KannadaKaliyona

Sharif Shivayogi Song lyrics

Sharif Shivayogi Song lyrics in Kannada

ಕುಂತಿರುಜನರಿಗೆಲ್ಲ ನಿಂತು ಹೇಳುವೆನು ಶರಣರ ಚರಿತೆಯಸಾರವನು ||
ಕನ್ನಡ ನಾಡಿನ ಮಣ್ಣಿನ ಮಹಿಮೆಯು ಎಷೋ ಶರಣರಿಲ್ಲಿ

ಕನಕಪುರಂದರ ಮಹಾಂತರೋ ಗುರನಾಗಲಿಮಗ ಶಿವಯೋಗಿಗಳು ||
ಇವರ ಸರಿಸಮನವಾದ ಶರಣ ಶರೀಫರ ಚೆರಿತೆಯನಾ ||
ಧಾರವಾಡ ಜಿಲ್ಲಾದೊಳಗ ಶಿಗ್ಗಾಂತಾಲೂಕಿನಲ್ಲಿ ಶಿಶುನಾಳಪುರವೆಂಬ
ಗ್ರಾಮದೊಳು ||
ಹಜ್ಜಮಾ ತಾಯಿ ಇಮಾಂಮ ಸಾಹೇಬರು ಸತಿಪತಿಗಳು ಇದ್ದರು
ಮುದ್ದಾ ||
ಸತಿಪತಿಗಳು ಇಬ್ಬರಿಗೆ ಮಕ್ಕಳಿಲ್ಲವೆಂಬುವ ಚಿಂತಿಯು ಕಾಡುವದಾ ||
ಮಕ್ಕಳಾಗದ ಬಂಜಿ ಎಂಬನುಡಿ ಹಿಂದಮುಂದು ಆಡುತಿದ್ದ ಜನಾ ||
ಮಕ್ಕಳ ಸಲುವಾಗ ಮನೆಯದೇವರು ಖಾದರ ಲಿಂಗಗನೆಡಕೊಂಡಾರಾ||
ಸತತಹನನ್ನೆರಡುವರುಷ ನಿಷ್ಟೆ ಇಂದಲಿ ಗುರುವಿನ ಸೇವೆಯ
ಮಾಡಿದಳಾ ||
ಭಕ್ತಿಗೆ ಮೆಚ್ಚಿ ಖಾದರಲಿಂಗನು ಸಂತಾನ ಫಲವನು ಕರುಣಿಸಿದಾ ||
ಶರಣ ಶರೀಫನು ಶಿಶುನಾಳ ದೋಳು ಅವತರಿಸಿ ಬಂದಾನು ಆಗ ||
ಕಳಸ ಪುರದೊಳಗುರುಗೋವಿಂದ ಭಟ್ಟರು ಮಹಾಜ್ಞಾನಿ ಗುರು
ಇದ್ದಾರು ||
ವಳ್ಳಿ ಶಿಷ್ಯನೆ ಶೋಧನೆಮಾಡುತ ಗುರುಗಳು ಬಂದಾರು
ಶಿಶುನಾಳಪುರದೊಳಗ ||
ಗುರುಗೋವಿಂದ ಭಟ್ಟರ ಬಂದ ಸುದ್ದಿದಯಕೇಳಿ ಇಮಾಮಸಾಹೇಬ್ರು
ಬಂದಾರು ಹೊರಗ ||
ತಂದಿಯಕೂಡ ಬಾಲ ಶರೀಫನು ಬಂದು ನಿಂತ ಬಾಗಿಲದಾಗ ||
ಗುರುಗಳು ಶರೀಫನ ನೋಡಿ ಮನದೋಳು ನನಗೆ ತಕ್ಕ ಶಿಷ್ಯನೆಂದಾರಾ||
ಗುರುಗಳು ಕೇಳತಾರ ಶರೀಫನ ನಿಮ್ಮಪ್ಪಯಾರು ಹೇಳೋ ಶರಿಫಾ ||
ಶರೀಫಅಂತಾನು ಗುರುಗಳ ಮಾತಿಗೆ ಯಾವ ಅಪ್ಪನ ನೀವು ಕೇಳಿದಿರಾ ||
ಎನೋ ಶರೀಫಾ ಏನ್ಹೇಳುವಿನಿ ಒಬ್ಬವನಿಗೆಷ್ಟು ಜನ ಅಪಂದಿರಾ ||
ತಂದೆಕೇಳು ನಾನು ನೂರುಸಾರೆ ಸತ್ತು ನೂರು ಸಾರೆ ಹುಟ್ಟಿ ಬಂದಿರುವೆ ||

ಅದರೊಳು ನಾನು ಯಾವತಂದಿಯ ಹೆಸರು ಹೇಳಬೇಕು ನೀವೇ ಹೇಳಿ ||
ಮೆಚ್ಚಿದೆ ನಾನು ನಿನ್ನಯ ಮಾತಿಗೆ ನಿನಗೆ ಎಷ್ಟೋ ಜನ ತಂದಿಗಳು ||
ಪಿಂಡದೊಳಗೆ ಈ ಮಾಂಸದ ಮುದ್ದಿಗೆ ಜೀವದಾನ ಕೊಟ್ಟಾ
ಹಡದಪ್ಪಾ ||
ಮಾಂಸದ ಮುದ್ದೆಗೆ ಅಜ್ಞಾನವ ಕಳೆದು ಮುಕ್ತಿ ಸೋಪಾನ ಕೊಯ್ಯುವ
ಪಡೆದಪ್ಪಾ ||
ನೀನೆ ನನ ಪಡೆದಪ್ಪನೆನ್ನುತ್ತಾ ಹೋಗಿ ಬಿದ್ದಾ ಗುರುಪಾದಕ್ಕೆ ||
ಮಸ್ತ ಕದಲಿವರ ಹಸ್ತವ ನಿಟ್ಟು ಗುರು ಆಶಿರ್ವಾದವನ್ನು ಮಾಡಿದರು
ಶರೀಫರ ತಂದೆ ತಾಯಿಯ ತಪ್ಪಿಗೆ ಪಡಕೊಂಡು ಕರಕೊಂಡು
ನಡೆದಾರಾ ||
ಶರೀಫನು ಗುರುವಿನ ಸೇವೆಯನ್ನು ನಿಷ್ಠಾದಿಂದಲಿ ಮಾಡುವನು ||
ಗುರುವಿನ ಸೇವೆಮಾಡುತ ಶರೀಫನು ಗುರು ದೀಕ್ಷೆಯವಡಕೊಂಡಾನು ||
ಸರ್ವಜಾತಿ ಸರ್ವದಧರ್ಮಗಳು ಸಮನ್ವಯಂದು ನಡೆದಾರಾ ||
ಗೋವಿಂದ ಗುರುಗಳ ಅಣ್ಣ ಬಾಳಂಬಟ್ಟ ಶೇರತಿದ್ದಿಲ್ಲ ಶರೀಫರಿಗೆ
ಬ್ರಾಹ್ಮಣರ ಅಗ್ರಹಾರದಲಿ ಶೂದ್ರಜಾತಿ ಕುಡಬಾರದೆನ್ನವರಾ ||
ಶಾಮಭಟ್ಟರು ರಾಮಭಟ್ಟರು ಬಾಳಂಭಟ್ಟರಿಗೆ ಕಿವಿ ತುಂಬುವರಾ
ಹೊರಗಾಕಂತಾ ||
ಇಲ್ಲದಿದ್ದರೆ ನಿಮ್ಮನಿತಾನವನು ಕುಲದಿಂದಹೊರಗೆ ಇಡುವವುಎಂಡಾ ||
ಜಾತಿಭೇದ ಹೆಚ್ಚು ಆಗಿ ಕದನ ಹತ್ತಿತು ಅಣ್ಣತಮ್ಮರೊಳಗ ||
ಶಿಷ್ಯನ್ನ ಬಿಡದೆ ಗೋವಿಂದ ಭಟ್ಟರು ಮನೆಯನ್ನು ಬಿಟ್ಟು ನಡೆದಾರಾ ||
ಒಂದು ದಿವಸ ಗುರುಗೋವಿಂದ ಭಟ್ಟರು ಶಿಷ್ಯಗ ಹೇಳತಾರ ಒಂದು
ಮಾತಾ ||

ಸುಬಮೂಹೂರ್ತ ವಿದೆ ಸ್ನಾನ ಮಾಡಿಬಾ ಬ್ರಹೋಪ ದೇಶವ
ಮಾಡುವೆನಾ ||
ಬೆಳೆಯುವ ಬಳ್ಳಿಗೆ ಹುಳುಗಳು ತಗಲ್ಯಾವು ದಾರಿಯೊಳಗ
ಬಾಳಹುಶಿಯಾರ ||
ಗುರುವಿನಾಜ್ಞೆ ಮೇರೆಗೆ ಶರೀಫನು ಸ್ನಾನಮಾಡಲು ಭಾವಿಗೆ ಬಂದಾ ||
ಭಾವಿಕಟ್ಟಿಯಮ್ಯಾಲೆ ಊರ ಸಾಹುಕಾರ ಸೊಸಿ ನೀರಜಗ್ಗಿಕೊಡಾ
ಹೊರುತಿದ್ದಳಾ ||
ಕೊಡಾ ಹೊರುವಾಗ ತಲಿಮ್ಯಾಲಿನ ಶಿಂಬಿ ಜರಿದು ತೆಳಗಬಿತ್ತು ಆ
ಕ್ಷಣಕ ||
ಬಗ್ಗಿ ಶಿಂಬಿಯ ತೊಗೊಳ್ಳದರೊಳಗ ತಲಿಮ್ಯಾಗಲ ಶೆರಗು
ತೆಳಗಿಳಿಯುತಿತ್ತು ||
ಹಳ್ಳಿಗಾಡಿನ ನಾರಿ ರೂಪದಲೆ ಸುಮದರಿ ದೃಷ್ಟಿ ಹೋತು ಕುಚದ ರಾಸಿ।।
ಕುಚದ ರಾಶಿಯನು ಕಂಡ ಶರೀಫನು ಮನಸಿನ ಬ್ರಮೆತಪ್ಪಿತ ಕ್ಷಣಕ ||
ನಾರಿಕೊಡಾ ಹತ್ತು ನಡಿದಾಳು ಮನೆಗೆ ಬೆನ್ನು ಹತ್ತಿ ಹೊಂಟಾನು
ಶರೀಫಾ||
ನಡುದಾರಿಯಲಿ ತೋಟದ ವಳಗ ದನಗಳು ಹೊಕ್ಕುವಾಡ್ಯಾವ ಹಾಳ ||
ತೋಟದ ಮಾಲಿಕ ಆಳಿಗೆ ಹೇಳತಾನ ತುಡುಗದನಕ ಬಡಿರೋ ಅಂದಾ||
ತೋಟದ ಮಾಲಿಕ ನಾಡಿದನುಡಿಗಳು ಶರೀಫನ ಕಿವಿಯೋಳು
ತುಂಬಿದವಾ ||
ದಿಗ್ಧಮೆಯಾಗಿ ನಿಂತು ಶರೀಫನು ಅತಾನು ತನಯ ಮನದೊಳಗಾ ||
ಬಾಯಿಲ್ಲದ ಪ್ರಾಣಿಗಳು ಇವು ತಪ್ಪು ಮಾಡಿದರೆ ಹೊಡಿರೆನ್ನುವರಾ ||
ಅರಿವು ಇದ್ದ ಈ ಪ್ರಾಣಿ ತಪ್ಪಮಾಡೈತಿ ಇದಕ ಯಾತರಲೆ ಹೊಡಿಬೇಕು ||
ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ದಿಡಗಿಲೆ ಹೋದ ಸಾವಕಾರ
ಮನಿಗೆ ||

Sharif Shivayogi Song lyrics in English

kuntirujanarigella nintu hēḷuvenu śaraṇara cariteyasāravanu ||

kannaḍa nāḍina maṇṇina mahimeyu eṣō śaraṇarilli kanakapurandara mahāntarō guranāgalimaga śivayōgigaḷu ||

ivara sarisamanavāda śaraṇa śarīphara ceriteyanā ||

dhāravāḍa jillādoḷaga śiggāntālūkinalli śiśunāḷapuravemba grāmadoḷu ||

hajjamā tāyi imāmma sāhēbaru satipatigaḷu iddaru muddā ||

satipatigaḷu ibbarige makkaḷillavembuva cintiyu kāḍuvadā ||

makkaḷāgada ban̄ji embanuḍi hindamundu āḍutidda janā ||

makkaḷa saluvāga maneyadēvaru khādara liṅgaganeḍakoṇḍārā||

satatahananneraḍuvaruṣa niṣṭe indali guruvina sēveya māḍidaḷā ||

bhaktige mecci khādaraliṅganu santāna phalavanu karuṇisidā ||

śaraṇa śarīphanu śiśunāḷa dōḷu avatarisi bandānu āga ||

kaḷasa puradoḷagurugōvinda bhaṭṭaru mahājñāni guru iddāru ||

vaḷḷi śiṣyane śōdhanemāḍuta gurugaḷu bandāru śiśunāḷapuradoḷaga ||

gurugōvinda bhaṭṭara banda suddidayakēḷi imāmasāhēbru bandāru horaga ||

tandiyakūḍa bāla śarīphanu bandu ninta bāgiladāga ||

gurugaḷu śarīphana nōḍi manadōḷu nanage takka śiṣyanendārā||

gurugaḷu kēḷatāra śarīphana nim’mappayāru hēḷō śariphā ||

śarīpha’antānu gurugaḷa mātige yāva appana nīvu kēḷidirā ||

enō śarīphā ēnhēḷuvini obbavanigeṣṭu jana apandirā ||

tandekēḷu nānu nūrusāre sattu nūru sāre huṭṭi bandiruve ||

adaroḷu nānu yāvatandiya hesaru hēḷabēku nīvē hēḷi ||

meccide nānu ninnaya mātige ninage eṣṭō jana tandigaḷu ||

piṇḍadoḷage ī mānsada muddige jīvadāna koṭṭā haḍadappā ||

mānsada muddege ajñānava kaḷedu mukti sōpāna koyyuva paḍedappā ||

nīne nana paḍedappanennuttā hōgi biddā gurupādakke ||

masta kadalivara hastava niṭṭu guru āśirvādavannu māḍidaru śarīphara tande tāyiya tappige paḍakoṇḍu karakoṇḍu naḍedārā ||

śarīphanu guruvina sēveyannu niṣṭhādindali māḍuvanu ||

guruvina sēvemāḍuta śarīphanu guru dīkṣeyavaḍakoṇḍānu ||

sarvajāti sarvadadharmagaḷu samanvayandu naḍedārā ||

gōvinda gurugaḷa aṇṇa bāḷambaṭṭa śēratiddilla śarīpharige brāhmaṇara agrahāradali śūdrajāti kuḍabāradennavarā ||

śāmabhaṭṭaru rāmabhaṭṭaru bāḷambhaṭṭarige kivi tumbuvarā horagākantā ||

illadiddare nim’manitānavanu kuladindahorage iḍuvavu’eṇḍā ||

jātibhēda heccu āgi kadana hattitu aṇṇatam’maroḷaga ||

śiṣyanna biḍade gōvinda bhaṭṭaru maneyannu biṭṭu naḍedārā ||

ondu divasa gurugōvinda bhaṭṭaru śiṣyaga hēḷatāra ondu mātā ||

subamūhūrta vide snāna māḍibā brahōpa dēśava māḍuvenā ||

beḷeyuva baḷḷige huḷugaḷu tagalyāvu dāriyoḷaga bāḷahuśiyāra ||

guruvinājñe mērege śarīphanu snānamāḍalu bhāvige bandā ||

bhāvikaṭṭiyamyāle ūra sāhukāra sosi nīrajaggikoḍā horutiddaḷā ||

koḍā horuvāga talimyālina śimbi jaridu teḷagabittu ā kṣaṇaka ||

baggi śimbiya togoḷḷadaroḷaga talimyāgala śeragu teḷagiḷiyutittu ||

haḷḷigāḍina nāri rūpadale sumadari dr̥ṣṭi hōtu kucada rāsi।। kucada rāśiyanu kaṇḍa śarīphanu manasina brametappita kṣaṇaka ||

nārikoḍā hattu naḍidāḷu manege bennu hatti hoṇṭānu śarīphā||

naḍudāriyali tōṭada vaḷaga danagaḷu hokkuvāḍyāva hāḷa ||

tōṭada mālika āḷige hēḷatāna tuḍugadanaka baḍirō andā||

tōṭada mālika nāḍidanuḍigaḷu śarīphana kiviyōḷu tumbidavā ||

digdhameyāgi nintu śarīphanu atānu tanaya manadoḷagā ||

bāyillada prāṇigaḷu ivu tappu māḍidare hoḍirennuvarā ||

arivu idda ī prāṇi tappamāḍaiti idaka yātarale hoḍibēku ||

tappige śikṣeyāgalēbēku endu diḍagile hōda sāvakāra manige ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading