Rayabhari manganadaddu…

ಅರಬ್ ದೇಶದಿಂದ ಒಬ್ಬ ರಾಯಭಾರಿ ದೆಹಲಿಗೆ ಬಂದ. ಸಾಮ್ರಾಟ್ ಅಕ್ಷರನ ಸಾಮ್ರಾಜ್ಯದಲ್ಲಿನ ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ ಆತ ಗ್ರಂಥವೊಂದನ್ನು ಬರೆಯುವವನಿದ್ದ.

“ಈ ರಾಯಭಾರಿಗಳು ನಮ್ಮ ಅತಿಥಿ. ಅವರಿಗೆ ಯಾವುದೂ ಕೊರತೆ ಯಾಗದಂತೆ ನೋಡಿಕೊಳ್ಳಿ’ ಎಂದು ಅಕ್ಬರ್ ತನ್ನ ರಾಜಭಟರಿಗೆ, ಸೇವಕರಿಗೆ ಆದೇಶಿಸಿದ್ದ.

ಆ ರಾಯಭಾರಿಯನ್ನು ತುಂಬ ಚೆನ್ನಾಗಿ  ನೋಡಿಕೊಳ್ಳಲಾಗಿತ್ತು. ರಾಯಭಾರಿ ಸಾಹಿತ್ಯ ಪ್ರೇಮಿಯಾಗಿದ್ದರಿಂದ, ಆತನಿಗೂ ಬೀರಬಲ್‌ನಿಗೂ ಬೇಗನೆ ಸ್ನೇಹ-ಬಾಂಧವ್ಯ ಚಿಗುರಿತು. ಇಬ್ಬರೂ ಮೇಲಿಂದ ಮೇಲೆ ಕೂಡುತ್ತಿದ್ದರು, ಹರಟುತ್ತಿದ್ದರು, ಚರ್ಚಿಸುತ್ತಿದ್ದರು.

ಸಾಮ್ರಾಟ್‌ನ ಅಂತರಂಗದ ಗೆಳೆಯನಾಗಿದ್ದರಿಂದ, ಬೀರಬಲ್‌ನಿಂದ, ರಾಜ್ಯಾಡಳಿತದ
ಎಷ್ಟೋ ವಿಷಯಗಳು ಅವರಿಬ್ಬರ ಮಾತುಕತೆಯಲ್ಲಿ ಬಂದು ಹೋಗುತ್ತಿದ್ದವು.

ಆಗ ಆ ದಿನ… ಬೀರಬಲ್ ಹಾಗು ರಾಯಭಾರಿ ವಾಯುವಿಹಾರಕ್ಕೆಂದು ರಾಜಧಾನಿಯಿಂದ ತುಂಬ ದೂರದವರೆಗೆ ಬಂದಿದ್ದರು. ಅದು ಗೋಧೂಳಿ
ಸಮಯ, ಹಿಂಡು ಹಿಂಡಾಗಿ ದನಕರುಗಳು ಸ್ವಸ್ಥಾನಕ್ಕೆ ಹಿಂತಿರುಗುತ್ತಿದ್ದವು.

ಆಗ ಹಿಂಡಿನಲ್ಲಿದ್ದ ಹೋರಿಯೊಂದಕ್ಕೆ ಮದವೇರಿರಬಹುದು. ದಿಕ್ಕೆಟ್ಟು ಓಡುತ್ತ ಇವರಿಬ್ಬರ ಕಡೆ ಬರುತ್ತಿತ್ತು. ಮುಂದಾಗಬಹುದಾದ ಅಪಾಯ ಅರಿತ ರಾಯಭಾರಿ ತಕ್ಷಣ ಹತ್ತಿರದಲ್ಲಿದ್ದ ಮರವನ್ನೇರಿದ.

ಬೀರಬಲ್‌ಗೂ ಮರ ಏರುವಂತೆ ಒತ್ತಾಯಿಸುತ್ತಲೇ ಇದ್ದ. ಆದರೆ ಮರ ಹತ್ತದೆ, ಬೀರಬಲ್ಪ್ರಸಂಗಾವಧಾನದಿಂದಾಗಿ ಅಪಾಯದಿಂದ ಪಾರಾಗಿದ್ದ.

ಮರವೇರಿದ್ದ ಆ ಹೋರಿಯನ್ನು, ನಂತರ ಗೋಪಾಲಕರು ನಿಯಂತ್ರಿ ಸಿದ್ದರು. ಆ ನಂತರವೇ ಮರದಿಂದ ಕೆಳಗಿಳಿದ ಅರಬ್ ರಾಯಭಾರಿಗೆ ಬೀರಬಲ್‌ನನ್ನೂ ಅಪಹಾಸ್ಯಕ್ಕೀಡು ಮಾಡಬೇಕೆನಿಸಿತು.

“ಏ… ಯಾಕೆ ನೀವು ಮರ ಏರಲಿಲ್ಲ?” ರಾಯಭಾರಿ ಪ್ರಶ್ನಿಸಿದ.

ಬೀರಬಲ್, “ಸ್ವಾಮಿ, ನನಗೆ ಮರ ಹತ್ತಲು ಬರೋದಿಲ್ಲ”.

“ಅಲ್ವೇ, ಕೋತಿಗಳು ಕೂಡ ಮರ ಹತ್ತುತ್ತವೆ… ನಿಮಗೆ ಬರೋದಿಲ್ಲ ಅಂದ್ರೇನು?” ಲೇವಡಿ ಮಾಡಿದ ರಾಯಭಾರಿ.

“ಸ್ವಾಮಿ ರಾಯಭಾರಿಗಳೆ, ತಮಗೆ ಮರ ಹತ್ತಲು ಬರುತ್ತದೆ?” ಬೀರಬಲ್ ಕೇಳಿದ.

“ಈಗ ನೀವೇ ನೋಡಲಿಲ್ಲವೆ… ಹೇಗೆ ಸರಸರ ಮರ ಹತ್ತಿದೆ” ರಾಯಭಾರಿ ಹೆಮ್ಮೆಯಿಂದ ಹೇಳಿದ.

“ಹಾಗಾದರೆ, ತಮಗೂ ಕೋತಿಗೂ ಏನೂ ಅಂತ”  ಬೀರಬಲ್‌ನ ವ್ಯಂಗ್ಯಕ್ಕೆ ರಾಯಭಾರಿ ಇಂಗು ತಿಂದ ಮಂಗನಂತಾಗಿದ್ದ.

Leave a Comment

error: Content is protected !!
%d bloggers like this: