Tirugu Bana

ಅಕ್ಟರ್‌ನ ಆಸ್ಥಾನದಲ್ಲಿ ಅಬ್ದುಲ್ ಫಜಲ್ ಹೆಸರಿನ ಚಾಣಾಕ್ಷ ಮಂತ್ರಿ ಇದ್ದ. ಅವನಾದರೂ ಕೂಡ ಅತ್ಯಂತ ಕುಶಾಗ್ರಮತಿಯೂ ಹಾಗೂ ಅಷ್ಟೇ ದಕ್ಷನಾದ ಮಂತ್ರಿಯಾಗಿದ್ದ. ಆದರೆ ಒಂದಿಷ್ಟು ಗಂಭೀರ ಸ್ವಭಾವ.

ಬೀರಬಲ್ ಎಲ್ಲರನ್ನೂ ಒಮ್ಮೊಮ್ಮೆ ಅಕ್ಷರ್ ಬಾದಷಾರನ್ನು ಕೂಡ ಗೇಲಿ ಮಾಡುವದು, ಅಬ್ದುಲ್ ಫಜಲ್‌ನಿಗೆ ಸೇರುತ್ತಿರಲಿಲ್ಲ.

ಆದರೆ ತನಗಿಂತ ಹೆಚ್ಚು ಅಧಿಕಾರ ಹೊಂದಿದ್ದ ಹಾಗೂ ಸಾಮ್ರಾಟರಿಗೆ ಅತೀ ಆಪ್ತನಾಗಿದ್ದ ಬೀರಬಲ್‌ನಿಗೆ ಎದಿರು ಮಾತನಾಡದೆ ಸುಮ್ಮನಿದ್ದ.

ಹೇಗಾದರೂ ಮಾಡಿ ಈತನನ್ನು ಅವಮಾನಿಸಬೇಕೆಂಬ ದುರ್ವಿಚಾರ ಅಬ್ದುಲ್ ಫಜಲ್‌ನದು.

ಆ ದಿನ ದರ್ಬಾರನಲ್ಲಿ ಎಲ್ಲರೂ ಸೇರಿದ್ದಾರೆ. ಅಕ್ಟರ್‌ ಬಾದಷಾ ಕೂಡ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ. ಇದೇ ಸದವಕಾಶ ಅಂದುಕೊಂಡ ಅಬ್ದುಲ್ ಫಜಲ್,

“ಬೀರಬಲ್ ಇಂದಿನಿಂದ ನಿಮ್ಮನ್ನು ಈ ರಾಜ್ಯದ ನಾಯಿಗಳ ನಾಯಕರನ್ನಾಗಿ ಮಾಡಲಾಗಿದೆ” ತಮಾಷೆ ಮಾಡಿದ.

“ಓಹೊ… ಹಾಗಿದ್ದರೆ, ಇನ್ನು ಮುಂದೆ ನೀವೆಲ್ಲ ನನ್ನ ಆಜ್ಞೆ ಪಾಲಿಸ ಬೇಕಾಗುತ್ತದೆ” ತಕ್ಷಣವೇ ಬೀರಬಲ್ ನುಡಿದಾಗ, ಅಕ್ಷರ್‌ ಆದಿಯಾಗಿ ಎಲ್ಲರೂ ಬಿದ್ದು ಬಿದ್ದು ನಗತೊಡಗಿದರು.

ತನ್ನ ಮಾತು ತನಗೇ ತಿರುಗುಬಾಣವಾಯಿತಲ್ಲ ಎಂದು ಅಬ್ದುಲ್ ತಲೆ ತಗ್ಗಿಸಿದ.

Leave a Comment

error: Content is protected !!
%d bloggers like this: