Vaakya prabhedagalu

ವಾಕ್ಯಗಳನ್ನು ಸಾಮಾನ್ಯ, ಸಂಯೋಜಿತ ಮತ್ತು ಮಿಶ್ರವಾಕ್ಯ ಎಂಬುದಾಗಿ ಮೂರು ವಿಭಾಗ ಮಾಡಲಾಗಿದೆ.

ಸಾಮಾನ್ಯವಾಕ್ಯ :

೧. ಸುಬ್ರಹ್ಮಣ್ಯಮ್ ನಮ್ಮನ್ನು ವಿಶ್ವಾಸದಿಂದ ಸ್ವಾಗತಿಸಿದರು. ೨. ಹತ್ತನೆಯ ಶತಮಾನದವರೆಗೆ ಗಂಗರು ತಲೆಯೆತ್ತಿ ಬಾಳಿದರು.

ಈ ಎರಡೂ ವಾಕ್ಯಗಳು ಒಂದೊಂದು ಪೂರ್ಣ ಕ್ರಿಯಾಪದದೊಡಗೂಡಿ ಸ್ವತಂತ್ರ ವಾಕ್ಯಗಳಾಗಿವೆ. ಹೀಗೆ – ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ವಾಕ್ಯವಾಗಿರುವ ವಾಕ್ಯಗಳೇ ಸಾಮಾನ್ಯವಾಕ್ಯಗಳು.

 

ಸಂಯೋಜಿತವಾಕ್ಯ :

ಪಾಂಡವರ ಯಜ್ಞ ತುರಗ ಮಣಿಪುರವನ್ನು ಪ್ರವೇಶಿಸಿತು ; ಆಗ ಬಭ್ರುವಾಹನನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಬಭ್ರುವಾಹನನಿಗೂ ಅರ್ಜುನನಿಗೂ ಯುದ್ಧ ನಡೆಯಿತು.

ಇಲ್ಲಿ ಮೂರು ಸ್ವತಂತ್ರ ವಾಕ್ಯಗಳು ‘ಆಗ’, ಆದ್ದರಿಂದ ಪದಗಳ ಸಹಾಯದಿಂದ ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ. ಹೀಗೆ – ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಎರಡು ಅಥವಾ ಹೆಚ್ಚು ಉಪವಾಕ್ಯಗಳು ಸೇರಿ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯ.

 

ಮಿಶ್ರವಾಕ್ಯ :

ಗಾಯತ್ರಿ ಗಾಯನಸ್ಪರ್ಧೆಯಲ್ಲಿ ಗೆದ್ದಳಾದರೂ ಅವಳಿಗೆ ಬಹುಮಾನ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಆಕೆ ತುಂಬಾ ನೊಂದುಕೊಂಡಳು.

ಇಲ್ಲಿ ‘ಆಕೆ ತುಂಬಾ ನೊಂದುಕೊಂಡಳು’ ಎಂಬ ಪ್ರಧಾನ ವಾಕ್ಯಕ್ಕೆ ಗಾಯತ್ರಿ ಗಾಯನ ಸ್ಪರ್ಧೆಯಲ್ಲಿ ಗೆದ್ದಳು’; ‘ಅವಳಿಗೆ ಬಹುಮಾನ ಸ್ವೀಕರಿಸಲು ಸಾಧ್ಯವಾಗಲಿಲ್ಲ’ ಎಂಬ ಉಪವಾಕ್ಯಗಳು ಅಧೀನವಾಗಿ ‘ಮಿತ್ರವಾಕ್ಯ’ವಾಗಿದೆ. ಹೀಗೆ ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯವೇ ಮಿಶ್ರವಾಕ್ಯ.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading