ಅವರೆಲ್ಲ ಸೇರಿ ಒಂಬತ್ತು ಜನರಾಗುತ್ತಿದ್ದರಿಂದ, ಅವರಿಗೆ ‘ನವರತ್ನ‘ರೆಂದು ಅಭಿಮಾನದಿಂದ ಕರೆಯಲಾಗುತ್ತಿತ್ತು.

ಅಂಥ ‘ನವರತ್ನ’ಗಳಲ್ಲಿ ರಾಜಾ ಬೀರಬಲ್ (೧೫೨೮-೧೫೮೬)ನೂ ಒಬ್ಬ, ಈತನು ಅಸಾಧ್ಯ ಬುದ್ಧಿವಂತನೂ, ವಿನೋದ ಸ್ವಭಾವದವನೂ ಆಗಿದ್ದಂತೆ, ಶೂರನೂ ಮತ್ತು ರಾಜನೀತಿ ಬಲ್ಲವನೂ ಆಗಿದ್ದ.

ಬೀರಬಲ್‌ನ ಮೂಲ ಹೆಸರು ಮಹೇಶದಾಸ, ಮಧ್ಯಪ್ರದೇಶದ ಸಿಧಿ ಎಂಬ ಜಿಲ್ಲೆಯಲ್ಲಿ ಸಿಹಾವಲ್’ ಎಂಬ ತಾಲ್ಲೂಕಿದೆ. ಅಲ್ಲಿನ ಘೋಗ್ಯವಾ (Ghoghava) ಎಂಬ ಹಳ್ಳಿ ಈತನ ಜನ್ಮಸ್ಥಳ. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಈತನ ಬಾಲ್ಯದ ದಿನಗಳು ಸುಖಕರವಾಗಿರಲಿಲ್ಲ. ಉಡುವದಕ್ಕೆ, ಉಂಬುವದಕ್ಕೆ ಬಡತನವಿದ್ದರೂ, ಮಹೇಶನ (ಬೀರಬಲ್) ಪಡೆದವರು, ತಮ್ಮ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು. ಆತನನ್ನು ಸುಶೀಲ ನನ್ನಾಗಿಯೂ, ಸುಸಂಸ್ಕೃತನನ್ನಾಗಿಯೂ ಬೆಳೆಸಿದರು.

ಬುದ್ದಿಯಲ್ಲಿ ಚುರುಕಾಗಿದ್ದಂತೆ ದೈಹಿಕವಾಗಿ ಬಲಾಡ್ಯನೂ ಆರೋಗ್ಯ ವಂತನೂ ಆಗಿದ್ದ ಮಹೇಶ- ಶಸ್ತ್ರವಿದ್ಯೆ ಹಾಗು ಶಾಸ್ತ್ರ(ಜ್ಞಾನ)ಗಳೆರಡರಲ್ಲೂ ಪರಿಣತಿ ಹೊಂದಿದ್ದ. ಕಾವ್ಯ ರಚನೆಯಲ್ಲಿ ಪಂಡಿತನಾಗಿದ್ದಂತೆ, ಕಾದಾಟದಲ್ಲೂ ಪರಾಕ್ರಮಿಯಾಗಿದ್ದ ಮಹೇಶ, ತಾರುಣ್ಯಕ್ಕೆ ಬರುವಷ್ಟರಲ್ಲಿ ತುಂಬ ಹೆಸರು ಮಾಡಿದ್ದ.

 

ಹೀಗಿರಲು ಒಂದು ದಿನ… ಅಕ್ಟರ್ ಬಾದಷಾ ಬೇಟೆಯಾಡಲೆಂದು ಕಾಡಿಗೆ ಹೋಗಿದ್ದ. ಅದೇ ಕಾರಣಕ್ಕಾಗಿ ಕಾಡಿಗೆ ಬಂದಿದ್ದ ಮಹೇಶನನ್ನು ಆಕಸ್ಮಿಕವೆಂಬಂತೆ ಭೆಟ್ಟಿಯಾದ. ಮಹೇಶನ ದಷ್ಟ-ಪುಷ್ಟ ದೇಹ, ಬೇಟೆ ಯಾಡುವಲ್ಲಿನ ಚಾಲಾಕಿತನ ಬಾದಷಾನ ಮೇಲೆ ಪರಿಣಾಮ ಬೀರಿದವು. ಗುಣಗ್ರಾಹಿಯಾಗಿದ್ದ ಬಾದಷಾ, ದೆಹಲಿಯ ತನ್ನ ದರ್ಬಾರ್‌ಗೆ ಬಂದು ಕಾಣುವಂತೆ ಹೇಳಿ, ಬೆರಳಲ್ಲಿನ ಉಂಗುರ ತೆಗೆದು ಮಹೇಶನಿಗೆ ತೊಡಿಸಿದ.

ಅಲ್ಲಿಂದ ಮುಂದೆ ಮಹೇಶ ದೆಹಲಿಗೆ ಬರುತ್ತಾನೆ. “ಜಹಾಂಪನಾರನ್ನು ಕಾಣಬೇಕು, ಒಳಗೆ ಹೋಗಲು ಬಿಡಿ” ಎಂದು ದ್ವಾರಪಾಲಕರನ್ನು ಕೇಳುತ್ತಾನೆ. ಹಳ್ಳಿಯ ಗಂವಾರನಂತಿದ್ದ ಈತನನ್ನು ನೋಡಿ ಅವರು ನಗೆಯಾಡುತ್ತಾರೆ.

ಜಹಾಂಪನಾರು ಕೊಟ್ಟಿದ್ದ ಚಿನ್ನದ ಉಂಗುರ ಅವರಿಗೆ ತೋರಿಸುತ್ತಾನೆ. ಆಗ ದ್ವಾರಪಾಲಕರಿಗೆ ಒಂದಿಷ್ಟು ನಂಬಿಕೆ ಬರುತ್ತದೆ. ಜಹಾಂಪನಾರಿಂದ ಧನ ಸಹಾಯಕೇಳಲು ಈತ ಬಂದಿದ್ದಾನೆ. ಉದಾರ ಮನಸ್ಸಿನ ಬಾದಷಾರು ಇವನಿಗೆ ಧಾರಾಳವಾಗಿಯೇ ಉಡುಗೊರೆ ಕೊಡುತ್ತಾರೆ -ಎಂಬುದು ಅವರಿಗೆ ಹೊಳೆಯುತ್ತಿದ್ದಂತೆ ಅವರಲ್ಲಿ ಒಬ್ಬ ಕೇಳುತ್ತಾನೆ

“ಅಚ್ಚಾ…, ನೀನೇನೋ ಜಹಾಂಪನಾರನ್ನು ಭೆಟ್ಟಿಯಾಗಿ, ಅವರಿಂದ ಕೈ ತುಂಬ ಹಣ ಪಡೆಯುತ್ತೀಯಾ, ಅದರಿಂದ ನಮಗೇನು ಬಂತು ಲಾಭ?” “ಅಂದ್ರೆ, ನಾನೇನು ಮಾಡಬೇಕು ?” ಮಹೇಶನಿಗೆ ಅವರ ಮಾತಿನ ಒಳಾರ್ಥ ತಿಳಿದಿದ್ದರೂ.. ಕೇಳುತ್ತಾನೆ. “ಹೆಚ್ಚಿಗೇನೂ ಬೇಡ, ನಿನಗೆ ಬಂದುದರಲ್ಲಿ ಅರ್ಧದಷ್ಟನ್ನು ನಮಗೆ ಕೊಡು ಸಾಕು.

“ಹಾಗೆಯೇ ಆಗಲಿ” ಎಂದುತ್ತರಿಸಿದ ಆತನನ್ನು ಆ ದ್ವಾರಪಾಲಕರು ಒಳಗೆ ಹೋಗಲು ಬಿಡುತ್ತಾರೆ.

ಒಳಗೆ ಬಾದಷಾರ ದರ್ಬಾರ್ ನಡೆದಿದೆ. ಸೀದಾ ಒಳಗೆ ಬಂದ ಮಹೇಶ- ಅವರಿಗೆ ಸಲಾಂ ಹೇಳುತ್ತಾನೆ. ಆ ಕ್ಷಣ, ಬಾದಷಾರಿಗೆ ಗುರುತು ಸಿಗುವದಿಲ್ಲ.

ಅಡವಿ, ಬೇಟೆಯಾಡಲು ಬಂದದ್ದು ಎಲ್ಲ ವಿವರಿಸುತ್ತಾನೆ ಮಹೇಶ. ತನಗೆ ಅವರು ಕೊಟ್ಟಿದ್ದ ಚಿನ್ನದ ಉಂಗುರ ತೋರಿಸುತ್ತಾನೆ. ಆಗ ಬಾದಷಾರಿಗೆ ಎಲ್ಲವೂ ನೆನಪಾಗುತ್ತದೆ.

ಆತನ ಬುದ್ದಿವಂತಿಕೆಯ ಪರಿಚಯ ತನ್ನ ದರ್ಬಾರ್‌ನ ಎಲ್ಲರಿಗೂ ಗೊತ್ತಾಗಲಿ ಎಂಬ ಉದ್ದೇಶದಿಂದ, ಬಾದಷಾ- ಒಂದು ಪ್ರಶ್ನೆಯನ್ನು ಸಭೆಯ ಮುಂದಿಡುತ್ತಾನೆ.

‘ಯಾವ ಬಾಹ್ಯಶಕ್ತಿಯ ಪ್ರಯೋಗವಿಲ್ಲದೆ, ಸದಾಕಾಲ ತನ್ನಷ್ಟಕ್ಕೆ ತಾನೇ ಚಲಿಸುವ ವಸ್ತು ಯಾವುದು ?”

ಬಾದಷರ ಈ ವಿಚಿತ್ರ ಪ್ರಶ್ನೆಗೆ, ಸಭಾಸದರು ತಲೆ ಕೆರೆದುಕೊಂಡರು. ಪರಸ್ಪರ ಮುಖ ನೋಡಿಕೊಂಡರು. “ಈ ಪ್ರಶ್ನೆ ತಮಗೇನೂ ಅಲ್ಲವಲ್ಲ ಎಂಬ ಸಮಾಧಾನದೊಂದಿಗೆ ಈ ಹೊಸಬ ಅದೇನು ಉತ್ತರಿಸೀಯಾನು ?” ಎಂದು ಕೆಲವರು ಕುತೂಹಲಗೊಂಡರು… ಆದರೆ,

“ಮೊದಲು ನಮ್ಮವರು ಉತ್ತರಿಸಲಿ, ಅವರಿಂದ ಸರಿಯಾದ ಉತ್ತರ ಬಾರದಿದ್ದಲ್ಲಿ… ಈತ ಹೇಳುತ್ತಾನೇನೊ ನೋಡೋಣ” ಅಕ್ಟರ್‌ ಹೇಳಿದಾಗ, ಅವರೆಲ್ಲ ಉತ್ತರಕ್ಕಾಗಿ ತಡಕಾಡತೊಡಗಿದರು.

ಒಬ್ಬ ಹೇಳಿದ- “ಜಹಾಂಪನಾ, ಸದಾಕಾಲ ಚಲಿಸುವವನು ಚಂದ್ರ”.

ಇನ್ನೊಬ್ಬ- “ಯಾವಾಗಲೂ ಚಲಿಸುವವನು ಸೂರ್ಯ.”

ಮತ್ತೊಬ್ಬ- “ಈ ನಮ್ಮ ಭೂಮಿ ತಾನೆ ಯಾವಾಗಲೂ ಚಲಿಸುತ್ತಾ ಇರೋದು…!”

ಮಗದೊಬ್ಬ ಬೇರೆಯೇ ಹೇಳಿದ- “ಮನಸ್ಸು, ಜಹಾಂಪನಾ, ಮನುಷ್ಯನ ಮನಸ್ಸು…! ಅದು ಯಾವಾಗಲೂ ಚಲಿಸುತ್ತಿರುತ್ತದೆ. ಅಂತ್ತೇ ಅದು ಚಂಚಲ”

“ಹೂಂ… ಹೂಂ… ಇವಾವು ಉತ್ತರಗಳು ನಮಗೆ ತೃಪ್ತಿ ಕೊಡಲಿಲ್ಲ. ನಮ್ಮ ಪ್ರಶ್ನೆಯನ್ನೆ ತಾವು ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರಿಸಿದ್ದೀರಿ. ಅದರಿಂದಾಗಿ ನಿಮ್ಮ ಉತ್ತರಗಳಾವವೂ ಸಮರ್ಪಕ ವಾಗಿಲ್ಲ…” ಎಂದು ತಲೆ ಅಲ್ಲಾಡಿಸಿದ ಬಾದಷಾ.

“ಇದಕ್ಕೆ ನಿನ್ನ ಉತ್ತರವೇನು? ಹೇಳಬಲ್ಲೆಯಾ?” ಮಹೇಶದತ್ತ ದೃಷ್ಟಿ ಬೀರಿದ ಬಾದಷಾ.

“ಜಹಾಂಪನಾ, ಹೊರಗಿನ ಯಾವ ಶಕ್ತಿಯ ಪ್ರಯೋಗವಿಲ್ಲದೆ, ಸದಾಕಾಲ ಚಲಿಸುವ ವಸ್ತುವೊಂದಿದೆ. ಅದು ಸಾಹುಕಾರನ ಬಡ್ಡಿ”.

“ಯಾವಾಗಲೂ ಅದು ಚಲಿಸುತ್ತಲೇ ಇರುತ್ತದೆ. ಅದೆಂದೂ ದಣಿಯುವುದಿಲ್ಲ, ದಿನಗಳು ಕಳೆದಂತೆ ಇನ್ನಷ್ಟು ಮತ್ತಷ್ಟು ವೇಗವಾಗಿ ಚಲಿಸುತ್ತಲೇ ಇರುತ್ತದೆ” ಎಂದು ಬೀರಬಲ್ ಉತ್ತರಿಸಿದಾಗ ಎಲ್ಲರೂ ಸಂತೋಷಪಟ್ಟರು.

“ಬಹುತ್ ಅಚ್ಚಾ… ಬಹುತ್ ಅಚ್ಚಾ…” ಸಿಂಹಾಸನದಿಂದ ಎದ್ದು ಬಂದ ಅಕ್ಷರ್ ಬಾದಷಾ, ಮಹೇಶನನ್ನು ಪ್ರೀತಿಯಿಂದ ಅಪ್ಪಿಕೊಂಡ.

“ಹೇಳು, ನಿನ್ನ ಈ ಜಾಣತನದ ಉತ್ತರಕ್ಕೆ ಏನು ಇನಾಮು ಕೊಡಲಿ ?” ಕೇಳಿದನು.

“ನೂರು ಛಡಿ ಏಟು ಈ ದೇಹಕ್ಕೆ ಕೊಡಬೇಕು ಜಹಾಂಪನಾ….” ಬೀರಬಲ್ ಹೇಳಿದಾಗ, ಅಲ್ಲಿದ್ದವರಿಗೆಲ್ಲ ಅಚ್ಚರಿಯೋ ಅಚ್ಚರಿ.

“ಮುತ್ತಿನ ಹಾರವೊ… ಚಿನ್ನದ ಸರವೊ ಕೇಳೋದು ಬಿಟ್ಟು, ನೂರು ಛಡಿ ಏಟು ಕೇಳುತ್ತಿದ್ದಾನಲ್ಲ ಈ ಹೈದ!” ಅವರೆಲ್ಲ ನಕ್ಕರು. ಆದರೆ ಹೀಗೆ ಮಹೇಶ ಕೇಳುವದರ ಹಿಂದೆ ಏನೋ ಒಂದು ಕಾರಣವಿದೆ ಎಂಬುದು ಅಕ್ಟರ್‌ಗೆ ತಕ್ಷಣ ಹೊಳೆಯಿತು.

“ಯಾಕೆ ಈ ಛಡಿ ಏಟಿನ ಇನಾಮು?”

“ಯಾಕೆಂದರೆ…” ತಾನು ಒಳಬರುವಾಗ, ದ್ವಾರಪಾಲಕರೊಂದಿಗೆ ಆಗಿರುವ ಮಾತುಕತೆಯ ವಿವರ ಬಿಚ್ಚಿಟ್ಟ ಮಹೇಶ. ಅಕ್ಟರ್‌ಗೆ ಕೋಪ ಬಂತು. ಕೂಡಲೆ ಆ ದ್ವಾರಪಾಲಕರನ್ನು ಕರೆಸಿ, ಅವರಿಬ್ಬರಿಗೂ ತಲಾ ಇಪ್ಪತ್ತೈದು ಛಡಿ ಏಟು ಕೊಡುವಂತೆ ಹುಕುಮಿಸಿದರು. ಆತನನ್ನು ತಮ್ಮ ಆಸ್ಥಾನ ವಿದ್ವಾಂಸನಾಗಿ ನೇಮಿಸಿಕೊಂಡರು. ಬೀರಬಲ್‌ನಿಗೆ ಯಾವ ವಿಟೂ ಬೀಳಲಿಲ್ಲ!.

ಬರಬರುತ್ತ ಮಹೇಶ ಅಕ್ಟರ್ ಬಾದಷಾರಿಗೆ ಹತ್ತಿರದವನಾದ. ರಾಜ್ಯಾಡಳಿತ ಭಾರದಿಂದ ಮನಸ್ಸು ಖಿನ್ನಗೊಂಡಾಗ ಬೀರಬಲ್‌ನ ವಿನೋದದ ಮಾತುಗಳ ಸೊಗಸನ್ನು ಸವಿಯುತ್ತಿದ್ದ. ರಾಜನೀತಿಯನ್ನು ರೂಪಿಸುವಲ್ಲಿ, ಯುದ್ಧ ತಂತ್ರ ಹೂಡುವಲ್ಲಿ, ಅಷ್ಟೇ ಯಾಕೆ, ರಣರಂಗದಲ್ಲಿ  ಬಿಚ್ಚುಗತ್ತಿಯೊಂದಿಗೆ ಕಾದಾಡುವಲ್ಲಿ ಹೀಗೆ ವಿನೋದದಲ್ಲೂ ವೀರತ್ವದಲ್ಲೂ ಸವ್ಯಸಾಚಿಯಾಗಿದ್ದ

ಮಹೇಶನಿಗೆ ಮುಂದೆ “ರಾಜಾ ಬೀರಬಲ್” ಎಂಬ ಪದವಿಯನ್ನಿತ್ತು ಅಕ್ಟರ್‌ ಗೌರವಿಸಿದ್ದ.

‘ರಾಜಾ’ ಎಂಬ ಶಬ್ದವು ಆತನ ರಾಜಕೀಯ ಚಾಣಾಕ್ಷತನವನ್ನು, ಬೀರ ಎಂಬುದು ವೀರತ್ವವನ್ನೂ, ‘ಬಲ್’ ಆತನು ಬಲಶಾಲಿಯಾಗಿದ್ದನೆಂಬುದನ್ನು ಸೂಚಿಸುವದರಿಂದ- ಮಹೇಶನಿಗೆ “ರಾಜಾ ಬೀರಬಲ್” ಎಂಬ ಹೆಸರು ಅನ್ವರ್ಥಕ ನಾಮವಾಗಿತ್ತು. ಅಂದಿನಿಂದ ಆತ “ಬೀರಬಲ್” ಎಂದೇ ಪ್ರಖ್ಯಾತನಾದ.

ಸ್ವಂತ ಓದಲು-ಬರೆಯಲು ಬರದಿದ್ದರೂ, ಅಕ್ಟರ್ ಮೊಗಲ್ ಸಾಮ್ರಾಟ ಅಕ್ಟರ್‌ ವಿದ್ಯಾಪ್ರೇಮಿಯಾಗಿದ್ದ, ಒಳ್ಳೆಯದನ್ನು, ಒಳ್ಳೆಯವರನ್ನು ಗುರುತಿಸುವ, ಗೌರವಿಸುವ ಗುಣಗಾಹಿತ್ವ ಆತನಲ್ಲಿತ್ತು.

“ದೊಡ್ಡ ಸಾಮ್ರಾಜ್ಯದ ಒಡೆಯ ನಾನು, ಸರಕಾರದ ಸಾಧನಗಳೆಲ್ಲ ನನ್ನ ಕೈಯಲ್ಲಿವೆ. ಆದರೆ ನಿಜವಾದ ಹಿರಿಮೆ ಆ ದೇವರ ಆಣತಿಯಂತೆ ನಡೆಯುತ್ತಿರುತ್ತದೆ…” ಎಂಬ ದೈವನಂಬಿಕೆ ಆತನದು.

“ಈ ಮತಗಳ ಮತ್ತು ಪಂಥಗಳ ಭಿನ್ನತೆಯಿಂದ ನೆಮ್ಮದಿ ಸಿಗುವದಿಲ್ಲ. ನನ್ನ ಅಂತರಾತ್ಮದ ಸಂಶಯಗಳನ್ನು ಪರಿಹರಿಸುವ ಒಬ್ಬ ಮಹಾನುಭಾವನನ್ನು ಎದುರು ನೋಡುತ್ತಿದ್ದೇನೆ” ಎನ್ನುತ್ತಿದ್ದ ಅಕ್ಟರ್‌ಗೆ- ಬೀರಬಲ್’ ಸಿಕ್ಕಾಗ. ‘ಈತನೇ ಆ ಮಹಾನುಭಾವ…’ ಎಂದು ಉದ್ಗರಿಸಿದ್ದನಂತೆ.

ಕಲಾಪ್ರೇಮಿಯಾಗಿದ್ದ ಅಕ್ಟರ್‌ನ ಕಾಲದಲ್ಲಿ ‘ಮೊಘಲ್ ಚಿತ್ರಕಲೆ’ ಎಂಬ ಪ್ರಕಾರ ಹುಟ್ಟಿಕೊಂಡಿತು. ಆತನ ದರ್ಬಾರ್‌ನಲ್ಲಿ ಕವಿ ಅಬ್ದುಲ್ ಫಜಲ್ ಫೈಜಿ, ಸಂಗೀತಗಾರ ತಾನಸೇನ್, ಸೇನಾನಿಗಳಾದ ಮಾನಸಿಂಗ್, ತೋದರಮಲ್‌ರಿದ್ದರು. ನಗೆಗಾರ ಬೀರಬಲ್‌ನಂತೂ ಸರಿಯೇ ಸರಿ.

ಬೀರಬಲ್‌ನ ಹೆಸರಿನೊಂದಿಗೇ ಅಂಟಿಕೊಂಡಿರುವ ಅಕ್ಟರ್‌ನ ಹೆಸರು ಅವರಿಬ್ಬರ ಗೆಳೆತನದ ನಂಟನ್ನು ಸೂಚಿಸುತ್ತದೆ. ಅಕ್ಟ‌-ಬೀರಬಲ್‌ರ ಕಥೆಗಳು ಎಂದೇ ಕರೆಯಲ್ಪಡುವ ಕಥಾ ಸಂಚಯದಲ್ಲಿ ಅವರಿಬ್ಬರ ಗೆಳೆತನ, ಬೀರಬಲ್‌ನ ಹಾಸ್ಯ, ಚತುರತೆ, ಸಮಯ ಸ್ಫೂರ್ತಿಯ ನೂರಾರು ಪ್ರಸಂಗ ಗಳಿದ್ದಂತೆ, ಅಕ್ಟರ್ ಬಾದಷನ ಉದಾರತೆ, ವಿಶಾಲ ಮನಸ್ಸು, ಆತನ ಮಾನವೀಯ ಗುಣಗಳ ಉದಾಹರಣೆಗಳೇ ತುಂಬಿಕೊಂಡಿವೆ.

ಮುಂದೆ ಮಲಂದಾರಿ ಕಣಿವೆಯ ಬಳಿ ನಡೆದ ಯುದ್ಧದಲ್ಲಿ, ಅಕ್ಟರ್‌ನ ಸೇನಾನಿಯೂ ಆಗಿದ್ದ ಬೀರಬಲ್‌ನ ಕೊಲೆಯಾಗುತ್ತದೆ. ಪರದೇಶದವರು ಕುತಂತ್ರ ಮಾಡಿ, ಮೋಸದಿಂದ ಬೀರಬಲ್‌ನ ಹತ್ಯೆ ಮಾಡುತ್ತಾರೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ತನ್ನ ಆಪ್ತಸ್ನೇಹಿತನ ಸಾವು, ಬಾದಷಾರಿಗೆ ಅಪಾರ ವೇದನೆಯನ್ನುಂಟು ಮಾಡುತ್ತದೆ. ಆ ಕೊರಗಿನಲ್ಲಿ ಅಕ್ಟರ್‌ನ ಆರೋಗ್ಯವೂ ಕ್ಷೀಣಿಸುತ್ತದೆ. ರಾಜಕೀಯ ಸ್ಥಿತ್ಯಂತರಗಳಿಂದಾಗಿ ಅಕ್ಟರ್‌ನ ಮನಸ್ಸು ಮುದುಡಿ ಹೋಗುತ್ತದೆ. ಕೊನೆ ಕೊನೆಗೆ, ಏಕಾಂಗಿಯಾಗಿ, ಪರಮ ದುಃಖಿಯಾಗಿ ತನ್ನ ವೃದ್ಧಾಪ್ಯದ ದಿನಗಳನ್ನು ಅಕ್ಟರ್‌ ಬಾದಷಾ ಕಳೆಯಬೇಕಾಗುತ್ತದೆ. ದಾರುಣ ರೀತಿಯಲ್ಲಿ ಅಕ್ಟರ್‌ನ ಬದುಕು ಅಂತ್ಯ ಕಾಣುತ್ತದೆ.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading