Murkhara munde summane irbekaste

ಕುದುರೆಯ ಖರೀದಿಯ ವಿಷಯದಲ್ಲಿ ಮೋಸ ಹೋಗಿ ತಾನು ಮೂರ್ಖನಾದೆನಲ್ಲ ಎಂಬುದು ಅಕ್ಟರ್‌ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಈ ಸಂಗತಿಯನ್ನು ಮರೆಯಲು ಪ್ರಯತ್ನಿಸಿದಷ್ಟು, ಅದು ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಹಾಗೆಯೇ ಆತನಿಗೆ ಇನ್ನೊಂದು ವಿಚಾರ ಬಂತು. “ಮೂರ್ಖರ ಜತೆ ವ್ಯವಹರಿಸುವ ಪ್ರಸಂಗ ಬಂದರೆ ಏನು ಮಾಡಬೇಕು ?” ದರ್ಬಾರು ಸೇರಿದಾಗ ಈ ವಿಷಯ ಪಂಡಿತರ ಮುಂದಿಟ್ಟ.

ಅಕ್ಟರ್‌ನ ಈ ಪ್ರಶ್ನೆಯ ಹಿಂದೆ ಇರಬಹುದಾದ ಕಾರಣ ಬೀರಬಲ್‌ಗೆ ತಿಳಿದಿತ್ತು. ಆದರೂ ಆತ ಏನು ಮಾತನಾಡದೆ ಸುಮ್ಮನೆ ಕುಂತಿದ್ದ.

ಒಬ್ಬ ಪಂಡಿತ ಎದ್ದು ನಿಂತು ಹೇಳಿದ, “ಮಹಾರಾಜ್, ಮೂರ್ಖರ ಜತೆ ಅದೆಂಥ ವ್ಯವಹಾರದ ಮಾತು? ಅವರಿಗೆ ಲೋಕಾನುಭವವೇ ಇರುವದಿಲ್ಲ… ಅಂದಮೇಲೆ ವ್ಯವಹರಿಸುವ ಮಾತಲ್ಲಿ ಬರುತ್ತದೆ?”

ಮತ್ತೊಬ್ಬ ಹೇಳಿದ, “ಅಂಥ ಮೂರ್ಖರ ತಲೆ ಬೋಳಿಸಿ, ಕತ್ತೆಯ ಮೇಲೆ ಮೆರವಣಿಗೆ ಮಾಡಬೇಕು.”

“ಹುಜೂರ್, ಮೂರ್ಖನ ಸಹವಾಸವಾದರೆ, ಆತನ ಮುಖಕ್ಕೆ ಕಪ್ಪು ಬಳಿದು, ಆತನ ಕಣ್ಣು ಕಟ್ಟಿ ಅಡವಿಯಲ್ಲಿ ಬಿಟ್ಟು ಬರಬೇಕು” ಎಂದು ಇನ್ನೊಬ್ಬ ಸೂಚಿಸಿದ.

“ಜಹಾಂಪನಾ, ಅಂಥವರು ತಮ್ಮ ರಾಜ್ಯಲ್ಲಿರುವದು ತರವಲ್ಲ. ಅವರನ್ನು ಗಡಿಪಾರು ಮಾಡಬೇಕು” ಇದು ಮಗದೊಬ್ಬನ ವಿಚಾರ.

ಹೀಗೆ ಎಲ್ಲರೂ ತಮಗೆ ತಿಳಿದಂತೆ ಹೇಳಿದರು. ಅವರ ಯಾವ ಉತ್ತರಗಳೂ ಸಮಂಜಸವೆನಿಸಲಿಲ್ಲ. ಕೊನೆಗೆ ಬಾದಷ ಬೀರಬಲ್‌ನತ್ತ ನೋಡಿದರು. “ಏನು ಬೀರಬಲ್, ಸುಮ್ಮನೇ ಇರುವಿಯಲ್ಲ?” ಅಕ್ಟರ್‌ ಕೇಳಿದ.

“ಜಂಹಾಪನಾ, ನನಗೆ ನಾಲ್ಕು ದಿನ ಕಾಲಾವಕಾಶ ಕೊಡಿರಿ. ಸರಿಯಾದ ಉತ್ತರ ಕೊಡಬಲ್ಲೆ” ಬೀರಬಲ್ ಉತ್ತರಿಸಿದ.

ಮರುದಿನ ಬೀರಬಲ್ ನೆರೆಯ ಹಳ್ಳಿಗೆ ಹೋದ. ಅಲ್ಲಿನ ಗರಡಿ ಮನೆಯಲ್ಲಿದ್ದ ಒಬ್ಬ ಅತ್ಯಂತ ಬಲಿಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಿದ. ತಾನು ಹೇಳಿದಂತೆ ಕೇಳಿದರೆ, ಸಾಮ್ರಾಟರಿಂದ ಇನಾಮು ಕೊಡಿಸುವದಾಗಿ ಆ ತೋರಿಸಿದ. ಅದಕ್ಕೆ ಆ ಸದೃಢದೇಹಿ ಸಮ್ಮತಿಸಿದ.

ನೋಡು, ನಾಡಿದ್ದು ನೀನು ನನ್ನ ಮನೆಗೆ ಬಾ. ಅಲ್ಲಿಂದ ನನ್ನ ಜತೆ ದರಬಾರಿಗೆ ಕರೆದೊಯ್ಯುತ್ತೇನೆ. ಆಗ ಬಾದಷರು ನಿನಗೆ ಹಲವಾರು ಪ್ರಶ್ನೆಗಳನ ಕೇಳುತ್ತಾರೆ. ಅವರ ಎಲ್ಲ ಪ್ರಶ್ನೆಗಳಿಗೂ ನೀನು ಉತ್ತರಿಸದೆ, ಮೂಕನಾ ನಿಂತುಬಿಡು… ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಬೀರಬಲ ಆತನಿಗೆ ಎಲ್ಲ ವಿವರಿಸಿ ಹೇಳಿದ.

ಆ ಪ್ರಕಾರ, ಆ ಬಲಿಷ್ಠ ವ್ಯಕ್ತಿ ಮೂರನೆಯ ದಿನಕ್ಕೆ ರಾಜ ದರ್ಬಾರ್‌ನ ಹಾಜರಾದ. ಆ ದೀರ್ಘಕಾಯದವನಿಗೆ ಚೆನ್ನಾಗಿ ಬಟ್ಟೆ ತೊಡಿಸಲಾಗಿತ್ತು

“ಮಹಾರಾಜ್, ನಾಲ್ಕು ದಿನದ ಹಿಂದೆ ತಾವು ಪ್ರಶ್ನೆ ಕೇಳಿದ್ದೀರಲ್ಲ ಅದಕ್ಕೆ ಈ ಮಹಾನುಭಾವ ಉತ್ತರಿಸುತ್ತಾನೆ. ಈತ ತುಂಬಾ ಬುದ್ಧಿವಂತ” ಬೀರಬಲ್ ಹೇಳಿದ.

“ಅಂದಿನ ನನ್ನ ಆ ಪ್ರಶ್ನೆಗೂ, ಈ ವ್ಯಕ್ತಿಗೂ ಏನು ಸಂಬಂಧ? ಇವನನ್ನೆ ಇಲ್ಲಿಗೆ ಕರೆದುಕೊಂಡು ಬಂದಿರುವೆ?” ಮತ್ತೆ ಬಾದಷಾ ಕೇಳಿದ.

“ಸಂಬಂಧವಿದೆ ಹುಜೂರ್, ಅಂದಿನ ಪ್ರಶ್ನೆಯನ್ನೇ ಈತನಿಗೂ ಕೇಳಿರಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ” ಬೀರಬಲ್ ಹೇಳಿದ.

“ಹೌದಾ…! ಸರಿ. ಕೇಳುತ್ತೇನೆ” ಅಕ್ಟ‌, ಆ ಪೈಲವಾನನತ್ತ ನೋಡ ಕೇಳಿದ, “ಮೂರ್ಖನ ಜತೆ ವ್ಯವಹರಿಸುವ ಪ್ರಸಂಗ ಬಂದರೆ ಏ ಮಾಡೋಕು ?”

ಬಾದಷಾರ ಈ ಮಾತುಗಳಿಗೆ ಏನೂ ಉತ್ತರ ಹೇಳದೆ, ಆ ಆ ಪೈಲವ ಸುಮ್ಮನೆ ನಿಂತ.

ಮತ್ತೆ ಅಕ್ಟರ್‌: ಅದೇ ಪ್ರಶ್ನೆಯನ್ನು ಇನ್ನಷ್ಟು ಜೋರಾಗಿಯೇ ಕೇಳಿ ಆಗಲೂ ಪೈಲವಾನ ಕಿವುಡನಂತೆ ನಿಂತಿದ್ದ. ಮೂರನೆಯ ಸಲ ಕೇಳಿದಾಗಲೂ ಅದೇ ಪ್ರತಿಕ್ರಿಯೆ ಬಂದಿತ್ತು.

‘ಬೀರಬಲ್, ಈತ ಕಿವುಡನೆ?” ಅಕ್ಟರ್ ಕೇಳಿದ ‘ಇಲ್ಲ ಹುಜೂರ್’ ಬೀರಬಲ್ ಉತ್ತರಿಸಿದ,

“ಹಾಗಿದ್ದರೆ, ಉತ್ತರವನ್ನು ಕೊಡದೆ ಯಾಕೆ ಸುಮ್ಮನೇ ನಿಂತಿದ್ದಾನೆ?” ಅಕ್ಟರ್ ಸಿಡಿಮಿಡಿಗೊಂಡಿದ್ದ.

“ಮಹಾರಾಜ್, ಉತ್ತರ ಕೊಡುತ್ತಿದ್ದಾನೆ. ತಾವೇ ಅರ್ಥಮಾಡಿಕೊಂಡಿಲ್ಲ. ಆತನ ಉತ್ತರವೇನೆಂದರೆ ಮೂರ್ಖರ ಜತೆ ಕೆಲಸ ಬಿದ್ದರೆ, ಸುಮ್ಮನಿದ್ದು ಬಿಡಬೇಕು… ನನ್ನ ಹಾಗೆ ಎಂಬುದೇ ಈ ಪೈಲವಾನನ ಮೌನ ಉತ್ತರವಾಗಿದೆ’ ಎಂದು ಬೀರಬಲ್ ವಿವರಿಸಿ ಹೇಳಿದಾಗ, ಅಕ್ಟರ್‌ಗೆ ಎಲ್ಲವಾ ಅರ್ಥವಾಯಿತು.

ತನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟದ್ದಕ್ಕೆ ಬಾದಷಾ, ಬೀರಬಲ್‌ಗೆ ಉಡುಗೊರೆ ಕೊಡಲು ಮುಂದೆ ಬಂದ.

“ಮಹಾರಾಜ್, ಈ ಉಡುಗೊರೆ ನನಗಲ್ಲ, ಅದು ಸೇರಬೇಕಾದದ್ದು, ಈ ಪೈಲವಾನನಿಗೆ” ಎಂದು ಹೇಳಿ, ಬೀರಬಲ್ ಕೊಟ್ಟ ಮಾತಿನಂತೆ ನಡೆದುಕೊಂಡ.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading