Shrestatheya lakshanagalendare…

ಒಮ್ಮೆ, ಅಕ್ಚರ್ ಬಾದಷಾನಿಗೆ ಒಬ್ಬ ವಿದೇಶಿ ವ್ಯಕ್ತಿ ಒಂದು ಸುಂದರವಾದ ಗುಲಾಬಿ ಹೂವನ್ನು ಗೌರವಪೂರ್ವಕವಾಗಿ ಅರ್ಪಿಸಿದ. ಆ ಹೂವನ್ನು ಬಾದಷಾ ತುಂಬ ಸಂತೋಷದಿಂದಲೇ ಸ್ವೀಕರಿಸಿದ. ಆ ಹೂವಿನ ಪರಿಮಳ ಗಮನಿಸುತ್ತ, ಅದರ ಪರಿಮಳವನ್ನು ಆಸ್ವಾದಿಸತೊಡಗಿದ.

ಹಾಗಿರಲು, ಅಕ್ಟರ್‌ನ ತಲೆಯೊಳಗೆ ಒಂದು ವಿಚಾರ ಕಾಣಿಸಿಕೊಂಡಿತು. ಹಾಗೆಯೇ ಕೆಲವೊಂದು ಪ್ರಶ್ನೆಗಳು ಸುಳಿದಾಡಿದವು. ಉತ್ತರ ಪಡೆಯ ಬೇಕೆಂದರೆ, ಬೀರಬಲ್ ಊರಲ್ಲಿರಲಿಲ್ಲ. ಆತನೊಬ್ಬನೆ ಮಾತ್ರ ಇಂಥ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಚತುರ ಅಂತೆನಿಸಿದರೂ…, ಬೇರೆ ಪಂಡಿತರನ್ನು ಕೇಳುವ ಆತುರ ಹುಟ್ಟಿತು.

ಅದೇ ದಿನ ದರ್ಬಾರ್‌ನಲ್ಲಿ ತನ್ನ ಪ್ರಶ್ನೆಗಳನ್ನು ಮುಂದಿಟ್ಟ. “ಮಾನ್ಯ

ಸಭಾಸದರೆ, ನಾನು ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ಅವುಗಳಿಗೆ ಯಾರು ಸಮಂಜಸವಾದ ಉತ್ತರಗಳನ್ನು ಕೊಡುತ್ತಾರೆ, ಅವರಿಗೆ ಎಂದಿನಂತೆ ಇನಾಮು ಕೊಟ್ಟು, ಗೌರವಿಸಲಾಗುವದು” ಎಂದು ಬಾದಷಾ ಈ ಕೆಳಗಿನ ಐದು ಪ್ರಶ್ನೆಗಳನ್ನು ಕೇಳಿದನು. ೧. ಹೂವುಗಳಲ್ಲಿ ಯಾವ ಹೂವು ಶ್ರೇಷ್ಠವಾದುದು?

ಹಾಲು ನಮಗೆ ಅತ್ಯುತ್ತಮವಾದುದು ?

೩. ಈ ಜಗತ್ತಿನಲ್ಲಿ ತುಂಬ ರುಚಿಯಾದ ವಸ್ತು ಯಾವುದು? ೪. ಯಾವ ಗಿಡದ ಎಲೆಗಳು ಶ್ರೇಷ್ಠವಾಗಿರುತ್ತವೆ ?

೫. ರಾಜರುಗಳಲ್ಲಿ ಶ್ರೇಷ್ಠನಾದ ರಾಜನು ಯಾರು?
ಅಕ್ಟರ್‌ನ್ನು ಕೇಳಿದ ಈ ಪ್ರಶ್ನೆಗಳು ಯಾರಿಗೂ ಜಟಿಲವೆನಿಸಲಿಲ್ಲ. ಒಬ್ಬೊಬ್ಬರಾಗಿ ಪಂಡಿತರು ಎದ್ದು ನಿಂತು, ತಮಗೆ ತೋಚಿದಂತೆ ಎತ್ತರಿಸ ತೊಡಗಿದರು.

“ಸಾಮ್ರಾಟರೆ, ಹೂಗಳಲ್ಲಿ ಕಮಲದ ಹೂವು ಬಹಳ ಸುಂದರ ವಾಗಿರುವುದರಿಂದ ಅದುವೇ ಶ್ರೇಷ್ಠವಾದ ಹೂವು’ ಎಂದು ಒಬ್ಬ ಹೇಳಿದರೆ,

“ಇಲ್ಲ ಜಹಾಂಪನಾ ಹೆಚ್ಚು ಪರಿಮಳ ಬೀರುವ ಮಲ್ಲಿಗೆ ಅತ್ಯಂತ ಶ್ರೇಷ್ಠವಾದುದು’ ಎಂದು ಇನ್ನೊಬ್ಬ ಉತ್ತರಿಸಿದ.

ಇನ್ನೊಬ್ಬ ಗುಲಾಬಿ ಹೂವು ಶ್ರೇಷ್ಠವೆಂದು ವಾದಿಸಿದರೆ, ಮಗದೊಬ್ಬಗೆ

ಸಂಪಿಗೆ ಹೂವು ಅತ್ಯುತ್ತಮವೆನಿಸಿತು.

ಹಾಲಿನ ಬಗೆಗೂ ತರತರದ ಉತ್ತರಗಳು ಬಂದವು. ಹಸುವಿನ ಹಾಲು ಉತ್ತಮ ಎಂಬುದು ಒಬ್ಬ ಪಂಡಿತನ ಅಭಿಪ್ರಾಯವಾಗಿದ್ದರೆ, ಇನ್ನು ಕೆಲವರದು ಎಮ್ಮೆಯ ಹಾಲು, ಮೇಕೆಯ ಹಾಲು, ಹುಲಿಯ ಹಾಲುಗಳ ಪರವಾದ ವಾದವಾಗಿತ್ತು.

ಹೀಗೆಯೆ, ರುಚಿಯಾದ ವಸ್ತುವಿನ ಬಗ್ಗೆ ಅವರವರು ಭಿನ್ನ ರುಚಿಯ ಅಭಿಪ್ರಾಯ ಮಂಡಿಸಿದ್ದರು. ನೂರಾರು ಬಗೆಯ ಸಿಹಿ ತಿಂಡಿಗಳ ಹೆಸರು ಪ್ರಸ್ತಾಪವಾಗಿ ಅವರ ಬಾಯಲ್ಲಿ ನೀರೂರಿಸುವಂತಿದ್ದವು. ಎಲೆಗಳ ವಿಷಯ ಚರ್ಚೆಗೆ ಬಂದಾಗ ಹಲವರು ಊಟಕ್ಕೆ ಬರುವ ಬಾಳೆ ಎಲೆ, ಕೆಲವರು ಹಬ್ಬಕ್ಕೆ ಸಿಂಗರಿಸುವ ತೋರಣದ ಮಾವಿನ ಎಲೆ, ಇನ್ನೊಂದಿಷ್ಟು ಜನ ಔಷಧಿಗೆ ಉಪಯೋಗಿಸುವ ಬೇವಿನ ಎಲೆ ಶ್ರೇಷ್ಠವೆಂದು ವಾದ ಮಾಡಿದ್ದರು.

ಆದರೆ, ಕೊನೆಯ ಪ್ರಶ್ನೆ, ‘ರಾಜರಲ್ಲಿ ಶ್ರೇಷ್ಠ ರಾಜನಾರು ?’ ಎಂಬ ಪ್ರಶ್ನೆಗೆ ಅವರೆಲ್ಲರದು ಒಂದೇ ಉತ್ತರವಾಗಿತ್ತು.

“ಸಾಮ್ರಾಟ ಅಕ್ಷರರೆ, ಅತ್ಯಂತ ಶ್ರೇಷ್ಠ ರಾಜರು” ಎಂದು ಅವರೆಲ್ಲ ಹೇಳಿದ್ದನ್ನು ಕೇಳಿ ಬಾದಶಹಗೆ ಸಂತೋಷವೇನೋ ಆಯಿತು. ಪರಂತೂ, ಅದು ಸಮಂಜಸ ಉತ್ತರವೆನಿಸಲಿಲ್ಲ.
ನಾಳೆಯ ದಿನ ಬೀರಬಲ್‌ನ ಉತ್ತರಗಳನ್ನು ಕೇಳಿದ ಮೇಲೆ ತಮ್ಮ ನಿರ್ಣಯ ಪ್ರಕಟಿಸುವುದಾಗಿ ಬಾದಷ ಹೇಳಿದ. ಮರುದಿನ ಬೀರಬಲ್ ದರ್ಬಾರಕ್ಕೆ ಬಂದಾಗ, ಅವೇ ೫ ಪ್ರಶ್ನೆಗಳನ್ನು

ಬಾದಷ ಕೇಳಿದ. ಒಂದಿನಿತು ತಡವರಿಸದೆ ಬೀರಬಲ್ ಪಟಪಟನೆ ಉತ್ತರಿಸ

ತೊಡಗಿದ.

“ಹೂವುಗಳಲ್ಲಿ ಹತ್ತಿಯ ಹೂವು ಶ್ರೇಷ್ಠವಾದುದು. ಯಾಕೆಂದರೆ ನಮ್ಮ ಮರ್ಯಾದೆ ಕಾಪಾಡುವ ಬಟ್ಟೆಗಳು ಹತ್ತಿಯ ಹೂವಿನಿಂದಲೇ ಗೊ೦ಡಿರುತ್ತವೆ.” ಸಿದ್ಧ

“ನಾವೆಲ್ಲರೂ ಬೆಳೆದು ದೊಡ್ಡವರಾಗುವುದು ತಾಯಿಯ ಹಾಲಿನಿಂದಲೆ, ಆದುದರಿಂದ ತಾಯಿಯ ಹಾಲು ಅತ್ಯುತ್ತಮ.” “ಮಾತಿನಿಂದಲೆ ನಾವು ಸ್ನೇಹವನ್ನು ಸಂಪಾದಿಸುತ್ತೇವೆ. ಎಂತಹ ವೈರಿಗಳು

ಕೂಡ ಸವಿಮಾಲೆಗೆ ಕರಗಿಹೋಗುತ್ತಾರೆ. ಆದುದರಿಂದ ಎಲ್ಲ ವಸ್ತುಗಳಲ್ಲಿ

ರುಚಿಕಟ್ಟಾದುದು ಸವಿಮಾತಿನ ರುಚಿ.”

“ಎಲೆಗಳಲ್ಲಿ ವೀಳ್ಯದ ಎಲೆ ಉತ್ತಮವಾದುದು. ವೀಳ್ಯದೆಲೆ ವಿನಿಮಯ ಮಾಡಿಕೊಂಡು ನಾವು ಸಂಬಂಧಗಳನ್ನು ಸ್ನೇಹವನ್ನು ಕುದುರಿಸಿಕೊಳ್ಳುವ ದಿಲ್ಲವೆ.”

“ಇನ್ನೂ ಕೊನೆಯದಾಗಿ ರಾಜರುಗಳಲ್ಲಿ ಇಂದ್ರದೇವ ಶ್ರೇಷ್ಠನಾದ ರಾಜ ಅವನಿಂದಲೆ ಮಳೆಯಾಗುತ್ತದೆ. ಮಳೆಯಿಂದ ನಾವು ಅನ್ನ ಬಟ್ಟೆ ಪಡೆಯುತ್ತೇವೆ. ಕುಡಿಯಲು ನೀರು ಸಿಗುತ್ತದೆ. ಪರಿಸರ ಶುದ್ಧವಾಗುತ್ತದೆ. ಪ್ರತಿ ಜೀವಿಯೂ ಬದುಕುತ್ತಿರುವುದು ಇಂದ್ರದೇವನ ಕೃಪೆಯಿಂದಲ್ಲವೆ?”

ಬೀರಬಲ್‌ನ ಉತ್ತರಗಳನ್ನು ಕೇಳಿದ ಅಕ್ಷರ ಹಾಗೂ ಇತರ ಕೆಲ ಗುಣಗ್ರಾಹಿ ಪಂಡಿತರು ಸಂತುಷ್ಟರಾದರು.

ಬಹುದೊಡ್ಡ ಇನಾಮು ಪಡೆದ ಬೀರಬಲ್ ವಿಜಯದ ನಗೆಯೊಂದಿಗೆ ಮನೆಗೆ ನಡೆದ.

Leave a Comment

error: Content is protected !!
%d bloggers like this: