KannadaKaliyona

Tugutha noodu jookaala sadhguruvina dayada

Tugutha noodu jookaala sadhguruvina dayada in Kannada

ತೂಗುತದ ನೋಡು ಜೋಕಾಲಿ ಸದ್ಗುರುವಿನ ದಯದಿ | ತೂಗುತದ ನೋಡು ಜೋಕಾಲಿ || ಪ ||

ತೂಗುತದ ನೋಡು ಜೋಕಾಲಿ ನಾರಬ್ರಹ್ಮನಂಗನದೊಳು ರಂಗಮಂಟಪ ಮಂದಿರದೊಳು ಕಂಗಳ ಮಹಾಲಿಂಗದೊಳು | ತೂಗುತದ ನೋಡು ಜೋಕಾಲಿ || 1 ||

ಆಗುಶಾಸ್ತ್ರಕೆ ಕಟ್ಟಿದ ಜೋಕಾಲಿ ಏರಿ ನೀನು ಕೀಲಿಯ ತೆರಿ | ಏರಿನೀನು ಕೀಲಿಯ ತೆರಿ ಮಾರಹರ ಈಶ್ವರನಲ್ಲ || ತೂಗುತದ ನೋಡು ಜೋಕಾಲಿ ||2||

ಜೋಕಾಲಿ ಆಶೆ ಜೋಲಿಯ ಹೊಡೆದು ನವಗ್ರಹದ ಸೂತ್ರವ ಪಿಡಿದು | ಚಿಂತೆ ಎಂಬುವ ಚಿಣಿಯನು ತುಳಿದು ಭಕ್ತಿ ಎಂಬುವ ಮಣಿಯನು ಬಿಗಿದು | ತೂಗುತದ ನೋಡು ಜೋಕಾಲಿ || 3 ||

ಎಲ್ಲ ಜೋಕಾಲಿ ನಿಮ್ಮೊಳಗಿರಲಿ ಹಸನ ಮಾಡಿಕೋ ವ್ಯಸನಗಳೆಲ್ಲ | ಹಸನ ಮಾಡಿಕೋ ವ್ಯವಸನಗಳರಲ್ಲ ಕಾಶೀ ವಿಶ್ವನಾಥನಲ್ಲಿ | ತೂಗುತದ ನೋಡು ಜೋಕಾಲಿ ಸದ್ಗುರುವಿನ ದಯದಿ || 4 ||

Tugutha noodu jookaala sadhguruvina dayada in English

Tūgutada nōḍu jōkāli sadguruvina dayadi | tūgutada nōḍu jōkāli || pa ||

tūgutada nōḍu jōkāli nārabrahmanaṅganadoḷu raṅgamaṇṭapa mandiradoḷu kaṅgaḷa mahāliṅgadoḷu | tūgutada nōḍu jōkāli || 1 ||

āguśāstrake kaṭṭida jōkāli ēri nīnu kīliya teri | ērinīnu kīliya teri mārahara īśvaranalla || tūgutada nōḍu jōkāli ||2||

jōkāli āśe jōliya hoḍedu navagrahada sūtrava piḍidu | cinte embuva ciṇiyanu tuḷidu bhakti embuva maṇiyanu bigidu | tūgutada nōḍu jōkāli || 3 ||

ella jōkāli nim’moḷagirali hasana māḍikō vyasanagaḷella | hasana māḍikō vyavasanagaḷaralla kāśī viśvanāthanalli | tūgutada nōḍu jōkāli sadguruvina dayadi || 4 ||

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading