Samratra Husimunisu

ಒಂದು ದಿನ ಯಾವುದೋ ವಿಚಾರ ಮಾಡಲು ಬೀರಬಲ್ ಅಕ್ಟರ್‌ನ ಅಂತಃಪುರಕ್ಕೆ ಬಂದ. ಅಕ್ಟರ್‌ನಿಗೆ ತುರ್ತಾಗಿ ಒಂದು ಸಂಗತಿ ತಿಳಿಸಬೇಕಾಗಿತ್ತು.

ಆದರೆ ಅದರ ಬಗ್ಗೆ ಅರಿವಿರದ ಅಕ್ಟರ್‌, ತಮಾಷೆಯ ಭಾವದಲ್ಲಿದ್ದ. ಬೀರಬಲ್‌ನೊಂದಿಗೆ ಒಂದಿಷ್ಟು ಚೇಷ್ಟೆ ಮಾಡಬೇಕೆನಿಸಿತ್ತು.

ತನ್ನ ಕಡೆಗೆ ಅವಸರದಿಂದ ಬಂದ ಬೀರಬಲ್‌ನ ಮೇಲೆ ಕೋಪ ಬಂದಿರುವಂತೆ ನಟಿಸಿದ. ಸಾಮ್ರಾಟನ ಮನೋಸಾಗರದಲ್ಲಿ ಏನಿದೆ ಎಂಬುವುದನ್ನು ಅರಿಯದ ಬೀರಬಲ್,

“ಜಹಾಂಪನಾ…” ಎಂದು ಹೇಳುತ್ತಿದ್ದಂತೆಯೆ,

“ಬೀರಬಲ್, ನಿನ್ನೊಡನೆ ಈಗ ಮಾತನಾಡಲು ನನಗೆ ಮನಸ್ಸಿಲ್ಲ. ನೀನು ಏನೇ ಹೇಳಿದರೂ ಖಂಡಿತವಾಗಿ ನಾನು ಒಂದು ಮಾತನ್ನು ಆಡುವುದಿಲ್ಲ” ಅಕ್ಟರ್‌ ಕೋಪದಿಂದ ನುಡಿದ. ದೊರೆಯ ಕೋಪದ ಮಾತು ಕೇಳಿದ ಬೀರಬಲ್ ಅಸಮಾಧಾನ ಗೊಳ್ಳಲಿಲ್ಲ.

ನಯವಾದ ಮಾತುಗಳಲ್ಲಿಯೆ, “ಜಹಾಂಪನಾ ನೀವೇನು ಮಾತನಾಡಬೇಡಿ, ನಾನೆ ಮಾತನಾಡುತ್ತೇನೆ. ಸಾಮ್ರಾಟರಿಗೆ ಈ ಬಡವನ ಹತ್ತಿರ ಮಾತನಾಡಲು ಸಮಯ ಇರುವುದಿಲ್ಲ ಎಂಬುದು ನನಗೆ ಗೊತ್ತು. ಆದ್ದರಿಂದ ನಾನು ಮಾತನಾಡುತ್ತೇನೆ, ಅದನ್ನು ನೀವು ಕೇಳಿಸಿಕೊಂಡರೆ ಸಾಕು” ಎಂದು ಬೀರಬಲ್ ಹೇಳಿದ.

ಬೀರಬಲ್‌ನ ಜಾಣ ಮಾತು ಕೇಳಿ ಅಕ್ಟರ್‌ ಮುಗುಳಕ್ಕ. ಇದೆಲ್ಲ ಮಹಾರಾಜರ ಹುಸಿ ಮುನಿಸು ಎಂಬುದನ್ನು ಬೀರಬಲ್, ಅವರ ಸುದೀರ್ಘ ಸಾಂಗತ್ಯದಲ್ಲಿ ಕಂಡುಕೊಂಡಿದ್ದ.

Leave a Comment

error: Content is protected !!
%d bloggers like this: