KannadaKaliyona

Sandhi endarenu in kannada? ಸಂಧಿ ವಿಧಗಳು

Sandhi endarenu(ಸಂಧಿ ಎಂದರೇನು)

Here you will learn about sandhi endarenu in kannada(ಸಂಧಿ ಎಂದರೇನು) and sandhigalu examples in kannada(ಸಂಧಿ ವಿಧಗಳು ಮತ್ತು ಸಂಧಿ ಉದಾಹರಣೆಗಳು)

Definition : ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೆ ಕೊಡುವುದಕ್ಕೆ ಸಂಧಿ(Sandhi) ಎಂದು ಹೆಸರು. ಎರಡು ಪದಗಳು ಸಂಧಿಯಾಗುವಾಗ ಮೊದಲ ಪದದ ಕೊನೆಯ ಅಕ್ಷರವೂ, ಎರಡನೇ ಪದದ ಮೊದಲ ಅಕ್ಷರವೂ ಎಡಬಿಡದೆ ಒಂದಕ್ಕೊಂದು ಸೇರುತ್ತವೆ.

ಕನ್ನಡ ಪದಗಳುಒಂದಕ್ಕೊಂದು ಸೇರಿಕೊಳ್ಳುವಾಗ ಸಂಧಿಯಾಗುವದು.

ಗೊತ್ತು  +  ಇಲ್ಲ    =  ಗೊತ್ತಿಲ್ಲ.

ಉ  +   ಇ     =  (ಉ ಕಾರ ಇಲ್ಲದಾಯಿತು)

ನೀವು + ಎಲ್ಲರೂ   =  ನೀವೆಲ್ಲರೂ

ಉ  +  ಎ   =   (ಉ ಕಾರ ಇಲ್ಲದಾಯಿತು)

ಬೇರೆ  +  ಒಬ್ಬ  =  ಬೇರೊಬ್ಬ

ಓಡು + ಇಸು   =  ಓಡಿಸು

               ಸಂಧಿ ವಿಧಗಳು

            1) ಲೋಪ ಸಂಧಿ

“ಎರಡು ಸ್ವರಗಳು ಸಂಧಿಸುವಾಗ ಅರ್ಥವು ಕೆಡದೆ ಮೊದಲನೆಯ ಸ್ವರವು ಇಲ್ಲದಂತಾಗುವದು ಕಂಡುಬರುತ್ತದೆ” ಇದುವೇ ಲೋಪ ಸಂಧಿಯೆನಿಸುವದು.

ಕೆಲವು ಕಡೆ ಲೋಪ ಮಾಡಿದರೆ ಅರ್ಥ ಕೆಡುವದು. ಅಂತಹ ಸ್ಥಳದಲ್ಲಿ ಲೋಪ ಮಾಡಕೂಡದು.

ಉದಾ :- ಪೇಟೆ + ಇಂದ  =  ಪೇಟೆಯಿಂದ   (ಎ + ಇ)

1) ಬಂಧು + ಅನ್ನು  =  ಬಧನ್ನು

2) ಅಣ್ಣ + ಅನ್ನು  =   ಅಣ್ಣ ನ್ನು

3) ಕಾಲು + ಇಂದ = ಕಾಲಿಂದ

ಮೇಲಿನವುಗಳನ್ನು ಸರಿಯಾಗಿ ಬರೆಯುವದು :

ಕಾಲು

ಬಂದು + ಅನ್ನು  = ಬಂಧುವನ್ನು

ಗುರು + ಅನ್ನು   =  ಗುರುವನ್ನು

ಅಣ್ಣ + ಅನ್ನು  =  ಅಣ್ಣ ನನ್ನು

ಕಾಲು +  ಇಂದ  =  ಕಾಲಿನಿಂದ

ಬೇರೆ ಬೇರೆಯಾದ ಶುದ್ಧ ಸಂಧಿಗಳು :

ಇವನ + ಊರು  =  ಇವನೂರು  (ಅಕಾರ ಲೋಪ)

ದೇವರು + ಇಂದ   = ದೇವರಿಂದ  (ಉಕಾರ ಲೋಪ)

            2) ಆಗಮ ಸಂಧಿ

ಗಾಳಿ + ಇಂದ = ಗಾಳಿಯಿಂದ , ಮನೆ + ಅಲ್ಲಿ = ಮನೆಯಲ್ಲಿ ಇಲ್ಲಿಯ್ ಕಾರವು ಹೊಸದಾಗಿ ಬಂದಿದೆ. ಹೀಗೆ ಹೊಸದಾಗಿ ಸೇರುವ ಅಕ್ಷರವು ಆಗಮಾಕ್ಷರವು.

‘ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಗೆ ಆಗಮಸಂಧಿ ಎಂದು ಕರೆಯುವರು”. (ಅರ್ಥವು ಕೆಡಬಾರದು).

ಯಕಾರಾಗಮ ಸಂಧಿ

ಕರೆ + ಅಲ್ಲಿ = ಕೆರೆಯಲ್ಲಿ ಕೆರೆ + ಯ್ + ಅಲ್ಲಿ = ಕೆರೆಯಲ್ಲಿ

ಹೊಳೆ + ಇಂದ = ಹೊಳೆಯಿಂದ, ಹೊಳೆ + ಯ + ಇಂದ = ಹೊಳೆಯಿಂದ

ಮನೆ + ಅನ್ನು = ಮನೆಯನ್ನು, ಮನೆ + ಯ್ + ಅನ್ನು = ಮನೆಯನ್ನು

ಹೊಟ್ಟೆ + ಅಲ್ಲಿ = ಹೊಟ್ಟೆಯಲ್ಲಿ, ಹೊಟ್ಟೆ + ಯ್ + ಅಲ್ಲಿ = ಹೊಟ್ಟೆಯಲ್ಲಿ

ವಕಾರಾಗಮ ಸಂಧಿ

ಗುರು + ಅನ್ನು = ಗುರುವನ್ನು ಇಲ್ಲಿ ‘ವ್’ ಕಾರವು ಹೊಸದಾಗಿ ಬಂದಿದೆ

ಮಗು + ಅನ್ನು = ಮಗುವನ್ನು ಮಗು + ವ್ + ಅನ್ನು = ಮಗುವನ್ನು

ಆ + ಉಂಗುರ = ಆವುಂಗುರು, ಆ + ವ್ + ಉಂಗುರು = ಆವುಂಗುರು

ಆ + ಊರು = ಆವೂರು, ಆ + ವ್ + ಊರು = ಆವೂರು

ಊಟ + ಅನ್ನು = ಊಟವನ್ನು ಊಟ + ವ್ + ಅನ್ನು = ಊಟವನ್ನು

1) ಯಕಾರಾಗಮ ಸಂಧಿ :-

ಅ, ಇ, ಈ, ವು, ಎ, ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ ‘ಯ್’ ಕಾರಾಗಮವು ಆಗುವದು.

ಉದಾ:-

ರೊಟ್ಟಿ +  ಅನ್ನು  = ರೊಟ್ಟಿಯನ್ನು

ಗುರಿ +  ಅನ್ನು  = ಗುರಿಯನ್ನು

ಮಣಿ  +  ಇಂದ  = ಮಣಿಯಿಂದ

2) ವಕಾರಾಗಮ ಸಂಧಿ :-

ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ‘ವ’ ಕಾರವು ಅಗಮವಾಗಿರುವದು.

ಉದಾ :- ಕರು + ಅನ್ನು = ಕರುವನ್ನು ಕರು + ವ + ಅನ್ನು = ಕರುವನ್ನು

ಪಿತೃ + ಅನ್ನು = ಪಿತೃವನ್ನು , ಪಿತೃ +ವ್ + ಅನ್ನು = ಪಿತೃವನ್ನು

ಗೋ+ ಅನ್ನು = ಗೋವನ್ನು , ಗೋ+ ವ್+ ಅನ್ನು = ಗೋವನ್ನು

ಪೂ + ಅನ್ನು = ಪೂವನ್ನು , ಪು + ವ + ಅನ್ನು = ಪೂವನ್ನು

1) ಅಕಾರದ ಮುಂದೆ ಅಕಾರವೇ ಬಂದರೆ ವಕಾರಾಗಮವಾಗುವದು.

ಮಠ + ಅನ್ನು = ಮಠವನ್ನು , ಮಠ + ವ್ + ಅನ್ನು = ಮಠವನ್ನು

ಕಂಠ + ಅನ್ನು = ಕಂಠವನ್ನು , ಕಂಠ + ವ್ + ಅನ್ನು = ಕಂಠವನ್ನು ಕದ + ವನ್ನು = ಕದವನ್ನು,

ಕದ + ವ್ + ಅನ್ನು = ಕದವನ್ನು

ಕಲಹ + ವನ್ನು = ಕಲಹವನ್ನು, ಕಲಹ + ವ + ಅನ್ನು = ಕಲಹವನ್ನು

2) ಅ, ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ವ್ಕಾ ಕಾರವು ಆಗಮವಾಗುವದು.

ಆ + ವೋಟ ಅವೋಟ, ಆ + ಷ್ = ಓಟ

ಆ + ಓತೀಕಾಟ = ಆವೋತೀಕಾಟ , ಆ + ವ್ + ಓತೀಕಾಟ

ಆ + ಊರು ಆವೂರು, ಆ+ವ್ + ಊರು = ಆವೂರು

ಆ + ವ್ + ಒಂಟೆ = ಆವೊಂಟೆ

3) ಈ ಶಬ್ದದ ಮುಂದೆ ಉ, ಊ, ಒ, ಓಗಳು ಬಂದರೆ ಯಕಾರಾಗಮವಾಗುವದು ಅಥವಾ ವಕಾರಾಗಮವೂ ಆಗಬಹುದು.

ಈ + ಊಟ = ಈಯೂಟ , ಈ + ಯ್ + ಊಟ

ಈ + ಊಟ = ಈವೋಟ , ಈ + ವ + ಊಟ

ಈ + ಓಲೆ = ಈವೋಲೆ , ಈ + ವ್ + ಓಲೆ

ಈ + ಒಂಟೆ = ಈಯೊಂಟೆ , ಈ + ಯ್ + ಒಂಟೆ

4) ‘ಓ’ ಕಾರದ ಮುಂದೆ ಸ್ವರ ಬಂದರೆ ವಕಾರಾಗಮವಾಗುವದು.

             3) ಅದೇಶ ಸಂಧಿ

ಹಳ + ಕನ್ನಡ   = ಹಳಗನ್ನಡ , ಹಳ + ಗ್ + ಅ + ಇಡ

ಕಳೆ + ಕುಂದು  = ಕಳೆಗುಂದು, ಕಳೆ + T + ಉಂದು

ಚಳಿ + ಕಾಲ =  ಚಳಿಗಾಲ

1) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರವು ಬಂದರೆ ಆದೇಶ ಸಂಧಿಯೆನಿಸುವದು.

2) ಸಮಾಸದ ಕೊನೆಯ ಪದದ ಮೊದಲನೆಯ ಅಕ್ಷರ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರಾದೇಶವಾಗುವದು.

ಕನೆ + ವಾಲು = ಕೆನೆವಾಲು, ಪಕಾರಕ್ಕೆ ವಕಾರಾದೇಶ

ಎಳೆ + ಬಳ್ಳಿ = ಎಳೆವಳ್ಳಿ , ಬಕಾರಕ್ಕೆ ವಕಾರಾದೇಶ

ನೆಲೆ + ಮನ = ನೆಲೆಮನೆ, ಮಕಾರಕ್ಕೆ ವಕಾರಾದೇಶ

1) ಸಕಾರಕ್ಕೆ ಚಕಾರ ಬರುವದು.

ಇನ್ + ಸರ = ಇಂಚರ , ಇನ್ + ಚ್ + ಆರ

ನುಣ್ + ಸರ = ನುಚ್ಚರ,

2) ಸಕಾರಕ್ಕೆ ಜಕಾರ ಬರುವದು.

ನುಣ್ + ಚ್ + ಅರ

ತಣ್ + ಸೊಡರ್ = ತಣ್ಣೂಡರ್, ತಣ್ + ಜ + ಒಡರ್

3) ಸಕಾರಕ್ಕೆ ಛಕಾರ ಬರುವದು.

ನೂರ್ + ಸಾಸಿರ + ನೂರ್ಛಾಸಿರ, ನೂರ್ + ಛ + ಅಸಿರ

4) ಸಕಾರಕ್ಕೆ ಕೆಲವು ಕಡೆ ಯಾವ ಆದೇಶವು ಬರುವದಿಲ್ಲ.

ಕಣ್ + ಸವಿ = ಕಣ್ಣವಿ.

ಪ್ರಕೃತಿ ಛಾವ

ಲೋಪ, ಆಗಮ, ಆದೇಶ ಸಂಧಿಗಳಾಗದಿರುವ ವಾಕ್ಯಕ್ಕೆ ಪ್ರಕೃತಿಭಾವ

ಓಹೋ  + ಅವನು ಬಂದನೇನು ?

ಅಯ್ಯೋ  +  ಇದೇನಾಯಿತು!

ಅಮ್ಮಾ +  ಅತ್ತನಡೆ

+ ಅವನು = ಸಂಧಿಯಿಲ್ಲ

ಆ ಶಬ್ದದ ಮುಂದೆ ಅ, ಆ, ಐ, ಔ ಸ್ವರಗಳು ಬಂದರೆ ಸಂಧಿಕಾರವಾಗದೆ ಪ್ರಕೃತಿಭಾವ ಉಳಿಯುವದು.

           ಸಂಸ್ಕೃತ ಸಂಧಿಗಳು

1) ಚಂದ್ರೋದಯವು ಅತ್ಯಂತ ಉಲ್ಲಾಸವನ್ನುಂಟು ಮಾಡಿದೆ.

2) ನಮ್ಮಕಾರಾಲಯ ಸಮೀಪದಲ್ಲಿದೆ.

ಚಂದ್ರ + ಉದಯ , ಕಾರ + ಆಲಯ

ಹೀಗೆ ಎರಡೆರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾಗಿವೆ.

1. ಸವರ್ಣದೀರ್ಘ ಸಂಧಿ

ನಿಯಮ ಉದಾ :- ಸವರ್ಣ ಸ್ವರಗಳು ಒಂದರ ಮುಂದೆ ಬಂದರೆ ಅವೆರಡರ ಸ್ಥಳದಲ್ಲಿ ಅದೇ ಜಾತಿಯ ದೀರ್ಘಸ್ವರವು ಆದೇಶವಾದಾಗ,

ಸಚಿವ + ಆಲಯ = ಸಚಿವಾಲಯ

ಸಚಿಪ್ + ಆ + ಆಲಯ = ಸಚಿವಾಲಯ, ಮಹೀ + ಇಂದ್ರ = ಮಹೀಂದ

ಮಹ್ + ಈ + ಇಂದ್ರ = ಮಹೇಂದ್ರ, ಗುರು + ಉತ್ತಮ = ಗುರೋತ್ತಮ ಗುರ್ + ಉ + ಉತ್ತಮ = ಗುರೋತ್ತಮ

ಆ + ಆ = ಆ ಸವರ್ಣದೀರ್ಘ ಸ್ವರಗಳು ಬಂದು ದೀರ್ಘವಾಗಿದೆ ಆಇ+ಇ= ಸವರ್ಣ ಸ್ವರಗಳು ಬಂದು ದೀರ್ಘವಾಗಿವೆ. ಈ, ಉ + ಉ + ಉ ಸವರ್ಣ ಸ್ವರಗಳು ಬಂದು ದೀರ್ಘವಾಗಿದೆ.

2. ಗುಣ ಸಂಧಿ

⇒ಸಂಗಮೇಶ್ವರನು ಪೇಟೆಗೆ ಹೋದನು.

⇒ ಕಮಲೇಶನು ಬಂದನು. ಇ) ಸುರೇಶನು ಬರೆದನು.

⇒ಸೂಯ್ಯೋದಯವಾಯಿತು.

⇒ವಾಲ್ಮೀಕಿ ಮಹರ್ಷಿಗಳು ಆಗಮಿಸುವರು.

ಮೇಲಿನ ವಾಕ್ಯಗಳಲ್ಲಿರುವ ಸಂಗಮೇಶ್ವರ, ಕಮಲೇಶ, ಸುರೇಶ ಸೂಯ್ಯೋದಯ, ಮಹರ್ಷಿ ಈ ಶಬ್ದಗಳನ್ನು ಬಿಡಿಸಿ ಬರೆಯುವಾ —

ಸಂಗಮ + ಈಶ್ವರ (ಅ + ಈಶ್ವರ) (ಅ + ಈ = ಏ)

ಅ + ಈ

ಕಮಲಾ + ಈಶ (ಅ + ಈ = ಎ)

(ಆ + ಈ)

ಸುರ + ಈಶ (ಆ + ಈ)

ಸೂರ = ಉದಯ (ಅ + ಉ = ಓ)

ಮಹಾ = ಋಷಿ (ಅ + ಋ + ಆರ್)

ನಿಯಮ : ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಏ ಕಾರವ ಉ, ಊ ಕಾರಗಳು ಪರವಾದರೆ, ಓ ಕಾರವೂ ಋ ಕಾರ ಪರವಾದರೆ ಅರ್ ಕಾರವೂ ಆದೇಶಗಳಾಗಿ ಬರುತ್ತವೆ.

3. ವೃದ್ಧಿ ಸಂಧಿ

ಭೀಮನು ಏಕೈಕ ವೀರನು.

ರಾಮಚಂದ್ರನು ಅಷ್ಟೆ ಶ್ವರದಿಂದ ಶೋಭಿಸಿದನು.

ಹಿಮಾಲಯದಲ್ಲಿ ವನೌಷಧಿಗಳು ಅವೆ.

ಪಂಪನು ಮಹೌನ್ನತ್ಯವನ್ನು ಹೊಂದಿದ ಆದಿಕವಿ,

ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೆ ಶ್ವರ, ವನೌಷಧಿ ಮಹೌನ್ನತ ಪದಗಳನ್ನು ಬಿಡಿಸಿ ಬರೆಯುವಾ–

ಏಕ + ಏಕ = ಏಕ + ಏಕ = ಏಕೈಕ (ಅ + ಏ = ಐ)

ಅಷ್ಟ + ಐಶ್ವರ = ಅಷ್ + ಐಶ್ವರ (ಅ + ಐ = ಐ)

ವನ + ಔಷಧಿ = ವನ್ + ಔಷಧಿ (ಅ + ಔ = ಔ)

ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ

ನಿಯಮ : ಅ, ಆ ಕಾರಗಳಿವೆ ಏ, ಐ ಕಾರಗಳು ಪರವಾದಲ್ಲಿಯ ಕಾರವೂ ಔಕಾರಗಳು ಪರವಾದರೆ ಔಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಎನ್ನುವರು.

ಬೇರೆ ಉದಾಹರಣೆಗಳು

ಲೋಕ ಲೋಕೈಕ ವೀರ (ಅಕಾರಕ್ಕೆ ಏಕಾರ ಪರವಾಗಿದೆ)

ಮತ  +  ಐಕ್ಯ  = ಮತೈಕ್ಯ  (ಅಕಾರಕ್ಕೆ ಐಕಾರ ಪರವಾಗಿದೆ)

ಭಾವ + ಐಕ್  =  ಭಾವೈಕ್ಯ  (ಅಕಾರಕ್ಕೆ ಐಕಾರ ಪರವಾಗಿದೆ)

ಜನ  + ಐಕ್ಯ   =  ಜನೈಕ್ಯ   (ಅಕಾರಕ್ಕೆ ಐಕಾರ ಪರವಾಗಿದೆ)

ಮಹಾ + ಔದಾಸ್ಯ = ಮಹೌದಾರ (ಅಕಾರಕ್ಕೆ ಔಕಾರವು ಪರವಾಗಿದೆ)

ಘನ + ಔದಾರ = ಘನೌದಾರ (ಅಕಾರಕ್ಕೆ ಔಕಾರವು ಪರವಾಗಿದೆ)

4. ಯಣ್ ಸಂಧಿ

ಇಂದಿನ ಹವೆ ಅತ್ಯುಷ್ಣವಿದೆ.

ಪುಲಕೇಶಿಯು ಅತ್ಯಂತ ಪರಾಕ್ರಮಿ.

ಅತ್ಯಾಸೆ ಗತಿಗೆಡಿಸಿತು. ಯುಗಾದಿ ಹಬ್ಬ ಮಾದಿಯಾಗಿದೆ.

ಅಣ್ಣತಮ್ಮಂದಿರು ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೊಂಡರು.

1) ಅತಿ + ಉಷ್ಣ = ಅತ್ + ಯ್ + ಉಷ್ಣ = ಅತ್ಯುಷ್ಣ (ಇ+ ಆ + ಯ್ + ಉ + ಷ್ಟು)

2) ಅತಿ + ಅಂತ = ಅತ್ಯಂತ

ಮೇಲಿನ ಇವೆರಡು, ಸ್ಥಳಗಳಲ್ಲಿ ಈ ಕಾರದ ಮುಂದೆ ಅ ಕಾರವು ಬರಲಾಗಿ ಯ್ ಕಾರಾದೇಶವಾಗಿದೆ.

3) ಮನು + ಆದಿ = ಮನ + ವ್ + ಆದಿ = ಮನ್ನಾದಿ (ಉ + ಆ = ವ್ + ಅ) ಇಲ್ಲಿ ಉಕಾರದ ಮುಂದೆ ಆ ಆ ಬರಲಾಗಿ ‘ವ್’ ಕಾರಾದೇಶವಾಗಿದೆ.

4) ಪಿತೃ + ಆರ್ಜಿತ = ಪಿತ್ + ರ್ ಅರ್ಜಿತ = ಪಿತ್ರಾರ್ಜಿತ

(ಯ + ಅರ್ಜಿತ = ರ್ + ಆ) ಋ ಕಾರದ ಮುಂದೆ ಆ ಕಾರ ಬಂದಿದೆ. ನಿಯಮ : ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ ಕಾರಗಳಿಗೆ ‘ಯ್” ಕಾರವೂ, ಉ, ಊ ಕಾರಗಳಿಗೆ ‘ವ್” ಕಾರವೂ ಋ ಕಾರಕ್ಕೆ ‘ರ್” ವೂ ಆದೇಶಗಳಾಗಿ ಬರುತ್ತವೆ. ಇಂತಹ ಸಂಧಿಗೆ ಯಣ್ ಸಂಧಿಯೆಂದು ಕರೆಯುವರು.

ಉದಾಹರಣೆಗಳು :

ಗುರು + ಆಜ್ಞೆ = ಗುಲ್ವಾಜ್ಞೆ (ಉ ಕಾರಕ್ಕೆ ವ್ ಕಾರಾದೇಶ)

ವಧೂ + ಆಭರಣ = ವಧ್ವಾಭರಣ

(ಇ ಕಾರಕ್ಕೆ ಯ್ ಕಾರಾದೇಶ) ಗತ್ಯಂತರ (ಇಕಾರಕ್ಕೆ ಯ್ ಕಾರಾದೇಶ)

      ಸಂಸ್ಕೃತ ವ್ಯಂಜನ ಸಂಧಿಗಳು

                      ಜಸ್ತ್ರ ಸಂಧಿ

ಜಸ್ ಎಂದರೆ ಸಂಸ್ಕೃತದಲ್ಲಿ ‘ಜಬಗಡದ’ ಈ ಐದು ವ್ಯಂಜನಗಳನ್ನು ತಿಳಿಸುವ ಆದೇಶ ಸಂಜೆ, ಯಾವ ಯಾವ ಅಕ್ಷರಗಳಿಗೆ ಇವು ಆದೇಶವಾಗಿ ಬರುತ್ತಿವೆ ಎಂಬುದಾಗಿ ವಿಚಾರಿಸುವಾ.

1) ಸಂಸ್ಕೃತ ವ್ಯಾಕರಣದಲ್ಲಿ ಅಜಂತ ಎಂದರೆ ಸ್ವರಾಂತ ಸಂಜ್ಞೆ

2) ರಾಜನಿಗೆ ದಿಗಂಗನೆಯರು ಆರತಿಯನ್ನೆತ್ತಿದರು.

3) ಅಬ್ಬಿಯ ತೆರೆಗಳು ಬಲು ದೊಡ್ಡವು.

4) ಷಡಾನನನು ದೇವತೆಗಳ ಸೇನಾಪತಿ,

5) ಸದಾನಂದನು ಪೇಟೆಗೆ ಹೋದನು.

ಮೇಲಿನ ವಾಕ್ಯಗಳಲ್ಲಿಯ ಅಜಂತ, ದಿಗಂಗನೆಯರು, ಅಬ್ಬಿ, ಷಡಾನನನ್ನು ಸದಾನಂದನ ಶಬ್ದಗಳನ್ನು ಬಿಡಿಸಿ ಬರೆಯುವಾಗ….

ಅಜ್ + ಅಂತ = ಅಜ್ + ಅಂತ = ಅಜಂತ ( ಚಕಾರಕ್ಕೆ ಜಕಾರಾದೇಶ)

ದಿಕ್ + ಅಂಗನೆ + ದಿಗ + ದಿಗಂಗನೆ (ಕಕಾರಕ್ಕೆ ವಕಾರಾದೇಶ)

ಆಪ್ + ಧಿ ಅಬ್ + ಧಿ = ಅಬ್ಬಿ (ಸಮುದ್ರ) (ಬಕಾರಾದೇಶ)

ಷಟ್ + ಅವನ = ಷಟ್ + ಆನನ ಷಡಾನನ = (ಟಕಾರಕ್ಕೆ ಡಕಾರಾದೇಶ)

ಸತ್ + ಆನ೦ದ = ಸದ್ + ಆನಂದ (ತಕಾರಕ್ಕೆ ದಕಾರಾದೇಶ)

ನಿಯಮ: ಕ ಚ ಟ ತ ಪ ಗಳಿಗೆ ಜಡ ದ ಬ ಆದೇಶವಾಗಿ ಬಂದರೆ ಜನ್ಮ ಸಂಧಿ ಎನಿಸುವದು.

ಉದಾಹರಣೆಗಳು:

⇒ವಾಕ್ + ದಾನ = ವಾಗ್ದಾನ (ಕಕಾರಕ್ಕೆ ಗಕಾರಾದೇಶ)

⇒ದಿಕ್ + ದೇಶ = ದಿಕ್ ದೇಶ – ದಿಗ್ದಶ (ಗಕಾರಾದೇಶ)

⇒ಅಚ್’ + ಅಂತ್ ಅಚ್ ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)

⇒ಅಚ್ + ಆದಿ = ಅಚ್ ಆದಿ – ಅಜಾದಿ (ಚಕಾರಕ್ಕೆ ಜಕಾರಾದೇಶ)

⇒ಷಟ್ + ಆನನ ಷಡ್ ಆನನ = ಅಡಾನನ (ಟಕಾರಕ್ಕೆ ಡಕಾರಾದೇಶ)

⇒ಷಟ್ + ಅಂಗನೆ = ಷಡ ಅಂಗನೆ – ಷಡಂಗನೆ (ಟಕಾರಕ್ಕೆ ಡಕಾರಾದೇಶ)

⇒ಚಿತ್ + ಆನಂದ = ಚಿದ್ ಆನಂದ – ಚಿದಾನಂದ (ತಕಾರಕ್ಕೆ ದಕಾರಾದೇಶ)

⇒ಸತ್ + ಉತ್ತರ = ಸದ್ ಉತ್ತರ – ಸದುತ್ತರ (ತಕಾರಕ್ಕೆ ದಕಾರಾದೇಶ)

⇒ಅಪ್ + ಜ = ಆಬ್ಬ (ಪಕಾರಕ್ಕೆ ಬಕಾರಾದೇಶ) (ಪಕಾರಕ್ಕೆ)

⇒ಅಪ್ + ಅಂಶ = ಅಬ್ ಅಂಶ ~ ಅಬಂಶ (ಸಕಾರಕ್ಕೆ ಬಕಾರಾದೇಶ)

⇒ಪಾಣಿನಿ ಸೂತ್ರ – ಝಲಾಂ ಜಶೋ5ನೇ (82-49)

⇒ಜಸ್ಟ್, ಸಂಧಿಯಾಗದಿರುವ ಉದಾಹರಣೆಗಳು

⇒ದಿಕ್ + ಚಕ್ರ = ದಿಕ್ಷಕ, ಸತ್ + ಕವಿ = ಸತ್ಕವಿ

⇒ವಾಕ್ + ಪತಿ = ವಾಕೃತಿ, ದಿಕ್ + ಸೂಚಿ = ದಿಕ್ಸೂಚಿ

I hope you have learnt sandhi endarenu in kannada(ಸಂಧಿ ಎಂದರೇನುಸಂಧಿ ಎಂದರೇನು), sandhigalu examples in kannada(ಸಂಧಿಗಳಲ್ಲಿ ಎಷ್ಟು ವಿಧಗಳಿವೆ), if this information is helpful please share this with your friends and relatives❤.

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading