Yello Jogappa nin aramane lyrics

Yello Jogappa Nin Aramane lyrics in Kannada

ಕಿನ್ನೂರಿ ನುಡಿಸೋನಾ ದನಿ ಚೆಂದಾವೊ
ಕಿನ್ನೂರಿ ನುಡಿಸೋನಾ ಬೆರಳಿನಂದ ಚೆಂದವೋ…
ಡಿಕ್ಕಿಯುಂಗುರಕೆ ನಾರಿ ಮನಸಿಟ್ಟಳೊ
ಬೆಳ್ಳಿಯುಂಗಾರಕೆ ನಾರಿ ಮನಸಿಟ್ಟಳೊ
ಎಲ್ಲೋ ಜೋಗಪ್ಪ ನಿನ್ನರಮನೆ
ಎಲ್ಲೋ ಜೋಗಪ್ಪ ನಿನ ತಳಮನೆ ||

ಅಲ್ಲಲ್ಲಿ ದಾನವೂ ಅಲ್ಲಲ್ಲಿ ಧರ್ಮವೊ
ತಂದಿಡೆ ನಾರಿ ನೀ ನೀ ಸುಖವ |
ಅತ್ತಿತ್ತ ಬಂದರೆ ಅತ್ತೆಮಾವಂದಿರು ಬೈತಾರೆ
ಕೊಲ್ಲೋ ಜೋಗಪ್ಪ ನಿನ ಪಡಿದಾನ |
ಇತ್ತಿತ್ತ ಬಂದರೆ ಮಾವಂದಿರು ಬಯ್ಯಲಿಕ್ಕೆ
ಆನೆಸಾಲು ನಾನು ಕದ್ದನೇನ | ನಾರಿ
ಕುದುರೆ ಸಾಲು ನಾನು ಕದ್ದೆನೇನೆ
ಹೆರವಾ ಹೆಣ್ಣಿಗೆ ನಾನು ಬಿದ್ದೆನೇನೆ || ಎಲ್ಲೋ ಜೋಗಪ್ಪ ||

ಇದ್ದಬದ್ದ ಬಟ್ಟೆನೆಲ್ಲ ಗಂಟುಮೂಟೆ ಕಟ್ಟಿಕೊಂಡು…ಓ…
ಹೊರಟಾಳೊ ಜೋಗಿಯ ಹಿಂದುಗೂಟಿ | ನಾರಿ
ಹೊರಟಾಳೊ ಜೋಗಿಯ ಹಿಂದುಗೂಟಿ…
ಹಾರುವರ ಕೇರಿಯ ಗಾರೆಜಗಲಿಯ ಮೇಲೆ
ಕೋಲು ಕಿನ್ನೂರಿ ಮಾಡಿ ನುಡಿಸೋನೇ | ಜೋಗಿ
ಹೂವಾಗಿ ಬಾರೋ ನನ್ನ ತುರುಬೀಗೆ
ಹುಳ್ಳಿ ಹೊಲವಾ ಬಿಟ್ಟು ಒಳ್ಳೆ ಗಂಡಾನ ಬಿಟ್ಟು
ಸುಳ್ಳಾಡೋ ಜೋಗಿ ಕೂಡೋಗಬಹುದೆ | ನಾರಿ
ಪೊಳ್ಳಂತ ಜೋಗಿ ಕೂಡೋಗಬಹುದೆ ||ಎಲ್ಲೋ||
ಎಲ್ಲಾನು ಬಿಟ್ಟಮೇಲೆ ನನ್ನನ್ಯಾಕೆ ಬಿಡಲೊಲ್ಲೆ.

Yello Jogappa Nin Aramane lyrics in English

Kinnūri nuḍisōnā dani cendāvo kinnūri nuḍisōnā beraḷinanda cendavō… Ḍikkiyuṅgurake nāri manasiṭṭaḷo beḷḷiyuṅgārake nāri manasiṭṭaḷo ellō jōgappa ninnaramane ellō jōgappa nina taḷamane ||

allalli dānavū allalli dharmavo tandiḍe nāri nī nī sukhava | attitta bandare attemāvandiru baitāre kollō jōgappa nina paḍidāna | ittitta bandare māvandiru bayyalikke ānesālu nānu kaddanēna | nāri kudure sālu nānu kaddenēne heravā heṇṇige nānu biddenēne || ellō jōgappa ||

iddabadda baṭṭenella gaṇṭumūṭe kaṭṭikoṇḍu…Ō… Horaṭāḷo jōgiya hindugūṭi | nāri horaṭāḷo jōgiya hindugūṭi… Hāruvara kēriya gārejagaliya mēle kōlu kinnūri māḍi nuḍisōnē | jōgi hūvāgi bārō nanna turubīge huḷḷi holavā biṭṭu oḷḷe gaṇḍāna biṭṭu suḷḷāḍō jōgi kūḍōgabahude | nāri poḷḷanta jōgi kūḍōgabahude ||ellō|| ellānu biṭṭamēle nannan’yāke biḍalolle.

Leave a Comment

KannadaKaliyona is the educational platform that offers learning kannada language & understanding song lyrics

Facebook-f Instagram Twitter

Quick Links

© KannadaKaliyona.in

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading